ಪತ್ರಿಕೆಗಳ ಸಂಕಷ್ಟ ಪರಿಹಾರ: ಸಿಎಂ ಭರವಸೆ

ಪತ್ರಿಕೆಗಳ ಸಂಕಷ್ಟ ಪರಿಹಾರ: ಸಿಎಂ ಭರವಸೆ, newspapers-cm-tagadur

ಪತ್ರಿಕೆಗಳ ಸಂಕಷ್ಟ ಪರಿಹಾರ: ಸಿಎಂ ಭರವಸೆ

ಪತ್ರಿಕೆಗಳ ಸಂಕಷ್ಟ ಪರಿಹಾರ: ಸಿಎಂ ಭರವಸೆ

ಬೆಂಗಳೂರು: ನ್ಯೂಸ್ ಪ್ರಿಂಟ್ ಸಮಸ್ಯೆಗೆ ಪರಿಹಾರ, ಜಾಹೀರಾತು ತಾರತಮ್ಯ ನಿವಾರಣೆ ಸೇರಿದಂತೆ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಬಲೀಕರಣಕ್ಕೆ ಅಗತ್ಯ ಕ್ರಮ‌ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಘವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಘದ ಅಧ್ಯಕ್ಚರಾದ ಜೆ.ಆರ್.ಕೆಂಚೇಗೌಡ, ಕಾರ್ಯಾಧ್ಯಕ್ಷರುಗಳಾದ ಹೆಚ್.ಬಿ‌.ಮದನಗೌಡ,ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ, ಕೆಯುಡಬ್ಲ್ಯೂಜೆ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಚಲುವರಾಜು, ಎನ್.ರವಿಕುಮಾರ್ ಅವರನ್ನೊಳಗೊಂಡ ನಿಯೋಗವು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟಿತು.

ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.