ಪಠ್ಯ ನಿಯಂತ್ರಣ ಸಾಂಸ್ಕೃತಿಕ ರಾಜಕಾರಣ  ಇಂದು ತಿಪಟೂರಿನಲ್ಲಿ ವಿಚಾರ ಸಂಕಿರಣ 

ಪಠ್ಯ ನಿಯಂತ್ರಣ ಸಾಂಸ್ಕೃತಿಕ ರಾಜಕಾರಣ  ಇಂದು ತಿಪಟೂರಿನಲ್ಲಿ ವಿಚಾರ ಸಂಕಿರಣ 

ಪಠ್ಯ ನಿಯಂತ್ರಣ ಸಾಂಸ್ಕೃತಿಕ ರಾಜಕಾರಣ    ಇಂದು ತಿಪಟೂರಿನಲ್ಲಿ ವಿಚಾರ ಸಂಕಿರಣ 

ಪಠ್ಯ ನಿಯಂತ್ರಣ ಸಾಂಸ್ಕೃತಿಕ ರಾಜಕಾರಣ 


ಇಂದು ತಿಪಟೂರಿನಲ್ಲಿ ವಿಚಾರ ಸಂಕಿರಣ 


ತಿಪಟೂರು : ರಾಜ್ಯದಲ್ಲಿ ಸರ್ಕಾರ ಕಳೆದ ಎರಡು ತಿಂಗಳಿಂದಲೂ ಪಠ್ಯಪುಸ್ತಕ ವಿಚಾರವನ್ನು ಇಟ್ಟುಕೊಂಡು ಗೊಂದಲಕ್ಕೆ ಕಾರಣವಾಗಿದ್ದು, ಇದರ ಸಮಸ್ಯೆಗಳನ್ನು ನಾಡಿನ ಜನತೆ ತಿಳಿಸುವ ಉದ್ದೇಶದಿಂದ ವಿಚಾರ ಸಂಕಿರಣವನ್ನು ಜು.3 ರಂದು ಆಯೋಜಿಸಲಾಗಿದೆ ಎಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ತಿಳಿಸಿದರು.


ನಗರದ ಜನಸ್ಪಂದನ ಟ್ರಸ್ಟ್ನ ಕಚೇರಿಯಲ್ಲಿ ಶನಿವಾರ ಜಾಗೃತ ತಿಪಟೂರು ವತಿಯಿಂದ ಸುದ್ದಿಗೋಷ್ಠಿ ನಡೆಸಿದ ಅವರು ಪಠ್ಯಪುಸ್ತಕ ಇಟ್ಟುಕೊಂಡು ಮಕ್ಕಳ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶವಾಗಿದೆ. ತಾಲ್ಲೂಕಿನಾದ್ಯಂತ ಸರ್ಕಾರ ಪಠ್ಯಪುಸ್ತಕಗಳನ್ನು ತಿದ್ದಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನೋಡದೇ ತಮ್ಮ ಅಜೆಂಡಾಗಳನ್ನು ಮಕ್ಕಳಿಗೆ ಪಠ್ಯದ ಮೂಲಕ ನೀಡಲು ಮುಂದಾಗಿದೆ. ಶೇ.97 ರಷ್ಟು ಇರುವ ಶೂದ್ರರಿಗೆ ಶೇ.3ರಷ್ಟಿರುವ ವೈದಿಕರು ಏನು ಭಾವನೆ, ಅಜೆಂಡಾಗಳನ್ನು ತುಂಬಲು ಪ್ರಯತ್ನಿಸುತ್ತಿರುವುದನ್ನು ರಾಜ್ಯದಾದ್ಯಂತ ಖಂಡಿಸುತ್ತಿದ್ದಾರೆ. ಅದರ ಭಾಗವಾಗಿ ತಾಲ್ಲೂಕಿನಾದ್ಯಂತ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.


ಸಾಹಿತಿ ಎಸ್.ಗಂಗಾಧರಯ್ಯ ಮಾತನಾಡಿ ಹಿಂದಿನಿಂದಲೂ ಸಾಮಾನ್ಯ ಜನಕ್ಕೆ ಶೈಕ್ಷಣಿಕ ಕ್ಷೇತ್ರದಿಂದ ಹೊರತಾಗಿದ್ದ ಜನರಿಗೆ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ತಿಳಿಯುತ್ತಲೇ ಇರಲಿಲ್ಲ. ಕಮಿಟಿಗಳ ಜವಾಬ್ದಾರಿಗೆ ಅನುಗುಣವಾಗಿ ಎಲ್ಲಾ ವಿಭಾಗದ ವಿಚಾರವಂತರನ್ನು ಸಮ ಚಿತ್ತದಿಂದ ಹಾಕಿ ಉತ್ತಮ ಪಠ್ಯವನ್ನು ನೀಡಲಾಗುತ್ತಿತ್ತು. ಇದೀಗ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ವಿನಾಃ ಕಾರಣ ಕೆಲ ಪಕ್ಷದ ಸಿದ್ದಾಂತದ ಅಜೆಂಡಾವನ್ನು ಪುಸ್ತಕದಲ್ಲಿ ತರಲು ಮುಂದಾಗಿದ್ದಾರೆ. ಪ್ರತಿಯೊಂದ ಪಕ್ಷವೂ ಬಂದಾಗ ತಮಗಿಷ್ಟ ಬಂದ ಹಾಗಿ ಪಠ್ಯ ಬದಲಾವಣೆ ಮಾಡಿದರೆ ವಿದ್ಯಾರ್ಥಿಗಳ ಗತಿ ಏನಾಗಬೇಕು. ಅದ್ದರಿಂದ ನೂತನ ಪರಿಷ್ಕರಣೆಗಳ ತಪ್ಪನ್ನು ತಿದ್ದಿಕೊಳ್ಳದ ರಾಜ್ಯ ಸರ್ಕಾರದ ನಡೆಯನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶ ಜಾಗೃತ ತಿಪಟೂರಿನ ಕಾರ್ಯವಾಗಿದೆ ಎಂದರು.


ಮಾಜಿ ಜಿ.ಪಂ.ಸದಸ್ಯ ತ್ರಿಯಾಂಬಕ, ಮಾಗೇನಹಳ್ಳಿ ಪರಮೇಶ್, ಸಿದ್ದಣ್ಣ ಬಳುವನೆರಲು, ಶ್ರೀಕಾಂತ್ ಕೆಳಹಟ್ಟಿ, ನವೀನ್, ಸ್ವಾಮಿ ಸಾರ್ಥವಳ್ಳಿ, ಶರತ್ ಕಲ್ಲೇಗೌಡನಪಾಳ್ಯ, ಮೋಹನ್, ಶಂಕರ್ ಮಾಗೇನಹಳ್ಳಿ, ಉಮಾಶಂಕರ್, ಗುಂಗರಮಳೆ ಶ್ಯಾಮ್, ಹರೀಶ್ ಯಗಚೀಗಟ್ಟೆ, ಸಿದ್ದಮಲ್ಲಪ್ಪ ಇದ್ದರು.