ಮನುಷ್ಯನ ಮೈಬಣ್ಣ ಮತ್ತು ಅರಗ ಜ್ಞಾನೇಂದ್ರ 

ಮಾಜಿ ಗೃಹ ಮಂತ್ರಿ ಬಿಜೆಪಿಯ ಅರಗ ಜ್ಞಾನೇಂದ್ರ ಇತ್ತೀಚೆಗೆ ಉತ್ತರ ರ‍್ನಾಟಕದ ರಾಜಕಾರಣಿಗಳಾದ ಮಲ್ಲಿಕರ‍್ಜುನ ರ‍್ಗೆಯವರ ಮೈ ಬಣ್ಣ ಕುರಿತು ವ್ಯಂಗ್ಯ ಹೇಳಿಕೆ ನೀಡಿದ್ದರು. ಅರಗ ಅವರ ಹೇಳಿಕೆಯನ್ನು ಇಡೀ ನಾಡು ಖಂಡಿಸಿತು. ಮನುಷ್ಯನ ಮೈ ಬಣ್ಣ ಕುರಿತ ಇತಿಹಾಸದ ಬೆಳಕು ಚೆಲ್ಲುವ ಲೇಖನ ಇಲ್ಲಿದೆ. ಈ ಲೇಖನವನ್ನು ‘ಎಲ್ಲರ ಕನ್ನಡ’ದಲ್ಲಿ ಬರೆದಿದ್ದಾರೆ, ಅಂದರೆ ಮಹಾಪ್ರಾಣಗಳು ಇಲ್ಲ, ಓದಲೇನೂ ಕಷ್ಟವಾಗುವುದಿಲ್ಲ- ಸಂಪಾದಕ

ಮನುಷ್ಯನ ಮೈಬಣ್ಣ ಮತ್ತು ಅರಗ ಜ್ಞಾನೇಂದ್ರ 

ವರ್ತಮಾನ


ಹರ್ಶಕುಮಾರ್ ಕುಗ್ವೆ 

ಮೈ ಬಣ್ಣ ಅನ್ನೋದು ಮನುಶ್ಯ ಸಮಾಜದಲ್ಲಿ ಬರೀ ದೈಹಿಕ, ಜೈವಿಕ ವಿಶಯ ಅಲ್ಲ. ಅದು ಸಾಮಾಜಿಕ ಹಾಗೂ ಸಾಂಸ್ಕೃತಿಕವೂ ಹೌದು,ಮುಂದುವರಿದು ರಾಜಕೀಯ ಆರ್ತಿಕವೂ ಹೌದು. 


70 ಸಾವಿರ ವರ್ಶಗಳ ಹಿಂದೆ ಹೋಮೋಸೇಪಿಯನ್ ತಳಿಯ ನರಮಾನವ ಆಪ್ರಿಕಾದ ನಮೀಬಿಯಾದಿಂದ ಹೊರಟಾಗ ಇದ್ದ ಅವನ ಬಣ್ಣ ಇವತ್ತು ಅಂಡಮಾನಿನ ಓಂಗೆ ಬುಡಕಟ್ಟು ಜನ ಹೇಗಿದ್ದಾರೋ ಹಾಗೇ ಇತ್ತು. ಅದು ಕಡುಗಪ್ಪು ಬಣ್ಣ. ಇವತ್ತು ನಾವು ಬಿಳಿ, ಹಳದಿ ಎಂದು ಹೇಳುವ ಎಲ್ಲರ ಪೂರ್ವಿಕರೂ ಆ ಕಡುಗಪ್ಪು ಮನುಶ್ಯರೇ ಆಗಿದ್ದರು ಅನ್ನೋದನ್ನ ಬಹಳ ಹಿಂದೆಯೇ ಮಾನವಶಾಸ್ತ್ರ ಅತವಾ ಆಂತ್ರೊಪಾಲಜಿ ನಿರೂಪಿಸಿದ್ದರೆ ಇದೀಗ ಜೆನೆಟಿಕ್ಸ್ ಅದನ್ನು ಸಾಬೀತು ಮಾಡಿದೆ. 


ಆದರೆ ಹಾಗೆ ಆಫ್ರಿಕಾದಿಂದ ಹೊರಟವರು ಕವಲೊಡೆದು ಇಂಡಿಯಾದ ಪಶ್ಚಿಮ ಕರಾವಳಿಯ ಮೂಲಕ ಒಂದು ಕವಲು ಹೊರಟಿತ್ತು. ಅದು ಮತ್ತಶ್ಟು ಕವಲುಗಳಾಗಿ ಪೂರ್ವ ಏಶಿಯಾ, ಅಮೆರಿಕಾ ಕಡೆ ಹೋಗಿ ತಲುಪಿದವು. ಇದು ಸುಮಾರು 15000 ವರ್ಶಗಳ ಹಿಂದೆ. ಇನ್ನು ಆಪ್ರಿಕಾದಿಂದ ಹೊರಟವರಲ್ಲೇ ಮತ್ತೊಂದು ಕವಲು ಇರಾನಿನ ಕಡೆ ಹೋಗಿ ಅಲ್ಲಿಂದ ಮತ್ತೆರಡು ಕವಲೊಡೆದು ಒಂದು ಗುಂಪು ದಕ್ಷಿಣ ಏಶಿಯಾದ ಕಡೆಗೂ ಮತ್ತೊಂದು ಪಾಂಟಿಕ್ ಕ್ಯಾಸ್ಪಿಯನ್, ರಶಿಯಾ ಕಡೆಗೂ ಹೋಯ್ತು. 


ಹೀಗೆ ಕವಲಾಗಿ ಹೋದ ಮನುಶ್ಯರು ಆಯಾ ಬೂಬಾಗದಲ್ಲಿನ ವಾತಾವರಣ, ಬಿಸಿಲು ಸೆಖೆ ಶೀತ ಇತ್ಯಾದಿಗಳಿಗೆ ಅನುಗುಣವಾಗಿ ಮೈಬಣ್ಣ, ಆಕಾರ, ಕೂದಲು, ಎತ್ತರ, ಇತ್ಯಾದಿಗಳಲ್ಲಿ ಬಿನ್ನತೆ ಪಡೆದರು. ಇದಕ್ಕೆ ಕಾರಣ ಜೆನೆಟಿಕ್ ಮ್ಯುಟೇಶನ್ನುಗಳು. ಶೀತವಿರುವ ಕಡೆ ಇದ್ದವರು ಬಿಳಿಚಿಕೊಂಡರು, ಬಯಲು, ಬಿಸಿಲು ಹೆಚ್ಚು ಇದ್ದ ಕಡೆಯವರು ಕಪ್ಪು, ಕಂದು, ಬೂದು ಹೀಗೆ ""colored people' vernacular... ... ಆಗಿ ಬಿಟ್ಟರು. 

***
ಇವತ್ತು ಬಾರತದಲ್ಲಿ ಇರುವ ಪ್ರತಿಯೊಂದು ಜಾತಿ ಸಮುದಾಯದಲ್ಲಿಯೂ ಕಪ್ಪು ಬಣ್ಣದವರಿದ್ದಾರೆ ಹಾಗೇ ಬಿಳಿ ಬಣ್ಣದವರಿದ್ದಾರೆ. ಬ್ರಾಮಣರಲ್ಲಿಯೂ ಕಪ್ಪು ಬಣ್ಣದವರಿದ್ದಾರೆ, ಆದಿವಾಸಿ, ದಲಿತ ಸಮುದಾಯಗಳಲ್ಲಿಯೂ ಬಿಳಿ ಬಣ್ಣದವರಿದ್ದಾರೆ. ಇದಕ್ಕೆ ಮೂಲ ಕಾರಣ 12 ಸಾವಿರ ವರ್ಷಗಳ ಹಿಂದೆ ಮತ್ತು ಮೂರೂವರೆ ಸಾವಿರ ವರ್ಷಗಳ ಹಿಂದೆ ಬಾರತದಲ್ಲಿ ನಡೆದ ಸಾಮುದಾಯಿಕ ಬೆರಕೆ. 12 ಸಾವಿರ ವರ್ಷಗಳ ಹಿಂದೆ ರೂಪುಗೊಂಡ ದ್ರಾವಿಡ ಬಾಶಿಕ (proto-dravidian) ಸಮುದಾಯವು ಆಲ್ರೆಡಿ ದಕ್ಷಿಣ ಬಾರತದ ಮೂಲಕ ಇಡೀ ಬಾರತಕ್ಕೆ ಪಸರಿಸಿದ್ದ ಬಾರತದ ಮೊದಲ ನಿವಾಸಿಗಳ (early Indians) ) ಮತ್ತು ಇರಾನಿನ ಕಡೆಯಿಂದ ಬಂದಿದ್ದ ಒಂದು ಬೇಟೆಗಾರ ಬುಡಕಟ್ಟು ಸಮುದಾಯದ ಜೊತೆ ಬೆರೆತು ರೂಪುಗೊಂಡಿತ್ತು. ಈ ದ್ರಾವಿಡ ಬಾಶಿಕರೇ ಮುಂದೆ ಹರಪ್ಪಾ ನಾಗರಿಕತೆ ಕಟ್ಟಿದರು. ಹೀಗಾಗಿ ಇವರಲ್ಲಿ ವರ್ಣಬೇದವಿರಲಿಲ್ಲ ಆದರೆ ವರ್ಣ ಬಿನ್ನತೆ ಇತ್ತು ಎಂದು ಊಹಿಸಬಹುದಾಗಿದೆ. ಮುಂದೆ ಕ್ರಿ.ಪೂ. 1700 ರ ಸುಮಾರಿಗೆ ಆರ್ಯರು ಬಂದ ನಂತರ ಎರಡು ಬಗೆಯಲ್ಲಿ ಮಿಶ್ರಣಗಳಾದವು. ಆರ್ಯರಿಗಿಂತ ಮೊದಲು ಪೂರ್ವ ಬಾರತದಿಂದ ಬಂದಿದ್ದ ಮುಂಡಾ ಬಾಶೀಕ (ಸಂತಾಲ್ ಇತ್ಯಾದಿ ಆಸ್ಟ್ರೋ ಏಶಿಯಾಟಿಕ್ ಬಾಶಿಕ) ಜನರಿಗೂ ದ್ರಾವಿಡರಿಗೂ ಆದ ಮಿಶ್ರಣ ಹಾಗೂ ನಂತರ ಸಾಮಾಜಿಕ ಏಣಿ ಶ್ರೇಣಿ ಸೃಶ್ಟಿಸಿದ ಆರ್ಯರಿಗೂ ಉತ್ತರ ಬಾರತದ ದ್ರಾವಿಡರಿಗೂ ಉಂಟಾದ ವರ್ಣಸಂಕರ. ಕೆಲವು ದ್ರಾವಿಡ ಜನರು ಆರ್ಯ ಸಂಸ್ಕೃತಿಗೆ ಮತಾಂತರ ಹೊಂದಿದರು.


ದಕ್ಷಿಣ ಬಾರತದಲ್ಲಿ ಮೊದಲ ಬಾರತೀಯರ ಪ್ರಮಾಣ ಹೆಚ್ಚಿದ್ದ ಕಾರಣ ಕಪ್ಪು ಬಣ್ಣದ ಕಾಂಪೊಸಿಶನ್ ಜಾಸ್ತಿ ಇತ್ತು. ಹೀಗಾಗಿ ತಳಸಮುದಾಯಗಳ ಜನರಲ್ಲಿ 95% ಜನರು ಕಪ್ಪು ಜನರಿದ್ದರೆ ಆರ್ಯಸಂಸ್ಕೃತಿಯ ಸಮುದಾಯಗಳಲ್ಲಿಯೂ ಒಂದೈದು ಪರ್ಸೆಂಟ್ ಕಪ್ಪು ಜನರಿರುವುದು. ಹೀಗೆ ಸಾಮುದಾಯಿಕ ಸಂಕರ ದೊಡ್ಡ ಸಮಸ್ಯೆ ಆಗಿರಲಿಲ್ಲ. ಅದೊಂದು ಸಹಜ ಪ್ರಕ್ರಿಯೆ ಆಗಿತ್ತು. ಅದನ್ನು ಒಂದು ಸಮಸ್ಯೆ ಮಾಡಲು ಶುರುವಾಗಿದ್ದು ಆರ್ಯನ್ ಬಾಶಿಕರು ದ್ರಾವಿಡರ ಮೇಲೆ ಯಜಮಾನಿಕೆ ಸ್ತಾಪಿಸಲು ಹವಣಿಸತೊಡಗಿದ ನಂತರದಲ್ಲಿ. ಇಡೀ ದ್ರಾವಿಡ ಸಮುದಾಯಗಳನ್ನು ಕೀಳಾಗಿ ಮಾಡಲು ವರ್ಣಬೇದ ಅವರಿಗೆ ಒಂದು ಸಾದನವಾಗಿತ್ತು. ಅವರು ಚಾರುರ್ವರ್ಣ ಜಾರಿಗೆ ತಂದ ಮೇಲೆ ಮತ್ತು ಅಸ್ಪೃಶ್ಯತೆ ಜಾರಿಗೊಳಿಸಿದ ಮೇಲೆ ದಕ್ಷಿಣ ದಿಕ್ಕು, ಕಪ್ಪು ಬಣ್ಣ ಅನಿಷ್ಟ ಎಂದರು. ಉತ್ತರ ದಿಕ್ಕು, ಶ್ವೇತವರ್ಣ ಉತ್ತಮ ಎಂದರು. ಬಿಳಿ ಬಣ್ಣವನ್ನು ಗೌರವರ್ಣ ಎಂದರು. ಈ ಬಣ್ಣಬೇದಕ್ಕೆ ಮತ್ತಷ್ಟು ಇಂಬು ನೀಡಿದ್ದು ಆರ್ಯಬಾಶಿಕರ ಹತ್ತಿರದ ಸಂಬಂದಿಗಳಾದ ಯುರೋಪಿಯನ್ನರು ಬಾರತವನ್ನು ವಸಾಹತು ಮಾಡಿಕೊಂಡ ನಂತರದಲ್ಲಿ. ಈ ಯೂರೋಪಿನ ಬಿಳಿಯರು ಆಫ್ರಿಕಾ ಮತ್ತು ಅಮೆರಿಕಕ್ಕೆ ದಾಳಿ ನಡೆಸಿ ಅಲ್ಲಿನ ಮೂಲನಿವಾಸಿಗಳನ್ನು ಬಲಾತ್ಕಾರವಾಗಿ ಗುಲಾಮರಾಗಿಸಿಕೊಂಡ ಮೇಲೆ ಅಪಾರ್ತೈಡ್ ನೀತಿ ಅಂದರೆ ಬಣ್ಣಬೇದ ನೀತಿ ಜಾರಿಗೆ ತಂದರು. ಕಪ್ಪು ಜನರ ಬಣ್ಣ ಬಿಳಿಯರ. ಅವಹೇಳನಕ್ಕೆ ಗುರಿಯಾಯ್ತು. ಅದನ್ನೇ ಬಾರತದಲ್ಲಿಯೂ ಅಳವಡಿಸಿಕೊಂಡರು. ಬಾರತದಲ್ಲಿ ಯೂರೋಪಿನ ಬಿಳಿಯರಿಗೂ ಬಾರತದ ಬಿಳಿಯರಿಗೂ ಮೈತ್ರಿ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಬಣ್ಣಬೇದ ನೀತಿ ಜಾತಿ ಬೇದದ ರೂಪದಲ್ಲಿ ವ್ಯಕ್ತಗೊಳ್ಳತೊಡಗಿತು ಅತವಾ ಜಾತಿ ತಾರತಮ್ಯ ಬಣ್ಣದ ಬೇದವಾಗಿಯೂ ತೋರಿಸಿಕೊಂಡಿತು. 


ಸೌಂದರ್ಯ ಎಂದರೇನೇ Fair ಅತವಾ ಬಿಳಿ ಎಂಬ ಸಮೀಕರಣ ಆಗಿದ್ದೂ ಇದೇ ಹಿನ್ನೆಲೆಯಲ್ಲಿ. ಹೀಗಾಗಿ ಹುಟ್ಟುತ್ತಾ ಸ್ವಲ್ಪ ಬಿಳಿ ಇದ್ದರೆ ಸಂತಸಪಡುವ, ಕಪ್ಪಿದ್ದರೆ ದುಕ್ಕಪಡುವ ವಿಕೃತ ಮನಸ್ತಿತಿ ನಿರ್ಮಾಣವಾಯಿತು. ಕಪ್ಪು ಬಣ್ಣ ಅನಿಷ್ಡಸೂಚಕವಾಯಿತು; ಕಪ್ಪು ಶೋಕವಾಯಿತು, ಬಿಳಿ ಶಾಂತಿಯಾಯಿತು; ಕರ್ರನೆ ಮುಕ, ಕಪ್ಪುಚುಕ್ಕೆ' ಕಪ್ಪು ಕುರಿ, ಕರಿನೆರಳು, ಕಾರ್ಮೋಡ, ಕಾರಿರುಳು, ಕಾರ್ಗತ್ತಲು, ಕಪ್ಪುದಿನ, ಕಾಗೆಯ ಬಣ್ಣ, ಕರಿ ಇಡ್ಲಿ, ಕರೀಮ, ಕರಿ ಬ್ರಾಮಣ ಹೀಗೆ ಕಪ್ಪುಬಣ್ಣದ ನೆಗೆಟಿವಿಟಿ ಬಾಶೆಯ ಮೂಲಕ ವ್ಯಕ್ತಪಡಿಸಲು ಪದಬಳಕೆ ತರಲಾಯಿತು... 

ಬಿಸಿಲು ಹೆಚ್ಚಿರುವ ಉತ್ತರ ಕರ್ನಾಟಕದಲ್ಲಿ ಮಾತ್ರ ಮುಕ ಕಪ್ಪಾಗುವುದಿಲ್ಲ. ಅಪ್ಪಟ ಮಲೆನಾಡಿನ ಮತ್ತು ಕರಾವಳಿಯ ಮೊದಲ ನಿವಾಸಿಗಳೆಲ್ಲರೂ ಕಪ್ಪು ಬಣ್ಣದವರೇ... ಇಲ್ಲಿನ ಮೊದಲಿಗರಾದ ಕೊರಗ, ಹೊಲೆಮಾದಿಗ ದ್ರಾವಿಡ ಕೃಶಿಕರು, ಹಸಲ, ಆದಿವಾಸಿ ಬುಡಕಟ್ಟು ಜನರು ಇವರೆಲ್ಲಾ predominantly ಕಪ್ಪು ಬಣ್ಣದವರು. ನಂತರ ಬಂದ ದ್ರಾವಿಡ ಪಶುಪಾಲಕರು ಕಪ್ಪು, ಕಂದು,ಬಿಳಿ ಮಿಶ್ರಣದವರು. ನಂತರ ಬಂದ ಬ್ರಾಹ್ಮಣರಲ್ಲಿ ಹೆಚ್ಚಿನವರು ಬಿಳಿಬಣ್ಣದವರು.

ಹೀಗಿರುವಾಗ ಯಾರಾದರೂ ಬಣ್ಣದ ಕಾರಣದಿಂದ ಹೀಯಾಳಿಸುವುದು ಅವರ ಅಜ್ನಾನದಿಂದ ಮಾತ್ರ. ಮೈ ಬಣ್ಣದ ಕಾರಣಕ್ಕೆ ಮೇಲರಿಮೆ ಬಳಸಿಕೊಳ್ಳುವುದಾಗಲೀ ಕೀಳರಿಮೆ ಇಟ್ಟುಕೊಳ್ಳುವುದಾಗಲೀ ಅದೂ ಅಪ್ಪಟ ಅಜ್ನಾನವೇ ಕಾರಣ. ವಿಶ್ವೇಶ್ವರ ಬಟ್ಟನಂತವರಿಗೆ ವರ್ಣಬೇದ ಮಾಡುವುದರಲ್ಲೇ ಲಾಬವಿದೆ. ಹಾಗಾಗಿ ಮಾಡುತ್ತಾರೆ. ಗೇಟ್ ಕೀಪರ್ ಆರಗರಂತವರಿಗೆ? 


ಇವರಿಗೆ ಮನುಶ್ಯತ್ವಕ್ಕೆ ತಲೆಬಾಗುವುದನ್ನು ಕಲಿಸುವ ಕಾಲ ಬಂದಿದೆ. ಕಲಿಸೋಣ.