ಸರ್ಕಾರಗಳೇಕೆ ಪುರೋಹಿತಶಾಹಿಯನ್ನು ಪುಷ್ಟೀಕರಿಸುತ್ತಿವೆ........!?

ಪುರೋಹಿತಶಾಹಿಯನ್ನು ಪುರಸ್ಕರಿಸುತ್ತೇವೆ ಎನ್ನುವುದಾದರೆ ನಾಗರಿಕ ಸಮಾಜವನ್ನು ಹಿಂದಕ್ಕೊಯ್ಯುತ್ತಿದ್ದೇವೆ ಎಂದರ್ಥವಲ್ಲವೇ!

ಸರ್ಕಾರಗಳೇಕೆ ಪುರೋಹಿತಶಾಹಿಯನ್ನು ಪುಷ್ಟೀಕರಿಸುತ್ತಿವೆ........!?

ಸರ್ಕಾರಗಳೇಕೆ ಪುರೋಹಿತಶಾಹಿಯನ್ನು ಪುಷ್ಟೀಕರಿಸುತ್ತಿವೆ........!?

-ಆಲುವಳ್ಳಿ ಆರ್ ಅಣ್ಣಪ್ಪ

   ಪುರೋಹಿತಾಶಾಹಿತ್ವ ಎಂದರೆ, ಅದೊಂದು ಮೌಡ್ಯ, ಅದು ಪರಲೋಕದಲ್ಲಿ ಮೋಕ್ಷದ-ವಿಮುಕ್ತಿಯ ಪ್ರವಚನ ನೀಡುತ್ತ ಮನುಷ್ಯನ ಜೀವನವನ್ನೇ ನಿರಾಕರಿಸುತ್ತದೆ. ಮಾನವನ ಎಲ್ಲ ಕಷ್ಟ ಸುಖಗಳಿಗೆ ಪೂರ್ಪ ಜನ್ಮದ ಪಾಪ ಪುಣ್ಯದ ಫಲದ ಸಂಬಂಧ ಕಲ್ಪಿಸುತ್ತದೆ. ಅಸಲಿಗೆ ಇಂತಹ ಪ್ರವಚನ ನಮ್ಮೊಳಗಿನ ಆಲೋಚನಾ ಶಕ್ತಿಯನ್ನೇ ಹೊಸಕಿಬಿಡುತ್ತದೆ. ತಾರ್ಕಿಕ ನೆಲೆಗಟ್ಟಿನಲ್ಲಿ ಇದನ್ನು ನಾಗರಿಕ ಸಮಾಜದ ಹಿಮ್ಮುಖ ಚಲನೆ ಎಂದು ಕರೆಯಲಾಗುತ್ತದೆ. ಇದೊಂದು ಬರೀಯ ಪೊಳ್ಳು ಸಿದ್ದಾಂತ. ಅದು ತರ್ಕಕ್ಕೆಂದೂ ಮುಖಾಮುಖಿಯಾಗಲಾರದು. ಹೀಗಿದ್ದೂ ಬಹು ಸಂಖ್ಯಾತ ಜನ ಇದಕ್ಕೆ ಶರಣಾಗಿದೆ. ಆದರೆ ನಾವೊಮ್ಮೆ ನಿಜದ ಸಂಶೋದನೆಗೆ ಇಳಿಯಬೇಕೆಂದರೆ ಇದರಿಂದ ಹೊರತಾಗಿ ನಿಲ್ಲಬೇಕಾಗುತ್ತದೆ. ಇದಕ್ಕೆ ಹೊರತಾಗಿ ನಿಂತವರಿಂದಲೇ ನಮ್ಮ ನಾಗರೀಕಾ ಸಮಾಜ ಇಷ್ಟೊಂದು ಉನ್ನತೀಕರಣಗೊಂಡಿರುವುದು.ಇದರ ಸಂಪೂರ್ಣ ಶ್ರೇಯ ಈ ನಾಸ್ತಿಕ ವರ್ಗಕ್ಕೆ ಸಲ್ಲಬೇಕು. ನಾವಿಂದು ಅನುಭವಿಸುತ್ತಿರುವ ಎಲ್ಲ ತಂತ್ರಜ್ಞಾನವು ಪುರೋಹಿತಶಾಹಿಯನ್ನು ಯಾರು ತಿರಸ್ಕರಿಸಿದ್ದರೋ, ಯಾರು ವಿಮರ್ಶೆಗೊಳಪಡಿಸಿದ್ದರೋ ಅವರಿಂದ ಆವಿಷ್ಕಾರ ಆಗಿರುವಂತಹಹುದು. ವಾಸ್ತವ ಹೀಗಿರುವಾಗ ಪುರೋಹಿತಶಾಹಿಯನ್ನು ಪುರಸ್ಕರಿಸುತ್ತೇವೆ ಎನ್ನುವುದಾದರೆ ನಾಗರಿಕ ಸಮಾಜವನ್ನು ಹಿಂದಕ್ಕೊಯ್ಯುತ್ತಿದ್ದೇವೆ ಎಂದರ್ಥವಲ್ಲವೇ! ಹೀಗಿರುವಾಗ ಖುದ್ದು ಪ್ರಭುತ್ವವೇ ಪುರೋಹಿತಶಾಹಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದೆ. ಧರ್ಮಕಾರಣವನ್ನು ಹದ್ದುಬಸ್ತಿನಲ್ಲಿಡಬೇಕಾಗಿದ್ದ ಮುಜರಾಯಿ ಇಲಾಖೆ,ಇದನ್ನು ಮಾಡದೆ ಆದ್ಯಾತ್ಮವನ್ನು ಸಮಾಜದಲ್ಲಿ ಮತ್ತಷ್ಟು ವ್ಯಾಪಕಗೊಳಿಸುವ ಕೆಲಸ ಮಾಡುತ್ತಿದೆ. ಮಠ ಮಾನ್ಯಗಳಿಗೆ ಬಜೆಟ್ ನಲ್ಲಿ ಕೋಟಿ ಕೋಟಿ ಅನದಾನ ನೀಡುತ್ತಿದೆ, ಅರ್ಚಕರಿಗೆ ಜೀವ ವಿಮೆಗಳು, ಆರೋಗ್ಯ ವಿಮೆಯಂತಹ ಸೌಲಭ್ಯ ನೀಡುತ್ತ ,ಅತ್ತ ಅಲ್ಪಸಂಖ್ಯಾತರ ಹೆಸರಿನಲ್ಲಿ ವಿಶೇಷ ಅನುದಾನಗಳನ್ನೂ ನೀಡುವುದರ ಮೂಲಕ ಕ್ರೈಸ್ತ-ಮುಸ್ಲಿಂ ಧರ್ಮಗಳನ್ನೂ ಗಟ್ಟಿಗೊಳಿಸುತ್ತಿದೆ. ಧರ್ಮ- ಆದ್ಯಾತ್ಮ ವಿಚಾರ ಪ್ರಚುರ ಪಡಿಸಲು ಸರ್ಕಾರ ನೀಡುತ್ತಿರುವ ಒತ್ತನ್ನು ಆರೋಗ್ಯ-ವಿದ್ಯಭ್ಯಾಸಕ್ಕೆ ನೀಡುತ್ತಿಲ್ಲ. ಏಕೆ ಹೀಗೆ.? ಆರೋಗ್ಯ-ವಿದ್ಯೆಗಿಂತ ಆದ್ಯಾತ್ಮಿಕತೆಯೇ ಇಲ್ಲಿ ಮುಖ್ಯವಾಗುತ್ತಿರುವುದು ಏಕೆ?

         ಸಾಮಾನ್ಯವಾಗಿ ಜನತೆಯನ್ನು ಭಾವಾನಾತ್ಮಕವಾದ ವಿಚಾರವೊಂದರಲ್ಲಿ ಬಂಧಿಸಿ, ಅವರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಆದ್ಯಾತ್ಮಿಕ ವಿಚಾರ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗುತ್ತದೆ. ಇದು ಸತ್ಯ ಕೂಡ ಇರಬಹುದು. ಆದರೆ ಇದೊಂದೇ ಕಾರಣ ಅಲ್ಲ ಎಂಬ ಸತ್ಯವನ್ನು ಇತ್ತೀಚೆಗೆ "ರಿಫಿನಿಟಿವ್" ಕಂಪೆನಿ ಪ್ರಕಟಿಸಿರುವ ಅಂಕಿ ಅಂಶಗಳು ನಮ್ಮ ಮುಂದಿಡುತ್ತದೆ.

(Refinitive-ಇದು ಒಂದು ಯೂನೈಟೆಡ್ ಕಿಂಗ್ ಡಂ ಮೂಲದ ಷೇರುವಿನಿಮಯ ಮತ್ತು ಹಣಕಾಸು ಮಾಹಿತಿ ಕಂಪೆನಿ) ಇದು ಭಾರತದಲ್ಲಿ ರೂ. 818 ಕೋಟಿಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ 191 ಕಂಪೆನಿಗಳ ಪೈಕಿ 118 ಕಂಪೆನಿಗಳ ನಿವ್ವಳ ಲಾಭಾಂಶವು ಎರಡನೇ ತ್ರೈಮಾಸಿಕ( ಜುಲೈ-ಆಗಸ್ಟ್- ಸೆಪ್ಟೆಂಬರ್)ದಲ್ಲಿ ಏರಿಕೆ ಆಗಿರುವುದನ್ನು ಗುರುತಿಸಿದೆ ಮತ್ತು ಸಹಕಾರಿಯಾದ ಅಂಶಗಳತ್ತ ಬೆಳಕು ಚಲ್ಲಿದೆ. ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಬಂದ ಸಾಲು ಹಬ್ಬಗಳ(ಹಬ್ಬದ ಋತು)ಕಾರಣದಿಂದಾಗಿ ಉಡುಪುಗಳು,ರೀಟೇಲ್ ವ್ಯಾಪಾರ,ಆಹಾರ, ರೆಸ್ಟೋರೆಂಟ್ ಗಳು ಮತ್ತು ಬ್ಯಾಂಕ್ ಕ್ಷೇತ್ರದಲ್ಲಾದ ವಹಿವಾಟಿನ ಹೆಚ್ಚಳವನ್ನು ಗುರುತಿಸುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಕ್ಯಾಂಟಿನೋ ರಿಸರ್ಚ್ ನ ಅರ್ಥಶಾಸ್ತ್ರಜ್ಞ ವಿವೇಕ್ ಕುಮಾರ್ ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, ಹಬ್ಬದ ಋತುವಿನಲ್ಲಿ ಹಬ್ಬಗಳು ತಂದ ಭಾರಿ ಬೇಡಿಕೆಯು ಕಂಪೆನಿಗಳ ತ್ರೈಮಾಸಿಕ ಗಳಿಕೆಯ ಮೇಲೆ ಪ್ರಭಾವ ಬೀರಿರುವುದನ್ನು ಅಲ್ಲಗಳಯಲು ಸಾದ್ಯವಿಲ್ಲ ಎಂದು ದ್ವನಿಗೂಡಿಸುತ್ತಾರೆ. ನಮ್ಮ ಸರ್ಕಾರದ ಅಂಕಿ ಅಂಶಗಳೂ ಸಹ ಏಪ್ರಿಲ್ ನಿಂದ ಸೆಪ್ಟಂಬರ್ ಅವಧಿಯಲ್ಲಿ ಶೇ. 50ರಷ್ಟು ವಹಿವಾಟು ಹೆಚ್ಚಿ ಸುಮಾರು 343 ಲಕ್ಷ ಕೋಟಿಗೆ ತಲುಪಿರುವುದನ್ನು ಗುರುತಿಸುತ್ತದೆ. ವಾಸ್ತವದಲ್ಲಿ ಇದು ಸತ್ಯ ಕೂಡ,ಹಬ್ಬ ಹರಿದಿನ,ಪೂಜೆ ಪನಸ್ಕಾರ ಎಂದು ಜನತೆ ಭಾರಿ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಮೇಲಿನ ವಿಶ್ಲೇಷಣೆಯು, ಬಂಡವಾಳಶಾಹಿ ಪ್ರಭುಗಳು ಜನತೆಯನ್ನು ಕೊಳ್ಳುಬಾಕರನ್ನಾಗಿಸುವ ಒಂದು ಮಾರ್ಗೋಪಾಯವಾಗಿ ಆದ್ಯಾತ್ಮಿಕತೆಯನ್ನು ಆಯ್ದುಕೊಂಡಿರುವುದನ್ನು ಎತ್ತಿ ತೋರಿಸುತ್ತದೆ. ಈಗ ಹೇಳಿ, ಆದ್ಯಾತ್ಮ ಎನ್ನುವುದು ಲಕ್ಷಾಂತರ ಕೋಟಿ ವಹಿವಾಟಿಗೆ ದಾರಿ ಮಾಡಿಕೊಡುತ್ತಿರುವಾಗ, ಲಾಭವೊಂದೇ ಪರಮ ಗುರಿಯಾಗಿಸಿಕೊಂಡಿರುವ ಆಳವವರಿಗೆ ಸಮಾಜದ ಮುಕ್ತಿಯನ್ನು ಬಯಸುತ್ತಾರೆಯೇ.!? ಬಂಡವಾಳವಾದ ತನ್ನ ಆಸ್ತಿತ್ವ ಉಳಿಸಿಕೊಳ್ಳಲು ಆದ್ಯಾತ್ಮದ ಮೊರೆ ಹೋಗಿರುವುದನ್ನು ಈ ವರದಿ-ವಿಶ್ಲೇಷಣೆಗಳು ನಮ್ಮ ಮುಂದೆ ತೆರೆದಿಡುತ್ತಿರುವಾಗ, ಸಮಾಜ ಬಂಡವಾಳವಾದದಿಂದ ಹೊರ ಹೋಗುವುದನ್ನು ಕಂಡುಕೊಳ್ಳಬೇಕಾಗಿದೆ.ಏಕೆಂದರೆ ದೇಶ, ಸಮಾಜ,ಜನತೆ ಎಂಥಹ ಅದಃಪತನ ಕಂಡರೂ ಸರಿಯೇ, ದೇಶದ GDP ಬೆಳೆಯಬೇಕು ಎನ್ನುವ ಇರಾದೆಯಲ್ಲಿರುವ ಬಂಡವಾಳಶಾಹಿ ಅಧಿಕಾರಶಾಹಿ ಇರುವವರೆಗೂ ಸಮಾಜ ಮೌಡ್ಯ ಕಳಚಿ ಹೊರಬರಲಾರದು, ಪ್ರಗತಿಪರ ಹಾದಿ ತುಳಿಯಲಾರದು. ಈ ಪ್ರಭುತ್ವಕ್ಕೆ ಇಲ್ಲಿ ಜನರೆಂದರೆ ಅವರು ಪ್ರಜೆಗಳಲ್ಲ, ಗ್ರಾಹಕರು, ಭಾರತವೆಂಬುದು ದೇಶವಲ್ಲ, ಇದು ಒಂದು ವಿಶಾಲ ಮಾರುಕಟ್ಟೆ