ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಸ್ಪೀಕರ್ ಔಟ್ !?

ondu-galige-kuchangi-prasanna

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಸ್ಪೀಕರ್ ಔಟ್ !?

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಸ್ಪೀಕರ್ ಔಟ್ !?


ಬಾಲ್ಯದಿಂದಲೇ ಚುನಾವಣೆಗಳೆಂದರೆ ನನಗೆ ಬಲು ಆಸಕ್ತಿ, ಚುನಾವಣೆಗಳಷ್ಟೇ ಅಲ್ಲ ಎಲ್ಲಿ ಜನರ ಗುಂಪು ಸೇರಿದರೂ ಅಲ್ಲೇನು ನಡೆದಿದೆ ಎಂದು ತಿಳಿಯುವ ಕುತೂಹಲ, ತುಮಕೂರಿನ ಎಂ.ಜಿ.ರಸ್ತೆಯ ಈಗಿನ ಬಾಲಭವನದ ಬಯಲಲ್ಲಿ ಒಂದು ನಾಟಕದ ಟೆಂಟಿತ್ತು, ಆ ಟೆಂಟಿನ ಸಮೀಪ ಹಗಲಿಡೀ ನಡೆಯುತ್ತಿದ್ದ ಹಾವಾಡಿಗರ ಆಟವನ್ನು ಸಂಜೆವರೆಗೆÀ ನೋಡುತ್ತ ನಿಂತುಬಿಡುತ್ತಿದ್ದೆ. ಹಾಗಾಗೇ ಈ ಪತ್ರಿಕಾ ವೃತ್ತಿ ನನಗೆ ಇಷ್ಟವಾಗಿಬಿಟ್ಟಿತೇನೋ ಗೊತ್ತಿಲ್ಲ.


ಮೊನ್ನೆ ಬುಧವಾರ ರಾಜ್ಯ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಂದ ಮೇಲಂತೂ ಕೆ.ಎನ್.ರಾಜಣ್ಣನವರ ಕ್ಯಾತಸಂದ್ರದ ಅವರ ಮನೆಯ ಮುಂದೆ ಜನವೋ ಜನ, ಹಾರ, ಹೂಗುಚ್ಚ,ಪೇಟ, ಶಾಲುಗಳನ್ನು ಹಿಡಿದು ಅವರ ಮಗ ನೂತನ ಶಾಸಕ ರಾಜೇಂದ್ರ ಅವರನ್ನು ಅಭಿನಂದಿಸುತ್ತಿದ್ದರು. ಇಂಥ ಖುಷಿಯನ್ನು ಆ ಕ್ಷಣದಲ್ಲೇ ಅನಂದಿ

ಸಬೇಕು. ಆದರೆ, ನನ್ನ ಈ ಮಾತನ್ನು ಮೊನ್ನೆ ವಿಧಾನ ಸಭೆಯಲ್ಲಿ ಮಾಜಿ ಸ್ಪೀಕರ್ ಆಡಿದ  “ ಆನಂದಿಸಬೇಕು” ಎಂಬ ನುಡಿಗಟ್ಟಿಗೆ ಹೋಲಿಸಬೇಡಿ ಪ್ಲೀಸ್! ಅವರ ವಿಷಯಕ್ಕೆ ಆಮೇಲೆ ಬರುತ್ತೇನೆ.
ನಾಲ್ಕು ವಿಧಾನ ಸಭಾ ಚುನಾವಣೆಗಳ ಹಿಂದಿನ ಮಾತು, ನಾನಾಗ ಬೆಂಗಳೂರಿನಲ್ಲಿ ‘ಜನವಾಹಿನಿ’ ದಿನಪತ್ರಿಕೆಯ ವರದಿಗಾರ, 1999ರ ಸೆಪ್ಟೆಂಬರ್ ಕಡೆಯ ದಿನಗಳು, ಲೋಕಸಭೆ ಹಾಗೂ ವಿಧಾನ ಸಭೆಗೆ ಒಟ್ಟಿಗೇ ಚುನಾವಣೆ ನಡೆಯುತ್ತಿತ್ತಾದರೂ ನನ್ನ ಗಮನವೆಲ್ಲ ವಿಧಾನ ಸಭೆ ಕಡೆಗಿತ್ತು. ಹೆವಿ ವೇಯ್ಟ್ಗಳೆಂದು ಪರಿಗಣಿಸಿದವರ ಕ್ಷೇತ್ರಗಳ ಸಮೀಕ್ಷೆಗಳನ್ನು ಮಾಡಲು ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವರದಿಗಾರರನ್ನೇ ಎಲ್ಲ ಪತ್ರಿಕೆಗಳು ಕಳಿಸುತ್ತಿದ್ದ ದಿನಗಳವು. ಯಡಿಯೂರಪ್ಪನವರು ಕಣದಲ್ಲಿದ್ದ ಶಿಕಾರಿಪುರ ಹಾಗೂ ಆಗಿನ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆ.ಆರ್.ರಮೇಶ್‌ಕುಮಾರ್ ಸ್ಪರ್ಧಿಸಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನನ್ನ ಪಾಲಿಗೆ ದಕ್ಕಿದ್ದವು.


ಎರಡೂ ಕ್ಷೇತ್ರಗಳಲ್ಲೂ ನಾನು ಅಂದಾಜು ಮಾಡಿದಂತೆಯೇ ಫಲಿತಾಂಶ ಹೊರಬಂದಿತು. ಅಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪ ಇಲ್ಲಿ ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್ ಸೋತರು. ಮೊನ್ನಿನ ತುಮಕೂರು ವಿಧಾನ ಪರಿಷತ್ ಚುನಾವಣೆಯಲ್ಲೂ ಅಷ್ಟೇ, ಮತ ಎಣಿಕೆಯ ದಿನವೇ ಫಲಿತಾಂಶವನ್ನು ‘ ಬೆವರ ಹನಿ’ ದಿನಪತ್ರಿಕೆ ಕೊಟ್ಟಿತ್ತು. ಮತದಾನದ ಬಳಿಕ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗ ಕಾನೂನು ಮಾಡಿರುವುದರಿಂದ ಅಕ್ಷರಗಳ ಬದಲು ಫೋಟೋಗಳಲ್ಲೇ ಫಲಿತಾಂಶವನ್ನು ನಾನು ನೀಡಿದ್ದೆ. ಬೇಕಿದ್ದರೆ, ಡಿ.14ರ ಮತ ಎಣಿಕೆಯ ದಿನದ ಮುಖಪುಟ ನೋಡಿ. ಮೂವರೂ ಪ್ರಮುಖ ಅಭ್ಯರ್ಥಿಗಳ ಫೋಟೋಗಳನ್ನು ಜೋಡಿಸಿದ್ದ ಕ್ರಮದಲ್ಲಿಯೇ ಈ ಅಭ್ಯರ್ಥಿಗಳು ಓಟುಗಳನ್ನು ಗಳಿಸಿದರು. ಕಣದಲ್ಲಿ ಅಭ್ಯರ್ಥಿಗಳು ಅಂತಿಮವಾದ ದಿನದಿಂದಲೂ ನಮ್ಮ ಪತ್ರಿಕೆಯಲ್ಲಿ ಈ ಕ್ರಮಾಂಕದಲ್ಲಿ ಫೋಟೋಗಳನ್ನು ಪ್ರಕಟವಾಗುತ್ತಲೇ ಇದ್ದವು. ಯಾರು ಎಷ್ಟರಮಟ್ಟಿಗೆ ಗಮನಿಸಿದರೋ ಇಲ್ಲವೋ ಗೊತ್ತಿಲ್ಲ.


ಹಲವಾರು ಚುನಾವಣೆಗಳಲ್ಲಿ ಎಲೆಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಒಬ್ಬರು ಕಳೆದ ಭಾನುವಾರ ಬೆಳಿಗ್ಗೆ ಅಶೋಕನಗರದ ನಾಲ್ಕನೇ ಕ್ರಾಸಿನಲ್ಲಿರುವ ಭಟ್ಟರ ಬಾರ‍್ಸ್ ಕೆಫೆ ಮುಂದೆ ನನ್ನನ್ನ ಕರೆದು, ಯಾರು ಗೆಲ್ತಾರೆ (ವಿಧಾನ ಪರಿಷತ್ ಚುನಾವಣೆ) ಅಂತ ಕೇಳಿದರು, ನಾನು “ ಕಾಂಗ್ರೆಸ್” ಅಂದೆ, “ ಇಲ್ಲಾ ಬಿಜೆಪಿ ಬರುತ್ತೆ” ಅಂದರು. 


ಸುಮ್ಮನೆ ಅವರ ಮುಖ ನೋಡುತ್ತಿದ್ದೆ, “ ಹೋಗಲಿ, ಫಸ್ಟ್ ಪ್ರಿಫರೆನ್ಸ್ ಓಟುಗಳು ಯಾರಿಗೆ ಜಾಸ್ತಿ ಬರುತ್ತೆ” ಅಂತ ಕೇಳಿದರು, ನಾನು ಮತ್ತೆ “ಕಾಂಗ್ರೆಸ್” ಅಂತAದೆ. ಅವರು, “ನೀನು ಎಂಪಿ ಎಲೆಕ್ಷನ್‌ನಲ್ಲಿ ದೇವೇಗೌಡರು ಗೆಲ್ತಾರೆ ಅಂತ ಬರೆದಿದ್ದೆ, ಈ ಎಲೆಕ್ಷನ್ನಲ್ಲಿ ಬಿಜೆಪಿಗೇ ಹೆಚ್ಚು ಓಟು ಬರುತ್ತೆ, ಅದೇ ಗೆಲ್ಲುತ್ತೆ” ಅಂದರು ಅತಿ ವಿಶ್ವಾಸದಿಂದ. ಆದರೆ ಬಿಜೆಪಿ ಗೆಲ್ಲಲಿಲ್ಲ. (ನಾನ್ಯಾಕೆ ಆಗ ದೇವೇಗೌಡರು ಗೆಲ್ತಾರೆ ಅಂತ ಬರೆದಿದ್ದೆ ಅನ್ನೋದನ್ನ ಮತ್ತೊಮ್ಮೆ ವಿವರವಾಗಿ ಬರೀತೀನಿ) 


ಈ ಚುನಾವಣೆಯೇ ಅಲ್ಲ, ಕಳೆದ ತಿಂಗಳ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲೂ ಅಷ್ಟೇ, ಮತದಾನದ ದಿನ ‘ಬೆವರಹನಿ’ ದಿನಪತ್ರಿಕೆಯಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದ ಕ್ರಮಾಂಕದಲ್ಲೇ ಫಲಿತಾಂಶ ಹೊರಬಂತು. 


1977-78ರಿಂದಲೂ ಚುನಾವಣೆಗಳಲ್ಲಿ ಸಕ್ರಿಯವಾಗಿದ್ದವನು ನಾನು, ಆಗ ತಾನೇ ನಾನು ಹೈಯರ್ ಪ್ರೆöÊಮರಿ ಶಾಲೆ ಮುಗಿಸಿ ಹೈಸ್ಕೂಲಿಗೆ ಕಾಲಿರಿಸಿದ್ದೆ. ಇವತ್ತು ಯಾವ ಪಕ್ಷ ಅತ್ಯಂತ ಸೆಕ್ಯುಲರ್ ಮತ್ತು ಡೆಮಾಕ್ರಟಿಕ್ ಎನ್ನುತ್ತಿದ್ದಾರೋ ಆ ಕಾಂಗ್ರೆಸ್ ವಿರುದ್ಧ ಇಡೀ ದೇಶ ಒಂದಾಗಿ ಸೆಡ್ಡು ಹೊಡೆದಿದ್ದ ದಿನಗಳವು. ಯಾವ ಇಂದಿರಾಗಾAಧಿಯವರ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಡಿ ಜೈಲು ವಾಸ ಅನುಭವಿಸಿ ಹೊರಬಂದಿದ್ದರೋ ಅದೇ ಜನರು ಇವತ್ತು ನಮ್ಮೆಲ್ಲರ ಕಣ್ಣಲ್ಲಿ ಸರ್ವಾಧಿಕಾರಿಗಳಾಗಿ ಹೊರಹೊಮ್ಮಿರುವುದು ಇತಿಹಾಸದ ವ್ಯಂಗ್ಯ ಅಲ್ವಾ. 
ಈಗ 1999ರಲ್ಲಿ ನಡೆದದ್ದನ್ನು ಹೇಳ್ತೀನಿ ಕೇಳಿ, ತುಮಕೂರಿಂದ ಬೆಂಗಳೂರಿಗೆ ದಿನವೂ ಹೋಗಿ ಬರುತ್ತಿದ್ದ ನಾನು, ಬೆಂಗಳೂರಿನಿAದ ಕೋಲಾರ ದಾಟಿ ಶ್ರೀನಿವಾಸಪುರ ತಲುಪುವ ಹೊತ್ತಿಗೆ ಇಳಿ ಸಂಜೆ ಆಗಿಬಿಟ್ಟಿತ್ತು. ಅಲ್ಲಿ ರಮೇಶ್‌ಕುಮಾರ್ ಅವರ ದೀರ್ಘಕಾಲಿಕ ಏಕೈಕ ಎದುರಾಳಿ ಜಿ.ಕೆ.ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಐದು ವರ್ಷದ ಹಿಂದೆ 1994ರಲ್ಲಿ ಜನತಾದಳದಿಂದ ಗೆದ್ದು ವಿಧಾನ ಸಭೆಯ ಸ್ಪೀಕರ್ ಆಗಿದ್ದ ರಮೇಶ್‌ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದರು. 


ಅಲ್ಲೆಲ್ಲೋ ಗಲಾಟೆ ಆಯಿತಂತೆ, ಅದ್ಯಾರಿಗೋ ಇರಿದರಂತೆ, ಇಬ್ಬರೂ ಕ್ಯಾಂಡಿಡೇಟ್‌ಗಳು ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಹೋಗಿದ್ದಾರೆ.  ಬಹಿರಂಗ ಸಭೆ ರದ್ದಾಗಿದೆ ಅಂತ ಸುದ್ದಿ ಸಿಕ್ಕಿತು. ಆಂಧ್ರದ ಗಡಿ ಎನ್ನುವುದಕ್ಕಿಂತ ಆಂಧ್ರ ಪ್ರದೇಶವೇ ಎನ್ನುವಷ್ಟು ತೆಲುಗುಮಯವಾಗಿರುವ ಶ್ರೀನಿವಾಸಪುರದಲ್ಲಿ ಕನ್ನಡ ಮಾತನಾಡಿದರೆ ಕೆಕ್ಕರಿಸಿ ಮುಖ ನೋಡುತ್ತಿದ್ದವರೇ ಹೆಚ್ಚಿದ್ದರು. ಚುನಾವಣಾ ಸಂಸ್ಕೃತಿಯೂ ಆಂಧ್ರ ಶೈಲಿಯಲ್ಲೇ ನಡೆಯುತ್ತಾ ಬಂದಿದೆ ಅಲ್ಲಿ. ಮುಂದೆ 2003ರ ಮಾರ್ಚಿ 31ರಂದು ಕ್ಷೇತ್ರದ ಗೌನಿಪಲ್ಲಿ ಸಮೀಪ, ರಮೇಶ್‌ಕುಮಾರ್ ಅವರ ಹುಟ್ಟೂರು ಅಡ್ಡಗಲ್ ಹತ್ತಿರದ ಅರಣ್ಯದಲ್ಲಿ ಎನ್.ಸಿ.ಶಾಮಶಂಕರರೆಡ್ಡಿ ಮತ್ತು ಕದಿರಪ್ಪ ಎಂಬ ಕಾಂಗ್ರೆಸ್ ಕಾರ್ಯಕರ್ತರ  ಕೊಲೆ ನಡೆಯುತ್ತದೆ, ಆ ಕೊಲೆ ಪ್ರಕರಣದಲ್ಲಿ ಇದೇ ರಮೇಶ್ ಕುಮಾರ್ ಮತ್ತು ಸಂಗಡಿಗರನ್ನು ಆಪಾದಿತರನ್ನಾಗಿ ಹೆಸರಿಸಿ ಎಫ್‌ಐಆರ್ ಹಾಕಲಾಗುತ್ತದೆ. ಸಿಓಡಿ ತನಿಖೆಯೂ ನಡೆಯುತ್ತದೆ, ಕಡೆಗೆ 9.8.2007ರಂದು ನ್ಯಾಯಾಲಯ ತೀರ್ಪು ನೀಡಿ ರಮೇಶ್ ಕುಮಾರ ಮತ್ತು 13 ಮಂದಿಯನ್ನು ದೋಷಮುಕ್ತಗೊಳಿಸುತ್ತದೆ, ಇಂಥಾ ಹಿನ್ನೆಲೆಯ ಶ್ರೀನಿವಾಸಪುರದಲ್ಲಿ 1978ರಿಂದ ಈವರೆಗೆ ನಡೆದಿರುವ ಎಲ್ಲ ಒಂಬತ್ತೋ ಹತ್ತೋ ಚುನಾವಣೆಗಳಲ್ಲಿ ರಮೇಶ್‌ಕುಮಾರ್ ಮತ್ತು ಜಿ.ಕೆ.ವೆಂಕಟಶಿವಾರೆಡ್ಡಿ ಈ ಇಬ್ಬರೇ ಕಾದಾಡಿರುವುದು. ಜೊತೆಗೆ ಇತ್ತೀಚಿನ ಒಂದೆರಡು ಚುನಾವಣೆ ಬಿಟ್ಟರೆ ಪ್ರತಿ ಸಲವೂ ಒಂದು ಸಲ ಅವರು, ಇನ್ನೊಂದು ಸಲ ಇವರು ಗೆಲ್ಲುತ್ತಿದ್ದರು. ರಮೇಶ್ ಕುಮಾರ್ ಕಾಂಗ್ರೆಸ್‌ನಿAದ ಜನತಾಪಕ್ಷ, ಜನತಾ ದಳ, ಜೆಡಿಎಸ್ ಕಡೆಗೆ ಕಾಂಗ್ರೆಸ್‌ಗೆ ಹಿಂದಿರುಗಿ ಬಂದರೆ, ಜಿ.ಕೆ.ವೆಂಕಟಶಿವಾರೆಡ್ಡಿ ಹೀಗೇ ಕಾಂಗ್ರೆಸ್‌ನಿAದ ಬಿಜೆಪಿ ಕಡೆಗೆ ಜೆಡಿಎಸ್ ತಲುಪಿ ನಿಂತಿದ್ದಾರೆ. ರಮೇಶ್ ಕುಮಾರ್ ಅವರ ಮೊದಲ ಚುನಾವಣಾ ಪ್ರಚಾರಕ್ಕೆ ಖುದ್ದು ಇಂದಿರಾಗಾAಧಿ ಅವರೇ ಶ್ರೀನಿವಾಸಪುರಕ್ಕೆ ಬಂದಿದ್ದರು. (ಫೋಟೋ ನೋಡಿ). 


ವಿಧಾನ ಸಭೆಯ ಮಟ್ಟಿಗೆ ಸ್ಪೀಕರ್ ಪದವಿ ಬಹಳ ಪವಿತ್ರವಾದ ಮತ್ತು ಪವರ್‌ಫುಲ್ ಆದುದು, ಸದನದೊಳಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲ ಸದಸ್ಯರನ್ನು ನಿಯಂತ್ರಿಸುವ, ಕಲಾಪವನ್ನು ಸುಗಮವಾಗಿ ನಡೆಸುವ ಅಧಿಕಾರ ಹೊಂದಿರುವ ಪೀಠವದು. ಹಾಗಾಗಿಯೇ ರಮೇಶ್ ಕುಮಾರ್ ಅವರಂಥ ವಾಚಾಳಿಗೆ ಸೂಕ್ತವಾದ ಹುದ್ದೆ ಅಂತ ಭಾವಿಸಿ ಅವರನ್ನು 1994ರಲ್ಲೇ ಸ್ಪೀಕರ್ ಮಾಡಿಬಿಡುತ್ತದೆ ಜನತಾದಳ. ಮತ್ತೆ 2018ರಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲೂ ಇವರೇ ಸ್ಪೀಕರ್. ಆಧುನಿಕ ಜನಪದದಲ್ಲಿ ಧ್ವನಿವರ್ಧಕಕ್ಕೂ ಸ್ಪೀಕರ್ ಎನ್ನುತ್ತಾರೆ, ಗಂಟಲು ಕಟ್ಟಿ ಮಾತು ನಿಂತಾಗ ಸ್ಪೀಕರ್ ಔಟ್ ಆಗಿದೆ ಅಂತಲೂ ಹೇಳುತ್ತಾರೆ.


ರಮೇಶ್‌ಕುಮಾರ್ ಅವರು 1999ರ ವಿಧಾನ ಸಭಾ ಚುನಾವಣೆವರೆಗೂ ಸ್ಪೀಕರ್ ಆಗಿದ್ದರು, 1999ರಲ್ಲಿ ಸುಮಾರು ಎಂಟೊAಬತ್ತು ತಿಂಗಳು ಅವರು ಸ್ಪೀಕರ್ ಪದವಿಯಲ್ಲಿ ಕೂತು ಸದನದ ಕಲಾಪವನ್ನು ನಿರ್ವಹಣೆ ಮಾಡುತ್ತಿದ್ದುದನ್ನು ವರದಿಗಾರನಾಗಿ ಪತ್ರಕರ್ತರ ಗ್ಯಾಲರಿಯಲ್ಲಿ ಕೂತು ಕಂಡಿದ್ದೇನೆ. ಅವರ ಸಮಯ ಸ್ಫೂರ್ತಿಯ ಮಾತುಗಾರಿಕೆಗೆ ಸಾಟಿಯೇ ಇಲ್ಲ ಎನ್ನುವಷ್ಟು ಪರಿಣಿತಿ ಅವರದಾಗಿತ್ತು. “ ಕೂತ್ಕೋಳಿ,ಕೂತ್ಕೋಳಿ, ಎಲ್ಲ ಗೊತ್ತಿದೆ ಕೂತ್ಕೋಳಿ ಎನ್ನುತ್ತ ಸದಸ್ಯರನ್ನು ಸುಮ್ಮನೆ ಮಾಡುವ ಛಾತಿ ಅವರದು. ಈ ಮಾತುಗಾರಿಕೆಯ ಜಾಣ್ಮೆಯನ್ನು ಎಲ್ಲರೂ ಮೆಚ್ಚುತ್ತಿದ್ದರು.


ಜೊತೆಗೆ ರಮೇಶ್ ಕುಮಾರ್ ಟಿವಿ ಧಾರಾವಾಹಿಗಳಲ್ಲೂ ನಟಿಸುತ್ತಿದ್ದರು, ಅವರ ಟಿವಿ ಧಾರಾವಾಹಿಯಲ್ಲಿ ನಟಿಸುವುದಿಲ್ಲ, ನೈಜ ಅಭಿನಯ ನೀಡುತ್ತಾರೆ ಎನ್ನುತ್ತಿದ್ದರು ನೋಡುಗರು, ಟಿವಿ ಧಾರಾವಾಹಿಗಳಲ್ಲಿ ಅವರ ನೈಜವಾಗಿರಬಹುದು ಆದರೆ ಶ್ರೀನಿವಾಸಪುರದ ಚುನಾವಣೆಗಳಲ್ಲಿ ಬಹಳ ಚೆನ್ನಾಗಿ ನಟಿಸುತ್ತಾರೆ ಎಂದು ಅವರ ವಿರೋಧಿಗಳು ಕುಹಕವಾಡುತ್ತಿದ್ದರು. ಇಂಥಾ ರಮೇಶ್‌ಕುಮಾರ್ ಅವರಿಗೆ ಅವರ ಮಾತಿನ ಜಾಣ್ಮೆಯೇ ಅವರ ರಾಜಕೀಯ ಜೀವನಕ್ಕೆ ಮುಳುವಾಗಿಬಿಟ್ಟರೆ ಅದಕ್ಕಿಂತ ದುರಂತ ಬೇರಿಲ್ಲ ಅಲ್ವಾ. 


ಎರಡು ವರ್ಷದ ಹಿಂದೆಯೂ ಅವರು ಮೊನ್ನಿನ ತರದ್ದೇ ತೊಂದರೆಗೆ ಸಿಕ್ಕಿಕೊಂಡಿದ್ದರು. ಸ್ಪೀಕರ್ ಪೀಠದಲ್ಲೇ ಕುಳಿತು ರಮೇಶ್ ಕುಮಾರ್ ತಮ್ಮನ್ನು ತಾವು ರೇಪ್ ಸಂತ್ರಸ್ಥೆ ಎಂಬAತೆ ಬಿಂಬಿಸಿಕೊAಡಿದ್ದರು. “ ನೋಡಿ, ರೇಪ್ ನಡೀತು ಅಂತ ಕಂಪ್ಲೇAಟ್ ಕೊಟ್ಟಿದ್ದೇ ತೊಂದರೆಗೆ ಸಿಕ್ಕಿಹಾಕಿಕೊಂಡAತಾಯಿತು. ರೇಪ್ ಮಾಡಿದವನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಜೇಲಿಗೆ ಕಳಿಸಿಬಿಡುತ್ತಾರೆ. ಆದರೆ ರೇಪ್‌ಗೆ ಒಳಗಾದ ನನ್ನನ್ನು ಈಶ್ವರಪ್ಪನವರು ಪದೇ ಪದೇ ಪ್ರಶ್ನಿಸುತ್ತಾರೆ. ಹೆಂಗೆ ಆಯಿತು, ಅವನು ಹೆಂಗೆ ಮಾಡಿದ, ಎಲ್ಲಿ ನಡೆಯಿತು. ಹೀಗೇ ರೇಪ್ ಆಗಿದ್ದು ಒಂದು ಸಲವೇ ಆದರೂ ನ್ಯಾಯಾಲಯದಿಂದ ಹೊರಬರುವ ಹೊತ್ತಿಗೆ ಲೆಕ್ಕವಿಲ್ಲದಷ್ಟು ಸಲ ರೇಪ್ ಮಾಡಿಸಿಕೊಳ್ಳಬೇಕಾಗಿ ಬರುತ್ತದೆ”!? ರಮೇಶ್ ಕುಮಾರ್ ಸ್ಪೀಕರ್ ಆಗಿ, ಅಕ್ರಮ ಸಂಭಾವನೆ ಪಡೆದುಕೊಂಡಿದ್ದಾರೆAಬ ಆಪಾದನೆಯನ್ನು ಸದನಕ್ಕೆ ಅರ್ಥ ಮಾಡಿಸಲು ರೇಪ್ ಸಂತ್ರಸ್ತೆ ಉದಾಹರಣೆ ಕೊಡುವ ಅವಶ್ಯಕತೆ ಇತ್ತೇ ಎಂಬುದು ಎಲ್ಲ ಪ್ರಶ್ನೆಯಾಗಿತ್ತು. ಅವರ ವಿವೇಚನಾರಹಿತವಾದ ವಾಕ್ಚಾತುರ್ಯಕ್ಕೆ ರಮೇಶ್‌ಕುಮಾರ್ ಸಾರ್ವಜನಿಕವಾಗಿ ಬಹಳ ಮುಜುಗರ ಅನುಭವಿಸಬೇಕಾಗಿ ಬಂತು ಅಂತ ಎಲ್ಲರಿಗೂ ಗೊತ್ತು.


ಈಗ ಮತ್ತೆ ಅಂಥದ್ದೇ ಒಂದು ಉದಾಹರಣೆಯನ್ನು ಸದನದ ಸಾಮಾನ್ಯ ಸದಸ್ಯನಾಗಿ ನೀಡುವ ಮೂಲಕ ಎರಡು ವರ್ಷದ ಹಿಂದೆ ಅನುಭವಿಸಿದ್ದಕ್ಕಿಂತ ಹೆಚ್ಚಿನ ಮುಜುಗರ ಮತ್ತು ಅಪಮಾನವನ್ನು ಅನುಭವಿಸತೊಡಗಿದ್ದಾರೆ. ಗುರುವಾರ ಬೆಳಿಗ್ಗೆ ಸದನ ಆರಂಭವಾಗುತ್ತಿದ್ದAತೆ ಅತಿ ಮಳೆಯಿಂದ ರೈತರಿಗೆ ಆಗಿರುವ ನಷ್ಟದ ಕುರಿತು ಸದನದಲ್ಲಿ ಚರ್ಚಿಸಲು ಹೆಚ್ಚು ಸಮಯ ನೀಡುವಂತೆ ಸದಸ್ಯರು ನಿರಂತರ ಬೇಡಿಕೆ ಇಡತೊಡಗಿದಾಗ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, “ ಅಯ್ಯೋ ಹೀಗೆ ಎಲ್ಲರೂ ಸಮಯ ಕೇಳುತ್ತಾ ಹೋದರೆ ಹೇಗೆ ಮಾಡುವುದು, ಈ ಅರಾಜಕತೆಯನ್ನು ನಿಯಂತ್ರಿಸಲಾಗದ ನಾನು ಎಂಜಾಯ್ ಮಾಡುವುದನ್ನು ಬಿಟ್ಟರೆ ಬೇರೆ ಏನು ಮಾಡಲು ಸಾಧ್ಯವಿಲ್ಲ” ಎನ್ನುತ್ತಾ ಸದನದಲ್ಲಿದ್ದ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಕಡೆ ನೋಡುತ್ತಾರೆ. ಸ್ಪೀಕರ್ ಕಾಗೇರಿ ಮಾತಿಗೆ ಸಮಯ ಸ್ಫೂರ್ತಿಯಿಂದ ಇನ್ನೂ ಚೆನ್ನಾದ ಉತ್ತರ ನೀಡಬೇಕೆಂದುಕೊAಡರೇನೋ ಎಂಬAತೆ ರಮೇಶ್ ಕುಮಾರ್, ಎದ್ದು ನಿಂತು ಇಂಗ್ಲಿಷಿನಲ್ಲಿ , “ ದೇರ್ ಈಸ್ ಏ ಸೇಯಿಂಗ್, ವೆನ್ ರೇಪ್ ಈಸ್ ಇನ್‌ಎವಿಟೆಬಲ್ , ಲೈ ಡೌನ್ ಅಂಡ್ ಎಂಜಾಯ್ ಇಟ್, ದಟ್ ಎಕ್ಸಾಟ್‌ಲೀ ದ ಪೊಸಿಷನ್ ಇನ್ ವಿಚ್ ಯು ಆರ್” ಎನ್ನುತ್ತಾರೆ, ಇವರ ಇಡೀ ಹೇಳಿಕೆಯನ್ನು ಖಂಡಿಸುವುದನ್ನು ಬಿಟ್ಟು ಸ್ಪೀಕರ್ ಕಾಗೇರಿ ಅವರು ಮತ್ತಷ್ಟು ನಗೆಯೊಂದಿಗೆ ಸ್ವೀಕರಿಸಿ ಆನಂದಿಸುತ್ತಾರೆ. ಸದನದಲ್ಲಿದ್ದ ಇತರ ಸದಸ್ಯರೂ ನಗತೊಡಗುತ್ತಾರೆ. 


ಬೆಳಗಾವಿಯ ಸುವರ್ಣ ವಿಧಾನಸೌಧದ ಸದನದೊಳಗೆ ನಡೆದ ಈ ಘಟನೆ ಟಿವಿಗಳಲ್ಲಿ ಬ್ರೇಕಿಂಗ್ ಆಗುತ್ತ, ದಿಲ್ಲಿಯ ಅರಮನೆವರೆಗೆ ತಲುಪಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೆವಾಲಾ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಹಿರಿಯ ಮುಖಂಡರು ತೀವ್ರವಾಗಿ ಖಂಡಿಸುವಲ್ಲಿಗೆ ಬಂದು ನಿಲ್ಲುತ್ತದೆ.


ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಪರವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದರು. ಉತ್ತರ ಪ್ರದೇಶದಲ್ಲಿ ಎದುರಾಗಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ 40 % ಮಹಿಳೆಯರಿಗೆ ಟಿಕೆಟ್ ನೀಡಲು ನಿರ್ಧರಿಸಿರುವ ಆ ಪಕ್ಷದ ಯುವ ನಾಯಕಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡಾ ಅತ್ಯಂತ ಕಟು ಮಾತುಗಳಲ್ಲಿ ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆಂದರೆ ಪರಿಸ್ಥಿತಿ ಎಷ್ಟು ಸೀರಿಯಸ್ ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಒಕ್ಕೂಟ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಶಾಸಕರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಇವರನ್ನು ಮೊದಲು ಅಮಾನತುಗೊಳಿಸಿ ಎಂದು ಆಗ್ರಹಿಸಿದ್ದಾರೆ.


ರಮೇಶ್ ಕುಮಾರ್ ಮಾತಿಗೆ ಸ್ಪೀಕರ್ ಕಾಗೇರಿ ಬಿದ್ದು ಬಿದ್ದು ನಗುವ ಮೂಲಕ ನೀಡಿದ ಪ್ರತಿಕ್ರಿಯೆಯೂ ಮಹಾಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. “ ತಮ್ಮ ಮಾತು ಉದ್ದೇಶಪೂರ್ವಕ ಅಲ್ಲ ಕೇವಲ ಸಾಂದರ್ಭಿಕ, ಆದಾಗ್ಯೂ ಬೇಷರತ್ ಕ್ಷಮೆಕೋರುತ್ತೇನೆ” ಎಂಬ ರಮೇಶ್ ಕುಮಾರ್ ಪಶ್ಚಾತ್ತಾಪಕ್ಕೆ ಕಿಮ್ಮತ್ತು ದೊರಕುತ್ತಿಲ್ಲ. ಸದನದಲ್ಲೇನೋ ಕ್ಷಮೆ ಕೋರಿದರೂ, ಹೊರಗೆ ಮಾಧ್ಯಮಗಳ ಕೂರಂಬಿನAತ ಪ್ರಶ್ನೆಗಳನ್ನು ಎದುರಿಸಲು ಅವರಿಂದಾಗುತ್ತಿಲ್ಲ ಎನ್ನುವುದು ಅವರು ಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸಿ ಹೋಗುವ ಮತ್ತು ವರದಿಗಾರರ ಮೇಲೆ ರೇಗುವ ಕೃತ್ಯಗಳಿಂದ ಬಯಲಾಗುತ್ತಿದೆ.
ಇಂಥಾ ವಿಕ್ಷಿಪ್ತ ಮನಸ್ಥಿತಿ ಮತ್ತು ಇಂಥ ಮಾತುಗಳನ್ನು ವಿಧಾನ ಸಭೆಯಂಥ ಪವಿತ್ರವಾದ ವೇದಿಕೆಯಲ್ಲಿ ಆಡುವುದು ಒಂಬತ್ತು ಸಲ ಚುನಾವಣೆ ಎದುರಿಸಿ ಆರು ಸಲ ಗೆದ್ದು ಶಾಸಕರಾಗಿರುವ, ಸಚಿವರು ಹಾಗೂ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ 70 ವರ್ಷ ಮೀರಿದ ಹಿರಿಯ ರಮೇಶ್ ಕುಮಾರ್ ಅವರಲ್ಲಿ ಏಕೆ ಇದೆ ಎನ್ನುವುದು ಮನಶಾಸ್ತçಜ್ಞರನ್ನು ಕೇಳಬೇಕಾದ ಪ್ರಶ್ನೆ. ಎರಡು ವರ್ಷಗಳ ಹಿಂದೆ ತಪ್ಪಿಸಿಕೊಂಡಷ್ಟು ಸುಲಭವಾಗಿ ಈ ಸಲ ಈ ರೇಪ್ ವಿವಾದದಿಂದ ಪಾರಾಗುವುದು ರಾಮಯ್ಯ ರಮೇಶ್ ಕುಮಾರ್ ಅವರಿಗೆ ಸಾಧ್ಯವಿಲ್ಲ. 


“ ಲಜ್ಜೆಗೆಟ್ಟ ವರ್ತನೆ, ಲಜ್ಜೆಗೆಟ್ಟ ಕ್ರಿಯೆ” ಎಂದು ಬಣ್ಣಿಸಿರುವ ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್, ರಮೇಶ್ ಕುಮಾರ್ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಶಾಸಕಿಯೂ ತಮ್ಮ ಪಕ್ಷದ ನಾಯಕನ ಮಾತಿಗೆ ಆಕೋಶಗೊಂಡಿದ್ದಾರೆ.
ಇAಥಾ ಮನುಷ್ಯರು ವಿಧಾನಸಭೆಯಲ್ಲೇ ಇಂತಾ ವರ್ತನೆ ತೋರಬಲ್ಲವ

ರಾದರೆ, ಇನ್ನು ಅವರ ಮನೆಗಳಲ್ಲಿ ಮಹಿಳೆಯರ ಕುರಿತು ಹೇಗೆ ವರ್ತಿಸುತ್ತಾರೆ, ಊಹಿಸಿ ಎಂದು ರಾಷ್ಟಿçÃಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಖಂಡಿಸಿದ್ದಾರೆ.


ರಮೇಶ್ ಕುಮಾರ್ ಬಹಳ ಬುದ್ದಿ ಜೀವಿ ರಾಜಕಾರಣಿ ಎಂಬುದೆಲ್ಲ ತೋರಿಕೆಯ ಮತ್ತು ಹೇಳಿ ನಂಬಿಸಿರುವ ಮಾತುಗಳು, ಇವರು ವಿರೋಧವನ್ನು ಸಹಿಸಲ್ಲ, ವಿರೋಧಿಗಳ ಮಾತು ಇವರಿಗೆ ರುಚಿಸುವುದಿಲ್ಲ, ಸ್ವಕ್ಷೇತ್ರ ಶ್ರೀನಿವಾಸಪುರ ಹಾಗೂ ಕೋಲಾರ ಜಿಲ್ಲೆಯ ಇವರ ರಾಜಕಾರಣದ ವರಸೆಗಳೇ ಬೇರೆ ಎಂಬುದು ಪ್ರತ್ಯಕ್ಷದರ್ಶಿಗಳಿಗಷ್ಟೇ ಗೊತ್ತು ಎಂಬ ಆರೋಪಕ್ಕೆ ಇವರ ಈ ಮಾತುಗಳು ಇಂಬು ಕೊಡತೊಡಗಿವೆ.


ವಿಧಾನ ಮಂಡಲ ಅಧಿವೇಶನದಲ್ಲಿ ಗುತ್ತಿಗೆದಾರರ 40% ಕಮೀಶನ್ ಆರೋಪ ಮತ್ತು  ರೈತರಿಗೆ ಬೆಳೆ ನಷ್ಟ ಪರಿಹಾರ ವಿಳಂಬ ವಿಷಯದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಯತ್ನದಲ್ಲಿದ್ದ ವಿರೋಧ ಪಕ್ಷ ಕಾಂಗ್ರೆಸ್‌ನ ಬೆಣೆಯನ್ನು ರಮೇಶ್‌ಕುಮಾರ್ ಕಿತ್ತಂತಾಗಿಬಿಟ್ಟಿದೆ ಅಂತ ಅಂದರೆ ಕಿಡಿಗೇಡಿತನ ಎನ್ನಬೇಡಿ?!