ಸಮಾನತೆಗಾಗಿ 8 ಶತಮಾನ ಕಾದ ಮಹಿಳೆ: ಲೀಲಾ ಸಂಪಿಗೆ ತಿಪಟೂರಿನಲ್ಲಿ 3ನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮಾವೇಶ
ಸಮಾನತೆಗಾಗಿ 8 ಶತಮಾನ ಕಾದ ಮಹಿಳೆ: ಲೀಲಾ ಸಂಪಿಗೆ ತಿಪಟೂರಿನಲ್ಲಿ 3ನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮಾವೇಶ
ಸಮಾನತೆಗಾಗಿ 8 ಶತಮಾನ ಕಾದ ಮಹಿಳೆ: ಲೀಲಾ ಸಂಪಿಗೆ
ತಿಪಟೂರಿನಲ್ಲಿ 3ನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮಾವೇಶ
ತಿಪಟೂರು : ಮಹಿಳಾ ಸಮಾನತೆಯ ಆಶಯವನ್ನು ಅನುಷ್ಠಾನಗೊಳಿಸಿ, ಸಮಾನ ಸ್ಥಾನಮಾನ ನೀಡಿ ಗೌರವಿಸಿ ಮಹಿಳೆಯರ ಘನೆತಯನ್ನು ಎತ್ತಿ ಹಿಡಿದಿದ್ದು 12ನೇ ಶತಮಾನದಲ್ಲಿ ಬಸವಾದಿಶರಣರಾದರೂ ಪ್ರಬಲವಾಗಿ ಜಾರಿಯಾಗಲು 20ನೇ ಶತಮಾನದವರೆಗೆ ಕಾಯುವ ಅನಿವಾರ್ಯತೆ ಮಹಿಳೆಯರಿಗೆ ಎದುರಾಯಿತು ಎಂದು ಜಿಲ್ಲಾ ಸಮ್ಮೇಳನಾಧ್ಯಕ್ಷೆ ಹಾಗೂ ಲೇಖಕಿ ಡಾ.ಲೀಲಾ ಸಂಪಿಗೆ ತಿಳಿಸಿದರು.
ನಗರದ ಗುರುಕುಲಾನಂದಾಶ್ರಮದಲ್ಲಿ ಶನಿವಾರ ನಡೆದ 3ನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ತಿçà ಸಮಾನತೆ, ದಲಿತ ವಾದಕ್ಕೆ ಮೊದಲ ತಳಪಾಯ ಹಾಕಿಕೊಟ್ಟವರು ವಚನಕಾರ್ತಿಯರು.ಅಕ್ಕಮಹಾದೇವಿ ಕನ್ನಡ ಸಾಹಿತ್ಯದ ಮೊದಲ ಬಂಡಾಯ ಧ್ವನಿ ಎಂದರೆ ತಪ್ಪಾಗಲಾರದು. ವಚನ ಚಳುವಳಿಯೇ ಕನ್ನಡದ ಮೊದಲ ಸಂಘಟಿತ ಮಹಿಳಾ ಪ್ರತಿರೋಧವಾಗಿದೆ. 19ನೇ ಶತಮಾನದಲ್ಲಿ ಬದುಕಿನ ಬವಣೆ, ಪುರುಷ ಪ್ರಾಬಲ್ಯದ ಒತ್ತಡದ ನಡುವೆಯೂ ನುಸುಳಿ ಬಂದ ಮಹಿಳಾ ಬರಹಗಳು ಪ್ರಬಲ ಉರಿ ಗುಂಡುಗಳಾಗಿದ್ದವು. ಸ್ತಿçà ವಿಮೋಚನೆಗೆ ಧ್ವನಿಯಾಗಿ, ಅಧಿಕಾರಯುತವಾಗಿ ತನ್ನ ಸತ್ವಶಾಲಿ ಬರವಣಿಗೆಯಿಂದಲೇ ಮಹಿಳಾ ಬರಹಗಾರರು ಬೆಳಕಿಗೆ ಬರಲು 20ನೇ ಶತಮಾನದವರಗೆ ಕಾಯಬೇಕಾಯಿತು.
ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿದ್ದು ಸಾಹಿತ್ಯವೂ ಜೊತೆಗೂಡಿಯೇ ಸಾಗಿದೆ. ಸ್ತಿçà ಸಮಾನತೆ, ದೌರ್ಜನ್ಯಗಳ ಕೊನೆ, ಸಮಾನ ಅವಕಾಶ, ಸ್ವಾತಂತ್ರö್ಯದ ಹೋರಾಟದ ಬೆಂಬಿಡದ ಆಶಯಗಳಾಗಿವೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಘಟಿಸುತ್ತಿರುವ ಘಟನೆಗಳು ಖಂಡಿತಕ್ಕೂ ಆತಂಕಕಾರಿಯಾಗಿದೆ. ಇದಕ್ಕೆ ಬೆನ್ನು ಮಾಡಿ ಯಾವ ಸಾಹಿತ್ಯವೂ ಕೂರದೇ ಪ್ರಬಲ ಬರಹಗಳ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಇರುವ ಶಕ್ತಿಯನ್ನು ತೋರಿಸಬೇಕಿದೆ ಎಂದರು.
ರಾಜ್ಯದ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ರಾಜ್ಯದಲ್ಲಿ ಕನ್ನಡದ ಶಾಲೆಗಳು ಮುಚ್ಚಿತ್ತಿರುವುದು ಹಣಕಾಸಿಕ ಕೊರತೆಯಿಂದ ಅಲ್ಲ ಬದಲಿಗೆ ಮಕ್ಕಳು ಶಾಲೆಗೆ ಬಾರದಿರುವುದರಿಂದ ಎಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯಸರ್ಕಾರ ಸುಮಾರು 1 ಮಗು ಇರುವ 100 ಶಾಲೆಗಳನ್ನು ನಡೆಸುತ್ತಿದ್ದು 3800 ಕ್ಕೂ ಅಧಿಕ ಶಾಲೆಗಳಲ್ಲಿ 10 ಮಕ್ಕಳಿಗೂ ಕಡಿಮೆ ಇರುವ ಶಾಲೆಗಳನ್ನು, 13 ಸಾವಿರ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳು ಇದ್ದರೂ ಇವೆಲ್ಲವನ್ನೂ ಸರ್ಕಾರ ನಡೆಸುತ್ತಾ ಬಂದಿದೆ. ಕನ್ನಡ ಉಳಿಯುವ ಸಲುವಾಗಿಯೇ ಸರ್ಕಾರಿ ಶಾಲೆಗಳನ್ನು ನಡೆಸಲಾಗುತ್ತಿದ್ದು ಮಕ್ಕಳೇ ಬರದಿದ್ದರೆ ಯಾವ ಸರ್ಕಾರಗಳು ಶಾಲೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದರು.
ವಿಧಾನ ಪರಿಷತ್ತಿನ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಮಾತೃ ಭಾಷೆಯ ಮೇಲೆ ಹಿಡಿತ ಇಲ್ಲದಿದ್ದರೆ ಸಾಧನೆ ಕಷ್ಟವಾಗುತ್ತದೆ. ಇಡೀ ವಿಶ್ವದಲ್ಲಿ ಯಾವುದೇ ಸಾಹಿತ್ಯದ ಮೂಲ ಮಾತೃಭಾಷೆಯೇ ಆಗಿರುತ್ತದೆ. ಕನ್ನಡವನ್ನು ಕಟ್ಟಿ ಬೆಳೆಸುವ ಹಿರಿಯರ ಕಲ್ಪನೆ, ಆಶಾ ಭಾವನೆ, ಅಡಿಪಾಯವನ್ನು ನಾವು ನೆನೆಯಬೇಕಾಗುತ್ತದೆ ಎಂದರು.
ತಿಪಟೂರು ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ , ಕಿರುತೆರೆ ಮತ್ತು ಚಲನಚಿತ್ರ ನಟಿ ಸುಧಾ ನರಸಿಂಹರಾಜು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ನಿಕಟಪೂರ್ವ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಸವರಾಜಪ್ಪ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ತುಮಕೂರಿನ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಪಿ.ಎಸ್.ಅನಸೂಯ, ಬೆಂಗಳೂರಿನ ವಕೀಲೆ ಎಸ್.ವಿ.ಮಂಜುಳಾ ಕಿರಣ್, ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಸ್ವರ್ಣಗೌರಮ್ಮ, ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೋಹನ್ ಇದ್ದರು.
ಕನ್ನಡ ಶಾಲೆಗಳನ್ನು ಮುಚ್ಚಿದರೆ
ಕಸಾಪ ಮುಚ್ಚಿ ಹೋಗಲಿದೆ!?
ರಾಜ್ಯದಲ್ಲಿ ಕನ್ನಡ ಸ್ಥಿತಿಯ ಬಗ್ಗೆ ಆಲೋಚಿಸಬೇಕಾಗಿದೆ. ರಾಜ್ಯದಲ್ಲಿನ ಸರ್ಕಾರಿ ಕನ್ನಡ ಮಾಧ್ಯಮದ ಒಂದೂ ಶಾಲೆಯೂ ಮುಚ್ಚಬಾರದು ಏಕೆಂದರೆ ಮುಂದಿನ 10 ವರ್ಷಗಳಲ್ಲಿ ಕನ್ನಡ ಕರ್ನಾಟಕದಿಂದ ಮಾಯವಾಗಲಿದ್ದು ಕನ್ನಡ ಸಾಹಿತ್ಯ ಪರಿಷತ್ತನ್ನು ಮುಚ್ಚಿಕೊಂಡು ಹೋಗುವ ಅನಿವಾರ್ಯತೆ ಇದೆ. ರಾಜ್ಯದಲ್ಲಿ ನಡೆದಿರುವ 86 ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ 4 ಸಮ್ಮೇಳನದಲ್ಲಿ ಮಾತ್ರ ಮಹಿಳೆಯರು ಅಧ್ಯಕ್ಷರಾಗಿದ್ದಾರೆ. ಅದ್ದರಿಂದ ಮುಂದಿನ 5 ವರ್ಷದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಲ್ಲಿ 2 ಬಾರಿ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು.
ಮಹೇಶ್ ಜೋಶಿ , ಅಧ್ಯಕ್ಷ,ಕನ್ನಡ ಸಾಹಿತ್ಯ ಪರಿಷತ್ತು