ವಿಶ್ವ ಮಾನವ ದಿನ ಆಚರಣೆ ಹೀಗಿರಲಿ

vishwa-manava-dina-acharane-kuvempu

ವಿಶ್ವ ಮಾನವ ದಿನ ಆಚರಣೆ ಹೀಗಿರಲಿ

ವಿಶ್ವ ಮಾನವ ದಿನ ಆಚರಣೆ ಹೀಗಿರಲಿ

ಡಿಸೆಂಬರ್ 29 ಕುವೆಂಪು ಹುಟ್ಟಿದ ಹಬ್ಬ. 
ಆ ದಿನವನ್ನು ಸರ್ಕಾರ ವಿಶ್ವಮಾನವ ದಿನವೆಂದು ಘೋಷಿಸಿದೆ.
ನಮಗೆಲ್ಲಾ ವಿಶ್ವಮಾನವ ಧರ್ಮವನ್ನು ರೂಪಿಸಿಕೊಟ್ಟ ಕುವೆಂಪು ಅವರ ವಿಚಾರಗಳನ್ನು ಮನೆ ಮನೆಗೂ ತಲುಪಿಸುವ ಅಗತ್ಯವಿದೆ.
ಯುಗಾದಿ, ಸಂಕ್ರಾAತಿ, ಗೌರಿ, ಮಹಾನವಮಿ ಇತ್ಯಾದಿ ಹಬ್ಬಗಳನ್ನು ಮಾಡುವಂತೆ ನಮ್ಮ ಮನೆಗಳಲ್ಲಿ ಕುವೆಂಪು ಹಬ್ಬವನ್ನು ಮಾಡಬೇಕು.
 `ಕುವೆಂಪು ಧ್ಯಾನ' ಹೇಗೆ ಮಾಡಬೇಕು 
1. ಡಿಸೆಂಬರ್ 29 ರಂದು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತುಕೊಳ್ಳಬೇಕು. 
2. ಸಾಧ್ಯವಾದರೆ ಅಕ್ಕಪಕ್ಕದ ಮನೆಯವರನ್ನು, ನೆಂಟರಿಷ್ಟರನ್ನು, ಸ್ನೇಹಿತರನ್ನು ಆಹ್ವಾನಿಸಬೇಕು.
3. ಕುವೆಂಪು ಅವರ ಭಾವಚಿತ್ರ/ಯಾವುದಾದರೂ ಒಂದೋ ಎರಡೋ ಪುಸ್ತಕ/ಭಾರತ ಮಾತೆಯ ಫೋಟೋ ಅಥವಾ ಭೂಪಟ/ರಾಮಕೃಷ್ಣ ಪರಮಹಂಸ/ಶಾರದಾದೇವಿ/ವಿವೇಕಾನAದ/ಬುದ್ಧ/ಬಸವಣ್ಣ ಹೀಗೆ ಯಾರಾದರೂ ಮಹಾಪುರುಷರ ಫೋಟೊ ಇಡಬೇಕು.
4. ಆ ಫೋಟೋಗಳನ್ನು ಹೂವಿನಿಂದ ಅಲಂಕರಿಸಿ. ಸಾಧ್ಯವಾದರೆ ಊದುಬತ್ತಿ ಹಚ್ಚಿ ದೀಪ ಬೆಳಗಬೇಕು.
5. ಕುವೆಂಪು ವಿಚಾರಗಳ ಬಗ್ಗೆ ಮುಖ್ಯವಾಗಿ ಅವರ ವಿಶ್ವಮಾನವ ಧರ್ಮ ಕುರಿತು ಮಾತನಾಡಬೇಕು.
6. ಅವರ ಕಥೆ, ಕಾದಂಬರಿ, ಕಾವ್ಯ, ಮಹಾಕಾವ್ಯ, ನಾಟಕಗಳಿಂದ ಒಂದೆರಡು ಪುಟಗಳನ್ನು ಓದಿ ಹೇಳಬೇಕು.
7. ಮಕ್ಕಳಿಂದ ಕುವೆಂಪು ಪದ್ಯಗಳನ್ನು ಓದಿಸುವುದು ಹಾಡಿಸುವುದನ್ನು ಮಾಡಬೇಕು.
8. ಅಲ್ಲಿ ಸೇರಿದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಸಿಹಿ ಹಂಚಬೇಕು.
9. ಕಾರ್ಯಕ್ರಮದ ಫೋಟೋ ತೆಗೆದು ಫೇಸ್ ಬುಕ್, ವಾಟ್ಸಾಪ್ ಇತ್ಯಾದಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು.
10. ನಿಮಗೆ ಹೊಳೆಯುವ ಮತ್ತಷ್ಟು ಅಂಶಗಳನ್ನು ಸೇರಿಸಿ ಕುವೆಂಪು ಧ್ಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಹೆಚ್ಚು ಹಣ ಖರ್ಚು ಮಾಡದೆ ನಿಮ್ಮ ಮಿತಿಯಲ್ಲೇ ಈ ಹಬ್ಬವನ್ನು ಆಚರಿಸಿ. ಕುವೆಂಪು ಅವರ ವಿಚಾರಗಳನ್ನು ಎಲ್ಲರಿಗೂ ಮುಟ್ಟಿಸಿ.
-ಎಲ್.ಎನ್. ಮುಕುಂದರಾಜ್