ಪುಸ್ತಕ ವಿಮರ್ಶೆ- ಎಂ.ಎಚ್.ನಾಗರಾಜು `ತಲೆಬುರುಡೆ ಬೇಟೆಗಾರರು ಮತ್ತುಗಂಗಾಧರಕೊಡ್ಲಿ- ಒಂದು ಮುಖಾಮುಖಿ 

ಪುಸ್ತಕ ವಿಮರ್ಶೆ ಎಂ.ಎಚ್.ನಾಗರಾಜು `ತಲೆಬುರುಡೆ ಬೇಟೆಗಾರರು ಮತ್ತುಗಂಗಾಧರಕೊಡ್ಲಿ- ಒಂದು ಮುಖಾಮುಖಿ 

ಪುಸ್ತಕ ವಿಮರ್ಶೆ- ಎಂ.ಎಚ್.ನಾಗರಾಜು `ತಲೆಬುರುಡೆ ಬೇಟೆಗಾರರು ಮತ್ತುಗಂಗಾಧರಕೊಡ್ಲಿ- ಒಂದು ಮುಖಾಮುಖಿ 


ಪುಸ್ತಕ ವಿಮರ್ಶೆ
ಎಂ.ಎಚ್.ನಾಗರಾಜು
`ತಲೆಬುರುಡೆ ಬೇಟೆಗಾರರು ಮತ್ತುಗಂಗಾಧರಕೊಡ್ಲಿ- ಒಂದು ಮುಖಾಮುಖಿ 


ತುಮಕೂರಿನಲ್ಲಿಕಳೆದ ಕಾಲು ಶತಮಾನದಿಂದ ನಾನು ಕಾಣುತ್ತಲೇ ಬಂದಿರುವ ಸಾಂಸ್ಕೃತಿಕ ವ್ಯಕ್ತಿಗಳಲ್ಲಿ, ಗಂಗಾಧರಕೊಡ್ಲಿಯವರೂÀಒಬ್ಬರು. ಕಾಣುತ್ತಲೇ ಬಂದಿದ್ದರೂಒಡನಾಟ ಸಾಂಗತ್ಯತುAಬ ಕಡಿಮೆ. ಪ್ರಾಸಂಗಿಕವಾಗಿಎದುರಿಗೆ ಸಿಕ್ಕಾಗೊಮ್ಮೆ ಹಲೋ... ಹೇಗಿದ್ದೀರಿ? ಏನು ಬರೆದಿದ್ದೀರಿ? ಹೀಗೆ ಒಂದೆರಡುಕುಶಲೋಪರಿಯ ಮಾತು. ಆದರೆ ನಾನು ಸಭೆ ಸಮಾರಂಭಗಳಲ್ಲಿ ಅವರ ಭಾಷಣಗಳನ್ನು ವಿಶೇಷವಾಗಿ ಕೇಳಿದ್ದೇನೆ, ಕವಿಗೋಷ್ಠಿಗಳಲ್ಲಿ ಕವಿತೆಗಳ ಓದನ್ನು ಕೇಳಿಸಿಕೊಂಡಿದ್ದೇನೆ. ಅವರ ಹಲವು ಕೃತಿಗಳನ್ನೂ ಓದಿಕೊಂಡಿದ್ದೇನೆ. ಈ ಓದಿನ ಭಾಗವಾಗಿ, ಅದೇಗೋ ನನ್ನ ಕಣ್ಣಳತೆಯಿಂದ ದೂರದಲ್ಲೇ ಉಳಿದುಬಿಟ್ಟಿದ್ದ ಅವರತಲೆಬುರುಡೆ ಬೇಟೆಗಾರರು-ನಾಗಾಲ್ಯಾಂಡ್ ಪ್ರವಾಸಕಥನದೃಗ್ಗೋಚರವಾಯಿತು. ಕೈಗೆತ್ತಿಕೊಂಡು ಓದಲಾರಂಭಿಸಿದೆ.


ತಲೆಬುರುಡೆ ಬೇಟೆಗಾರರು-ನಾಗಾಲ್ಯಾಂಡ್ ಪ್ರವಾಸಿಕಥನ 112 ಪುಟಗಳ ಸುಂದರ ಪುಸ್ತಕ, 2013 ರಲ್ಲಿತುಮಕೂರಿನ ಶಾಲ್ಮಲೀ ಪ್ರಕಾಶನದಿಂದ ಪ್ರಕಟಗೊಂಡಿದೆ. ಮುಖಪುಟ ವಿನ್ಯಾಸಕಾರ ಕೆ.ಕೆ. ಮಕಾಳಿ ಅವರು ಪುಸ್ತಕದ ಸೊಗಸಿಗೆ ಸೌಂದರ್ಯಕ್ಕೆಕಾರಣರಾಗಿದ್ದಾರೆ. ಕೃತಿಯ ಒಳಹೊಕ್ಕಂತೆ ಲೇಖಕರ ಮನದಾಳದ ಮಾತುಗಳು ಮನತುಂಬಿಕೊಳ್ಳುತ್ತವೆ. ನಾಗಲೋಕಕ್ಕೆ ಹೀಗೆ ಬನ್ನಿ ಎಂದು ವಿಮರ್ಶಕ-ಲೇಖಕ ಎಸ್. ನಟರಾಜ ಬೂದಾಳು ಅವರು ಮುನ್ನುಡಿಯ ಮಾತುಗಳನ್ನು ಬರೆದುಕೃತಿಯ ಪೂರ್ವಾಪರಗಳನ್ನು ನಿಕಷಕ್ಕೆ ಒಡ್ಡಿದ್ದಾರೆ. ಇನ್ನು ಹೆಚ್ಚುವರಿ ಮಾತಾಗಿ ಕವಿ ದೊಡ್ಡರಂಗೇಗೌಡಅವರು ನಾಗಾಲ್ಯಾಂಡ್‌ಅಖAಡಚಿತ್ರಣಕ್ಕೆ ಮನದಾಳದ ಮಾತು ಸೇರಿಸಿದ್ದಾರೆ. ಹಾಗೇ ಲೇಖಕ ಲಕ್ಷಿö್ಮÃಪತಿಕೋಲಾರಅವರ ಬೆನ್ನುಡಿಯ ಕೆಲವು ಸಾಲುಗಳಿವೆ. ಈ ಎಲ್ಲವುಗಳ ನಡುವೆತೊಂಬತ್ತೆöÊದು ಪುಟಗಳಲ್ಲಿ ಪ್ರವಾಸಿಕಥನ ಹರಡಿಕೊಂಡಿದೆ, ಹೆಣೆದುಕೊಂಡಿದೆ.


ನಾವೆಲ್ಲಾ ಹೈಸ್ಕೂಲಿನಲ್ಲಿಓದುವಾಗ, ಭೂಗೋಳಶಾಸ್ತçದಲ್ಲಿ ಭಾರತದಈಶಾನ್ಯಭಾಗದ ಪುಟ್ಟ ಪುಟ್ಟ, ಏಳು ರಾಜ್ಯಗಳನ್ನು ಸಪ್ತ ಸಹೋದರಿಯರುಎಂದುಕರೆಯುತ್ತಿದ್ದುದು ನೆನಪಾಗುತ್ತಿದೆ. ಬೆಟ್ಟಗುಡ್ಡ, ಕಾಡುಕಣಿವೆ, ನದಿತೊರೆ, ಗುಡ್ಡಗಾಡು ಬುಡಕಟ್ಟುಜನರನ್ನು ಒಳಗೊಂಡಿರುವ ಈ ಪ್ರದೇಶ ಪ್ರಾಚೀನ ಬುಡಕಟ್ಟು ಭಾರತದ ಪಳೆಯುಳಿಕೆಯಂತೆ ಕಾಣುತ್ತದೆ. ಇಂತಹ ವೈಶಿಷ್ಟö್ಯದ ಭಾರತದ ಬೆಳೆದ ಶಿಷ್ಟ ಸಂಸ್ಕೃತಿಯೊAದಿಗೆ ಅಷ್ಟಾಗಿ ಹೊಂದಿಕೊಳ್ಳಲಾಗದೆ, ಮುಖ್ಯಧಾರೆಗೆ ಸೇರದೆ, ತನ್ನ ಮೂಲ ಸಾಂಸ್ಕೃತಿಕಅನನ್ಯತೆಯನ್ನು ಉಳಿಸಿಕೊಂಡು ಬಂದಿದೆ. ತೀರಇತ್ತಿತ್ತಲಾಗಿಐರೋಪ್ಯ ಮಿಷನರಿಗಳ ಪ್ರಚಾರದಿಂದಾಗಿಇAಗ್ಲಿಷ್ ಭಾಷೆ ಮತ್ತುಕ್ರೆöÊಸ್ತಧರ್ಮದ ಪ್ರಭಾವಕ್ಕೆ ಒಳಗಾಗಿ ಆಧುನಿಕತೆಗೆತೆರೆದುಕೊಂಡಿದ್ದರೂತಮ್ಮ ಮೂಲ ಬುಡಕಟ್ಟು ಸಂಸ್ಕೃತಿಯನ್ನುಅನನ್ಯತೆಯನ್ನು ಬಿಟ್ಟುಕೊಟ್ಟಿಲ್ಲ.


ಇಂತಹ, ಸಪ್ತ ಸಹೋದರಿಯರ ನಾಡಿನಒಂದು ಭಾಗವಾದ ನಾಗಾಲ್ಯಾಂಡ್‌ನಲ್ಲಿ ಲೇಖಕ ಕೊಡ್ಲಿಯವರ ವ್ಯಾಪಕವಾಗಿ ಸುತ್ತಾಟ ಮಾಡುತ್ತಾರೆ. ಆದರೆಅವರ ಸುತ್ತಾಟದ ಮೂಲ ಉದ್ದೇಶ ಶಿಕ್ಷಣ. ಉನ್ನತ ಶಿಕ್ಷಣ ಪಡೆಯುವಲ್ಲಿಈಶಾನ್ಯ ಭಾರತಕ್ಕೂದಕ್ಷಿಣ ಭಾರತಕ್ಕೂ ಸಂಪರ್ಕದ ಸೇತುವೆಯಾಗಿ, ಶೈಕ್ಷಣಿಕರಾಯಭಾರಿಯಾಗಿಕಾರ್ಯನಿರ್ವಹಿಸುವುದುಅವರಉದ್ದೇಶ. ಇದರಲ್ಲಿ ಯಶಸ್ವಿಯಾಗುತ್ತಾರೆ. ಜೊತೆಜೊತೆಗೆಅವರಲ್ಲಿನ ಕವಿ ಮನಸ್ಸು, ಸಂಶೋಧನಾ ಆಸಕ್ತಿ ಜಾಗೃತವಾಗುತ್ತದೆ. ಅರಿವಿಲ್ಲದೆ ಕೆಲಸ ಮಾಡಲುಆರಂಭಿಸುತ್ತದೆ. ಪರಿಣಾಮವಾಗಿತಮ್ಮ ನಾಗಾಲ್ಯಾಂಡ್ ಪ್ರವಾಸದ ಬೈಪ್ರೊಡಕ್ಟ್ ಆಗಿ ಈ ಅಧ್ಯಯನ ಮತ್ತು ಸಂಶೋಧನೆ ಆಗಿ ಕೃತಿರೂಪ ತಾಳಿ ಓದುಗರ ಕೈ ಸೇರಿದೆ.


ಭಾರತದ ಮೂಲ, ಪುರಾತನ ಸಂಸ್ಕೃತಿಗಳಲ್ಲಿ ನಾಗಾ ಸಂಸ್ಕೃತಿಯೂಒAದು. ಇದೇಎಲ್ಲಾ ಸಂಸ್ಕೃತಿಗಳ ಮೂಲ ಬೇರು ಎಂಬ ಮಾತಿದೆ. ಆದರೆ ಈ ಪುರಾತನ ನಾಗಾ ಸಂಸ್ಕೃತಿಗೂಈಶಾನ್ಯ ಭಾರತದ ನಾಗಾಲ್ಯಾಂಡ್‌ನ ನಾಗಾ ಬುಡಕಟ್ಟು ಸಂಸ್ಕೃತಿಗೂಏನಾದರೂ ಸಂಬAಧವಿದೆಯೆ? ಅನುಮಾನವಾಗುತ್ತದೆ. ಹೆಸರಿನ ಸಾಮ್ಯತೆ ಬಿಟ್ಟರೆಇನ್ಯಾವುದೇ ಸಂಬAಧಇದ್ದಿರಲಾರದು.


ಪ್ರವಾಸದ ಭಾಗವಾಗಿ ಲೇಖಕರುರಾಜಧಾನಿ ಕೋಹಿಮ ಒಳಗೊಂಡAತೆ ಹಲವಾರು ನಗರ-ಪಟ್ಟಣ-ಹಳ್ಳಿಗಳನ್ನು ಸಂದರ್ಶಿಸಿದ್ದಾರೆ. ನೂರಾರುಜನ ವಕ್ತೃಗಳನ್ನು ಭೇಟಿ ಮಾಡಿದ್ದಾರೆ. ದುಭಾಷಿಗಳ ನೆರವನ್ನು ಪಡೆದಿದ್ದಾರೆ. ಒಬ್ಬ ಸಮಾಜಶಾಸ್ತçಜ್ಞನಂತೆ, ಮಾನವಶಾಸ್ತçಜ್ಞನಂತೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ಕ್ಷೇತ್ರಕಾರ್ಯ ಮತ್ತು ಮಾಹಿತಿ ಸಂಗ್ರಹ ಸಂಶೋಧನೆಯದಾರಿಯಲ್ಲಿ ಪ್ರಥಮ ಹೆಜ್ಜೆ. ಒಂದುರೀತಿಯಲ್ಲಿ ಪ್ರಾಥಮಿಕ ಸಂಶೋಧನೆಎAದುಕರೆಯಬಹುದು. ಕೊಡ್ಲಿಯವರಅಲ್ಲಿನ ಬುಡಕಟ್ಟುಜನರು, ಅವರ ಭಾಷೆ, ಅವರ ಸಾಹಿತ್ಯ, ವಾಸದ ನೆಲೆ, ಬದುಕಿನಕ್ರಮ, ವೃತ್ತಿ ಮೂಲ, ಆಹಾರದ ಮೂಲ, ವೈವಾಹಿಕ ಸಂಬAಧಗಳು ಹಬ್ಬಹರಿದಿನಗಳು-ಜಾತ್ರೆ ಉತ್ಸವಗಳು, ಸಂಪ್ರದಾಯಗಳು, ಆಚಾರ-ವಿಚಾರಗಳು, ವೇಷಭೂಷಣಗಳು, ಆಟ-ಪಾಠ-ಮನರಂಜನೆ ಹೀಗೆ ಎಲ್ಲಾರೀತಿಯ ಮಾಹಿತಿಯನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ಈ ಕೃತಿಯನ್ನು ರಚಿಸಿದ್ದಾರೆ.


ಭಾರತಅನ್ನುವುದೇಒಂದುಉಪಖAಡ. ಒಂದುಉಪಪ್ರಪAಚಎAದರೂತಪ್ಪಾಗಲಾರದು. ಇಲ್ಲಿಎಲ್ಲರೀತಿಯಜನರನ್ನು, ಜೀವನವನ್ನು, ವೈಶಿಷ್ಟö್ಯವನ್ನು ಕಾಣಬಹುದು. ಹಾಗೇ ಜನಾಂಗಗಳ ಮ್ಯೂಸಿಯಂ. ಬಹುಸಂಸ್ಕೃತಿಗಳ ಆಗರ. ಹೀಗಾಗಿ ಭಾರತೀಯರಾದ ನಮಗೆ ಭಾರತವನ್ನು ಸಮರ್ಥವಾಗಿ ಸಂಪೂರ್ಣವಾಗಿಅರಿಯುವುದುಅವಶ್ಯಕ. ಹೀಗೆ ಭಾರತವನ್ನುಅರಿಯುವ ಭಾಗವಾಗಿ ಈ ನಾಗಾಲ್ಯಾಂಡ್ ಪ್ರವಾಸಕಥನ ನಮಗೆ ನೆರವಾಗಿದೆ. ದೇಶನೋಡು, ಕೋಶ ಓದು, ಜ್ಞಾನ ಗಳಿಸು, ಮಾತಿಗೆ ಪೂರಕವಾಗಿ ಈ ಪ್ರವಾಸಕಥನ ಯಶಸ್ವಿಯಾಗಿದೆ ಎಂದೇ ಹೇಳಬಹುದು.


ಅಂಗಾಮಿ, ಚಾಂಗ, ಸಿಮಾ, ಲೋಥಾ, ಕೊನಾಯಕ್, ಸಂಗತಮ್, ಕುಕಿ, ಪೊಚುರಿ ಮೊದಲಾದ ಬುಡಕಟ್ಟುಗಳ ನಾಗಾಲ್ಯಾಂಡಿನಲ್ಲಿ ನೂರಾರು ವರ್ಷಗಳ ಹಿಂದೆತನ್ನರಕ್ಷಣೆ, ತನ್ನವರರಕ್ಷಣೆ ಅನಿವಾರ್ಯವಾಗಿತ್ತು. ಅದಕ್ಕಾಗಿ ಹೋರಾಟ ಮಾಡಲೇಬೇಕಿತ್ತು. ಯಾವುದೇದಯೆ-ದಾಕ್ಷಿಣ್ಯಇಲ್ಲದೆರುಂಡಚAಡಾಡಲೇಬೇಕು. ಇಂತಹ ಅನಿವಾರ್ಯದ ಸ್ಥಿತಿ ಅಂದುಇತ್ತು. ಹಾಗೆ ಕತ್ತರಿಸಿದ ಶತೃಗಳ ತಲೆಗಳನ್ನು ಹೊತ್ತುತರುತ್ತಿದ್ದರು, ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದರು ಮತ್ತು ಪರಂಪರೆಯತುಣುಕುಎAಬAತೆ ಸಂಗ್ರಹಿಸಿಡುತ್ತಿದ್ದರು. ಇಂತಹ ವೀರರಿಗೆರಾಜಮರ್ಯಾದೆ, ಬುಡಕಟ್ಟು ಮರ್ಯಾದೆ ವಿಶೇಷವಾಗಿ ಇರುತ್ತಿತ್ತು.


ಇಂತಹ ಬುಡಕಟ್ಟು ವೀರರನ್ನುತಲೆಬುರುಡೆ ಬೇಟೆಗಾರರುಎಂದುಕರೆದುಅದನ್ನೇತಮ್ಮ ಪ್ರವಾಸಿಕಥನದ ಶೀರ್ಷಿಕೆಯನ್ನಾಗಿಸಿದ್ದಾರೆ ಲೇಖಕರು. ಈ ಕೃತಿಯನ್ನುಅಧ್ಯಯನ ಮಾಡುತ್ತಾ ಹೋದಂತೆ ನಮ್ಮದೇದೇಶದ  ನಾಗಾಲ್ಯಾಂಡ್ ಎಂಬ ಸೋದರರಾಜ್ಯದಅಂತರAಗದದರ್ಶನವಾಗುತ್ತದೆ. ಅಲ್ಲಿನ ಬದುಕಿನಕ್ರಮ - ಸಂಸ್ಕೃತಿ ವೈಶಿಷ್ಟö್ಯ, ಅನನ್ಯತೆಅನಾವರಣವಾಗುತ್ತದೆ. ಇದರಿಂದಖAಡಿತವಾಗಿಓದುಗರಜ್ಞಾನದ ದಿಗಂತ ವಿಸ್ತಾರವಾಗುತ್ತದೆ. ಇಂತಹಕೃತಿಯೊAದನ್ನುಓದುಗರ ಓದಿಗೆ ಒದಗಿಸಿದ ಗಂಗಾಧರಕೊಡ್ಲಿಯವರಅಭಿನAದನಾರ್ಹರು. ಅವರ ಶ್ರಮಕ್ಕೆ ನನ್ನ ನಮಸ್ಕಾರಗಳು.
ತಾನು ಹುಟ್ಟಿದ ಹಾವೇರಿಜಿಲ್ಲೆಯನ್ನುಜನ್ಮಭೂಮಿಎಂದುಕರೆಯುವ, ನೆಲೆಸಿದ ತುಮಕೂರುಜಿಲ್ಲೆಯನ್ನುಕರ್ಮಭೂಮಿಎಂದು ಪರಿಭಾವಿಸುವ, ತನ್ನ ಕುಲವನ್ನು ಮಾನವ ಕುಲ ಎಂದೂ, ಧರ್ಮವನ್ನು ಭಾರತೀಯಧರ್ಮಎಂದೂ ಪರಿಭಾವಿಸುವ ಕೊಡ್ಲಿಯವರಓದಿದ್ದು ಬಿಇ ಸಿವಿಲ್. ಜೊತೆಗೆಇರಲಿ ಎಂದು ಎಂಬಿಎ. ಇಷ್ಟಪಟ್ಟು ಮಾಡಿದ್ದು ಎಂಎ ಕನ್ನಡ. ಜೊತೆಗೆಅಧ್ಯಯನಕ್ಕೆತಿಲಕವಿಟ್ಟಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ.


ಈ ಎಲ್ಲಾ ವಿಶೇಷಗಳ ಜೊತೆಗೆಕೊಡ್ಲಿಯವರು ವೃತ್ತಿಯಲ್ಲಿಇಂಜಿನಿಯರ್, ಪ್ರವೃತ್ತಿಯಲ್ಲಿ ಲೇಖಕ. ಹೊರೆಗಲ್ಲು, ಮುಂಜಾವಿನ ನಿರೀಕ್ಷೆಅವರ ಕವನ ಸಂಕಲನಗಳು. ಅವರ ಮುಂಜಾವಿನ ಮಾತುಗಳು ಚುಟುಕುಗಳ ಸಂಗ್ರಹ. ರೇವಣಸಿದ್ಧ ಪರಂಪರೆಕುರಿತ ತಳಸ್ಪರ್ಶಿ ಸಂಶೋಧನೆ ಮತ್ತುಅಧ್ಯಯನ. ತಲೆಬುರುಡೆ ಬೇಟೆಗಾರರುಅವರನಾಗಾಲ್ಯಾಂಡ್ ಪ್ರವಾಸಿ ಕಥನ. ಇವೆಲ್ಲಾಅವರ ಸಾಹಿತ್ಯಕ ಸಾಧನೆಗಳು. ಬರೆಯುವ ಶ್ರಮ-ಸಮಯ-ಹುಮ್ಮಸ್ಸುಎಲ್ಲವೂಅವರಲ್ಲಿಯಥೇಚ್ಚವಾಗಿವೆ. ಹೀಗಾಗಿ ಅವರು ಮೈಮರೆಯದೆ ಬರೆಯಲಿ ಎನ್ನುವುದು ನನ್ನ ಒಳ ಆಸೆ.