‘ತಿಪಟೂರನ್ನು ಜಿಲ್ಲಾ ಕೇಂದ್ರ ಮಾಡಿ’ ಬೈಕ್ ರ‍್ಯಾಲಿ ಬಳಿಕ ರಾಜ್ಯ ಸರ್ಕಾರಕ್ಕೆ ಮನವಿ
‘ತಿಪಟೂರನ್ನು ಜಿಲ್ಲಾ ಕೇಂದ್ರ ಮಾಡಿ’ ಬೈಕ್ ರ‍್ಯಾಲಿ ಬಳಿಕ ರಾಜ್ಯ ಸರ್ಕಾರಕ್ಕೆ ಮನವಿ
‘ತಿಪಟೂರನ್ನು ಜಿಲ್ಲಾ ಕೇಂದ್ರ ಮಾಡಿ’
ಬೈಕ್ ರ‍್ಯಾಲಿ ಬಳಿಕ ರಾಜ್ಯ ಸರ್ಕಾರಕ್ಕೆ ಮನವಿ
ತಿಪಟೂರು : ತಿಪಟೂರು ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ನೂರಾರು ಮಂದಿ ಬೆಂಬಲಿಗರೊAದಿಗೆ ಬೈಕ್ ರ‍್ಯಾಲಿಯ ಮೂಲಕ ಪ್ರತಿಭಟನೆಯನ್ನು ನಡೆಸಿದರು.
ನಗರದ ಕೆಂಪಮ್ಮದೇವಿ ದೇವಾಲಯದಿಂದ ಶನಿವಾರ ನೂರಾರು ಬೈಕ್ ಮೂಲಕ ಪ್ರತಿಭಟನೆಯನ್ನು ಮಾಡುತ್ತಾ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಆರ್.ಜೆ.ಚಂದ್ರಶೇಖರ್ ಮೂಲಕ ರಾಜ್ಯಸರ್ಕಾರಕ್ಕೆ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ ರಾಜ್ಯದಲ್ಲಿ ತುಮಕೂರು ಜಿಲ್ಲೆ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು ಕಳೆದ ಹಲವಾರು ವರ್ಷಗಳಿಂದಲೂ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಕೇಂದ್ರವೂ ತಿಪಟೂರು ಗಡಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಜನಸಾಮಾನ್ಯರು ಅತ್ಯಂತ ಅಗತ್ಯ ಸೇವೆಗಳಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಲು ಗಂಟೆಗಟ್ಟಲೇ ಸಮಯ ಹಿಡಿಯುತ್ತದೆ. ಅಲ್ಲದೇ ಸಾಮಾನ್ಯ ಜನರು ತೆರಳಿ ಕಾರ್ಯವನ್ನು ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಹಲವು ಬಾರಿ ಜನರು ಅಷ್ಟು ದೂರ ಪ್ರಯಾಣಿಸಲು ಸಆಧ್ಯವಾಗದೇ ಅನೇಕ ಅವಕಾಶಗಳನ್ನು ಕೈಚಲ್ಲುವ ಸನ್ನಿವೇಶವು ಬಂದೊದಗಿದೆ. 1970 ಕ್ಕಿಂತ ಹಿಂದಿನಿAದಲೂ ಕೊಬ್ಬರಿಯ ಕಣಜ ಎಂದೇ ಖ್ಯಾತಿ ಪಡೆದಿರುವ ತಿಪಟೂರು ತಾಲ್ಲೂಕನ್ನು ಜಿಲ್ಲೆ ಮಾಡಬೇಕು ಎಂಬ ಆಶಯ ಹಲವರಲ್ಲಿದ್ದು ಇಲ್ಲಿಯವರೆವಿಗೂ ಅದು ಕಾರ್ಯಗತಕ್ಕೆ ಬಂದಿಲ್ಲ. ತಿಪಟೂರು ಜಿಲ್ಲೆ ಆಗುವುದರಿಂದ ಸುಸಜ್ಜಿತವಾದ ಆಸ್ಪತ್ರೆ, ಮೆಡಿಕಲ್ ಕಾಲೇಜು, ಸರ್ಕಾರಿ ಇಂಜಿನಿಯರಿAಗ್ ಕಾಲೇಜು, ಅನೇಕ ಜಿಲ್ಲಾ ಮಟ್ಟದ ಕಚೇರಿಗಳು ಬರುವುದರಿದ ಉತ್ತಮ ಕಾರ್ಯನಿರ್ವಹಣೆ ಜೊತೆಗೆ ಅಭಿವೃದ್ಧಿ ಸಾಧ್ಯವಾಗುತ್ತದೆ.
ತುಮಕೂರು ಜಿಲ್ಲೆಯಲ್ಲಿಯೇ ಇಬ್ಬರು ಸಚಿವರುಗಳಿದ್ದು ಈ ಬಾರಿ ಪ್ರಯತ್ನ ಪಟ್ಟರೆ ಪ್ರತ್ಯೇಕ ತಿಪಟೂರು ಜಿಲ್ಲೆ ರಚನೆಗೆ ಅನುಕೂಲವಾಗುತ್ತದೆ. ಕಳೆದ ಬಾರಿ ಸಚಿವರು ತಮ್ಮ ಚುನಾವಣಾ ಪ್ರನಾಳಿಕೆಯಲ್ಲಿ ತಿಪಟೂರು ಜಿಲ್ಲೆ ಮಾಡುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆವಿಗೂ ಅದರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದಿರುವುದು ನಿಜಕ್ಕೂ ದುರಂತವಾಗಿದೆ. ಕೂಡಲೇ ಸಚಿವರು ತಿಪಟೂರು ಜಿಲ್ಲೆ ಘೋಷಣೆಗೆ ಮುಂದಾಗಬೇಕಿದೆ ಎಂದರು.
ಗೊರಗೊಂಡನಹಳ್ಳಿ ಸುದರ್ಶನ್, ಮೋಹನ್, ಮಂಜು, ಶಂಕರ್ ಕರಡಾಳು, ಹೇಮಂತ್ ಬಾಬು, ಇಮ್ರಾನ್, ಶಂಕರಪ್ಪ ಬಿಳಿಗೆರೆ, ವಸಂತ್ ಬಜಗೂರು, ವಿಶ್ವಣ್ಣ ಮಾದಿಹಳ್ಳಿ ಇದ್ದರು.