ಟೊಮ್ಯಾಟೊ ಎಲೆ ಸುರಂಗ ಹಾಗೂ ಕಾಯಿಕೊರೆಯುವ ಹುಳುವಿನ (PINWORM) ನಿಯಂತ್ರಣಾ ಕ್ರಮಗಳು  

tomato pinworm

ಟೊಮ್ಯಾಟೊ ಎಲೆ ಸುರಂಗ ಹಾಗೂ ಕಾಯಿಕೊರೆಯುವ ಹುಳುವಿನ (PINWORM) ನಿಯಂತ್ರಣಾ ಕ್ರಮಗಳು  

ಟೊಮ್ಯಾಟೊ ಎಲೆ ಸುರಂಗ ಹಾಗೂ ಕಾಯಿಕೊರೆಯುವ ಹುಳುವಿನ

(PINWORM) ನಿಯಂತ್ರಣಾ ಕ್ರಮಗಳು  


ಕೋಲಾರ : ಆರಂಭಿಕ ಹಂತದಲ್ಲಿ ಹಾವಳಿಗೆ ತುತ್ತಾಗಿರುವ ಎಲೆಗಳು ಮತ್ತು ಕಾಯಿಗಳನ್ನು ಕಿತ್ತು ನಾಶಪಡಿಸಬೇಕು. 
೬೦ ವ್ಯಾಟ್ ವಿದ್ಯುತ್ ಬಲ್ಬ್ ಬೆಳಕಿನ ಬಲೆಗಳನ್ನು ಪ್ರತಿ ಎಕರೆಗೆ ೪ ರಂತೆ ಬೆಳೆ ಬಿತ್ತುವ ಅಥವಾ ನಾಟಿ ಮಾಡುವುದಕ್ಕೂ ೭ ರಿಂದ ೧೦ ದಿನ ಮುಂಚಿತವಾಗಿ ಅಳವಡಿಸಿ ಬೆಳೆಯ ಕೊನೆವರೆಗೂ ಅಳವಡಿಸುವುದರಿಂದ ಕೀಟ ಬಾಧೆ ಹರಡದಂತೆ ತಡೆಯಬಹುದು. ಟ್ಯೂಟಾ ಲ್ಯೂರ್ ಫೆರೋಮೊನ್ ಬಲೆಗಳು (ಖಿuಣಚಿ ಐuಡಿe Pheಡಿomoಟಿe ಖಿಡಿಚಿಠಿs) / ಹಳದಿ ಅಂಟು ಹಾಳೆಗಳನ್ನು ಅಥವಾ ನೀರಿನ ಬಲೆಗಳು ಒಂದು ಎಕರೆಗೆ ೨೦ ಬಲೆಗಳನ್ನು ಬಳಸಬೇಕು. ಮೋಹಕ ಬಲೆಗಳು ಭೂಮಿಯಿಂದ ೨ ರಿಂದ ೩ ಅಡಿ ಎತ್ತರದಲ್ಲಿ ಕಟ್ಟಬೇಕು.
ಪ್ರತಿ ಎಕರೆಗೆ ೬ ರಿಂದ ೧೦ ಗಂಡು ಮೋಹಕ ಬಲೆಗಳನ್ನು ಅಳವಡಿಸುವುದು. ಟೊಮ್ಯಾಟೊ ಬೆಳೆಯನ್ನು ನಾಟಿ ಮಾಡಿದ ೨೦ ದಿನಗಳ ನಂತರ ಮೋಹಕ ಬಲೆಗಳನ್ನು ಕಡ್ಡಾಯವಾಗಿ ಬಳಸಬೇಕು. ನಾಟಿ ಮಾಡಲು ಸಿದ್ಧಪಡಿಸಿದ ತಾಕು/ಜಮೀನಿಗೆ ಬೇವಿನ ಹಿಂಡಿ/ ಹೊಂಗೆ ಹಿಂಡಿ ಹಾಕುವುದರಿಂದ ಪ್ರಾರಂಭಿಕ ಹಂತದ ಹಾವಳಿಯಿಂದ ತಡೆಯಬಹುದು (ಒಂದು ಎಕರೆಗೆ ೧೦೦ ಕೆ.ಜಿ ಬೇವಿನ ಹಿಂಡಿ). ವಾರಕ್ಕೊಮ್ಮೆ (೫ ವಾರಗಳು) ಪರಾವಲಂಬಿ ಜೀವಿ, ಟ್ರೆöÊಕೊಗ್ರಾಮಾ ಪ್ರಿಟಿಯೊಸಂನ ಮೊಟ್ಟೆಯ (ಪ್ರತಿ ಎಕರೆಗೆ ೪೦ ಸಾವಿರ ಮೊಟ್ಟೆ) ಚೀಟಿಗಳನ್ನು ಕಟ್ಟಬೇಕು ಹಾಗೂ ಪ್ರಕೃತಿ ದತ್ತವಾಗಿ ಬರುವ ಪರಭಕ್ಷಕ ಕೀಟ, ಜೇಡ ಇತರೆ ಜೀವಿಗಳನ್ನು ಉಳಿಸಿಕೊಳ್ಳುವುದರಿಂದ ಈ ಪತಂಗವನ್ನು ತಡೆಗಟ್ಟಬಹುದು.
ಈ ಕೀಟದ ಹಾವಳಿಯು ಹೆಚ್ಚಾಗಿ ಕಂಡು ಬಂದರೆ ಮೊದಲನೇ ಸಿಂಪರಣೆಯಾಗಿ ೨ ಮಿ.ಲೀ ಅಜಾಡಿರೆಕ್ಟಿನ್ ೧೦೦೦೦ ಠಿಠಿm ಅಥವಾ ೦.೨೦ ಮಿ.ಲೀ. ಸ್ಪೆöÊನೋಸ್ಯಾಡ್ ಅಥವಾ ೦.೨೦ ಮಿ.ಲೀ. ಫ್ಲುಬೆಂಡಿಯಮೈಡ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬಹುದು. ಕಾಯಿ ಕಚ್ಚಿದ ಸಮಯದಲ್ಲಿ ಹಾವಳಿ ಹೆಚ್ಚಾದರೆ ೦.೨೫ ಮಿ.ಲೀ. ಕೋರಾಜೆನ್ ಅಥವಾ ೦.೨೫ ಮಿ.ಲೀ. ಸೈಂಟ್ರಾನಿಲಿಪ್ರೋಲ್ ಅಥವಾ ೨ ಮಿ.ಲೀ. ಪ್ರೊಪೆನೋಫಾಸ್ ಅಥವಾ ೦.೬೦ ಮಿ.ಲೀ. ಲ್ಯಾಂಬ್ಡಾಸೆಹಲೊಥ್ರೀನ್ ಅಥವಾ ೧ ಮಿ.ಲೀ. ಡೆಕಾಮೆಥ್ರಿನ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಅವರು ತಿಳಿಸಿದ್ದಾರೆ.