ಕೋವಿಡ್ ನಿಯಮ ಪಾಲಿಸಿ ಕನ್ನಡ ರಾಜ್ಯೋತ್ಸವ  ಆಚರಣೆ: ಜಿಲ್ಲಾಧಿಕಾರಿ ಡಾ|| ಆರ್. ಸೆಲ್ವಮಣಿ

ಕೋವಿಡ್ ನಿಯಮ ಪಾಲಿಸಿ ಕನ್ನಡ ರಾಜ್ಯೋತ್ಸವ  ಆಚರಣೆ: ಜಿಲ್ಲಾಧಿಕಾರಿ ಡಾ|| ಆರ್. ಸೆಲ್ವಮಣಿ

ಕೋವಿಡ್ ನಿಯಮ ಪಾಲಿಸಿ ಕನ್ನಡ ರಾಜ್ಯೋತ್ಸವ 
ಆಚರಣೆ: ಜಿಲ್ಲಾಧಿಕಾರಿ ಡಾ|| ಆರ್. ಸೆಲ್ವಮಣಿ


ಕೋಲಾರ: ಕೋವಿಡ್ ಕೇಸ್‌ಗಳು ಕಡಿಮೆಯಾಗಿದೆ ಎಂದು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸದೆ ಇರಬಾರದು, ಕೋವಿಡ್ ನಿಯಮ ಪಾಲನೆಯನ್ನು ಮಾಡುವುದರ ಮೂಲಕ ಈ ವರ್ಷದ ಕನ್ನಡ ರಾಜ್ಯೋತ್ಸವನ್ನು ಆಚರಿಸಬೇಕು ಎಂದು ಕೋಲಾರದ ಜಿಲ್ಲಾಧಿಕಾರಿ ಡಾ|| ಆರ್. ಸೆಲ್ವಮಣಿ ಅವರು ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕರೋನಾ ಇರುವುದರಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್ ಗಳಲ್ಲಿ ವಿಧ್ಯಾರ್ಥಿಗಳಿಗೆ ವಿವಿಧ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ನವೆಂಬರ್ 1 ರಂದು ನಗರದ ಗಾಂಧಿವನದಲ್ಲಿ ವೇದಿಕೆ ಕಾರ್ಯಕ್ರಮದ ಮೂಲಕ ಸರಳವಾಗಿ ಆಚರಣೆ ಮಾಡಲಾಗುತ್ತದೆ ಈ ವರ್ಷದ ರಾಜ್ಯೋತ್ಸವದಲ್ಲಿ ಹೊಸ ರೀತಿಯ ಸ್ಪರ್ಧೆಗಳನ್ನು ಯೋಜಿಸುವುದು, ಬೇರೆಯವರು ಬರೆದ ಕವಿತೆಗಳನ್ನು ಬಿಟ್ಟು ಸ್ವಂತಿಕೆಯಿAದ ಕವಿತೆ, ಚಿತ್ರಕಲೆ, ಕನ್ನಡಪರ ನಾಟಕಗಳನ್ನು ಕೈಗೊಳ್ಳಬೇಕು. ಬಿ.ಸಿ.ಎಂ. ಹಾಗೂ ವಸತಿ ನಿಲಯಗಳಲ್ಲಿ ಒಳ್ಳೆಯ ಸ್ಪರ್ಧೆಗಳಾದ ಆಶುಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಮಾಡುವ ಮೂಲಕ ಮಕ್ಕಳಲ್ಲಿ ಸ್ಟೇಜ್ ಫಿಯರ್ ಹೋಗುವಂತೆ ಮಾಡಬೇಕು ಎಂದರು.
 ಗೋಡೆಗಳ ಮೇಲೆ ಕನ್ನಡಪರ ಚಿತ್ರಗಳನ್ನು ನಗರಸಭೆ ವತಿಯಿಂದ ಬಿಡಿಸಲಾಗುವುದು. ಈ ಬಾರಿ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನದ ಜೊತೆಗೆ ಪ್ರಶಸ್ತಿ ನೀಡಬೇಕು. ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು. ಅಕ್ಟೋಬರ್ 28 ರಂದು ಸಾಮೂಹಿಕ ತರಬೇತಿ ಗಾಯನವನ್ನು ಹಾಗೂ ನವೆಂಬರ್ ಕೊನೆಯ ವಾರ ಕನ್ನಡ ಸಪ್ತಾಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಕೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್‌ನ ಮುಖಂಡರು ಇದ್ದರು.