ವೃತ್ತಿ ಮತ್ತು ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

application call

ವೃತ್ತಿ ಮತ್ತು ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ


ಕೋಲಾರ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೋಲಾರ, ಉಪಕೇಂದ್ರದಲ್ಲಿ 2021-2022 ನೇ ಸಾಲಿನ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (ಅಒಏಏಙ) ಮತ್ತು ತಂತ್ರಜ್ಞಾನ ತರಬೇತಿ ಸಂಸ್ಥೆಗಳ ನೆರವು ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ (ಂIಖಿಖಿ SಅP-ಖಿSP) ಕೌಶಲ್ಯ ತರಬೇತಿಯನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 ಐ.ಟಿ.ಐ, ಡಿಪ್ಲೋಮಾ, ಬಿ.ಇ, ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯುಳ್ಳ ಯುವಕ ಮತ್ತು ಯುವತಿಯರಿಗೆ ಉದ್ಯೋಗ, ಕೌಶಲ್ಯ ಆಧಾರಿತ ಉಚಿತ ಹಾಗೂ ಶಿಷ್ಯವೇತನ ಸಹಿತವಾಗಿ ಟರ್ನರ್, ಮಿಲ್ಲರ್, ಗ್ರೆöÊಂಡಿAಗ್, ಟೂಲ್ ರೂಂ ಮೆಷಿನಿಸ್ಟ್, ಸಾಲಿಡ್ ವರ್ಕ್ಸ್ ಮತ್ತು ವಿವಿಧ ವೃತ್ತಿ ಕೌಶಲ್ಯ ತರಬೇತಿಗಳನ್ನು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ , ಕ್ಲಾಕ್ ಟವರ್ ಹತ್ತಿರ, ಕಠಾರಿಪಾಳ್ಯ, ಕೋಲಾರ ಇಲ್ಲಿ ನೀಡಲಾಗುವುದು.
 ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9880217473, 8550005152, 990455796 ಸಂಪರ್ಕಿಸಬಹುದು ಅಥವಾ ಕಛೇರಿಗೆ ಭೇಟಿ ನೀಡಬಹುದು ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೋಲಾರದ ಪ್ರಾಂಶುಪಾಲರು ತಿಳಿಸಿದ್ದಾರೆ.