ಮಕ್ಕಳಿಗೆ ಸಸಿಗಳನ್ನು ವಿತರಿಸಿ ಶುಭ ಕೋರಿದ ಗಿರಿಜಾ ಧನಿಯಾ ಕುಮಾರ್
-bevarahani-girijadhaniakumar-plants-distribution, ಮಕ್ಕಳಿಗೆ ಸಸಿಗಳನ್ನು ವಿತರಿಸಿ ಶುಭ ಕೋರಿದ ಗಿರಿಜಾ ಧನಿಯಾ ಕುಮಾರ್
ತುಮಕೂರು ನಗರದ 15ನೇ ವಾರ್ಡಿನಲ್ಲಿರುವ ಸರಕಾರಿ ಪದವಿಪೂರ್ವಕಾಲೇಜು ಪ್ರೌಢಶಾಲಾ ವಿಭಾಗದ ಮಕ್ಕಳನ್ನು2022-23ನೇ ಸಾಲಿನ ಕಲಿತಾ ವರ್ಷದಆರಂಭದ ದಿನವಾದ ಇಂದು ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾಧನಿಯಕುಮಾರ್ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರಾದ ನೂರ್ ಫಾತೀಮ ಗಿಡಗಳು ಹಾಗೂ ಪುಸ್ತಕ ನೀಡಿ ಸ್ವಾಗತಿಸಿದರು.ಪರಿಸರ ಸಂರಕ್ಷಣೆಗೆ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಿದ್ದಲ್ಲದೆ, ಮುಂದಿನ ಕಲಿಕೆ ಸುಗಮವಾಗಲೆಂದು ಶುಭ ಹಾರೈಸಿದರು.ಎಸ್.ಡಿ.ಎಂ.ಸಿಅಧ್ಯಕ್ಷರಾದ ಉಮೇಶ್, ಸದಸ್ಯರಾದ ಡಾ.ಮೆಹೂದ್ ಬೇಗಂ, ರಿಹಾನ್ ಭಾನು, ಈ ವೇಳೆ ಶಿಕ್ಷಕರಾದ ಬಸವರಾಜಯ್ಯ ಅವರುಗಳು, ಉಚಿತ ಪಠ್ಯಪುಸ್ತಕ ಹಾಗೂ ಸಿಹಿ ವಿತರಿಸಿ ಶುಭಕೋರಿದರು.