ಮೇ.8ರಂದು ನವೀಕೃತಚನ್ನಂಜಪ್ಪಹಾಸ್ಟೆಲ್ಉದ್ಘಾಟನೆ

ಮೇ.8ರಂದು ನವೀಕೃತಚನ್ನಂಜಪ್ಪಹಾಸ್ಟೆಲ್ಉದ್ಘಾಟನೆ

ಮೇ.8ರಂದು ನವೀಕೃತಚನ್ನಂಜಪ್ಪಹಾಸ್ಟೆಲ್ಉದ್ಘಾಟನೆ

ಮೇ.8ರಂದು ನವೀಕೃತಚನ್ನಂಜಪ್ಪಹಾಸ್ಟೆಲ್ಉದ್ಘಾಟನೆ

ತುಮಕೂರು: ನವೀಕೃತಧರ್ಮಪ್ರವರ್ತಗುಬ್ಬಿ ನಿಡಸಾಲೆಚನ್ನಂಜಪ್ಪ ಹಾಸ್ಟಲ್‌ನಉದ್ಘಾಟನಾ ಸಮಾರಂಭ ಮೇ08ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆಎಂದುಉಚಿತ ವಿದ್ಯಾರ್ಥಿ ನಿಲಯಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಎಂ. ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದಅವರು,ರೈಲ್ವೆ ಮೇಲ್ಸೇತುವೆಗೆ ಭೂ ಸ್ವಾಧೀನ ಪರಿಹಾರದ ಹಣ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ ಮತ್ತು ದಾನಿಗಳ ನೆರವಿನಿಂದ 32 ಕೊಠಡಿಗಳ ಹಾಸ್ಟಲ್ ನವೀಕರಣಗೊಂಡಿದ್ದು,ಇದರಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ  ಎಂದರು.


ಸಿದ್ದಲಿAಗೇಶ್ವರನ ಪರಮಭಕ್ತರಾದಚನ್ನಂಜಪ್ಪಅವರುದೂರದ ಊರುಗಳಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 1945ರಲ್ಲಿ ಉಪ್ಪಾರಹಳ್ಳಿಯ ಸಮೀಪ 2.10 ಎಕರೆ ಪ್ರದೇಶದಲ್ಲಿಕಲ್ಲಿನಕಟ್ಟಡವೊಂದನ್ನುಕಟ್ಟಿ, ಅಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತವಾಗಿ ಊಟ, ವಸತಿಯೊಂದಿಗೆ ಶಿಕ್ಷಣ ಕಲಿಯಲು ಅನುವು ಮಾಡಿಕೊಟ್ಟಿದ್ದರು. ಇದನ್ನು ತಿಳಿದ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರುಚನ್ನಂಜಪ್ಪಅವರಿಗೆಧರ್ಮಪ್ರವರ್ತ ಎಂಬ ಬೀರಿದು ನೀಡಿದಲ್ಲದೆ, 30 ಸಾವಿರ ರೂಗಳನ್ನು ನೀಡಿ ವಿದ್ಯಾರ್ಥಿ ನಿಲಯಕ್ಕೆ ಬಳಸಿಕೊಳ್ಳಲು ನೀಡಿದ್ದರು. 1945 ರಿಂದ 2010ರವರೆಗೆ ಈ ಹಾಸ್ಟಲ್ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತುಆಶ್ರಯವನ್ನು ಒದಗಿಸಿತ್ತು ಎಂದರು.


2011ರಲ್ಲಿ ಉಪ್ಪಾರಹಳ್ಳಿ ರೈಲ್ವೆ ಮೇಲೇತ್ಸುವಆರಂಭಗೊAಡಾಗ ಹಾಸ್ಟಲ್‌ನ ಕೆಲ ಭಾಗ ಭೂ ಸ್ವಾಧೀನಗೊಂಡಿತ್ತು.ಉಳಿದ ಭಾಗ ಪಾಳು ಬಿದ್ದಿತ್ತು.2020ರಲ್ಲಿ ಚನ್ನಂಜಪ್ಪ ಮತ್ತು ಹಾಸ್ಟಲ್‌ನ ಹಳೆಯ ವಿದ್ಯಾರ್ಥಿಗಳ ಜೊತೆ ಮಾತನಾಡಿ, ನವೀಕರಣಗೊಳಿಸುವ ಕಾರ್ಯಆರಂಭಿಸಲಾಯಿತು. ಭೂ ಸ್ವಾಧೀನ ಪರಿಹಾರ 79 ಲಕ್ಷ ಹಾಗೂ ದಾನಿಗಳು ನೀಡಿದ ಸಹಕಾರದಿಂದ 1.25 ಕೋಟಿ ರೂಗಳಲ್ಲಿ ಸುಸಜ್ಜಿತಕಟ್ಟಡ ನಿರ್ಮಾಣಗೊಂಡಿದೆ.150-200 ಜನ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಒದಗಿಸಲುಅವಕಾಶವಿದೆ.ಇದಕ್ಕಾಗಿ ಸಹಕರಿಸಿದ ಎಲ್ಲರಿಗೂಅಭಿನಂದನೆ ಸಲ್ಲಿಸುವುದಾಗಿಧರ್ಮಪಾಲ್ ತಿಳಿಸಿದರು.


ಮೇ.08ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯುವ ನವೀಕರಣಗೊಂಡ ವಿದ್ಯಾರ್ಥಿ ನಿಲಯದಕಟ್ಟಡದಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯವನ್ನು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಮಹಾಸ್ವಾಮೀಜಿ,ಶಿವಗAಗೆ ಮೇಲನಗವಿ ಮಠದ ಶ್ರೀಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿ,ಯಡಿಯೂರಿನ ಬಾಳೆಹೊನ್ನೂರು ಶಾಖಾ ಮಠದ ಶ್ರೀರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು ವಹಿಸಲಿದ್ದು,ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ಶ್ರೀವೀರೇಂದ್ರ ಹಗ್ಗಡೆಅವರ ಆಶೀರ್ವಚನದೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಕಾರ್ಯಕ್ರಮಉದ್ಘಾಟಿಸುವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ,ಲೋಕಸಭಾ ಸದಸ್ಯಜಿ.ಎಸ್.ಬಸವರಾಜು, ಕರ್ನಾಟಕರಾಜ್ಯ ಸರಕಾರಿ ನೌಕರರ ಸಂಘದರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಉಪಸ್ಥಿತರಿರುವರು. 


ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಜಿ.ಜೋತಿಗಣೇಶ್,ಡಿ.ಸಿ.ಗೌರಿಶಂಕರ್,ಕರ್ನಾಟಕ ವೀರಶೈವ ವಿದ್ಯಾಭಿವೃದ್ದಿ ಸಮಿತಿಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಮಾಜಿ ಸಚಿವ ಎಸ್.ಶಿವಣ್ಣ, ನಿವೃತ್ತ ಪೊಲೀಸ್‌ಅಧಿಕಾರಿ ರೇವಣ್ಣಸಿದ್ದಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರಾಹುಲ್‌ಕುಮಾರ್ ಸಹಾಪುರ ವಾಡ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರುಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ವೀರಶೈವ ಸಮುದಾಯದಕ್ಕೆ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಧರ್ಮಪ್ರವರ್ತಚನ್ನಂಜಪ್ಪಅವರಕುಟುAಬದವರು ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಧರ್ಮಪ್ರವರ್ತಗುಬ್ಬಿ ನಿಡಸಾಲೆಚನ್ನಂಜಪ್ಪ ವೀರಶೈವಉಚಿತ ವಿದ್ಯಾರ್ಥಿ ನಿಲಯಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಧರ್ಮಪಾಲ್ ಮನವಿ ಮಾಡಿದರು.


ಟ್ರಸ್ಟ್ನಉಪಾಧ್ಯಕ್ಷ ಹಾಗೂ ಚನ್ನಂಜಪ್ಪ ಮೊಮ್ಮಗ ಜಿ.ಟಿ.ಅರುಣ್‌ಕುಮಾರ್,ನಿರ್ದೇಶಕರಾದ ಸಿ.ಎಸ್.ಕುಮಾರಸ್ವಾಮಿ, ಗುರುಮಲ್ಲಿಕಾರ್ಜುನ್, ದಿನೇಶ್, ಶ್ರೀಮತಿ ಸುಮಪ್ರಸನ್ನಇದ್ದರು.