ಸಿದ್ಧಗಂಗಾ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗಾಗಿ ಅಡ್ವಾನ್ಸ್ಡ್ ಎಕೊ ಮಿಶಿನ್ : ಶ್ರೀ ಸಿದ್ದಲಿಂಗಶ್ರೀ

  ಸಿದ್ಧಗಂಗಾ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗಾಗಿ ಅಡ್ವಾನ್ಸ್ಡ್ ಎಕೊ ಮಿಶಿನ್ : ಶ್ರೀ ಸಿದ್ದಲಿಂಗಶ್ರೀ

   ಸಿದ್ಧಗಂಗಾ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗಾಗಿ  ಅಡ್ವಾನ್ಸ್ಡ್ ಎಕೊ ಮಿಶಿನ್ : ಶ್ರೀ ಸಿದ್ದಲಿಂಗಶ್ರೀ

 

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗಾಗಿ

ಅಡ್ವಾನ್ಸ್ಡ್ ಎಕೊ ಮಿಶಿನ್ : ಶ್ರೀ ಸಿದ್ದಲಿಂಗಶ್ರೀ

ತುಮಕೂರು:  ಹೆಚ್ಚುತ್ತಿರುವ ಹೃದ್ರೋಗಿಗಳ ಸಂಖ್ಯೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧಗಂಗಾ ಆಸ್ಪತ್ರೆ ಅತಿಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ನೂತನ ಅಡ್ವಾನ್ಸ್ಡ್ ಎಕೋ ಮಿಷಿನ್ ಸ್ಥಾಪಿಸಿದ್ದು ಇದರಿಂದ  ಎಲ್ಲಾ ವಯೋಮಾನದವರಿಗೂ ಹೃದಯ ಪರೀಕ್ಷೆಗೆ ಅನುಕೂಲಕರವಾಗಲಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಶ್ರೀಗಳು ತಿಳಿಸಿದರು.

ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ನೂತನ ಅಡ್ವಾನ್ಸ್ಡ್‌ ಎಕೋ ಮಿಷಿನ್‌ ಗೆ ಚಾಲನೆ ನೀಡಿ ಮಾತನಾಡಿದರು.

ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌ ಮಾತನಾಡಿ ಉತ್ತರ ಕರ್ನಾಟಕಕ್ಕೆ ಹೆಬ್ಬಾಗಿಲಾಗಿರುವ ನಮ್ಮ ತುಮಕೂರಿನಲ್ಲಿ ತುರ್ತು ಅಪಘಾತ ಹಾಗೂ ಹೃದಯಾಘಾತದಿಂದ ಜೀವಹಾನಿ ತಪ್ಪಿಸಲು ಸಿದ್ಧಗಂಗಾ ಆಸ್ಪತ್ರೆ ಕಾರ್ಯನಿರ್ಹಿಸುತ್ತಿದೆ ಈಗ ಪರಿಚಯಿಸಿರುವ ನೂತನ ಎಕೋ ಮಿಷಿನ್‌  ಹೃದ್ರೋಗದ ಯಾವುದೇ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಸಹಕಾರ ನೀಡಲಿದೆ  ಎಂದರು.

ಹಿರಿಯ ಹೃದ್ರೋಗ ತಜ್ಞ ಡಾ.ಹೆಚ್.ಎಂ.ಭಾನುಪ್ರಕಾಶ್‌ ಮಾತನಾಡಿ ನೂತನ ಅಡ್ವಾನ್ಸ್‌ ಎಕೋ ಮಿಷಿನ್‌ನಲ್ಲಿ ಹುಟ್ಟಿದ ಮಗುವಿನಿಂದ ಎಲ್ಲಾ ವಯೋಮಾನದವರ ಹೃದಯ ಪರೀಕ್ಷೆ ಸಾಧ್ಯವಾಗುತ್ತಿದೆ. ಎಂಡೋಸ್ಕೋಪಿ  ಎಕೋ ಮುಖಾಂತರ ಹೃದಯದ ಸಣ್ಣಪುಟ್ಟ ಸಮಸ್ಯೆಗಳು ಅಂದರೆ ಹೃದಯ ಹೆಪ್ಪುಗಟ್ಟುವುದು,ಕೀವು‌,ಹೃದಯದ ರಂದ್ರ ಸೇರಿದಂತೆ ಹೃದಯದ ಅತಿ ಅಪರೂಪದ ಖಾಯಿಲೆಗಳನ್ನೂ ಕೂಡ ಪರೀಕ್ಷಿಸಿ ಚಿಕಿತ್ಸೆ ನೀಡಬಹುದಾಗಿದ್ದು  ತುಮಕೂರಿನಲ್ಲಿ ಇಂತಹ ಸೌಲಭ್ಯ ಹೊಂದಿರುವ ಏಕೈಕ ಆಸ್ಪತ್ರೆ ನಮ್ಮದಾಗಿದೆ  ಎಂದರು.

ಹೃದ್ರೋಗ ತಜ್ಞರಾದ ಡಾ.ಶರತ್‌ ಕುಮಾರ್‌, ಜೆ.ವಿ, ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ.ನಿರಂಜನಮೂರ್ತಿ, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಟೆಕ್ನಿಷಿಯನ್‌ ಪೂನಂ, ಮೊಹಮದ್‌ ನಯೀಂವುದ್ದೀನ್ ಇದ್ದರು.