ಸರ್ಕಾರದಿಂದ ಸೂಕ್ತವಾದ ನಿರ್ಧಾರ ಬರದಿದ್ದರೆ ವಿಧಾನಸೌದ ಮುತ್ತಿಗೆ: ಅತಿಥಿ ಉಪನ್ಯಾಸಕರ ಎಚ್ಚರಿಕೆ
ಸರ್ಕಾರದಿಂದ ಸೂಕ್ತವಾದ ನಿರ್ಧಾರ ಬರದಿದ್ದರೆ
ವಿಧಾನಸೌದ ಮುತ್ತಿಗೆ: ಅತಿಥಿ ಉಪನ್ಯಾಸಕರ ಎಚ್ಚರಿಕೆ
ಕೋಲಾರ : ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು 28 ನೇ ದಿನಗಳ ಕಾಲ ನಿರಂತರವಾಗಿ ಧರಣಿ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಇನ್ನೂ ಸರಿಯಾದಂತ ರೀತಿಯಲ್ಲಿ ಅತಿಥಿ ಉಪನ್ಯಾಸಕರ ಪರ ನಿರ್ಧಾರ ಕೈಗೊಳ್ಳದಿರುವುದು ದುರಂತದ ಸಂಗತಿ. ಹಾಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಉಗ್ರ ಹೋರಾಟದ ಮೂಲಕ ಕಾಲ್ನಡಿಗೆಯ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಸುಪ್ರೀಂ ವಿಕಲ ಚೇತನ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸುಪ್ರೀಂ ವಿಕಲ ಚೇತನ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ಸುಪ್ರೀಂ ಅಭಿಪ್ರಾಯ ಪಟ್ಟರು
ಅತಿ ಶೀಘ್ರದಲ್ಲೇ ಅತಿಥಿ ಉಪನ್ಯಾಸಕರ ಖಾಯಂ ಮಾಡದೆ ಹೋದಲ್ಲಿ ಕರ್ನಾಟಕ ರಾಜ್ಯಾದ್ಯಂತ ವಿಕಲ ಚೇತನ ಸಂಘದ ವತಿಯಿಂದ ಉಗ್ರವಾದ ಹೋರಾಟವನ್ನು ರೂಪಿಸಲಾಗುತ್ತದೆ. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ತುರ್ತಾಗಿ ಆಡಳಿತಾತ್ಮಕವಾಗಿ ನ್ಯಾಯ ಆದೇಶವನ್ನು ನೀಡಿ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸಿಕೊಳ್ಳಿ ಎಂದು ಹೇಳುತ್ತಾ ದಿನ ನಿತ್ಯದ ಸಾಮಾನ್ಯ ಜನರ ಬದುಕನ್ನು ಜರುಗಿಸುವುದು ಕೂಡ ದುಸ್ಸಾಹಾಸದ ಈ ಕಾಲದಲ್ಲಿ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲಾಗದ ಆರ್ಥಿಕ ದುಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಸದೃಢ ಆರ್ಥಿಕ ಬಲವನ್ನು ತುಂಬಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಸುಪ್ರೀಂ ತಿಳಿಸಿದರು.
ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಮಾತಾನಾಡಿ ಇಪ್ಪತ್ತೆಂಟು ದಿನಗಳ ಕಾಲ ನಿರಂತರ ಶಾಂತಿಯುತವಾದ ಪ್ರತಿಭಟನೆ ಹೋರಾಟವನ್ನು ಮುಂದುವರೆಸುತ್ತಾ ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಕೋಲಾರ ಜಿಲ್ಲಾ ಅತಿಥಿ ಉಪನ್ಯಾಸಕರ ಐಕ್ಯತೆಯನ್ನು ಪ್ರದರ್ಶಿಸುತ್ತಾ ಸಯಂದಿAದ ಹೋರಾಟ ಸಾಗುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಅತಿ ಶೀಘ್ರದಲ್ಲಿ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಖಾಯಂ ಮಾಡುವ ಮೂಲಕ ಗೌರವಯುತವಾಗಿ ನಡೆದುಕೊಳ್ಳುವ ಮಾನವೀಯತೆ ಪ್ರದರ್ಶಿಸುವ ನಂಬಿಕೆ ಇದೆ.
ಜಿಲ್ಲಾಧ್ಯಕ್ಷ ನೂರ್ ಅಹಮದ್, ಮಹಿಳಾ ಉಪಾಧ್ಯಕ್ಷೆ ಡಾ ಲಕ್ಷ್ಮೀದೇವಿ, ಕಾವೇರಪ್ಪ , ಡಾ. ಶರಣಪ್ಪ ಗಬ್ಬೂರು, ಪ್ರಧಾನ ಕಾರ್ಯದರ್ಶಿ ಶಿವ, ಚೇತನ, ಸುಮಿತ್ರಾ, ಪುಷ್ಪಾ, ಲಕ್ಷ್ಮೀದೇವಿ, ಕುಸುಮ, ರಾಜೇಶ್ವರಿ, ಕಾವ್ಯ, ಮಾಲತಿ, ಲಾವಣ್ಯ, ಮಮತಾ, ಸರಿತಾ, ಕುಸುಮ, ಜಲಜ, ಶಿಲ್ಪ, ಕವಿತಾ, ಗೌರಿ, ಡಾ. ರವೀಂದ್ರ, ಸಂದೀಪ್, ಪ್ರದೀಪ್, ಪ್ರಕಾಶ್, ಕಿಶೋರ್, ಬಾಲಾಜಿ, ರಮಾನಂದ, ಹರೀಶ್, ನಾಗರಾಜ್, ಚಾಣಕ್ಯ, ಅಶೋಕ್, ಶಂಕರ್, ನಾಗೇಶ್, ವೆಂಕಟೇಶ್ ಬಾಬು, ಸತೀಶ್, ಯಲ್ಲಪ್ಪ, ಮಂಜುಳ, ಕಾರ್ಯದರ್ಶಿ ಹಾಗೂ ಪತ್ರಿಕಾ ಸಲಹೆಗಾರ ಡಾ. ವಿ.ಬಿ ಶಿವಣ್ಣ, ಗೌರಿಪೇಟೆಯ ಸಾಮಾಜಿಕ ಕಾರ್ಯಕರ್ತ ಕೆ.ಎನ್ ರವೀಂದ್ರನಾಥ್ ಇದ್ದರು.