ಅವ್ಯವಹಾರ: ಪಿಡಿಓ ಬಂಧನಕ್ಕೆ ಲೋಕಾಯುಕ್ತ ಸೂಚನೆ

ಅವ್ಯವಹಾರ: ಪಿಡಿಓ ಬಂಧನಕ್ಕೆ ಲೋಕಾಯುಕ್ತ ಸೂಚನೆ

ಅವ್ಯವಹಾರ: ಪಿಡಿಓ ಬಂಧನಕ್ಕೆ ಲೋಕಾಯುಕ್ತ ಸೂಚನೆ

ಅವ್ಯವಹಾರ: ಪಿಡಿಓ ಬಂಧನಕ್ಕೆ ಲೋಕಾಯುಕ್ತ ಸೂಚನೆ


ಕುಣಿಗಲ್: ಭಕ್ತರಹಳ್ಳಿ, ತರೇದಕುಪ್ಪೆ ಗ್ರಾಮಪಂಚಾಯಿತಿಯ ಪಿಡಿಒ ಸುದರ್ಶನ್ ವಿರುದ್ಧ ನರೇಗಾ ಯೋಜನೆ ಕಾಮಗಾರಿ ಅವ್ಯವಹಾರಕ್ಕೆ ಸಂಬAಧಿಸಿದAತೆ ಪ್ರಕರಣ ದಾಖಲಾಗಿದ್ದರೂ ಏಕೆ ಬಂಧಿಸಿಲ್ಲ ಎಂದು ಪೊಲೀಸರನ್ನ ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಒಬ್ಬ ಪೊಲೀಸರನ್ನ ಕಾವಲು ಬಿಡಿ ಸಭೆ ಮುಗಿದ ಬಳಿಕ ಈತನನ್ನ ವಶಕ್ಕೆ ಪಡೆಯಿರಿ ಎಂದು ಪಿಎಸ್‌ಐ ಜವಾಲ್ ಅಹಮದ್‌ರವರಿಗೆ ಸಭೆಯ ಆರಂಭದಲ್ಲೇ ಸೂಚನೆ ನೀಡಿದರು.


ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಕುಂದುಕೊರತೆ ಸಭೆಯ ನಡೆಸಲಾಯಿತು.  ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬಂಧನಕ್ಕೊಳಗಾಗಬೇಕಾಗುತ್ತದೆ ಎಂಬ ಭಯದಿಂದ ಸಭೆಯಿಂದ ಪಿಡಿಒ ಸುದರ್ಶನ್ ತಪ್ಪಿಸಿಕೊಂಡ ಪ್ರಸಂಗ ನಡೆಯಿತು. ಇದನ್ನ ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಪಿಎಸ್‌ಐ ಜವಾಲ್ ಅಹಮದ್ ರವರಿಗೆ ತರಾಟೆಗೆ ತೆಗೆದುಕೊಂಡು ಏಕೆ ಆತನನ್ನ ವಶಕ್ಕೆ ಪಡೆಯಲಿಲ್ಲವೆಂದು ಗರಂ ಆದಾಗ ಕಾಯೋನ್ಮುಖರಾದ  ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಆತ ಸಿಗದೆ ಪರಾರಿಯಾಗಿದ್ದು ಚರ್ಚೆಗೆ ಗ್ರಾಸವಾಯಿತು.


ನಂತರ ಸಭೆ ಮುಂದುವರೆದು ಲೋಕಾಯುಕ್ತ ಎಸ್.ಪಿ ವಾಲಿಪಾಷ ಮಾತನಾಡಿ ಸಾರ್ವಜನಿಕರು ಕಛೇರಿ ಕೆಲಸಕ್ಕೆ ಬರುವಾಗ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ತೋರಿ ಪುಣ್ಯ ಕಟ್ಟಿಕೊಳ್ಳಿ, ಶಾಲಾ ಆಸ್ತಿಗಳನ್ನ ಶಾಲೆಯ ಹೆಸರಿಗೆ ಖಾತೆ ಮಾಡಿಸಿ ಆಸ್ತಿಯನ್ನ ಕಾಪಾಡಿಕೊಳ್ಳಿ ವಿಳಂಬ ಮಾಡಬೇಡಿ ಎಂದು ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. 


ಸಕಾಲ ಮಾಡಿರುವ ಉದ್ದೇಶವೇ ಜನರಿಗೆ ಅನುಕೂಲವಾಗಲಿ ಎಂದು ಏಕೆ ಸಕಾಲದಲ್ಲಿ ಅರ್ಜಿ ಪಡೆಯುತ್ತಿಲ್ಲ ಸಬೂಬು ಹೇಳದೆ ನಾಳೆಯಿಂದಲೇ ಸಕಾಲದಲ್ಲಿ ಅರ್ಜಿ ಪಡೆಯಿರಿ ಮತ್ತು ಕಛೇರಿಯಲ್ಲಿ ವಿಸಿಟರ್ ಪುಸ್ತಕ ಕಡ್ಡಾಯವಾಗಿರಲಿ ಎಂದರು. 


ಕೆಂಪನಹಳ್ಳಿ ರೇಷ್ಮೆ ಮಾರುಕಟ್ಟೆ ತೆರೆಯುವುದಿಲ್ಲವೆಂದು ಸಾಕಷ್ಟು ದೂರುಳು ಕೇಳಿಬರುತ್ತಿವೆ ನಿಮ್ಮಿಂದ ತೆರೆಯಲು ಸಾಧ್ಯವಾಗದಿದ್ದರೆ ಶಾಶ್ವತವಾಗಿ ಬಾಗಿಲು ಮುಚ್ಚಿ,  ಜನರಿಗೇಕೆ ತೊಂದರೆ ಕೊಡುತ್ತೀರ, ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ರೇಷ್ಮೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.


 ಡಿವೈಎಸ್‌ಪಿ ರವೀಶ್ ಮಾತನಾಡಿ ಪಿಡಿಒ ಸುದರ್ಶನ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ, ಕೆಲಸಕ್ಕೂ ಬರುತ್ತಿಲ್ಲ, ಗೈರು ಹಾಜರಾಗಿದ್ದಾರೆ ಆದರೂ ಗ್ರಾಮ ಪಂಚಾಯಿತಿಯಲ್ಲಿ  ಲಕ್ಷಾಂತರ ರೂಗಳು ಬಿಲ್‌ಗಳು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ, ಅವರಿಗೆ ರಾಜಕಾರಣಿಗಳ ಬಲವಿರಬೇಕು, ಇಲ್ಲಾ ಅಧಿಕಾರಿಗಳ ಸಹಕಾರವಿರಬೇಕು ಈತನದ್ದು ಕ್ರಿಮಿನಲ್ ಕೆಲಸವಾಗಿದೆ ಎಂದು ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಇ.ಒ.ಜೋಸೇಫ್‌ರವರಿಗೆ ಸೂಚಿಸಿದರು. 
ಸಭೆಯಲ್ಲಿ ಪಿಡಿಒ ಸುದರ್ಶನ್ ವಿರುದ್ಧ ಸಾರ್ವಜನಿಕರಿಂದ ಹಾಗೂ ಗ್ರಾಪಂ. ಪಿಡಿಒ ರವರುಗಳಿಂದ ಸಾಕಷ್ಟು ದೂರುಗಳು ಕೇಳಿಬಂದವು. ಸಾರ್ವಜನಿಕರಿಂದ ವಿವಿಧ ಇಲಾಖಾವಾರು 25ಕ್ಕೂ ಹೆಚ್ಚು ದೂರುಗಳು ದಾಖಲಾದವು. ನಂತರ ಇಲಾಖಾ ಕಾರ್ಯಕ್ರಮಗಳ ಪರಿಚಯ ಮಾಡಿಕೊಡಲಾಯಿತು. ತಹಸೀಲ್ದಾರ್ ಮಹಬಲೇಶ್ವರ್, ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.