ಗಾಯ ಗೊಂಡಿದ್ದ ಹೆಬ್ಬಾವು ರಕ್ಷಣೆ
ದೇವರಾಯನದುರ್ಗದಲ್ಲಿ ಗಾಯಗೊಂಡಿದ್ದ ಹೆಬ್ಬಾವು ರಕ್ಷಣೆ
ತುಮಕೂರು: ದೇವರಾಯನದುರ್ಗ ಗ್ರಾಮದ ರೈತ ನರಸಿಂಹಯ್ಯ ಅವರ ತೋಟದಲ್ಲಿ ಗಾಯಗೊಂಡಿದ್ದ ಹೆಬ್ಬಾವನ್ನು ವಾರ್ಕೊ ಸಂಸ್ಥೆಯವರು ರಕ್ಷಿಸಿದ್ದರು.
ಹೆಬ್ಬಾವನ್ನು ಕಂಡ ರೈತರು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ, ಸಚಿನ್ ಗೌಡ ಸುಮಾರು 6 ಅಡಿ ಉದ್ದದ ಹೆಬ್ಬಾವಿಗೆ (ಇಂಡಿಯನ್ ರಾಕ್ ಪೈಥಾನ್) ತೀವ್ರವಾಗಿ ಗಾಯಗೊಂಡಿದ್ದನ್ನು ಗಮನಿಸಿ ಸುರಕ್ಷಿತವಾಗಿ ರಕ್ಷಿಸಿ, ನಂತರ ವಲಯ ಅರಣ್ಯಾಧಿಕಾರಿ ನಟರಾಜುರವರ ಮಾರ್ಗದರ್ಶನದಂತೆ ಅದನ್ನು ಚಿಕಿತ್ಸೆಗೆ ವೈಲ್ಡ್ ಲೈಫ್ ರೆಸ್ಕೂ÷್ಯ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಬನ್ನೇರುಘಟ್ಟಕ್ಕೆ ರವಾನಿಸಲಾಗಿದೆ. ಸಂಪೂರ್ಣ ಗುಣಮುಖವಾದ ನಂತರ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದೆಂದು ಮನು ತಿಳಿಸಿದರು.
ಹೆಬ್ಬಾವು ರಕ್ಷಣೆ ಕಾರ್ಯಕ್ಕೆ ಚೇತನ್, ಸೂರ್ಯ ತೇಜಸ್ವಿ ಸಹಕಾರ ನೀಡಿದರು. ಹಾವುಗಳ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಗೆ 9964519576 ಕರೆಮಾಡಬಹುದು.