ಡಾ. ಜಿ. ಪರಮೇಶ್ವರ್ ವ್ಯಕ್ತಿತ್ವದ ಸೂಚಿ, ಈ ‘ಸವ್ಯಸಾಚಿ’ ಪುಸ್ತಕ ಪರಿಚಯ -ಬಾ.ಹ. ರಮಾಕುಮಾರಿ

ಡಾ. ಜಿ. ಪರಮೇಶ್ವರ್ ವ್ಯಕ್ತಿತ್ವದ ಸೂಚಿ ಈ, ‘ಸವ್ಯಸಾಚಿ’ ಪುಸ್ತಕ ಪರಿಚಯ ಬಾ.ಹ. ರಮಾಕುಮಾರಿ, bevarahani-dr-g-parameshwar-savya-sachi-ba-ha-ramakumari

ಡಾ. ಜಿ. ಪರಮೇಶ್ವರ್ ವ್ಯಕ್ತಿತ್ವದ  ಸೂಚಿ,  ಈ  ‘ಸವ್ಯಸಾಚಿ’   ಪುಸ್ತಕ ಪರಿಚಯ  -ಬಾ.ಹ. ರಮಾಕುಮಾರಿ

ಡಾ. ಜಿ. ಪರಮೇಶ್ವರ್ ವ್ಯಕ್ತಿತ್ವದ ಸೂಚಿ ಈ

‘ಸವ್ಯಸಾಚಿ’


ಪುಸ್ತಕ ಪರಿಚಯ

ಬಾ.ಹ. ರಮಾಕುಮಾರಿ

ಕಳೆದ ತಿಂಗಳು ಒಂದುಅಪೂರ್ವಕಾರ್ಯಕ್ರಮಜರುಗಿತು. ಸಾಹಿತ್ಯ, ಕಲೆ, ಸಂಸ್ಕೃತಿಗಳ ಜೊತೆರಾಜಕಾರಣಿಯೊಬ್ಬರಅನುಸಂಧಾನಅದು. ಇದೊಂದು ಮಾರ್ಗದರ್ಶಿ ಮತ್ತು ಪ್ರೇರಣಾತ್ಮಕ ಸಮಾರಂಭ ಎಂದೆನಿಸಿತು.


ನಮ್ಮ ನಾಡಿನ ಪ್ರತಿಷ್ಠಿತ ಹಾಗೂ ಹಿರಿಯ ವಿದ್ಯಾಸಂಸ್ಥೆಯಾದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ನೌಕರರ ಒಕ್ಕೂಟವು ಈ ದೊಡ್ಡ ಸಂಸ್ಥೆಯ ಜವಾಬ್ದಾರಿ ಹೊತ್ತ ನಾಡಿನ ವಿದ್ಯಾವಂತ ರಾಜಕಾರಣಿ, ಶಿಕ್ಷಣ ಸಚಿವರಾಗಿ, ಗೃಹಸಚಿವರಾಗಿ, ಉಪಮುಖ್ಯ ಮಂತ್ರಿಗಳಾಗಿ ಸಂಭಾವಿತಜನ ಪ್ರತಿನಿಧಿ ಎಂದು ಹೆಸರು ಪಡೆದ ಡಾ. ಜಿ. ಪರಮೇಶ್ವರ ಅವರಿಗೆ ``ಸವ್ಯಸಾಚಿ’’ ಎಂಬ ಗೌರವಗ್ರಂಥ ಅರ್ಪಿಸಿ ಅವರ ಸೇವೆಗೆ ಗೌರವ ಸೂಚಿಸುವ ಕೆಲಸ ಮಾಡಿದ್ದಾರೆ.


ಈ ಸಂಸ್ಥೆಯಲ್ಲಿಉಪನ್ಯಾಸಕರಾಗಿದ್ದು ವಯೋನಿವೃತ್ತರಾಗಿ ಮೈಸೂರಿನಲ್ಲಿ ನೆಲೆಸಿರುವ ಮಾದೇವ್ ಭರಣಿಹಾಗೂ ತಂಡ ಸಂಪಾದಿಸಿದ ಈ ಗ್ರಂಥವು 4 ಭಾಗಗಳನ್ನು ಹೊಂದಿದ್ದು, 4ನೇ ಭಾಗ ಚಿತ್ರಸಂಪುಟನ್ನೊಳಗೊಂಡಿದ್ದು, ಮೊದಲ ಭಾಗದಲ್ಲಿಜನ ವಿಭಾಗದ ವಿವಿಧ ಗಣ್ಯರು ಸಂಸ್ಥೆಯವರುಅವರುಕಂಡಂತೆ ಡಾ. ಜಿ. ಪರಮೇಶ್ವರ್‌ ಅವರನ್ನುಕುರಿತ 79 ಬರಹಗಳಿವೆ. 2ನೇ ಭಾಗದಲ್ಲಿಅವರಕುಟುಂಬದ ಸದಸ್ಯರು ಬರೆದಿರುವ ಲೇಖನಗಳಿವೆ. 3ನೇ ಭಾಗದಲ್ಲಿ ಮಾಧ್ಯಮದವರುಕಂಡAತೆ 15 ಲೇಖನಗಳಿವೆ. ಇದರಲ್ಲಿ ರಾಜಕೀಯ, ಪಕ್ಷ ಮುಂತಾದ ವಿಚಾರಗಳಿವೆ. ಹಲವಾರು ಬರಹಗಳು ಬಹುಶಃ ಇವರಿಗೆ 60 ವರ್ಷಗಳಾದಾಗ ಬರೆದವುಗಳಾಗಿರುವಂತಿವೆ. ಏಕೆಂದರೆ ಆ ಲೇಖಕರು ನಮ್ಮ ನಡುವೆಇಲ್ಲ. ಸಾಹಿತಿಗಳು, ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರು, ಸಂಘಟನೆಯ ಮುಖ್ಯಸ್ಥರು, ಶಿಕ್ಷಣ ತಜ್ಞರು, ಕಲಾವಿದರು ಮುಂತಾಗಿಎಲ್ಲ ವಿಭಾಗದ ಪ್ರಾತಿನಿಧಿಕಎನ್ನಬಹುದಾದ ಲೇಖನಗಳಿವೆ.


ಒಂದೊಂದು ಲೇಖನವನ್ನು ವಿವರಿಸಲು, ವಿಶ್ಲೇಷಣೆ ಮಾಡಲು ಇಲ್ಲಿ ಸಾಧ್ಯವಿಲ್ಲ. ಆದರೆಒಟ್ಟಾರೆಯಾಗಿ ಡಾ. ಜಿ. ಪರಮೇಶ್‌ಅವರ ಬದುಕು ಸಾಧನೆಯನ್ನುಅವರ ವ್ಯಕ್ತಿತ್ವವನ್ನುಕಟ್ಟಿಕೊಡುವ ಜೊತೆಗೆ ಅವರ ಸರಿಸಮವಾಗಿ ಸಾಧನೆಗೈದಿದ್ದಅವರ ಪಿತಾಮಹರಾದ ಹೆಚ್.ಎಂ. ಗಂಗಾಧರಯ್ಯನವರು ಹಾಗೂ ಸೋದರಡಾ. ಜಿ. ಶಿವಪ್ರಸಾದ್ ಅವರ ವ್ಯಕ್ತಿತ್ವವನ್ನು ಕುಟುಂಬದ ಸದಸ್ಯರ ಜೀವನ ವೈಖರಿಯನ್ನೂಅರ್ಥೈಸುವ ಬರಹಗಳಾಗಿವೆ.


ಸಾಮಾನ್ಯವಾಗಿ ಅಭಿನಂದನಾ ಗ್ರಂಥಗಳು ಅದರಲ್ಲಿ ಬರೆದಿರುವ ಬರಹಗಳು ಒಳ್ಳೆಯದನ್ನೇ, ಉತ್ತಮವಾದವುಗಳನ್ನೇ ಬರೆಯಲಾಗುತ್ತದೆ. ನಮ್ಮ ಸಂಸ್ಕೃತಿಯೇ ಹಾಗೆ ಉತ್ತಮವಾದುದನ್ನುಗುರುತಿಸುವುದು. ಆದಾಗ್ಯೂಅಂತಹ ಬರಹಗಳೂ, ಬರಹಗಳಲ್ಲಿ ಪ್ರಸ್ತುತಪಡಿಸುವಕಾಲಘಟ್ಟದ ಸಕಾರಾತ್ಮಕ ಹಾಗೂ ನಕಾರಾತ್ಮಕ ಸನ್ನಿವೇಶಗಳು. ಅವು ತಂದೊಡ್ಡುವಕೆಟ್ಟ ಹಾಗೂ ಒಳ್ಳೆಯ ಅನುಭವಗಳನ್ನು ತೋರಿಸುವುದರಜೊತೆಗೆ ಅವುಗಳೊಂದಿಗೆ ಇವರು ನಡೆದುಕೊಂಡ ಬಗೆ, ರೀತಿನೀತಿಗಳು ಇವರ ಮನೋವೃತ್ತಿ, ಚಿತ್ತಗ್ಲಾನಿ ಹಾಗೂ ಚಿತ್ತಜ್ಞಾನವನ್ನೂ ತೋರಿಸಿಕೊಡುತ್ತವೆ. ಇವರ ಬಾಲ್ಯದ ಬದುಕುಅನುಭವದಿಂದ ಸ್ಥಿರಗೊಂಡ ಧ್ಯೇಯಗಳೂ ಗುರಿ ಸಾಧಿಸುವಛಲ ಹೇಗೆ ಉಂಟಾಯಿತು ಎಂಬುದು ಅನೇಕರಿಗ  ಪಾಠಗಳಾಗಬಹುದು.


“ವೆಚ್ಚಕ್ಕೆಹೊನ್ನಾಗಿ, ಬೆಚ್ಚನೆಯ ಮನೆಯಾಗಿ
ಇಚ್ಛೆಯುಳ್ಳ ಸತಿಯಾಗಿ
ಸ್ವರ್ಗಕ್ಕ  ಕಿಚ್ಚುಹಚ್ಚೆಂದ ಸರ್ವಜ್ಞ’’


ಎಂದುಒಬ್ಬರಲೇಖನದಕೊನೆಯಲ್ಲಿ ಹೇಳಿರುವುದು ಅಕ್ಷರಶಃ ಸತ್ಯವಾಗಿದೆ. ಹಾಗೆಂದುಅವರುತಿಂದುಂಡು ಸುಖವಾಗಿ ತಮ್ಮ ಪಾಡಿಗೆತಾವಿದ್ದರೆ ಇಂತಹ ಸಂದರ್ಭವೊಂದು ಸೃಷ್ಟಿಯಾಗುತ್ತಿರಲಿಲ್ಲ. ಕೆಲವರು ಅವರ ರಾಜಕೀಯ ಬದುಕು ಸ್ಥಾನಮಾನಕುರಿತು, ಕೆಲವರು ಅವರ ಬಾಲ್ಯದ, ಶಿಕ್ಷಣದ, ಸಂತುಷ್ಠ ಜೀವನಕುರಿತು, ಅವರ ಚಿಂತನೆಗಳನ್ನು ಕುರಿತು, ಅವರ ಕನಸು ಅವುಗಳ ಈಡೇರಿಕೆ ಮುಂತಾದ ಎಲ್ಲ ಮಗ್ಗುಲುಗಳನ್ನು ಸಹ ಬರೆದಿದ್ದಾರೆ. ಅವೆಲ್ಲವುಗಳಲ್ಲಿಯೂ ಇವರ ಸಾಮಾಜಿಕ ಪ್ರಜ್ಞೆ, ಸಜ್ಜನಿಕೆ ಸಹೃದಯತೆ, ಸಭ್ಯತೆ, ಮುಕ್ತತೆ, ಗುಣಗ್ರಾಹಿತ್ವ, ಬದ್ಧತೆ, ಪ್ರಬುದ್ಧತೆ, ಸಾತ್ವಿಕತೆ, ಮೃದುಮಾತು ಸುಶಿಕ್ಷಿತ ರಾಜಕಾರಣಿ ಎಂಬ ವಿಶೇಷಣಗಳಿಂದ ಡಾ. ಜಿ. ಪರಮೇಶ್ವರರ ವ್ಯಕ್ತಿಚಿತ್ರಣವನ್ನುಕಾಣಬಹುದು. ಆ ವಿವರಗಳಲ್ಲಿ, ಬರೆದ ಬರಹಗಳಲ್ಲಿ ಹೊರನೋಟದ್ದೆಷ್ಟು ಅಂತರಾಳದ್ದೆಷ್ಟು ಎಂಬುದನ್ನುಒರೆಹಚ್ಚಿ ನೋಡಲಾಗದು.


ಆದರೆಎಲ್ಲಾ ಬರಹಗಳ ಮೂಲಕ ಅವರುಇದ್ದಂತೆತೋರುವ ವ್ಯಕ್ತಿತ್ವವನ್ನುಕಂಡಾಗ ನಮ್ಮದೃಷ್ಟಿಅದರಾಚೆಗೂ ಹರಿಯುತ್ತದೆ. ಏಕೆಂದರೆಒಬ್ಬ ವ್ಯಕ್ತಿಒಂದು ಸೂಟು ಬೂಟು ಹಾಕಿಕೊಂಡು ಹೊರನೋಟಕ್ಕೆ ಕಂಗೊಳಿಸುವುದು ಮಾತ್ರಗೋಚರಿಸುವುದಿಲ್ಲ. ಅದರೊಳಗೆ ಅಡಗಿರುವ ನಡೆದುಬಂದ ಹಾದಿಯಾಗಿಕಾಣುತ್ತದೆ. ಹಾಗೆ ಸೂಟು ಬುಟು ಹಾಕುವ ಹಂತಕ್ಕೆತಲುಪುವಜೀವನ ಮಾರ್ಗಅನುಭವಜನ್ಯ ಹೆಜ್ಜೆ ಗುರುತುಗಳೂ, ಸುಖದ ನೆಲೆಗಳು ಕಷ್ಟ ಕಾರ್ಪಣ್ಯದ ಸಂಕಟಗಳು, ಸಮಾಜದಲ್ಲಿ ಎದುರಿಸಿದ ಅಪಮಾಣಗಳು, ಸ್ಪೃಶ್ಯ, ಅಸ್ಪೃಶ್ಯತೆಗಳು, ಅಸಮಾನತೆಯ ಕಳಂಕ, ಮೇಲು ಕೀಳು ಭಾವನೆಗಳ ಸಂಕಟಎಲ್ಲವೂ ಒಂದು ಶಿಲ್ಪವಾಗುವ ಮುನ್ನ ಬೀಳುವ ಉಳಿಪೆಟ್ಟುಗಳಾಗಿರುತ್ತವೆ. ಹಾಗೆಯೇಇವರೂಕೂಡ (ತಾವೇ ಅನೇಕ ಕಡೆ ಹೇಳಿಕೊಂಡಂತೆ) ಅವೆಲ್ಲವನ್ನೂ ಅನುಭವಿಸಿದ್ದಾರೆ. ಅವರತಂದೆಯವರೂ ಶಿಕ್ಷಣ ಗಳಿಸಿ ಶಿಕ್ಷಕರಾಗಿದ್ದರೂ ಕೂಡ ಅನುಭವಿಸಿದ್ದಾರೆ.


ಡಾ. ಜಿ. ಪರಮೇಶ್ವರಅವರದು ಬಹುಮುಖ ವ್ಯಕ್ತಿತ್ವ. ಅದನ್ನುಇಲ್ಲಿನ ಅನೇಕ ಲೇಖನಗಳು ಕಟ್ಟಿಕೊಡುತ್ತವೆ. ಯು.ಆರ್. ಅನಂತಮೂರ್ತಿಯವರ ಮೊದಲ ಬರಹದಲ್ಲಿ ``ದಲಿತತ್ವವನ್ನು ಬಂಡವಾಳ ಮಾಡಿಕೊಂಡುರಾಜಕಾರಣ ಮಾಡುವ ಮನುಷ್ಯನಲ್ಲ. ಸ್ವಸಾಮರ್ಥ್ಯದಿಂದ, ತಮ್ಮ ನಡೆನುಡಿಗಳಿಂದ ಮುಂದೆ ಬಂದ, ಭರವಸೆ ಹುಟ್ಟಿಸುವ ವ್ಯಕ್ತಿಗಳಲ್ಲಿ ಒಬ್ಬರು.’’ಎಂದಿರುವುದುವಾಸ್ತವ.


ಬರಗೂರುರಾಮಚಂದ್ರಪ್ಪ ಅವರ ಲೇಖನದಿಂದ ಇವರೊಬ್ಬ ಚಿಂತನ ಶೀಲ ವಿಚಾರವಾದಿ. ಸಾಹಿತಿಗಳ ವಲಯದೊಳಗೆ ಗುರುತಿಸಿಕೊಳ್ಳಬಲ್ಲ ಸಮಾಜಮುಖಿಚಿಂತಕ ಹಾಗೂ ಆಪ್ತ ವಲಯದ ಕಷ್ಟ ಸುಖಗಳಿಗೆ ಸ್ಪಂದಿಸಬಲ್ಲ ಮಾನವತಾವಾದಿ ಎಂಬುದುಕAಡುಬರುತ್ತದೆ.


ಇವರ ಮೇರು ವ್ಯಕ್ತಿತ್ವ ಕಾಮನ ಬಿಲ್ಲಿನಂತೆಕಮಾನುಕಟ್ಟಲುಕಾರಣ ಅವರ ತಂದೆಯವರು. ಗಾಂಧಿ, ಅಂಬೇಡ್ಕರ್‌ತತ್ವದಆಧಾರದಲ್ಲಿ ನಿರ್ಮಾಣ ಮಾಡಿದ್ದ ಶಿಕ್ಷಣ ಕ್ಷೇತ್ರ. ವಿದೇಶದಿಂದ ಶಿಕ್ಷಣ ಪಡೆದು ಬಂದಕೂಡಲೇ ಸಿದ್ಧಗೊಂಡಿದ್ದ ಕ್ಷೇತ್ರಅಭೂತ ಸ್ವಾಗತಕೋರಿತು. ಈಗಾಗಲೇ ಮೈಗೂಡಿಸಿಕೊಂಡಿದ್ದ, ಶಿಸ್ತು, ಸಂಯಮ, ವಿದೇಶೀ ಮೌಲ್ಯಗಳು ಸ್ವಚ್ಛತೆ, ವೇಷಭೂಷಣ ಗಮನ ಸೆಳೆದವು. ಇಂದಿನವರೆಗೂಕಿAಚಿತ್ತೂ ಬಾಧೆಯಾಗದಂತೆ ನಿರ್ವಹಿಸಿಕೊಂಡು ಬಂದಕಾರಣಕ್ಕೇಜನಶಕ್ತಿಯಕಾರುಣ್ಯಕ್ಕೆ ಪಾತ್ರರಾದರು. ಶೈಕ್ಷಣಿಕವಾಗಿ ಹಿಂದೆತಿರುಗಿ ನೋಡದಂತೆ ಮುಂದಡಿಇಡುತ್ತಾ ಹೋಗಿ ಇಂದುಉತ್ತುAಗಕ್ಕೇರಿದ್ದಾರೆ. ಆದರೆರಾಜಕೀಯ ಹಾಗಲ್ಲಅಲ್ಲಿನ ಏರಿಳಿತಗಳು, ತಲ್ಲಣಗಳು, ಒತ್ತಡಗಳು ಅನೇಕ ಬಾರಿ ಘಾಸಿ ಮಾಡಿವೆ. ಆದಾಗ್ಯೂಅವನ್ನೆಲ್ಲಾ ಮೀರಿ ನಿಲ್ಲುವತಾಕತ್ತು ಬಂದಿದ್ದುಅರ್ಥ ನಿರಪೇಕ್ಷತೆ. ಅಂದರೆ ಹಣ ಗಳಿಸಿ ಭ್ರಷ್ಟರಾಗಲುರಾಜಕಾರಣಕ್ಕೆ ಬರಲಿಲ್ಲ. ಕೀಳು ರಾಜಕೀಯ ಮಾಡಲಿಲ್ಲ. ಮೆಡಿಕಲ್‌ಕಾಲೇಜು ಸ್ಥಾಪಿಸುವಾಗ ಗಂಗಾಧರಯ್ಯನವರು ಪಟ್ಟಕಷ್ಟದ ಫಲವಾಗಿ ಮಗನ ರಾಜಕೀಯ ಪ್ರವೇಶವಾಯಿತುಎಂಬುದನ್ನು ಪ್ರಜಾವಾಣಿ ವರದಿಗಾರರಾಗಿದ್ದ ಶಿವಾಜಿ ಗಣೇಶನ್‌ಅವರುತಮ್ಮ ಲೇಖನದಲ್ಲಿ ಹೇಳಿದ್ದಾರೆ. ಸಹೃದಯತೆಇವರ ಹುಟ್ಟಿನಿಂದಲೇ ಬಂದಿರಬಹುದು. ಅವರಕುಟುಂಬದ ಸದಸ್ಯರಾದ, ಅಕ್ಕ, ತಂಗಿ, ಅಕ್ಕನ ಮಗ ಇವರೆಲ್ಲರ ಲೇಖನಗಳಲ್ಲಿ ಬಾಂಧವ್ಯದ ಕರುಳಬಳ್ಳಿಯ ಆರ್ದ್ರತೆಯನ್ನುಕಾಣಬಹುದು. ಬಾಲ್ಯದಲ್ಲಿ, ವಿದ್ಯಾರ್ಥಿದೆಸೆಯಲ್ಲಿಅವರನ್ನೆಲ್ಲಾ ಭಾವಿಸುತ್ತಿದ್ದ ಬಗೆ ಬಟ್ಟೆಟೇಪು, ಬಳೆ ತಿಂಡಿ, ತಂದುಕೊಟ್ಟು ಪ್ರೀತಿತೋರುವ ಸೋದರನಾಗಿಯೂ, ಅಕ್ಕನ ಮಗ ಅನಾರೋಗ್ಯದಿಂದ ಪರಿತಪಿಸುವಾಗ ಇವರ ಸ್ಪಂದನೆ, ತೆಗೆದುಕೊಂಡ ಕಾಳಜಿ ಇವೆಲ್ಲವೂ ಮಾನವೀಯತೆಯ ಮುಖಗಳು ಹೃದಯವಂತಿಕೆಯ ಛಾಪುಗಳಾಗಿವೆ.


ಇಂದಿಗೂ ಅದೇ ವ್ಯಕ್ತಿತ್ವವನ್ನು ಕಾಯ್ದು ಕೊಂಡಿರುವುದರಿಂದ ಎಲ್ಲರೂ ಎತ್ತರದಲ್ಲೇ ಇಟ್ಟಿದ್ದಾರೆ. ಎಸ್.ಎಂ. ಕೃಷ್ಣ ಮತ್ತುಡಾ. ಜಿ. ಪರಮೇಶ್ವರ್‌ ಅವರನ್ನು ಒಂದೇ ಸಾಲಿನಲ್ಲಿಡಬಹುದಾದ ರಾಜಕಾರಣಿಗಳು (ಅದೇ ಶೈಕ್ಷಣಿಕಅರ್ಹತೆ) ಎಂದು ಎಲ್ಲರೂ ಸಮೀಕರಿಸುವುದುಂಟು. ಇವರು ವೃತ್ತಿ ಮತ್ತು ಅದೃಷ್ಟಎರಡೂ ಮೇಳೈಸಿದ ಒಬ್ಬ ಮಾದರಿ ಸಾಧಕಎನ್ನಬಹುದು. 


ಈ ಮಟ್ಟದಇವರ ವ್ಯಕ್ತಿತ್ವ ಕಳೆಕಟ್ಟಲು ಅವರ ಶ್ರೀಮತಿ ಕನ್ನಿಕಾಪರಮೇಶ್ವರಿ ಅವರೂ ಕಾರಣ. ಎಲ್ಲಚಿಂತನೆ, ಸಾಧನೆಗಳಿಗೆ ಶಕ್ತಿಯಾದವರು. ಬಡವರು ದಲಿತರು ಶಿಕ್ಷಣ ಮಾತ್ರದಿಂದಲೇ ಮೇಲೇರಿ ಬರಲು ಸಾಧ್ಯಎಂದು ನಂಬಿದ್ದರಿಂದಲೇ ಗ್ರಾಮಾಂತರ ಪ್ರದೇಶದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಬೆಳಕಾದರು. ಆಸ್ಪತ್ರೆ, ಮೆಡಿಕಲ್‌ಕಾಲೇಜು ಮೂಲಕ ಉನ್ನತ ಶಿಕ್ಷಣದ ಹೆಬ್ಬಾಗಿಲು ತೆರೆದರು. ಇವೆಲ್ಲವುಗಳನ್ನು ಅರಿತರೆ ಡಾ. ಜಿ. ಪರಮೇಶ್ವರ ಅವರನ್ನೂ ಅರಿಯಬಹುದು. ಅದೇ ಸವ್ಯಸಾಚಿ ಗ್ರಂಥದ ಆಂತರ‍್ಯ.