ಅನುಭಾವ ಡಾ.  ಮಿರ್ಜಾ ಬಷೀರ್  ಸಹಜ ಬದುಕಿನ ಪಾಠಗಳು

ಅನುಭಾವ ಡಾ.  ಮಿರ್ಜಾ ಬಷೀರ್  ಸಹಜ ಬದುಕಿನ ಪಾಠಗಳು, mirza basheer bevarahani-mirza-basheer-article-anubhava

ಅನುಭಾವ  ಡಾ.  ಮಿರ್ಜಾ ಬಷೀರ್    ಸಹಜ ಬದುಕಿನ ಪಾಠಗಳು

ಅನುಭಾವ

ಡಾ.  ಮಿರ್ಜಾ ಬಷೀರ್ 


ಸಹಜ ಬದುಕಿನ ಪಾಠಗಳು

 ಕನ್ನಡ ನಾಡಿನ ಕೋಮು ಸೌಹಾರ್ದತೆಯನ್ನು ನೆನಪಿಸುವ, ಗಟ್ಟಿಗೊಳಿಸುವ ಅನುಭವಗಳನ್ನು ಬರೆಯಲುಕೂತರೆ ನನ್ನದೇ ಬದುಕಿನ ಅನೇಕ ಘಟನೆಗಳು ಪುಂಖಾನುಪುಂಖವಾಗಿ ನುಗ್ಗಿ ಬಂದವು. ಸೌಹಾರ್ದ ಬದುಕನ್ನುಯಾವುದೇಒತ್ತಡವಿಲ್ಲದೆ, ಕಷ್ಟವಿಲ್ಲದೆ ಸಹಜವಾಗಿ ಬದುಕಿಸಾಧಿಸಲು ಪ್ರಯತ್ನಿಸಿದ್ದೆ. ಈ ಅರಿವುನನಗೆ ಪರಂಪರಾಗತವಾಗಿ ಬಂದಿತ್ತು. ಈ ಎಲ್ಲ ನೆನಪುಗಳು ಸಂತೋಷವನ್ನು ಹೊತ್ತು ಬರಬೇಕಿತ್ತು. ಆದರೆ ವಿಷಾದವನ್ನು ಹೊತ್ತು ಬರುತ್ತಿರುವುದು ಈ ಸಮಯ ಸಂದರ್ಭವೇ ವಿಷಮಯವಾಗಿರುವುದನ್ನುತೋರುತ್ತಿದೆ.

 1992 ರಿಂದ 1998 ರವರೆಗೆ ನಾನು ತುರುವೇಕೆರೆತಾಲ್ಲೂಕಿನತಂಡಗ ಎಂಬ ಹಳ್ಳಿಯಲ್ಲಿ ಪಶುವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ತಿಪಟೂರು-ತುರುವೇಕೆರೆರಸ್ತೆಯಿಂದ ನಾಲ್ಕು ಕಿ.ಮೀ. ಒಳಗಿರುವ ಸಣ್ಣ ಹಳ್ಳಿ ಅದು. ಪ್ರೌಢಶಾಲೆ, ಜನರಲ್‌ಆಸ್ಪತ್ರೆ, ಗ್ರಾಮಪಂಚಾಯ್ತಿ ಕಛೇರಿ, ಗ್ರಾಮ ಲೆಕ್ಕಾಧಿಕಾರಿಕಛೇರಿ, ಪೋಸ್ಟ್ಆಫೀಸು, ಪಶುಚಿಕಿತ್ಸಾಲಯ ಮುಂತಾದವುಗಳಿದ್ದವು.ಕಾಫಿ, ಟೀ ಬಿಟ್ಟರೆ ದಿನವಿಡೀಇನ್ನೇನೂ ಸಿಗದ ಒಂದೆರಡು ಸಣ್ಣಪುಟ್ಟ ಹೋಟೆಲುಗಳಿದ್ದವು.ತಿಂಡಿ ಸಿಕ್ಕರೂ ಬೆಳಿಗ್ಗೆ 9-10 ಗಂಟೆವರೆಗೆ ಮಾತ್ರ. ತಂಡಗದಿAದ ಹತ್ತು ಕಿ.ಮೀ. ದೂರದ ನೊಣವಿನಕೆರೆಯಲ್ಲಿ ಮನೆ ಮಾಡಿದ್ದೆ. ಮನೆಯಲ್ಲಿತಿಂಡಿತಿAದು 8-30 ಕ್ಕೆ ಆಸ್ಪತ್ರೆಗೆ ಬೈಕಲ್ಲಿ ಬಂದರೆ ಸಂಜೆ 6-7 ಗಂಟೆಯತನಕ ಮೈದಣಿಯೆ ಕೆಲಸ. ದಿನವಿಡೀಎರಡೋ ಮೂರೋ ಸರ್ಕಾರಿ ಬಸ್ಸುಗಳು ತುರುವೇಕೆರೆಯಿಂದ ಬಂದು ಹೋಗುತ್ತಿದ್ದವು. ಸಂಜೆ 4-00 ಗಂಟೆಯ ಬಸ್ಸುತಪ್ಪಿತೆಂದರೆ 4 ಕಿ.ಮೀ. ದೂರದ ಮುಖ್ಯರಸ್ತೆಗೆ ನಡೆಯಬೇಕಿತ್ತು. 

 ಊರು ಪ್ರವೇಶಿಸುತ್ತಿದ್ದಂತೆಯೇ ಪಶುಚಿಕಿತ್ಸಾಲಯಎದುರಾಗುತ್ತಿತ್ತು. ಆಸ್ಪತ್ರೆಯನ್ನುಆಟದ ಮೈದಾನ ಪ್ರವೇಶಿಸಿದಂತೆ ಖುಷಿಯಿಂದ ನುಗ್ಗುತ್ತಿದ್ದೆ. ಅಲ್ಲಿ ಸಿಟ್ಟಾಗುವುದು, ರೈತರನ್ನು ಬೈದಾಡುವುದು, ಸಿಬ್ಬಂದಿಯ ಮೇಲೆ ಯುದ್ಧಇಂಥವುಯಾವುವೂಇರುತ್ತಿರಲಿಲ್ಲ. ಸಿಬ್ಬಂದಿ, ರೈತರು ಮತ್ತುಎಲ್ಲರಜೊತೆತಮಾಷೆಯಿಂದಇರುತ್ತಿದ್ದೆ. ಅನೇಕರು ನನ್ನ ಮಾತುಗಳನ್ನು ಕೇಳುತ್ತ ಹಾವಿನ ತರತಲೆಯಾಡಿಸುತ್ತ ನಿಂತುಬಿಡುತ್ತಿದ್ದರು. ಜಲ್ದಿದನ ತೋರಿಸಿ, ಚಿಕಿತ್ಸೆ ಮಾಡಿಸಿಕೊಳ್ಳದೆ ಮಾತಾಡುತ್ತ ಸಾವಧಾನದಿಂದಿರುತ್ತಿದ್ದರು. ಎಲ್ಲರಿಗೂ ಬೇಕಾದಷ್ಟು ಸಮಯವಿರುತ್ತಿತ್ತು. ಮಾಯಣ್ಣಗೌಡನೆಂಬ ರೈತ ನನ್ನಆಪ್ತನಾಗಿದ್ದ. ಅವನಿಗೆ ಚೆಡ್ಡಿ ಮಾಯಣ್ಣಅಂತಅಡ್ಡ ಹೆಸರು. ಚೇಳು ಕೊಂಡಿಯAಥಾ ಮನುಷ್ಯ. ಕೆಲಸ ಇರಲಿ ಬಿಡಲಿ ದಿನವೂ ಆಸ್ಪತ್ರೆಗೆ ಬಂದುಅರ್ಧಗAಟೆಇದ್ದುಆಸ್ಪತ್ರೆಗೆ ಬಂದದನ ಎಮ್ಮೆಗಳನ್ನು ಹಿಡಿಯಲು ಸಹಾಯ ಮಾಡಿಅಥವಾ ದನಗಳ ಚಿಕಿತ್ಸೆಯನ್ನುಕುತೂಹಲದಿಂದ ನೋಡುತ್ತ ನಿಲ್ಲುತ್ತಿದ್ದ. ಮಾಯಣ್ಣ ಬಂದಎAದರೆ ನಾನು ಟೀ ತರಿಸಿಯೇ ತರಿಸುತ್ತಿದ್ದೆ. ಮಾಯಣ್ಣಟೀಕುಡಿದು ಬೀಡಿ ಸೇದಿ ಹೊರಡುತ್ತಿದ್ದ. ಮೊದಲೆಲ್ಲ ನನ್ನೆದುರು ಬೀಡಿ ಸೇದುತ್ತಿರಲಿಲ್ಲ. ಆದರೆ ದಿನಕಳೆದು ವಿಶ್ವಾಸಕುದುರಿದ ಮೇಲೆ ಆಸ್ಪತ್ರೆಯಿಂದ ಹೊರಬಂದು ಬೀಡಿ ಹಚ್ಚುತ್ತಿದ್ದ. 

 ಸಿದ್ಧಲಿಂಗಪ್ಪ ಎಂಬುವ ಇನ್ನೊಬ್ಬರುತಮ್ಮ ಮಗ ಮಂಜುನಾಥನೊಡನೆ ಬರುತ್ತಿದ್ದರು. ಅವರಿದ್ದಾಗ ನಾನು ಹೋಟೆಲಲ್ಲಿ ಟೀತರಿಸುವಂತಿರಲಿಲ್ಲ. ಅವರು ಮನೆಯಿಂದ ಮಂಜಣ್ಣನಿಗೆ ಹೇಳಿ ತರಿಸುತ್ತಿದ್ದರು. ಅವರುಯಾವಾಗಲೂ ಪಂಚೆ ಉಟ್ಟುತಲೆಗೆಟವಲ್ಲು ಸುತ್ತಿರುತ್ತಿದ್ದರು. ನನ್ನೊಡನೆ “ಬಾರಪ್ಪ, ಮಾಡಪ್ಪ, ಅದೇನು ನೋಡಪ್ಪ” ಎಂದುಆತ್ಮೀಯ ಮಾತುಕತೆ. ಅವರತಮ್ಮಂದಿರಾದ ಶಿವಬಸಪ್ಪ, ರಾಜಶೇಖರ್, ಸೋಮಶೇಖರ್ ಮುಂತಾದವರ ಮನೆಗಳು ಆಸ್ಪತ್ರೆಯ ಸುತ್ತಮುತ್ತಇದ್ದವು. ಯಾವುದೇಕ್ಷಣದಲ್ಲಿಕರೆದರೂಅವರು ಹಾಜರಾಗುತ್ತಿದ್ದರು. ಅಥವಾಅವರುಕರೆದರೆ ನಾನು ಹಾಜರಾಗುತ್ತಿದ್ದೆ. ನಾನಿರುವವರೆಗೆಅನೇಕರಿಗೆಆಸ್ಪತ್ರೆಯುಅವರ ಮನೆಯಅಥವಾದನದಕೊಟ್ಟಿಗೆಯ ವಿಸ್ತರಣೆಯಂತಿತ್ತು. ಸಿದ್ಧಲಿಂಗಪ್ಪರು ಯಾವಾಗಲೂ ನಾಲ್ಕಾರು ಸೀಮೆಹಸು, ಎಮ್ಮೆಗಳನ್ನು ಸಾಕಿರುತ್ತಿದ್ದರು. ಅವರತಮ್ಮ ಶಿವಬಸಪ್ಪರೂ ಸೀಮೆಹಸುಗಳ ಸಾಕಿರುತ್ತಿದ್ದರು. ಆಸ್ಪತ್ರೆಗೆ ವೇಳಾಪಟ್ಟಿಯೇ ಇರುತ್ತಿರಲಿಲ್ಲ. ರೈತರು ಬೇಕಾದಾಗ ಬರುತ್ತಿದ್ದರು. ನಾನು ಹಳ್ಳಿಗಳಿಗೆ ಪ್ರವಾಸ ಹೋಗಿದ್ದರೆ ನಾನು ಬರುವವರೆಗೆಕಾದಿರುತ್ತಿದ್ದರು. ಅವರಿಗೆ ಸಲಹೆ, ಸೂಚನೆ, ಧೈರ್ಯಕೊಡಲುಆಸ್ಪತ್ರೆ ಸಹಾಯಕಕೆಂಪಯ್ಯನ ಹಾಜರಿ ಸದಾಇರುತ್ತಿತ್ತು. ರಾತ್ರಿಯ ಹೊತ್ತಾದರೆ ಫೋನು ಮಾಡುತ್ತಿದ್ದರು. ಆಗ ತಾನೇಆಸ್ಪತ್ರೆಗೆ ಸ್ಥಿರ ದೂರವಾಣಿಗಳು ಬಂದಿದ್ದವು. 

ತಂಡಗದಟಿ.ಎಲ್. ಶ್ರೀಧರ ಎನ್ನುವವರುದೊಡ್ಡಗಂಟಲಲ್ಲಿ ಮಾತನಾಡುತ್ತಿದ್ದರು. ಅವರಿಗೆ ನನ್ನಲ್ಲಿ ಅಚಲ ವಿಶ್ವಾಸ. ಅನುಮಾನದ ಲವಲೇಶವೂ ಇದ್ದಿಲ್ಲ. ಅವರ ದನಕರುಗಳ ಬಗ್ಗೆ ನನ್ನ ಗಮನಕ್ಕೆ ತಂದು ನಿರಾಳರಾಗಿಬಿಡುತ್ತಿದ್ದರು. ಒಮ್ಮೊಮ್ಮೆ ಮೇಲ್ಕಾಣಿಸಿದ ಎಲ್ಲರೂಆಸ್ಪತ್ರೆಯಲ್ಲಿಜಮಾವಣೆಆಗುತ್ತಿದ್ದರು. ಒಬ್ಬೊಬ್ಬರ ದನಗಳದ್ದು ಒಂದೊAದು ಸ್ಥಿತಿ, ಕಾಯಿಲೆ. ಎಲ್ಲರೂ ಸಾವಧಾನದಿಂದ ತೋರಿಸಿಕೊಳ್ಳುತ್ತಿದ್ದರು. ಏನು ಸ್ನೇಹ, ತಾಳ್ಮೆ, ವಿಶ್ವಾಸ! ಈ ತರಹದ ವಿಶ್ವಾಸ ನನಗೆ ಯಾರ ಬಗ್ಗೆಯಾದರೂಇದೆಯೇಎಂದು ಪರೀಕ್ಷಿಸಿಕೊಳ್ಳುತ್ತಿದ್ದೆ. ಇದುಒಂದಲ್ಲಎರಡಲ್ಲಆರು ವರ್ಷಗಳ ಕಾಲ ನಿರಂತರವಾಗಿತ್ತು ಮತ್ತುತಂಡಗದಿAದ ವರ್ಗವಾಗಿ ಬೇರೆಡೆ ಹೋದ ಮೇಲೂ. ಅಂಥವರ ಸಂರ್ಪಕಕ್ಕೆ ಬಂದದ್ದು ನನ್ನನ್ನುಉತ್ತಮಸ್ಥನನ್ನಾಗಿ ಮಾಡಿದೆಯೆಂತಲೂ ಮತ್ತುನನ್ನಆರೋಗ್ಯ, ಆಯುಷ್ಯಗಳನ್ನು ಸಹ ಸುಧಾರಿಸಿದೆ ಎಂಬುದರಲ್ಲಿ ನನಗೆ ಯಾವುದೇಅನುಮಾನವಿಲ್ಲ.

ಬೀದಿಮನೆ ರಾಜಣ್ಣಅಂತ ಮತ್ತೊಬ್ಬರು ಆಗಾಗ ಆಸ್ಪತ್ರೆಗೆ ಬರುತ್ತಿದ್ದರು. ಅವರ ಮನೆಯ ದನಕರುಗಳಿಗೆ ಕಾಯಿಲೆಗಳೇ ಬರುತ್ತಿರಲಿಲ್ಲ. ಆದ್ದರಿಂದ ನೆಂಟರಥರಆಸ್ಪತ್ರೆಗೆ ಬರುತ್ತಿದ್ದರು. ನೊಣವಿನಕೆರೆ ಬಳಿಯ ಮಠದ ಪಾಳ್ಯದಲ್ಲಿದ್ದ ಅವರ ಕಳ್ಳುಬಳ್ಳಿಯವರೆಲ್ಲ ನನಗೆ ಪರಿಚಿತರೂ, ಆತ್ಮೀಯರೂಆಗಿದ್ದರು. 

ಅದುಗೌಡರು ಮತ್ತು ಲಿಂಗಾಯಿತರು ಸಮಬಲದಲ್ಲಿದ್ದ ಹಳ್ಳಿಯಾದರೂ ಬ್ರಾಹ್ಮಣರು, ವೈಷ್ಣವರು, ದಲಿತರು, ಜೈನರುಇದ್ದು ಮುಸಲ್ಮಾನರ ಹದಿನೈದಿಪ್ಪತ್ತು ಮನೆಗಳಿದ್ದವು. ನಾನು ಅಲ್ಲಿದ್ದಆರು ವರ್ಷಗಳಲ್ಲಿ ಒಮ್ಮೆ ಮಾತ್ರ ಮುಸಲ್ಮಾನರ ಹುಡುಗಿಯೊಬ್ಬಳು ನಾಟಿ ಹಸುವೊಂದನ್ನು ಹಿಡಿದುಕೊಂಡು ಬಂದುಚಿಕಿತ್ಸೆ ಮಾಡಿಸಿಕೊಂಡು ಹೋಗಿದ್ದಳು. ಆರು ವರ್ಷದ ಲಕ್ಷಾಂತರ ದನಗಳ ಚಿಕಿತ್ಸೆಯಲ್ಲಿ ನಾನು ದಾಖಲಿಸಿಕೊಂಡ ಒಂದೇಒAದು ಮುಸಲ್ಮಾನ ಹೆಸರು ಶಮೀಮ್‌ತಂಡಗಆಗಿತ್ತು.

ಆಸ್ಪತ್ರೆಯಎದುರುಟಾರುರಸ್ತೆ. ಅದರ ಆಚೆ ಮನೆಯಲ್ಲಿಒಬ್ಬಅಜ್ಜಅಜ್ಜಿಯರಿದ್ದರು. ಅವರಿಗೆಯಾವಾಗಾದರೊಮ್ಮೊಮ್ಮೆ ಬೇಕಾಗುತ್ತಿದ್ದ ಔಷಧಗಳನ್ನು ನೊಣವಿನಕೆರೆಯಔಷಧಿಅಂಗಡಿಯಿAದತAದುಕೊಡುತ್ತಿದ್ದೆ. ಆಗ ತಂಡಗದಲ್ಲಿ ಔಷಧ ಅಂಗಡಿಇರಲಿಲ್ಲ. ಉದ್ದಕ್ಕಿದ್ದ, ಹಣೆಯ ಮೇಲೆ ರೂಪಾಯಿಅಗಲದಕುಂಕುಮದಅಜ್ಜಿ ಔಷಧಗಳನ್ನು ಇಸಿದುಕೊಂಡು ದುಡ್ಡುಕೊಡುತ್ತಿತ್ತು. ಕನ್ನಡಕ ಸರಿಪಡಿಸಿಕೊಂಡು ನನ್ನೆದುರುತಲೆಬಾಗಿ ನಿಂತು ಕಣ್ಣುಗಳನ್ನು ಮುಚ್ಚಿಕೊಂಡುಎರಡೂಕೈಯಿAದ ನಮಸ್ಕರಿಸುತ್ತಿತ್ತು.ಇಂಥವು ಸಾರ್ಥಕ ಕ್ಷಣಗಳಾಗಿ ನನ್ನೊಳಗೆ ಉಳಿದುಬಿಟ್ಟಿವೆ. 

ಇನ್ನುಳಿದಂತೆ ಶ್ರೀನಾಥ್, ಅವರತಂದೆರಘು, ಸುದರ್ಶನ್, ಸಾಕ್ಷರತಾಕಾರ್ಯಕ್ರಮದ ವೆಂಕಟೇಶ, ಪೋಸ್ಟ್ ಆಫೀಸಿನ ಶೇಷಾದ್ರಿ, ಪೋಸ್ಟ್ ಮ್ಯಾನ್ ಗಳಿಗೆ ಗೌಡ, ಬ್ರಹ್ಮದೇವಯ್ಯ ಮತ್ತು ಮಕ್ಕಳು, ಪುಟ್ಟಣ್ಣ ಮತ್ತು ಮಕ್ಕಳು, ಚಂದ್ರಕೀರ್ತಿ (ಕವಿ), ನಂಜುAಡಪ್ಪ ಮತ್ತು ಮಗ ಈಶ ಮುಂತಾದವರದರ್ಶನ ಮತ್ತು ಮಾತುಕತೆ ಪ್ರತಿದಿನದ್ದು.

ಆಸ್ಪತ್ರೆಯಕಾಂಪೌಂಡ್‌ಗೆ ಹತ್ತಿಕೊಂಡಂತೆ ಬಲಗಡೆಗೆ ಬ್ರಾಹ್ಮಣರ ಸತ್ಯನಾರಾಯಣಎನ್ನುವವರ ಮನೆಯಿತ್ತು. ಅವರ ಮಗ ಮಂಜುನಾಥ ನನಗೆ ಎರಡು ಮೂರು ಸಲ ನೇಮ್ ಪ್ಲೇಟ್ ಬರೆದುಕೊಟ್ಟರೂದುಡ್ಡು ಮಾತ್ರ ತೆಗೆದುಕೊಳ್ಳುತ್ತಿರಲಿಲ್ಲ. ಅವರತಂಗಿಯರಿಬ್ಬರೂ ಹಬ್ಬಗಳ ದಿನ ತಿಂಡಿಗಳನ್ನು ತಂದುಕೊಡುತ್ತಿದ್ದುದು ಮರೆಯಲಾರೆ. ತಂದೆ, ತಾಯಿ ಮತ್ತು ಮೂರು ಮಕ್ಕಳು ಅತ್ಯಂತ ಸರಳ ಜೀವನ ಸಾಗಿಸುತ್ತಿದ್ದರು. ಮಂಜುನಾಥಯಾವಾಗಲೂ ಬರಿಗಾಲಲ್ಲಿ ನಡೆದಾಡುತ್ತಿದ್ದರು. 

ವೈಷ್ಣವರಾದರಾಜರತ್ನಂಎನ್ನುವವರು ನನ್ನದೊಡ್ಡಅಭಿಮಾನಿಯಾಗಿದ್ದರು. ಅವರುಎಮ್ಮೆ ದನಕರುಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದರು. ಬದುಕಿನಲ್ಲಿ ವಿವೇಕ, ನಿಸ್ವಾರ್ಥ, ಕಾಯಕ ಪ್ರೀತಿಗಳನ್ನು ಅವರಿಂದಕಲಿಯಬಹುದಿತ್ತು.ಅವರಚಿಕ್ಕಪ್ಪನವರು ಹಿಂದಿಯಿAದಕನ್ನಡಕ್ಕೆ ಭಾಷಾಂತರಿಸಿರುವ ‘ಶ್ರೀಮದ್ಭಗವದ್ಗೀತಾ’ ಪುಸ್ತಕವನ್ನು 1997ರಲ್ಲಿ ನನಗೆ ಕೊಟ್ಟಿದ್ದರು. ಅದು ಈಗಲೂ ನನ್ನ ಬಳಿಯಿದೆ. ಅವರಚಿಕ್ಕಪ್ಪನವರಾದತಂ.ನ. ಮೂರ್ತಿಯವರು ದಿನವೂ ತೋಟಕ್ಕೆಆಸ್ಪತ್ರೆಎದುರಿನಿಂದಲೇ ಎಮ್ಮೆಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಅವರಕೈಯ್ಯಲ್ಲಿಯಾವುದಾದರೂಒಂದು ಪುಸ್ತಕ ಇರುತ್ತಿತ್ತು. 

ಆಸ್ಪತ್ರೆಯಎಡಗಡೆಗೆಜೈನರ ಪದ್ಮರಾಜು ಮತ್ತು ನಂಜುAಡೇಗೌಡ ಮೇಷ್ಟುç ಮನೆಗಳಿದ್ದವು. ಹಬ್ಬ ಹರಿದಿನಗಳಲ್ಲಿ ಮೇಷ್ಟçಮನೆಯಲ್ಲಿ ಬಾಡೂಟಗ್ಯಾರಂಟಿ. ನಮ್ಮನೆಗಳಲ್ಲಿ ಬಾಡಿನ ಸಾರು ಸ್ವಲ್ಪಗಟ್ಟಿಯಿರುತ್ತದೆ. ಆದರೆಅವರ ಮನೆಯದ್ದು ಸ್ವಲ್ಪ ತೆಳು. ರಾಗಿಮುದ್ದೆ, ಬಾಡಿನ ಸಾರುಎಂಬುದುದೇವರುಖುದ್ದಾಗಿ ಮುಂದೆ ನಿಂತು ನೀಡಿರುವ ವರವಿರಬೇಕು!

ನಾನು ತಂಡಗದಲ್ಲಿದ್ದಆರು ವರ್ಷಗಳ ಕಾಲವೂ ಮಧ್ಯಾಹ್ನದಊಟವನ್ನು ಪದ್ಮನಾಭ (ನಾಬಣ್ಣ) ಎಂಬುವರ ಮನೆಯಲ್ಲಿ ಮಾಡುತ್ತಿದ್ದೆ. ನಾನು ತಂಡಗಕ್ಕೆ ಹೋಗುವ ಮುಂಚೆಯೇಅವರ ಪರಿಚಯವಿತ್ತು. ಅವರ ಶ್ರೀಮತಿಯವರಾದ ಉಮಾರವರುಯೋಗಪಟುವಾಗಿದ್ದುಅವರ ಬಗ್ಗೆ ಲೇಖನವೊಂದುತರAಗ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಯೋಗವಷ್ಟೇಅಲ್ಲದೆಪಾಕ ಪ್ರವೀಣರೂಆಗಿದ್ದು ಬಾಯಲ್ಲಿ ನೀರೂರುವಂತೆ ತಿಂಡಿಗಳನ್ನು ಮಾಡುತ್ತಿದ್ದರು. ಜಗತ್ತಿನಲ್ಲಿರುವ ತಾಳ್ಮೆ ಎಲ್ಲವನ್ನೂ ಒಗ್ಗೂಡಿಸಿಕೊಂಡು ಅವರು ಮಾಡುತ್ತಿದ್ದಉಪ್ಪಿನಕಾಯಿ, ಪುಳಿಯೋಗರೆ, ಕ್ಯಾರೆಟ್ ಹಲ್ವ, ದಮ್ರೋಟು, ಕೊಬ್ಬರಿ ಮಿಠಾಯಿ, ಕೋಡುಬಳೆ ಮುಂತಾದ ಅನೇಕ ಐಟಮ್ಮುಗಳು ಅವರ ಸೂತ್ರದ ಪ್ರಕಾರನಮ್ಮನೆಯಲ್ಲಿಯೂತಯಾರಾಗಿಘಮಘಮಿಸತೊಡಗಿದವು. ಅಯ್ಯರ್ ಬ್ರಾಹ್ಮಣರಾಗಿದ್ದಅವರು ನಮ್ಮನೆಗೆ ಬರುವುದು ಮತ್ತು ನಾನು ಸಂಸಾರ ಸಮೇತಅವರ ಮನೆಗೋಗಿ ಬರುವುದು ಮಾಮೂಲಾಗಿತ್ತು. ಎಂಟ್ಹತ್ತು ವರ್ಷದವಳಿದ್ದಾಗ ಅವರ ಮಗಳು ಸೌಮ್ಯ ಒಬ್ಬಳೇ ನಮ್ಮಕುಟುಂಬದಜೊತೆ ಪ್ರವಾಸಕ್ಕೆ ಬಂದಿದ್ದಳು. ಹೊರನಾಡು, ಕೊಲ್ಲೂರು, ಕಟೀಲು, ಬಾಬಾಬುಡನಗಿರಿ, ಚಿಕ್ಕಮಗಳೂರು, ಮಂಗಳೂರು ಎಲ್ಲ ನೋಡಿಕೊಂಡು ಬಂದಿದ್ದೆವು. 2003, 04, 05 ರಲ್ಲಿ ನಾನು ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಪದ್ಮನಾಭರುಕುಟುಂಬಸಮೇತಉಜಿರೆಯ ನಮ್ಮನೆಗೆ ಬಂದು ಎರಡು ದಿನ ಇದ್ದರು. ಸುತ್ತಮುತ್ತ ಮನೆಯವರು ಮತ್ತುಅದರಲ್ಲೊಬ್ಬ ಬ್ರಾಹ್ಮಣರ ಮನೆಯವರಂತೂ ನಂಬಲಾಗದೆಯೂಆದರೆ ನಂಬಲೇಬೇಕಾಗಿಯೂ ಬಂದು ಗೊಂದಲಕ್ಕೆ ಬಿದ್ದಿದ್ದರು. ಅಲ್ಲಿಯ ಸೆಖೆಯನ್ನುತಡೆಯಲಾಗದೆ ಪದ್ಮನಾಭರು ಶರ್ಟು ಬನಿಯನ್ನು ಬಿಚ್ಚಿ ಜನಿವಾರಕಾಣುವಂತೆ ಮನೆಯಕಾಂಪೌಂಡಿನಲ್ಲಿತಿರುಗಾಡುತ್ತಿದ್ದರೆ ಕೆಲವರು ದಿಗ್ಭಾçಂತರಾಗಿ, ಮುಖ ಮುಖ ನೋಡಿಕೊಂಡು, ಮನೆ ಮುಂದೆತಟ್ಟಾಡಿಕೊಂಡು ಸಾಗುತ್ತಿದ್ದರು. ಅವರುಯಾವಾಗ ಮನೆಗೆ ಬಂದರೂ ಮನೆಯಲ್ಲಿ ಶುದ್ಧ ಸಸ್ಯಾಹಾರಅಡಿಗೆತಯಾರಾಗುತ್ತಿತ್ತು. ನನ್ನ ಹೆಂಡತಿ ಮೊದಲಿನಿಂದಲೂ ಸಸ್ಯಾಹಾರಿಯೇ ಆಗಿದ್ದಾಳೆ.

ಒಂದು ಸಲ ಪದ್ಮನಾಭರು ಸಂಸಾರ ಸಮೇತ ಪರವೂರಿಗೆ ಹೋಗಿದ್ದರು. ಅವರತುಂಬುಗಬ್ಬದ ಹಸುವೊಂದು ಹೆರಿಗೆ ನೋವು ತಿನ್ನತೊಡಗಿತು. ಮನೆಯ ಆಳುಮಗನು ಎಲ್ಲೋ ಹೊರಟುಹೋಗಿದ್ದ. ಅವರದುತೋಟದ ಮನೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಸುತ್ತಮುತ್ತಯಾರೂಇರಲಿಲ್ಲ. ಹೋಗಿ ಯಾರನ್ನಾದರೂಕರೆಯೋಣವೆಂದರೆ ಹಸುವಿನ ಮಡ್ಲಿಂದಕರುವಿನ ಕಾಲು ಹೊರಟಿವೆ! ಅಲ್ಲಿಯೇತೊಟ್ಟಿಯಲ್ಲಿ ನೀರುತುಂಬಿಕೊAಡು ನಾನೊಬ್ಬನೇ ಹೆರಿಗೆ ಮಾಡಿಸಿದೆ. 

ಹೀಗಿದ್ದಾಗ ಯಾರದೋ ಮಾತುಕಟ್ಟಿ ಕೊಂಡುಅಲ್ಲಿಯ ಶಾಸಕರು ನನ್ನನ್ನು ಮಂಡ್ಯಜಿಲ್ಲೆಗೆ ವರ್ಗಾಯಿಸಿದರು. ವರ್ಗವಾದಜಾಗಕ್ಕೆ ಹೋದೆ. ಆಗ ಅನೇಕ ಜನತಂಡಗದವರು ಶಾಸಕರ ಬಳಿ ಹೋಗಿ ಮೂರು ತಿಂಗಳ ಒಳಗೆ ತಂಡಗಕ್ಕೆ ವಾಪಸ್ಸು ವರ್ಗಾವಣೆ ಮಾಡಿಸಿದರು. 

ಆಗ ಇನ್ನೊಂದು ವಿಶೇಷ ನಡೆಯಿತು. ತಂಡಗದಲ್ಲಿ ಬ್ಯಾಂಡ್‌ಸೆಟ್ ಹುಚ್ಚಯ್ಯ ಎಂಬ ನನ್ನಒಬ್ಬಆತ್ಮೀಯನಿದ್ದ. ವಾರಕ್ಕೊಮ್ಮೆಯಾದರೂ ಆಸ್ಪತ್ರೆಗೆ ಬಂದುತನ್ನ ಕಷ್ಟ ಸುಖ ಹೇಳಿಕೊಂಡು ಹಗುರಾಗುತ್ತಿದ್ದ. ಆಸ್ಪತ್ರೆಯಲ್ಲಿ ಹುಚ್ಚಯ್ಯನನ್ನು ನನ್ನೆದುರಿನ ಕುರ್ಚಿಯಲ್ಲಿ ಕೂರಿಸಿಕೊಂಡು ಮಾತನಾಡುತ್ತಿದ್ದೆ. ದಲಿತನಾಗಿದ್ದ ಆತನನ್ನು ಸರ್ಕಾರಿ ಕಚೇರಿಯ ಒಳಗೆ ಯಾರೂ ಅಷ್ಟು ಆತ್ಮೀಯತೆಯಿಂದ ಮಾತನಾಡಿಸಿರಲಿಕ್ಕಿಲ್ಲ. ಇದರಿಂದ ಅವನಿಗೆ ನನ್ನ ಬಗ್ಗೆ ವಿಶೇಷ ಪ್ರೀತಿ ಮತ್ತುಅಭಿಮಾನ. ಆದರೆ ವರ್ಗವಾಗಿ ಇದ್ದಕ್ಕಿದ್ದಂತೆ ನಾನು ಊರು ಖಾಲಿ ಮಾಡಿದ್ದು ಹುಚ್ಚಯ್ಯನಿಗೆ ಆಘಾತತಂದಿತ್ತು. ಭಾವಜೀವಿಯಾದ ಹುಚ್ಚಯ್ಯ ನನ್ನ ಮೇಲಿನ ಪ್ರೀತಿ, ಅಭಿಮಾನ ಮತ್ತು ವರ್ಗ ಮಾಡಿದ ಬಗ್ಗೆ ಸಿಟ್ಟು ಎಲ್ಲವೂ ಸೇರಿ ಒಡೆದುಹೋಗುವಂತಾಗಿದ್ದಾನೆ. ಅದೇ ನೋವು ಸಂಕಟದಲ್ಲಿಯಾವ ಕವಿಗೂ ಕಮ್ಮಿಯಿಲ್ಲದಂಥ ಭಾವಪೂರ್ಣ ಪತ್ರವನ್ನು ಬರೆದಿದ್ದ. ದೇವರು ಒಳ್ಳೆಯದು ಮಾಡಿಯೇಮಾಡುತ್ತಾನೆ ಎಂದು ಪತ್ರದಲ್ಲಿ ಸೂ ಚಿಸಿದ್ದ.

ಆ ಪತ್ರವನ್ನು ವರ್ಗವಾದ ಹೊಸ ಊರಿನಲ್ಲಿ ಓದಿದ ನಾನು ಬಹುಶಃ ಹುಚ್ಚಯ್ಯನಿಗಿಂತ ಭಾವುಕನಾದದ್ದು ನಿಜ. ಬಹಳ ವರ್ಷಗಳ ತನಕ ಆ ಪತ್ರವನ್ನು ಜೋಪಾನವಾಗಿ ಎತ್ತಿಟ್ಟಿದ್ದೆ. ಆದರೆ ನನಗಾದ ಅನೇಕ ವರ್ಗಾವಣೆಗಳು ಮತ್ತು ಲಗೇಜ್ ಸಾಗಾಣಿಕೆಯ ಗಡಿಬಿಡಿಯಲ್ಲಿ ಕಳೆದು ಕೊಂಡುಬಿಟ್ಟೆ. ಅದು ಯಾವ ಮೇಲಧಿಕಾರಿ ಅಥವಾ ಮಂತ್ರಿ ಮಹೋದಯ ಕೊಡುವ ಪ್ರಶಸ್ತಿಗಿಂತ ದೊಡ್ಡ ಪ್ರಶಸ್ತಿಯಾಗಿತ್ತು. 
******



ಡಾ. ಮಿರ್ಜಾ ಬಷೀರ್ ಮನೆಯಲ್ಲಿ


ಸೌಹಾರ್ದ  ಕರ್ನಾಟಕ–ಇಂದು ಸಂವಾದ


‘ಸೌಹಾರ್ದಕರ್ನಾಟಕ’  ಕುರಿತುಡಾ. ಮಿರ್ಜಾ ಬಷೀರ್‌ ಅವರ ಮನೆಯಲ್ಲಿಇದೇ ಭಾನುವಾರ ಸಂಜೆ 5 ಗಂಟೆಗೆ ಸಂವಾದಏರ್ಪಡಿಸಲಾಗಿದೆ. ಇದೇ ಹೆಸರಿನ ಲೇಖನ ಸಂಕಲನದ ಸಂಪಾದಕಚಂದ್ರಕಾಂತ ವಡ್ಡು ಹಾಗೂ ನಮ್ಮೂರಿನ ಹೆಮ್ಮೆಎಸ್. ನಟರಾಜ ಬೂದಾಳು ಕೂಡಾ ಇರುತ್ತಾರೆ. ಬೆಂಗಳೂರಿನಿಂದ ಬರುವಾಗತುಮಕೂರಿನ ಬಿ.ಹೆಚ್‌ ರಸ್ತೆಯಲ್ಲಿ ಮುಸ್ಲಿಮ್ ಹಾಸ್ಟೆಲ್‌ ದಾಟಿ ಎಡಕ್ಕೆ ತಿರುಗಿ ಐನೂರು ಮೀಟರ್ ನಡೆದರೆ  ಬಷೀರ್‌ ಅವರ ಮನೆ ತಲುಪಬಹುದು. ಗಂಗಾಧರಯ್ಯ ಮೆಸ್‌ ಎಲ್ಲಿಅಂತ ಕೇಳಿ, ಕೊಂಡು ಬನ್ನಿ. ಬಷೀರ್‌ ಅವರ ಮೊಬೈಲ್ ಸಂ. 9448104973

ಲೇಖಕರ ಪರಿಚಯ


ವೃತ್ತಿಯಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯ ಬಳಿಕ ತುಮಕೂರಿನಲ್ಲಿ ನೆಲೆಯಾಗಿರುವ ಡಾ. ಮಿರ್ಜಾ ಬಷೀರ್‌ ಕತೆಗಾರರು.  ‘ ಬಟ್ಟೆಯಿಲ್ಲದಊರಿನಲ್ಲಿ’ , ‘ಜಿನ್ನಿ’ ಹಾಗೂ  ಹಾರುವ ಹಕ್ಕಿ ಮತ್ತುಇರುವೆ ಎಂಬ ಮೂರು ಕತಾ ಸಂಕಲನಗಳ ಒಡೆಯರು. ನಾಡಿನಎಲ್ಲ ಮುಖ್ಯ ದಿನ, ವಾರ ಪತ್ರಿಕೆಗಳಲ್ಲಿ ಬರೆಯುವ,  ಹಲವು  ಕತಾ ಸ್ಪರ್ಧೆಯಲ್ಲೂ ಬಹುಮಾನಿತರು. ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಇವರ ಕೆಲವು ಕಥೆಗಳು ಪದವಿ ತರಗತಿಗಳ ಪಠ್ಯಗಳಲ್ಲಿ ಸೇರ್ಪಡೆಯಾಗಿವೆ. ಇವರ ನಾಟಕ ‘ತಬ್ಬಲಿಗಳು’ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ತರಗತಿಗೆ ಪಠ್ಯವಾಗಿದೆ.