ಮುರಾರ್ಜಿದೇಸಾಯಿ ಹಾಗೂ ನನ್ನ ಸ್ವಮೂತ್ರಪಾನದ ಪ್ರಯೋಗ

ಅರವತ್ತರ ಹಿನ್ನೋಟ -ಡಾ.ರಂಗಸ್ವಾಮಿ ಇವರ ಆತ್ಮ ಕಥನಾ

ಮುರಾರ್ಜಿದೇಸಾಯಿ ಹಾಗೂ ನನ್ನ ಸ್ವಮೂತ್ರಪಾನದ ಪ್ರಯೋಗ

60 ರ ಹಿನ್ನೋಟ

ಡಾ.ಹೆಚ್.ವಿ.ರಂಗಸ್ವಾಮಿ

       ರವೀಂದ್ರ ಎಂ.ಪಿ. ವಿಜ್ಞಾನ ವಿಷಯವನ್ನು ಬೋಧಿಸುತ್ತಿದ್ದರು. ಇವರತರಗತಿಯೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ತರಗತಿಯಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ, ಮನಮುಟ್ಟುವಂತೆ ಪೂರಕ ವಿಷಯಗಳೊಂದಿಗೆ ಪಾಠದಲ್ಲಿ ನಮ್ಮನ್ನು ತಲ್ಲೀನಗೊಳಿಸುತ್ತಿದ್ದರು. ವಿಜ್ಞಾನದ ಪ್ರಯೋಗಾಲಯದಉಸ್ತುವಾರಿ ಇವರದ್ದೇ ಇರಲಾಗಿ, ಹೆಚ್ಚಿನ ಸಮಯವನ್ನುಇಲ್ಲಿ ಕಳೆಯುತ್ತಿದ್ದರು. ಪಾಠಕ್ಕೆ ಸರಿಹೊಂದುವ ಪ್ರಯೋಗಗಳನ್ನು ಅದೇ ಸಂದರ್ಭದಲ್ಲಿ ಮಾಡಿತೋರಿಸುತ್ತಿದ್ದರಾಗಿ ನಮಗೆ ಬಾಯಿ ಪಾಠ ಮಾಡಬೇಕಾದಅಗತ್ಯವೇಇರುತ್ತಿರಲಿಲ್ಲ.


ಇವರುಒಂದು ಬಾರಿ ಮೈಸೂರಿನರಾಮಕೃಷ್ಣಾಶ್ರಮಕ್ಕೆತರಬೇತಿಕಾರ್ಯಾಗಾರಕ್ಕೆ ಹೋಗಿ ಬಂದವರು ನಮಗೆ ಅಲ್ಲಿನ ಶಿಸ್ತು ಮತು ವಿಶೇಷವಾಗಿ ಶೌಚಾಲಯಗಳನ್ನು ವಿದ್ಯಾರ್ಥಿಗಳೇ ಹೇಗೆ ಸ್ವಚ್ಚಗೊಳಿಸಿ ಶುಭ್ರವಾಗಿ ಇಟ್ಟುಕೊಳ್ಳುತ್ತಾರೆಂಬ ಬಗ್ಗೆ ವಿವರಿಸಿದರು. ಇದನ್ನು ನಮಗೆ ಮನವರಿಕೆ ಮಾಡಿಕೊಡಲುಒಂದು ಬಾರಿ ಪ್ರವಾಸದ ಸಂದರ್ಭದಲ್ಲಿಅಲ್ಲಿಗೇಕರೆದುಕೊಂಡು ಹೋಗಿ ತೋರಿಸಿದರಾಗಿ ನಿಜಕ್ಕೂಆಶ್ಚರ್ಯವಾಗುವಷ್ಟು ಸ್ವಚ್ಚತೆಯನ್ನು ಕಾಯ್ದುಕೊಳ್ಳಲಾಗಿತ್ತು. ಅದುವರೆಗೂ ನಮಗೆ ಶೌಚಾಲಯಗಳೆಂದರೆ ಸ್ವಚ್ಚವಾಗಿಇಡಬೇಕಾದವುಅನ್ನುವಕಲ್ಪನೆಇರಲಿಲ್ಲ. ಅವು ಹೇಗಿದ್ದರೂ ಸರಿಅನ್ನುವ ಉದಾಸೀನತೆ ಇತ್ತು. 


 ಈಗಲೂ ನಮ್ಮಜನರಲ್ಲಿ ಶೌಚಾಲಯಗಳನ್ನು ಶುಚಿಯಾಗಿ ಇಟ್ಟುಕೊಳ್ಳುವ ಮನೋಭಾವದಲ್ಲಿಅಂತಾ ಬದಲಾವಣೆಆಗಿಲ್ಲದಿರುವುದನ್ನುಕಾಣಬಹುದಾಗಿದೆ. ಶೌಚಾಲಯಗಳನ್ನು ನಾವೇ ಸ್ವಚ್ಚಗೊಳಿಸಬೇಕೆಂಬ ಭಾವನೆ ಬಲಗೊಳ್ಳುವವರೆಗೂ ಬಹುಶ: ಇದು ಸಾಧ್ಯವಿಲ್ಲ. ನಮ್ಮವೇ ಶೌಚಾಲಯಗಳನ್ನೂ ಬೇರೊಬ್ಬರು ಸ್ವಚ್ಚಗೊಳಿಸಬೇಕೆಂದೇ ಬಹುತೇಕರು ಬಯಸುತ್ತಾರೆ. ಹಳ್ಳಿಗಾಡಿನ ಬಹಳ ಜನಇತ್ತೀಚೆಗೆ ಸ್ವಲ್ಪ ಸುಧಾರಿಸಿರುವರಾದರೂ, ಶೌಚಾಲಯಗಳು ಮನೆಯ ಹೊರಗೆಇರಬೇಕೆಂದು ಬಯಸುತ್ತಾರೆ.


ರವೀಂದ್ರರವರು ರಾಮಕೃಷ್ಣಾಶ್ರಮದಿಂದ ಯೋಗದ ವಿಷಯದಲ್ಲಿ ತರಬೇತಿ ಪಡೆದುಕೊಂಡು ಬಂದವರು ನಮ್ಮನ್ನೆಲ್ಲಾ ಸೇರಿಸಿ ಯೋಗದ ಬಗ್ಗೆ ತಿಳಿಸಿ ಯೋಗಾಸನಗಳನ್ನು ನಮಗೆ ಕಲಿಸಲು ಶಾಲೆ ಬಿಟ್ಟಾದ ಮೇಲೆ ಒಟ್ಟು ಸೇರಿಸುತ್ತಿದ್ದರು. ಹಾಗಾಗಿ ರವೀಂದ್ರರು ಬರೀ ವಿಜ್ಙಾನದ ವಿಷಯದಲ್ಲಿ ಆಸಕ್ತಿ ಮೂಡಿಸಿದ್ದಷ್ಟೇ ಅಲ್ಲ, ನನ್ನಯೋಗ ಗುರುಗಳೂ ಹೌದು. ಅಂದಿನಿಂದ ಇಂದಿನವರೆಗೂ ನಾನು ಅದನ್ನು ಉತ್ತಮಪಡಿಸಿಕೊಳ್ಳುತ್ತಾ ಮುಂದುವರೆಸಿಕೊಂಡು ಬಂದಿದ್ದೇನೆ. ಬಿ.ಕೆ.ಎಸ್. ಅಯ್ಯಂಗಾರರಯೋಗದ ಭಂಗಿಗಳಿದ್ದ ಪುಸ್ತಕವನ್ನುತಂದು ತೋರಿಸಿ ಆಸಕ್ತಿ ಮೂಡಿಸುತ್ತಿದ್ದರು. 


  ನಮಗೆ ಲಂಕೇಶ್ ಪತ್ರಿಕೆಯನ್ನು ಪರಿಚಯಿದ್ದೇ ಈ ರವೀಂದ್ರರವರು. ಅವರು ತರಗತಿಗೇ ಲಂಕೇಶ್ ಪತ್ರಿಕೆಯನ್ನು ತಂದು ಆಸಕ್ತಿಕರ ವಿಚಾರಗಳನ್ನು ನಮಗೆ ತಿಳಿಸುತ್ತಿದ್ದರಾಗಿ ನಾವೂ ಲೈಬ್ರರಿಯಲ್ಲಿ ಪ್ರತಿ ಮಂಗಳವಾರ ಈ ಪತ್ರಿಕೆಯನ್ನುಕಾಯುತ್ತಿದ್ದೆವು. ಲಂಚಕೋರರನ್ನೆಲ್ಲಾ ಈ ಪತ್ರಿಕೆಯಲ್ಲಿ ಹೇಗೆ ಬಯಲುಗೊಳಿಸುತ್ತಾರೆಂದು ತಿಳಿಸಿ, ಗಾರ್ದಭ ನಗರಿ ಕಾಲಂ ಅನ್ನು ಪರಿಚಯಿಸಿದರು. ಈಗ್ಗೆ ಮೂರ್ನಾಲ್ಕು ವರ್ಷಗಳ ಹಿಂದೆ ಸಿದ್ಧಗಂಗಾ ಮಠಕ್ಕೆಕಾರ್ಯನಿಮಿತ್ತ ಬಂದವರು ಮನೆಗೆ ಬಂದು ಹೋದರು. ಈಗಲೂ ಉತ್ತಮಆರೋಗ್ಯವನ್ನುಕಾಯ್ದುಕೊಂಡಿದ್ದುಅದೇ ನವಿರಾದ ಹಾಸ್ಯಭರಿತ ಮಾತುಗಾರಿಕೆ. 


ಡಾ. ಶಿವಕುಮಾರರು ಕನ್ನಡ ಮಾಸ್ತರು. ಎಂಎ ಪದವೀಧರರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಉಳ್ಳವರಾಗಿದ್ದವರು. ಶಿಷ್ಟ ಸಾಹಿತ್ಯವಷ್ಟೆಅಲ್ಲ, ಬಂಡಾಯ ಮತ್ತುದಲಿತ ಸಾಹಿತ್ಯ ಪ್ರಾಕಾರಗಳ ಬಗ್ಗೆಯೂ ನಮಗೆಲ್ಲಾ ತಿಳಿಸುತ್ತಿದ್ದರು. ನಮಗೆ ಆಗಲೇ ಬರಗೂರು ರಾಮಚಂದ್ರಪ್ಪ, ಪೂರ್ಣಚಂದ್ರ ತೇಜಸ್ವಿ ಮತ್ತು ಸಿದ್ದಲಿಂಗಯ್ಯನವರ ಬಗ್ಗೆ ಇವರು ತಿಳಿಸಿದ್ದರು. ಹಾಗಾಗಿ ನಾವು ಯಾವುದೇ ಸಾಹಿತಿಗಳ ಸಭೆ ಸಮಾರಂಭಗಳಿದ್ದರೆ ಕುತೂಹಲದಿಂದ ಹಾಜರಾಗುತ್ತಿದ್ದೆವು. ಅವರಲ್ಲಿದ್ದಪುಸ್ತಕಗಳನ್ನು ನನಗೆ ಓದಲುಕೊಟ್ಟು ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದರು. ನನ್ನಕುತೂಹಲ ಮತ್ತು ಪ್ರತಿಭೆಯನ್ನು ಗುರುತಿಸಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿದ್ದರಲ್ಲದೆ ಅದಕ್ಕೆ ಸಂಬಂಧಪಟ್ಟದ್ದನ್ನು ಓದಲು ಒದಗಿಸುತ್ತಿದ್ದರು. ಈ ಸಂದರ್ಭದಿಂದ ನಾನು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡೆನಾಗಿ, ಕತೆ, ಕಾದಂಬರಿಗಳನ್ನು ಓದುವುದನ್ನು ರೂಢಿಸಿಕೊಂಡೆ. ವೇದಿಕೆಯ ಮೇಲೆ ನಿಂತು ಭಾಷಣ ಮಾಡುವಧೈರ್ಯವನ್ನು ಗಳಿಸಿಕೊಂಡದ್ದಾಯ್ತು. ಸಭೆ ಸಮಾರಂಭಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆ.


ಇವರು ಅದೆಷ್ಟು ಭಾವುಕ ಜೀವಿಯೆಂದರೆ ಕನ್ನಡದ ಕವಿಗಳೊ, ಲೇಖಕರೋ ತೀರಿಕೊಂಡರೆ ನಮ್ಮ ಶಾಲಾ ಪ್ರಾರ್ಥನೆಯ ಸಂದರ್ಭದಲ್ಲಿಅವರ ಬಗ್ಗೆ ವಿವರಿಸಿ ಬಿಕ್ಕಿ ಬಿಕ್ಕಿಅತ್ತುಬಿಡುತ್ತಿದ್ದರು. ಸಾಹಿತ್ಯ ವಲಯವನ್ನೆಲ್ಲಾತನ್ನಕುಟುಂಬವೆಂದೇ ಭಾವಿಸುತ್ತಿದ್ದರು.


    ಮುರಳೀಧರ ಶೆಣೈ ಮಾಸ್ತರು, ಅದ್ಭುತವಾದ ಗಣಿತ ಮಾಸ್ತರರು. ಮಾತುಕಡಿಮೆ. ಬೋರ್ಡಿನಲ್ಲಿ ಹಂತ ಹಂತವಾಗಿಗಣಿತವನ್ ನುದುಂಡಾದ ಅಕ್ಷರಗಳಲ್ಲಿ ಕರಾವಳಿ ಸೊಗಡಿನ ಭಾಷೆಯಲ್ಲಿ ಕೆಲವೇ ಪದಗಳಲ್ಲಿ ವಿವರಿಸುತ್ತಾ ಹೋದರೆ, ಗಣಿತಇಷ್ಟು ಸುಲಭ ಮತ್ತು ಸ್ವಾರಸ್ಯಕರವೇ ಅನ್ನಿಸಿಬಿಡುತ್ತಿತ್ತು. ತೆಳು ಹಾಸ್ಯ ಪ್ರಜ್ಞೆಯ ವ್ಯಕ್ತಿ. ನಮ್ಮ ಶಾಲೆಯ ಶಿಕ್ಷಕರುಗಳಿಗಾಗಿಯೇ ಹೇಮಾವತಿ ಉಗಮ ಸ್ಥಾನಕ್ಕೆ ಮುಂದುವರೆಯುವಗುಡ್ಡದ ಭಾಗದಲ್ಲಿ ಹೊಸದಾಗಿ ಮನೆಗಳನ್ನು ನಿರ್ಮಿಸಲಾಯ್ತು. ಈ ಮನೆಗಳ ಸಾಲಿನಲ್ಲಿ ಮೊದಲನೆ ಮನೆ ಇವರದ್ದೆ. 


    ಇವರು ಆಗಾಗ ಸ್ವಮೂತ್ರಪಾನದ ಬಗ್ಗೆ ಮಾತನಾಡುತ್ತಾ ಅದರ ಉಪಯೋಗಗಳನ್ನು ತರಗತಿಯಲ್ಲಿ ನಮಗೆ ಹೇಳಿದ್ದುದು ನೆನಪು. ಒಂದು ಬಾರಿ ನಾನು ಮತ್ತು ಚನ್ನಕೇಶವಅನ್ನುವ ನಮ್ಮಿಬ್ಬರನ್ನುಅವರ ಸ್ವಂತ ಊರಿಗೆ ಹೋದಾಗ ಅವರ ಮನೆಯಲ್ಲಿ ಇದ್ದುಕೊಂಡು, ಅಲ್ಲೇ ಓದಿಕೊಳ್ಳಲು ಹೇಳಿದ್ದರು. ಅವರ ಕಪಾಟಿನಲ್ಲಿಕಾಣುವಂತೆ ಇಡಲಾಗಿದ್ದ ಸ್ವಮೂತ್ರಪಾನದ ಪುಸ್ತಕ ನಮ್ಮಕಣ್ಣಿಗೆ ಬಿತ್ತು. ಅದರಲ್ಲಿನ ಸ್ವಮೂತ್ರಪಾನದ ಉಪಯೋಗಗಳನ್ನು ನೋಡಿ ನಾವು ದಂಗಾಗಿಬಿಟ್ಟೆವು. ಮುರಾರ್ಜಿದೇಸಾಯಿ ಸ್ವಮೂತ್ರಪಾನ ಮಾಡುತ್ತಾರೆಂದು ತಿಳಿಸಿದ್ದರಾಗಿ, ನಾವು ಯಾಕೆ ಅವರಂತೆಯೇ ಆಗಬಾರದೆಂದು ಪ್ರಯಾಸಪಟ್ಟಾದರೂ ನಾವು ಸ್ವಲ್ಪ ದಕ್ಕಿಸಿಕೊಂಡೆವು. ಆದರೆ ಈಗ ನನಗೆ ಇದೆಂಥ ಹುಚ್ಚು ಪ್ರಯೋಗ ಅನ್ನಿಸುತ್ತಿದೆ.


 ಈ ಶೆಣೈರವರ ಮನೆ ಆ ಸಾಲಿನಲ್ಲಿ ಮೊದಲನೆಯದೂ ಇರಲಾಗಿ, ಗುಡ್ಡದ ಭಾಗವೂ ಆಗಿರಲಾಗಿ ಮಳೆ ಗಾಳಿ ಶುರುವಾದರೆ ಅಗಾಧ ಶಬ್ದ ಮತ್ತು ಹೆಂಚುಗಳು ಹಾರುವುದು ಸಾಮಾನ್ಯವಾಗಿತ್ತು. ಅವರು ಹೊಸದಾಗಿ ಮದುವೆಯಾಗಿ ತಮ್ಮ ಶ್ರೀಮತಿಯೊಂದಿಗೆ ಈ ಮನೆ ಹೊಕ್ಕಿದ್ದರು. ಈ ರೀತಿ ಪ್ರಸಂಗವಾದ ಮಾರನೆ ದಿನ ಗಣಿತದ ಪಾಠದ ಸಂದರ್ಭದಲ್ಲಿ ಅವರ ಹಿಂದಿನ ದಿನದ ಅನುಭವಗಳು ತೆರೆದುಕೊಳ್ಳುತ್ತಿದ್ದವು. “ನಮ್ಮ ಮನೆ ಎಂಥ ಭದ್ರ ಉಂಟುಗೊತ್ತಾ? ಸಬ್ಬಲ್ಲು ತೆಗೆದುಕೊಂಡುಗೋಡೆಗೆ ಜೋರು ಬಡಿದರೂ ಒಂದು ಕಚ್ಚು ಬೀಳುವುದಿಲ್ಲ. ಅಷ್ಟು ಭದ್ರ ಉಂಟು. ಯಾರೋ ಫಾರಿನ್‌ ಎಂಜಿನಿಯರ್ ಪ್ಲಾನು ಮಾಡಿದ್ದಿರಬೇಕು. ನಮ್ಮ ಎಂಜಿನಿಯರ್‌ಗಳಿಂದ ಇಂಥದ್ದೆಲ್ಲಾ ಸಾಧ್ಯ ಉಂಟಾ? ಇವರಿಗೆಎಂಥ ಗೊತ್ತು ಬೊಜ್ಜ” ಅಂತ ಶುರುವಾದರೆ ಅರ್ಧ ಭಾಗ ಪೀರಿಯಡ್‌ ಇದರಲ್ಲೇ ಮುಕ್ತಾಯವಾಗುತ್ತಿತ್ತು. 


 ವೀರಪ್ಪಯ್ಯ ಭೌತಶಾಸ್ತ್ರ ಬೋಧಿಸುತ್ತಿದ್ದವರು. ನಮ್ಮ ಬಯಲು ಸೀಮೆಯ ಕಡೆಯವರು. ಇವರ ಭಾಷೆ ಮತ್ತು ರೂಪು ಬಯಲು ಸೀಮೆಯದ್ದೇ ಇರಲಾಗಿ, ಬಯಲು ಸೀಮೆಯಿಂದ ಹೋದ ನಮಗೆ ಒಂದುತರಹಆಪ್ತರಾಗುತ್ತಿದ್ದರು. ಒಂದು ಬಾರಿ ನಾನು ತುಮಕೂರಿನ ಜಿಲ್ಲಾಆಸ್ಪತ್ರೆಯ ಆವರಣದಲ್ಲಿರುವ ಆರೋಗ್ಯತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ಹೆಚ್‌ಐವಿ/ಏಡ್ಸ್ಜಾಗೃತಿಅಭಿಯಾನದ ಭಾಗವಾಗಿ ಮುಖ್ಯ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೆ. ಟೀ, ಕಾಫಿ ಬಿಡುವಿನ ಸಮಯದಲ್ಲಿ ಮುಖ್ಯ ಶಿಕ್ಷಕರೊಬ್ಬರು ನನ್ನ ಸಮೀಪಕ್ಕೆ ಬಂದುಕೊಂಡಜ್ಜಿ ಮುಖ್ಯ ಶಿಕ್ಷಕನೆಂದು ಪರಿಚಯ ಮಾಡಿಕೊಂಡು, “ಇಲ್ಲಿ ನನ್ನ ವಿದ್ಯಾರ್ಥಿ ರಂಗಸ್ವಾಮಿ ಡಾಕ್ಟರ್‌ ಆಗಿದ್ದಾನಂತೆ ನಿಮಗೇನಾದರೂ ಗೊತ್ತಾ?” ಅಂದರು. “ನನ್ನ ಹೆಸರೂ ರಂಗಸ್ವಾಮಿನೇ, ನಿಮಗೆ ರಂಗಸ್ವಾಮಿ ಅನ್ನುವವರು ಎಲ್ಲಿ ವಿದ್ಯಾರ್ಥಿಯಾಗಿದ್ದರು?” ಅಂತ ಕೇಳಿದಾಗ “ ಮೂಡಿಗೆರೆ ತಾಲ್ಲೂಕಿನ ಜಾವಳಿಯಲ್ಲಿ” ಅಂದಾಗ, ನಾನೊಮ್ಮೆಗಮನವಿಟ್ಟು ಅವರ ಮುಖ ನೋಡಿ “ ನೀವು ವೀರಪ್ಪಯ್ಯ ರ‍್ರಾ?” ಅಂದೆ. “ ಹೌದು. ನೀವೇನಾ ನನ್ನ ಸ್ಟುಡೆಂಟ್‌ರಂಗಸ್ವಾಮಿ?” ಅಂತ ಆಶ್ಚರ್ಯಚಕಿತರಾಗಿ ತನ್ನ ಸಹೋದ್ಯೋಗಿ ಶಿಕ್ಷಕರಿಗೆಲ್ಲಾ ಅಭಿಮಾನದಿಂದ ಹೇಳಿಕೊಂಡರು. ಅಲ್ಲದೆಕಾರ್ಯಾಗಾರದ ಮುಕ್ತಾಯದ ನಂತರತುಮಕೂರಿನತನ್ನ ಸಂಬಂಧಿಕರ ಮನೆಗೆಲ್ಲಾ ಕರೆದುಕೊಂಡು ಹೋಗಿ, “ನಾನು ಪಾಠ ಮಾಡಿದ ಶಿಷ್ಯನಿಂದ ಇಂದು ಪಾಠ ಕೇಳುವ ಅದೃಷ್ಟ ಒದಗಿ ಬಂತು“ ಅಂತ ಹೇಳಿಕೊಂಡು ಪರಿಚಯಿಸಿದರು. ನಾನೂ ಈ ರೀತಿಅಪರೂಪದ ಸಂಗಮದಿಂದ ಪುಳಕಿನಾದೆ.


 ಬಾಲಕೃಷ್ಣ ಅನ್ನುವವರು ಇಂಗ್ಲಿಷ್ ಶಿಕ್ಷಕರು. ಆಂಗ್ಲರ ಧಾಟಿಯಲ್ಲಿಯೇ ಇಂಗ್ಲಿಷ್ ಮಾತನಾಡುವಷ್ಟು ಭಾಷಾ ಶೈಲಿ ರೂಢಿಸಿಕೊಂಡಿದ್ದವರು. ಅತ್ಯುತ್ತಮವಾಗಿ ನಮಗೆ ಗ್ರಾಮರ್ ಮತ್ತು ಉಚ್ಚಾರಣೆ ಕಲಿಸಿಕೊಟ್ಟವರು. ನನ್ನ ನಾಸ್ತಿಕವಾದವನ್ನು ಒಪ್ಪದೆ ಬದಲಾಯಿಸಲು ಬಹಳ ಪ್ರಯಾಸಪಟ್ಟರು. ನನ್ನನ್ನು ಎಸ್‌ಎಸ್‌ಎಲ್ ಸಿ ಪಾಸಾದ ನಂತರ ಧರ್ಮಸ್ಥಳದ ಉಜಿರೆ ಕಾಲೇಜಿನಲ್ಲಿ ಸೇರಿಸಲು ಉತ್ಸುಕರಾಗಿದ್ದರು. ಆದರೆ ಕೆಂಚಮಾರಯ್ಯನವರ ಮಾರ್ಗದರ್ಶನದಿಂದ ನಾನು ತುಮಕೂರಿನ ಕಡೆ ಮುಖ ಮಾಡಿದೆ.


 ಸುಲೋಚನಾರವರು ಸಮಾಜ ಪರಿಚಯದ ವಿಷಯ ಬೋಧಿಸುತ್ತಿದ್ದರು. ನನ್ನ ಪ್ರಶ್ನಿಸುವ ಸ್ವಭಾವ ಮತ್ತು ವೈಚಾರಿಕ ಮನೋಭಾವದ ಚರ್ಚೆಗಳನ್ನು ಕೇಳಿಸಿಕೊಂಡು “ಖಂಡಿತವಾದಿ, ಲೋಕವಿರೋಧಿ!” ಅಂತ ಬಿರುದುಕೊಟ್ಟವರು. ಈಗಲೂ ನಿವೃತ್ತಿಯ ನಂತರವೂ ಆಗಾಗ ದೂರವಾಣಿ ಮೂಲಕ ಸಂಪರ್ಕಿಸಿ ಅಭಿಮಾನದಿಂದ ಮಾತನಾಡಿಸುವುದಿದೆ. ಎಂಟರಿಂದ ಹತ್ತನೇ ತರಗತಿವರೆಗೆ ನಾವೆಲ್ಲಾ ಬಿ ಸೆಕ್ಶನ್ ನಲ್ಲಿಯೇ ಮುಂದುವರೆದವು. ಸುಲೋಚನಾರವರು ಬಿ ಸೆಕ್ಸನ್‌ಅಂದರೆ ಬರೀ ಪ್ರಶ್ನೆ ಮಾಡುವವರ ತರಗತಿ ಅಂತ ಶಿಕ್ಷಕರ ಕೊಠಡಿಯಲ್ಲಿಗೊಣಗುತ್ತಾ ಸ್ವಲ್ಪಚೆನ್ನಾಗಿಯೇತಯಾರಾಗಿ ಬರುತ್ತಿದ್ದರು. 


ಗೌರಿಯವರು ಹಿಂದಿ ಭಾಷೆಯನ್ನು ಕಲಿಸುತ್ತಿದ್ದರು. ಇವರು ಬರೆಸಿದ ರೀತಿಯಲ್ಲಿಯೇತಪ್ಪಿಲ್ಲದೆಅಲ್ಪ ವಿರಾಮ ಮತ್ತು ಪೂರ್ಣ ವಿರಾಮಗಳೊಂದಿಗೆ ಉತ್ತರ ಬರೆದವರಿಗೆ ಪೂರ್ತಿ ಅಂಕಗಳನ್ನು ನೀಡುತ್ತಿದ್ದರು. ನಾನು ಆ ರೀತಿ ಬರೆಯದೆ ಪುಸ್ತಕ ಓದಿ ಉತ್ತರಿಸುತ್ತಿದ್ದೆನಾಗಿ ನನಗೆ ಎಂದೂ ಪೂರ್ಣ ಅಂಕಗಳು ಪಡೆಯಲಾಗಲಿಲ್ಲ. ಆಗ ನಾನು ಅವರಿಗೆ ಭಾಷೆಯಉದ್ಧೇಶ ಮಾತನಾಡುವುದುಮತ್ತು ಬರವಣಿಗೆಯಲ್ಲಿ ಸ್ವತಂತ್ರವಾಗಿ ಭಾವನೆಗಳನ್ನು ವ್ಯಕ್ತಪಡಿಸುವಂತದುಅಂತ ಹೇಳಿ, ಅದನ್ನು ನಾನು ಸಾಧಿಸುತ್ತಿದ್ದೇನೆ. ನೀವು ನನ್ನ ಶಿಕ್ಷಕರಾಗಿ ಅದಕ್ಕೆ ಹೆಮ್ಮೆ ಪಡುವುದರ ಬದಲಾಗಿಉರುಹೊಡೆಯಲು ಪ್ರೋತ್ಸಾಹಿಸುತ್ತಿರುವುದು ಸರಿಯಲ್ಲ. ನೀವು ಪೂರ್ತಿ ಮಾರ್ಕ್ಸ್ ಪಡೆದವರಿಂದ ಮಾತನಾಡಿಸಿ ನೋಡೋಣಅಂತ ಹೇಳಿ ಅವರಕೂಡತರಗತಿಯಲ್ಲಿ ಹಿಂದಿಯಲ್ಲಿಯೇ ಮಾತನಾಡುತ್ತಿದ್ದೆ. ಆದರೆ ಪೂರ್ಣ ಅಂಕ ಪಡೆದಯಾರೂ ಹಿಂದಿಯಲ್ಲಿ ಮಾತನಾಡುವಷ್ಟುಧೈರ್ಯತೋರಲಿಲ್ಲ.


ಇನ್ನುತಿಲಕಚಂದ್ರಕ್ರಾಫ್ಟ್ಟೀಚರ್‌ಆದರೆ, ಸುರೇಂದ್ರನಾಥ್‌ಅನ್ನುವವರು ಪಿಟಿ ಟೀಚರ್. ವಿದ್ಯಾರ್ಥಿಗಳಿಂದಲೇ ಶಾಲೆಯ ಸುತ್ತಾ ಉತ್ತಮ ಕೈ ತೋಟವನ್ನು ತಿಲಕ್‌ಚಂದ್ರ ಮಾಡಿಸಿದ್ದರು. ಸುರೇಂದ್ರನಾಥ್‌ಆಟದ ಪೀರಿಯಡ್‌ ಅನ್ನು ಎಂದೂ ವ್ಯರ್ಥ ಮಾಡಿದ್ದೆ ಇಲ್ಲ. ಆದರೆ ಕ್ರಿಕೆಟ್ ಮತ್ತು ಫುಟ್ ಬಾಲ್ ಆಟಗಳಿಗೆ ಹೆಚ್ಚಿನ ಪ್ರ‍್ರಾಧಾನ್ಯತೆ ನೀಡುತ್ತಿದ್ದರು.


 ಪುಟ್ಟಯ್ಯ ಮತ್ತು ಜಯರಾಮ್‌ಅನ್ನುವವರು ಶಾಲೆಯಅಟೆಂಡರ್ ಗಳು ಇವರಿಗೆ ನನ್ನ ಬಗ್ಗೆ ವಿಶೇಷವಾದ ಪ್ರೀತಿ. ಪುಟ್ಟಯ್ಯದಲಿತ ಸಂಘರ್ಷ ಸಮಿತಿ ಸದಸ್ಯರಾಗಿದ್ದವರು. ಯಾರೋ ಆಗ ನಮ್ಮ ಶಾಲೆಯಲ್ಲಿ ಆರ್‌ಎಸ್‌ಎಸ್ ಮೂಲದವರು ಸ್ವಲ್ಪ ದಿನ ಡ್ರಿಲ್ ಮಾಡಿಸಲು ಬರುತ್ತಿದ್ದರು. ಅದನ್ನು ನಯವಾಗಿ ವಿರೋಧಿಸಿ ನಮಗೆಲ್ಲಾ“ ಇವರು ಮಂಕುಬೂದಿ ಎರಚುವವರು. ಇವರಜೊತೆ ಹೋದರೆಕೆಟ್ಟು ಹೋಗುವುದುಂಟು” ಅಂತ ನಮ್ಮನ್ನು ಎಚ್ಚರಿಸಿದವರು.