ಬಜೆಟ್‌ ಮುಖ್ಯಾಂಶ-ತುಮಕೂರಿನ ನಾಗರೀಕರ , ನಾಯಕರುಗಳ ಅಭಿಪ್ರಾಯ

budget-high-lights-tumakuru

ಬಜೆಟ್‌ ಮುಖ್ಯಾಂಶ-ತುಮಕೂರಿನ ನಾಗರೀಕರ , ನಾಯಕರುಗಳ ಅಭಿಪ್ರಾಯ

 
ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ


ಪ್ರಾಥಮಿಕದಿಂದ ಉನ್ನತ ಶಿಕ್ಷಣಕ್ಕೆ ಹಣ ಮೀಸಲಿಟ್ಟಿದ್ದು ಶಿಕ್ಷಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. 50 ಕನಕದಾಸ ವಿದ್ಯಾರ್ಥಿ ನಿಲಯಕ್ಕೆ 165 ಕೋಟಿ, ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ 500 ಕೋಟಿ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳ ಪೀಠೋಪಕರಣಕ್ಕೆ 100 ಕೋಟಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ `ಮುಖ್ಯಮಂತ್ರಿ ಮಾರ್ಗದರ್ಶಿನಿ ಆನ್‌ಲೈನ್’ ವೇದಿಕೆಯ ಸ್ಥಾಪನೆ, ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ರಾಜ್ಯದಲ್ಲಿನ 7 ಇಂಜಿನಿಯರಿAಗ್ ಕಾಲೇಜುಗಳ ಉನ್ನತೀಕರಣ, ಏಳು ವಿನೂತನ ಮಾದರಿಯ ವಿಶ್ವವಿದ್ಯಾನಿಲಯಗಳ ಸ್ಥಾಪನೆ, ರಾಮನಗರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ಕ್ಯಾಂಪಸ್ ಅಭಿವೃದ್ಧಿಗೆ 600 ಕೋಟಿ, ತುಮಕೂರಿನ `ಟ್ರಾಮಾ ಕೇರ್ ಸೆಂಟರ್’ ಸ್ಥಾಪನೆಗೆ ಈ ವರ್ಷವೇ 10 ಕೋಟಿ ಒದಗಿಸುವುದು ಸಂತೋಷದಾಯಕ. ಒಟ್ಟಾರೆಯಾಗಿ ಎಲ್ಲಾ ವರ್ಗದವರನ್ನು ಸಮಾಧಾನಪಡಿಸುವ ಮತ್ತು ವಾಸ್ತವಿಕ ಉತ್ತಮ ಬಜೆಟ್ ಇದಾಗಿದೆ.
- ಸುನೀಲ್, ಸಿಂಡಿಕೇಟ್ ಸದಸ್ಯರು, 
- ತುಮಕೂರು ವಿವಿ


ಹುಸಿಯಾದ ಜಿಲ್ಲೆಯ ಜನರ ನಿರೀಕ್ಷೆ : ಡಾ. ರಫೀಕ್

ತುಮಕೂರು: ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಮೂಗಿಗೆ ತುಪ್ಪ ಸವರಿದಂತಿದೆ. ಯಾವುದೇ ಒಂದು ಪ್ರಮುಖ ಯೋಜನೆ ಘೋಷಣೆ ಮಾಡದೆ ನಿರಾಸೆಯುಂಟು ಮಾಡಿದೆ. ಬಡವರು ಮತ್ತು ಮಧ್ಯವi ವರ್ಗದವರಿಗೆ ಅನುಕೂಲವಾಗುವ ಯಾವುದೇ ಯೋಜನೆ ಇಲ್ಲದಿರುವುದು ನಿರಾಸೆ ಮೂಡಿಸಿದೆ ಎಂದು ಮಾಜಿ ಶಾಸಕ ಡಾ. ರಫೀಕ್ ಅಹಮದ್ ಟೀಕಿಸಿದ್ದಾರೆ.


ಅನ್ನಭಾಗ್ಯಕ್ಕೆ ಕೇವಲ ಒಂದು ಕೆ.ಜಿ. ಅಕ್ಕಿ ಹೆಚ್ಚುವರಿಯಾಗಿ ನೀಡಿರುವುದೇ ಹೆಚ್ಚು. ಎಲ್ಲಾ ಸಮುದಾಯದ ಜನರಿಗೆ, ವಿಶೇಷವಾಗಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪ ಸಂಖ್ಯಾತರಿಗೆ ತಲುಪುವ ಯಾವುದೇ ಪ್ರಮುಖ ಯೋಜನೆ ಇಲ್ಲದಿರುವುದು ಬಜೆಟ್ ತೂಕವಿಲ್ಲದ ತಕ್ಕಡಿಯಂತಾಗಿದೆ ಎಂದಿದ್ದಾರೆ.


ಶಿವಕುಮಾರ ಸ್ವಾಮಿ ಸ್ಮೃತಿವನ ನಿರ್ಮಾಣ ಸ್ವಾಗತಾರ್ಹ. ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಗೆ ಅಬ್ದುಲ್ ಕಲಾಂ ಹೆಸರಿನಡಿ ಹೆಚ್ಚಿನ ನೆರವು ನೀಡುವ ಯೋಜನೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ತುಮಕೂರಿನ ಯಾವುದಾದರೂ ಶಾಲೆಯನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.


ತುಮಕೂರು ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ತುಮಕೂರಿನಲ್ಲಿ ಈ ಹಿಂದೆ ಟ್ರಾಮಾ ಸೆಂಟರ್ ಘೋಷಣೆಯಾಗಿದ್ದು ಕಾರ್ಯ ಈಗಾಗಲೇ ಅಂತಿಮ ಹಂತದಲ್ಲಿದೆ. ಈ ಬಜೆಟ್‌ನಲ್ಲಿ 20 ಕೋಟಿ ಮತ್ತೆ ಬಿಡುಗಡೆಯಾಗಿದ್ದು ಗೊಂದಲಕಾರಿಯಾಗಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪಿ.ಜಿ. ಸೆಂಟರ್ ಬದಲಿಗೆ ತುಮಕೂರು ನಗರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂದಿರುವ ಡಾ. ರಫೀಕ್ ಅಹಮದ್,  ಬಜೆಟ್ ಮೇಲಿನ ಚರ್ಚೆ ವೇಳೆ ಮರುಪರಿಶೀಲಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

 

ಅಭಿನಂದನೀಯ ಬಜೆಟ್


ರಾಜ್ಯದ ಜನತೆಗೆ 2 ಕೋಟಿ 65 ಲಕ್ಷ ರೂ.ಗಳ ಬೃಹತ್ ಬಜೆಟನ್ನು ನೀಡಿರುವುದು ಅಭಿನಂದನೀಯ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಉತ್ತೇಜಿಸಲು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಮಿನಿ ಆಹಾರ ಪಾರ್ಕ್ ಮಾಡಿರುವುದು ರೈತ ಸಮುದಾಯಕ್ಕೆ, ವರ್ತಕ ಸಮುದಾಯಕ್ಕೆ ಹರ್ಷದಾಯಕ. ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ರೂ.500 ಕೋಟಿ ವೆಚ್ಚದ ರೈತ ಶಕ್ತಿ ಯೋಜನೆ ಅನುಷ್ಠಾನಗೊಳಿಸಿರುವುದು ಸಂತೋಷದ ವಿಷಯ. ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಿರುವುದು ಅನುಕೂಲಕರ. ತುಮಕೂರು ಜಿಲ್ಲೆಯನ್ನು ವಿಶೇಷ ಹೂಡಿಕೆ ಪ್ರದೇಶ ಎಂದು ಘೋಷಿಸಿರುವುದು ಸ್ವಾಗತಾರ್ಹ.

ಟಿ.ಟಿ. ಸತ್ಯನಾರಾಯಣ, ಕಾರ್ಯದರ್ಶಿ,
ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ


ಕೃಷಿ, ರೈತರಿಗೆ ಅನುಕೂಲಕರ


2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ರೂ. 33700 ಕೋಟಿ ಹಾಗೂ ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ, ಕೆರೆಗಳ ಅಭಿವೃದ್ದಿಗೆ ರೂ. 500 ಕೋಟಿ ನೀಡಿರುವುದು ಸಂತೋಷ. ರೇಷ್ಮೆ ಕೃಷಿಗೆ ಉತ್ತೇಜನ ಮತ್ತು ಕೃಷಿ ಸಮೃದ್ ಬ್ಯಾಂಕ್‌ನಿAದ ರೈತರಿಗೆ ಅನುಕೂಲ. 3 ಲಕ್ಷ ಹೊಸ ರೈತರಿಗೆ ಕೃಷಿ ಸಾಲ ಹಾಗೂ ಮಕ್ಕಳ ಕೃಷಿ ವಿದ್ಯಾಭ್ಯಾಸಕ್ಕೆ 2 ಕೃಷಿ ಕಾಲೇಜು ಸ್ಥಾಪನೆಗೆ ಆದ್ಯತೆ. ಒಟ್ಟಾರೆಯಾಗಿ ಈ ಬಜೆಟ್‌ನಲ್ಲಿ ಮೀನುಗಾರಿಕೆ ಹೈನುಗಾರಿಕೆ, ಕುರಿ ಸಾಕಣೆ, ರೇಷ್ಮೆ ಸಾಕಣೆ, ನೀರಾವರಿ, ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ಕೃಷಿಕ್ಷೇತ್ರ ಮತ್ತು ರೈತರಿಗೆ ಅನುಕೂಲಕರ ಬಜೆಟ್ ಆಗಿದೆ.

ಕೆ.ಎಸ್.ಚನ್ನಬಬಸವಣ್ಣ,
ಅಧ್ಯಕ್ಷರು,
ಕೃಷಿ ಪತ್ತಿನ ಸಹಕಾರ ಸಂಘ, ತುಮಕೂರು

ವಿಶ್ವಾಸವಿಲ್ಲದ ಬಜೆಟ್

ಬಜೆಟ್ ಮೇಲ್ನೋಟಕ್ಕೆ ಅಭಿವೃದ್ಧಿಪರ, ಪ್ರಗತಿಪರ, ಜನಪರವಾದ ತ್ರಿಬಲ್ ಡೆಕ್ಕರ್ ಬಜೆಟ್‌ನಂತೆ ಕಾಣುತ್ತದೆ. ಎಲ್ಲ ಕ್ಷೇತ್ರಗಳನ್ನು ಗಣನೀಯವಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದೇವೆನ್ನುವ ಆರ್ಥಿಕ ಅಭಿವೃದ್ಧಿಯ ನೀತಿ ಪಾಠ ಹೇಳಲೊರಟ, ವಿಶ್ವಾಸವಿಲ್ಲದ, ಎಲ್ಲವನ್ನೂ ಒಳಗೊಂಡ ಏನೂ ಇಲ್ಲದ ಬಜೆಟ್ ಇದು. ಹೊಸ ಹೊಸ ಯೋಜನೆಗಳು ರೂಪ ತಾಳಿವೆಯಾದರೂ, ಅವು ಯಶಸ್ವಿಯಾಗುವ ಯಾವುದೇ ದೃಢ ನಿಶ್ಚಯವಿಲ್ಲ. ವಿವಿಧ ಕ್ಷೇತ್ರವಾರು ಅಭಿವೃದ್ಧಿಯ ನೆಪದಲ್ಲಿ ಮುನ್ನೋಟದ ರಾಜಕೀಯ ಲೆಕ್ಕಚಾರವೂ ಅಡಗಿದಂತಿದ್ದು, ಅಭಿವೃದ್ಧಿಯ ಪಥಕ್ಕೆ ಈ ಬಜೆಟ್ ಕೊಡುಗೆ ಶೂನ್ಯ.

ಗಂಗಾಧರ್ ನಾಗರಾಜ್, 
ಪತ್ರಿಕೋದ್ಯಮ ವಿದ್ಯಾರ್ಥಿ

ಕೃಷಿ, ನೀರಾವರಿಗೆ ಆದ್ಯತೆ: ಸ್ವಾಗತಾರ್ಹ


ರಾಜ್ಯ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಪರಿಗಣಿಸಿ ಕೃಷಿಗೆ ರೂ.33700 ಕೋಟಿ, ಎತ್ತ್ತಿನಹೊಳೆ ಯೋಜನೆಗೆ ರೂ. 3000 ಕೋಟಿ ನೀಡಿರುವುದು ಸಂತೋಷದ ಸಂಗತಿ. ಡಿಜಿಟಲ್ ಗ್ರಂಥಾಲಯದಿAದ ಪರಿಕ್ಷಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು. ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ, ಬ್ಯಾಂಕಿAಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ ಸ್ವಾಗತಾರ್ಹ. ರಾಜ್ಯದ ಕೃಷಿ, ಕೈಗಾರಿಕೆ, ಹಾಗೂ ಸೇವಾ ವಲಯಗಳಿಗೂ ಆದ್ಯತೆ ನೀಡಿದ್ದಾರೆ. ಜೊತೆಗೆ ಮಹಿಳೆಯರ ಸಬಲೀಕರಣ, ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ತುಮಕೂರಿಗೆ ನಮ್ಮ ಮೇಟ್ರೋ ಯೋಜನೆಯನ್ನು ನಿರೀಕ್ಷಿಸಿದ್ದೆವು, ಅದು ಹುಸಿಯಾಗಿದೆ.

ಎಂ.ಎನ್. ಲೋಕೇಶ್, ಅಧ್ಯಕ್ಷರು
ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಮುಖ್ಯಾಂಶಗಳು :


ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು!?


• ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲು ಅನುವಾಗುವಂತೆ 200ಕ್ಕೂ ಹೆಚ್ಚು ಹಾಸಿಗೆಗಳ ಸಾಮಥ್ರ‍್ಯವಿರುವ ಸರ್ಕಾರಿ ಆಸ್ಪತ್ರೆಗಳನ್ನು ಬೋಧನಾ ಆಸ್ಪತ್ರೆಗಳಾಗಿ ಪರಿವರ್ತನೆ; ಈ ವರ್ಷ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಪ್ರಾರಂಭ. • ತುಮಕೂರಿನÀಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆ; 2022-23ರಲ್ಲಿ 10 ಕೋಟಿ ರೂ. ಅನುದಾನ.

ಆಯವ್ಯಯ ಘೋಷಣೆ: ಮುಖ್ಯಾಂಶಗಳು


• ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮಾರ್ಗಸೂಚಿಯಂತೆ ಎಲ್ಲ ಹಂತಗಳಲ್ಲಿ ನೂತನ ಪಠ್ಯಕ್ರಮ ರಚನೆ.


• ಹೋಬಳಿ ಮಟ್ಟದಲ್ಲಿ "ಮಾದರಿ ಶಾಲೆ"ಗಳು.• ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. 


• ಸರ್ಕಾರಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣಕ್ಕೆ 100 ಕೋಟಿ ರೂ.

169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್-ಇನ್-ಎ-ಕಿಟ್. *ರಾಜ್ಯದ ಏಳು ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳ ಉನ್ನತೀಕರಣ; ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ.


• ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆ.
ದುರ್ಬಲ ವರ್ಗಗಳ ಸಬಲೀಕರಣ


• ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ 800 ಕೋಟಿ ರೂ.


• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಿಗಾಗಿ 250 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮರ್ಥ್ಯದ ಬಹುಮಹಡಿಯ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣ.


• ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಯನ್ನು ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಾಗಿ ಮರುನಾಮಕರಣ; ಪದವಿ ಪೂರ್ವ ತರಗತಿ ಪ್ರಾರಂಭ; ಸಿಬಿಎಸ್‌ಇ ಮಾನ್ಯತೆ ಪಡೆಯಲು ಕ್ರಮ. 25 ಕೋಟಿ ರೂ. ಅನುದಾನ.


• ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆ .


• ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಅಡಿಯಲ್ಲಿರುವ ಎಲ್ಲಾ ಅಭಿವೃದ್ಧಿ ನಿಗಮಗಳ ಯೋಜನೆಯಲ್ಲಿ  ಶೇ.25ರಷ್ಟು ಮಹಿಳೆಯರಿಗೆ ಮೀಸಲು.
• ಗಂಗಾ ಕಲ್ಯಾಣ ಯೋಜನೆಯಲ್ಲಿ ಸುಧಾರಣೆ; ಬೋರ್ ವೆಲ್ ಕೊರೆಯಲು ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆ; ವಿದ್ಯುದೀಕರಣ ಶುಲ್ಕ ಸರ್ಕಾರದಿಂದ ಪಾವತಿ. 2022-23ರಲ್ಲಿ ಒಟ್ಟಾರೆ 1,115 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.


• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ನಿಗಮಗಳಡಿ 400 ಕೋಟಿ ರೂ. ಅಭಿವೃದ್ಧಿ ಯೋಜನೆ. ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಬರುವ ಇತರ ಹಿಂದುಳಿದ ಸಮುದಾಯಗಳಿಗೆ 400 ಕೋಟಿ ರೂ. ಯೋಜನೆ


• ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ ರೂ. ಯೋಜನೆ.


• ಮರಾಠಾ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಿಗೆ 50 ಕೋಟಿ ರೂ.


• ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ 50 ಕೋಟಿ ರೂ. ಯೋಜನೆ ಹಾಗೂ ಜೈನ, ಸಿಖ್ ಮತ್ತು ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ. ಯೋಜನೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಹಾಗೂ ಬೆಂಗಳೂರಿನ ಎಲ್ಲ ವಾರ್ಡ್ಗಳಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ಒಟ್ಟು 438 "ನಮ್ಮ ಕ್ಲಿನಿಕ್"ಗಳ ಸ್ಥಾಪನೆ.


300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ. 


• ಬಡ ಹಿರಿಯ ನಾಗರಿಕರಿಗೆ ಯೋಜನೆಯಡಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ಸೌಲಭ್ಯ. 


• ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆ. • ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊAದಿಗೆ 75 ತಾಲ್ಲೂಕು ಆಸ್ಪತ್ರೆಗಳ ಮ್ಯಾಪಿಂಗ್, ತಾಲ್ಲೂಕು ಮಟ್ಟದಲ್ಲಿ ಹೃದಯ ಸಂಬAಧಿ ಚಿಕಿತ್ಸೆ.


• ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆ.


• ಆಯ್ದ 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ನೀಡುವ Iಟಿಜಿusioಟಿ ಅeಟಿಣಡಿe ಗಳನ್ನು ಸ್ಥಾಪಿಸಲಾಗುವುದು.


• ಏಳು ತಾಲ್ಲೂಕು ಆಸ್ಪತ್ರೆಗಳು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ.


• “ಮುಖ್ಯಮಂತ್ರಿ ಆರೋಗ್ಯ ವಾಹಿನಿ” ಯೋಜನೆಯಡಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಬೀದರ್, ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್ ಪ್ರಾರಂಭ.


• ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ.


ಬಡವರಿಗೆ ವೈದ್ಯಕೀಯ ಶಿಕ್ಷಣಕ್ಕೆ ನೆರವು


• ಬಡವರಿಗೆ ವೈದ್ಯಕೀಯ ಶಿಕ್ಷಣ ಅವಕಾಶ ಒದಗಿಸಲು ಅ. ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ. ಆ. ಸರ್ಕಾರಿ ಕೋಟಾದಡಿ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕುಗಳಿAದ ಶೈಕ್ಷಣಿಕ ಸಾಲ ಒದಗಿಸಲು ನೆರವು.


• ಪೌಷ್ಟಿಕ ಕರ್ನಾಟಕÀ ಯೋಜನೆಯಡಿ 93 ಕೋಟಿ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ರಾಜ್ಯದ 14 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ.


• ಬಾಲ್ಯವಿವಾಹ ಹಾಗೂ ಹೆಣ್ಣುಮಕ್ಕಳು ಶಾಲೆಬಿಡುವುದನ್ನು ತಪ್ಪಿಸಿ, ಅಪೌಷ್ಟಿಕತೆ ನಿವಾರಿಸುವ “ಸ್ಫೂರ್ತಿ” ಯೋಜನೆ ರಾಜ್ಯಾದ್ಯಂತ ವಿಸ್ತರಣೆ.

ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ:


• ಆಯ್ದ ಸ್ವ-ಸಹಾಯ ಸಂಘಗಳಿಗೆ ತಲಾ 1.5 ಲಕ್ಷ ರೂ. ನೆರವು, 500 ಕೋಟಿ ರೂ. ಅನುದಾನ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಗುಂಪುಗಳಿಗೆ ವಿಶೇಷ ಆದ್ಯತೆ. 3.9 ಲಕ್ಷ ಮಹಿಳೆಯರಿಗೆ ಅನುಕೂಲ.


• ಮಹಿಳಾ ಸ್ವ-ಸಹಾಯ ಸಂಘಗಳಿಗೆ ವಾಣಿಜ್ಯ ಬ್ಯಾಂಕುಗಳಿAದ ಸಾಲ ಸೌಲಭ್ಯ ಒದಗಿಸಲು ಏಕಗವಾಕ್ಷಿ ಸಾಲ ಸೌಲಭ್ಯ ವ್ಯವಸ್ಥೆ. 


• ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ “ಅಸ್ಮಿತೆ” ಹೆಸರಿನಡಿ ಮಾರಾಟ; ರಾಜ್ಯ ಮಟ್ಟದಲ್ಲಿ ಮಾರಾಟ ಮೇಳ 


• ವೇತನ, ವಹಿವಾಟು, ಉದ್ಯೋಗ ಮತ್ತು ರಫ್ತು ಹೆಚ್ಚಳ ಗುರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿ, ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ, ನವಲಗುಂದದಲ್ಲಿ ಜಮಖಾನಾ, ಚನ್ನಪಟ್ಟಣದಲ್ಲಿ ಆಟಿಕೆ ಹಾಗೂ ಇಳಕಲ್, ಗುಳೇದಗುಡ್ಡ, ಬೆಳಗಾವಿ - ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮುರುನÀಲ್ಲಿ ಸೀರೆ ಮೈಕ್ರೋಕ್ಲಸ್ಟರ್ ಅಭಿವೃದ್ಧಿ.