ಪಾವಗಡ: ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ದಂಡು

ವಿಶೇಷ ವರದಿ  ಪೆಮ್ಮನಹಳ್ಳಿ ರಾಜಕುಮಾರ್

ಪಾವಗಡ: ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ದಂಡು

ಪಾವಗಡ: ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ದಂಡು

ವಿಶೇಷ ವರದಿ 
ಪೆಮ್ಮನಹಳ್ಳಿ ರಾಜಕುಮಾರ್

ಪಾವಗಡ :ಕಲ್ಪತರು ನಾಡುತುಮಕೂರುಜಿಲ್ಲೆಯ ಪಾವಗಡತಾಲ್ಲೂಕಿನವಿಧಾನಸಭಾಚುನಾವಣೆ 2023 ಕ್ಕೆ ಇನ್ನೇನು4-5 ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಚುನಾವಣಾಅಖಾಡಕ್ಕೆ ಇಳಿಯಲು ಸಿದ್ಧತೆ ಆರಂಭಿಸಿವೆ. ಈ ಪಕ್ಷಗಳು ತಮ್ಮಎದುರಾಳಿಗಳ ವಿರುದ್ಧ ರಣತಂತ್ರರೂಪಿಸುವುದರ ಜೊತೆಗೆ ಪಕ್ಷದ ಆಂತರಿಕ ತಿಕ್ಕಾಟಗಳಿಗೂ ಸಹಾ ಮದ್ದು ಅರೆಯುವ ಕಡೆ ಗಮನ ಹರಿಸಬೇಕಾಗಿದೆ.


ತಾಲೂಕಿನಲ್ಲಿ  ವಿಧಾನಸಭಾ ಚುನಾವಣೆಯ ಕಾವು ನಿಧಾನವಾಗಿ ಏರತೊಡಗಿದೆ,  ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಪಾವಗಡದಲ್ಲ್ಲಿಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಪಕ್ಷಗಳ ನೇರ ಹಣಾಹಣಿ ಇದ್ದರೂ  ಈ ಸಲ ಬಿಜೆಪಿ ಸಹಾ ಗೆಲ್ಲುವ ಕುದುರೆಯ ಹುಡುಕಾಟದಲ್ಲಿದೆ.


ತಾಲ್ಲೂಕು 1,35,849 ಹೆಕ್ಟೇರ್ ಭೌಗೋಳಿಕ ಪ್ರದೇಶವಿದ್ದು ಬರಪೀಡಿತ ಪ್ರದೇಶ ಎಂಬ ಹಣ ಪಟ್ಟಿಯನ್ನು ಹೊಂದಿದೆಯಾದರೂ ಈ ಸಲ ವಾಡಿಕೆಗಿಂತ ಹೆಚ್ಚು ಮಳೆಯಾಗಿ ತುಸು ಮಲೆನಾಡ ಲಕ್ಷಣ ಪಡೆದುಕೊಂಡಿದೆ.


1952ರಲ್ಲಿ ನಡೆದ ವಿಧಾನಸಭಾಚುನಾವಣೆಯಲ್ಲಿ ಕೆಂಚಪ್ಪ, 1962ರಲ್ಲಿ ಪಿ ಅಂಜಿನಪ್ಪ 1972ರಲ್ಲಿ ಕೆಆರ್‌ತಿಮ್ಮರಾಯಪ್ಪ ,1978 ರಲ್ಲಿ ನಾಗಪ್ಪ, 1983 ರಲ್ಲಿ ಉಗ್ರ ನರಸಿಂಹಪ್ಪ, 1985 ಮತ್ತು 1994 ರಲ್ಲಿ  ಸೋಮ್ಲಾನಾಯ್ಕ ,2004 ಮತ್ತು 2013ರಲ್ಲಿ ಕೆಎಂ ತಿಮ್ಮರಾಯಪ್ಪ ಹಾಗೂ 1989, 1999. 2008 ಹಾಗೂ 2018ರಲ್ಲಿ ವೆಂಕಟರಮಪ್ಪನವರು ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಸತತವಾಗಿ ಎರಡನೇ ಬಾರಿಗೆ ಯಾರು ಆಯ್ಕೆಯಾಗಿಲ್ಲ.


ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾದ ವೆಂಕಟರಮಣಪ್ಪನವರ ಪುತ್ರ ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ ಹೆಚ್.ವಿ. ವೆಂಕಟೇಶ್ ಈ ಬಾರಿ ತನಗೆ ಟಿಕೆಟ್‌ ಖಚಿತ ಎಂಬಂತೆ ತಾಲ್ಲೂಕಿನ ಎಲ್ಲಾಕಡೆ ಪ್ರಚಾರ ಆರಂಭಿಸಿದ್ದಾರೆ. ಹಾಲಿ ಶಾಸಕರಾದ ಮಾಜಿ ಸಚಿವ ವೆಂಕಟರಮಣಪ್ಪ ಭಾಗವಹಿಸುವಂತಹ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ  ಹಾಗೂ ಅಪಘಾತಗಳಾದ ಸ್ಥಳಗಳಿಗೆ ಧಾವಿಸಿ ಅವರಿಗೆ ನೆರವಾಗುವುದು, ಅನಾರೋಗ್ಯ ಪೀಡಿತರಿಗೆಧನ ಸಹಾಯ, ಧಾರ್ಮಿಕ ಕಾರ್ಯಕ್ರಮಗಳಿಗೆ ಧನ ಸಹಾಯ ಹೀಗೆ ಸ್ಪಂದಿಸುವ ಮೂಲಕ ತಾಲೂಕಿನಜನರ ವಿಶ್ವಾಸಗಳಿಸುವ ಮೂಲಕ 2013ರಲ್ಲಿ ಜೆಡಿಎಸ್ ಪಕ್ಷದ ಕೆಎಂ ತಿಮ್ಮರಾಯಪ್ಪನವರ ವಿರುದ್ಧಆದ ಸೋಲನ್ನು  ಈ ಬಾರಿಗೆಲ್ಲುವ ಮೂಲಕ ತೀರಿಸಿಕೊಳ್ಳುವ ಹಂಬಲದಲ್ಲಿದ್ದಾರೆ.


ಆದರೆ ಮಾಜಿ ಶಾಸಕ ಸೋಮ್ಲಾನಾಯ್ಕನವರ ಪುತ್ರಿ ಶ್ರೀಮತಿ ಗಾಯತ್ರಿ ಬಾಯಿ, ಮಾಜಿ ಸಂಸದ ಬಿಎನ್‌ಚಂದ್ರಪ್ಪ ,ಜಿಲ್ಲಾ ಪರಿಷತ್ ಸದಸ್ಯರಾದ ಹೆಚ್.ಕೆಂಚಮಾರಯ್ಯ, ಕೋರ್ಟ್ ನರಸಪ್ಪ, ಸಮಾಜ ಸೇವಕ ಹನುಮಯ್ಯನ ಪಾಳ್ಯ ರಾಮಚಂದ್ರಪ್ಪ  ಹಲವು ಮುಖಂಡರು ಕಾಂಗ್ರೆಸ್ ಪಕ್ಷದಟಿಕೆಟ್ ಗಾಗಿ ನಿಗದಿಪಡಿಸಿದ ಶುಲ್ಕದೊಂದಿಗೆ ಕೆಪಿಸಿಸಿ ಕಚೇರಿಯಲ್ಲಿಅರ್ಜಿ  ಸಲ್ಲಿಸಿರುವುದು ಎಚ್. ವಿ. ವೆಂಕಟೇಶ್‌ ಆತಂಕಕ್ಕೆ ಕಾರಣವಾಗಿದೆ. ಆದರೂ ಸಹ  ಶಾಸಕರಾದ ವೆಂಕಟರಮಣಪ್ಪನವರ ಸುಧೀರ್ಘ ರಾಜಕೀಯ ಅನುಭವ ಹಾಗೂ ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಕೊನೆಯ ಕ್ಷಣದಲ್ಲಿ ಟಿಕೆಟ್‌ ದೊರೆಯಬಹುದುಎನ್ನುವ ನಿರೀಕ್ಷೆಯಲ್ಲಿ ಇವರ ಅಭಿಮಾನಿ ಬಳಗವಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೆಂಬುದನ್ನು ತಿಳಿಯಲು ಕಾಯುವುದು ಅನಿವಾರ್ಯವಾಗಿದೆ.


ತಾಲೂಕಿನಲ್ಲಿಜಾತ್ಯಾತೀತ ಜನತಾದಳವು  ತನ್ನದೇ ಆದಂತಹ  ಅಸ್ತಿತ್ವವನ್ನು ಹೊಂದಿದೆ.2004 ಮತ್ತು 2013ರ ವಿಧಾನಸಭಾಚುನಾವಣೆಯಲ್ಲಿಜೆಡಿಎಸ್‌ನಕೆಎಂ ತಿಮ್ಮರಾಯಪ್ಪಗೆದ್ದು ಬಿಗಿದ್ದರು. ಆದರೆ 2018 ರಲ್ಲಿ ನಡೆದಚುನಾವಣೆಯಲ್ಲಿಕಾಂಗ್ರೆಸ್ ಪಕ್ಷದಅಭ್ಯರ್ಥಿಯಾದ ವೆಂಕಟ್ರಮಣಪ್ಪನವರ ವಿರುದ್ಧ ಕೂದಲೆಳೆಯ ಅಂತರದಲ್ಲಿ ಅಂದರೆ 409 ಮಾತುಗಳಿಂದ ಸೋತಿದ್ದರು. ಇದರ ಸೇಡನ್ನು ಈ ಬಾರಿ ತೀರಿಸಿಕೊಳ್ಳುವ ತವಕದಲ್ಲಿರುವ ಕೆಎಂ ತಿಮ್ಮರಾಯಪ್ಪ ನವರಿಗೆ ಸಮಾಜ ಸೇವಕರಾದ ನೇರಳೆಕುಂಟೆ ನಾಗೇಂದ್ರಕುಮಾರ್‌ ಅವರು ಮಗ್ಗಲ ಮುಳ್ಳಾಗಿ ಪರಿಣಮಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ತಾಲೂಕಿನಾದ್ಯಂತ ಸಮಾಜ ಸೇವೆಯಲ್ಲಿತೊಡಗಿರುವ ನೇರಳೆಕುಂಟೆ ನಾಗೇಂದ್ರಕುಮಾರ್‌ ಅವರು ತಾಲ್ಲೂಕಿನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಬಾರಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ತೆರೆ ಮರೆಯಲ್ಲಿ ಪ್ರಯತ್ನ ಮುನ್ನಡೆಸುತ್ತಿರುವುದು ಕೆಎಂ ತಿಮ್ಮರಾಯಪ್ಪನವರಲ್ಲಿ ಆತಂಕಕ್ಕೆಕಾರಣವಾಗಿದೆ. 


ಪಟ್ಟಣದಎಸ್‌ಎಸ್ ಕೆ ಬಯಲುರಂಗ ಮಂದಿರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠರಾದಎಚ್ ಡಿ ದೇವೇಗೌಡರು ಮುಂದಿನ ವಿಧಾನಸಭಾಚುನಾವಣೆಯಲ್ಲಿ  ಕೆಎಂ ತಿಮ್ಮರಾಯಪ್ಪನವರನ್ನುಗೆಲ್ಲಿಸುವ ಮೂಲಕ ಕುಮಾರಸ್ವಾಮಿಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಂದು ಕರೆ ನೀಡಿದ್ದರು. ಅದ್ದರಿಂದ ತಿಮ್ಮರಾಯಪ್ಪನವರಿಗೆ ಟಿಕೆಟ್‌ ದೊರೆಯುವ ಲಕ್ಷಣಗಳು ಗೋಚರಿಸುತ್ತಿದ್ದು ಇವರು ತನ್ನ ಕಾರ್ಯಕರ್ತರ ಜೊತೆಗೂಡಿ ಮದುವೆ ಸಮಾರಂಭಗಳು, ಗೃಹ ಪ್ರವೇಶ ,  ಧಾರ್ಮಿಕ ಕ್ಷೇತ್ರಗಳಿಗೂ,  ಅಂತ್ಯಸಂಸ್ಕಾರ ಹಾಗೂ ತಾಲ್ಲೂಕಿನ ಹಲವು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ  ಪ್ರಚಾರವನ್ನು ಆರಂಭಿಸಿದಂತೆ ಕಂಡುಬರುತ್ತದೆ.


ಕೇಂದ್ರ ಮತ್ತುರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದ್ದು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಬಳಸಿಕೊಂಡು ಈ ಬಾರಿ ಭದ್ರ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ನಾಯಕರಿಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಪಕ್ಷದಲ್ಲಿ ದುಡಿದವರಿಗೆ ಟಿಕೆಟ್‌ ಎನ್ನುವ ಮನೋಭಾವದಿಂದ ಕೃಷ್ಣ ನಾಯಕ್ ಹಾಗೂ ಕೊತ್ತೂರು ಹನುಮಂತರಾಯಪ್ಪ  ಪಕ್ಷದಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.  ಇವರಿಗೆ ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಅವರ ಬೆಂಬಲಿಗ ಶಾಂತಕುಮಾರ್‌ ಅವರು ಅರ್ಜಿ ಸಲ್ಲಿಸಿರುವುದು ಬಿಸಿ ತುಪ್ಪದಂತಾಗಿದೆ. ಇಲ್ಲಿವರೆಗೂ ಬಿಜೆಪಿ ಇಲ್ಲಿ ಒಮ್ಮೆಯೂ ಗೆದ್ದಿಲ್ಲ.  ಸೋಮ್ಲಾ ನಾಯಕ್ 2004 ರಲ್ಲಿ ನಡೆದ ವಿಧಾನಸಭಾಚುನಾವಣೆಯಲ್ಲಿ  30,449 ಮತಗಳನ್ನು ಹಾಗೂ 2008ರ ಚುನಾವಣೆಯಲ್ಲಿ 26,484 ಮತಗಳನ್ನು ಪಡೆದು ಪರಾಭವಗೊಂಡ ನಂತರ ಬಂದ ಜಿವಿ ವಿಜಯರಾಜು ಹಾಗೂ ಇವರಅಣ್ಣ ಜಿವಿ ಬಲರಾಮ್‌ಅವರಿಂದ ನಿರೀಕ್ಷೆಯಂತೆ ಮತಗಳಿಸಲು ಸಾಧ್ಯವಾಗಲಿಲ್ಲ.


   2018ರಲ್ಲಿ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ಕೃಷ್ಣನಾಯಕ್‌ರನ್ನು ನಿರ್ಲಕ್ಷಿಸಿ ಜಿವಿ ಬಲರಾಮರವರಿಗೆ ಟಿಕೆಟ್ ನೀಡಿದರಿಂದ ಕೃಷ್ಣನಾಯಕ್  ಅಭಿಮಾನಿಗಳು ಬಿಜೆಪಿ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತರದ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಪಾಲ್ಗೊಂಡು ಇಲ್ಲಿಯವರೆಗೂ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಆದ್ದರಿಂದ ಈ ಬಾರಿತನಗೆ ಟಿಕೆಟ್‌ ಎನ್ನುವ ನಿರೀಕ್ಷೆಯಲ್ಲಿದ್ದರೆ. ಇನ್ನುಕೊತ್ತೂರು ಹನುಮಂತರಾಯಪ್ಪನವರು ಸಮಾಜಮುಖಿ ಕೆಲಸಗಳಿಂದ ಹಾಗೂ ತನ್ನದೆಆದ ವರ್ಚಸ್ಸು ಹೊಂದಿದ್ದು ಪಕ್ಷದಅಭಿವೃದ್ಧಿಗಾಗಿ ದುಡಿಯುತ್ತಿದ್ದು ಟಿಕೆಟಿಗಾಗಿ ಲಾಭಿ ನಡೆಸುತ್ತಿದ್ದಾರೆ. ಇವರ ನಡುವೆ ದೀಪು ರಾಘವೇಂದ್ರಅವರು ಪಾವಗಡ ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಸ್ಥಾಪಿಸಿ ಇದರ ಅಡಿಯಲ್ಲಿ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಗುರುತಿಸಿಕೊಂಡು  ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.


    ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ  ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು ಈ ಬಾರಿತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಧಿಕೃತ ಅಭ್ಯರ್ಥಿಗಳ ಘೋಷಣೆಯ ನಂತರ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗುತ್ತದೆ.



ಹೈಕಮಾಂಡ್ ನಿರ್ಧಾರಅಂತಿಮ


    ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ ಹಾಗೂ ಕಾಂಗ್ರೆಸ್ ಪಕ್ಷ ನಮ್ಮತಾಲೂಕಿನಲ್ಲಿ ಸುಭದ್ರವಾಗಿರುವುದರಿಂದ  ಗೆಲುವು ನಿಶ್ಚಿತವಾದ ರಿಂದ  ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ನಾನು ಸಹ ಈಗಾಗಲೇ ಅರ್ಜಿ ಸಲ್ಲಿಸಿದ್ದೇನೆ ಹೈಕಮಾಂಡ್‌ತೀರ್ಮಾನವೇ ಅಂತಿಮ ತೀರ್ಮಾನ. ಹೈಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ.


ವೆಂಕಟರಮಣಪ್ಪ, ಶಾಸಕರು, 
ಪಾವಗಡ, ವಿಧಾನಸಭಾಕ್ಷೇತ್ರ