ಕೇಂದ್ರ ಮಾದರಿ ವೇತನ ಪರಿಷ್ಕರಣೆಗೆ `ಅಧಿಕಾರಿಗಳ ವೇತನ ಸಮಿತಿ' ರಾಜ್ಯ ನೌಕರರ ಸಂಘದ ಮನವಿಗೆ ಸಿಎಂ ತಾತ್ವಿಕ ಒಪ್ಪಿಗೆ-ಸುರೇಶ್‌ಬಾಬು

ಕೇಂದ್ರ ಮಾದರಿ ವೇತನ ಪರಿಷ್ಕರಣೆಗೆ `ಅಧಿಕಾರಿಗಳ ವೇತನ ಸಮಿತಿ' ರಾಜ್ಯ ನೌಕರರ ಸಂಘದ ಮನವಿಗೆ ಸಿಎಂ ತಾತ್ವಿಕ ಒಪ್ಪಿಗೆ-ಸುರೇಶ್‌ಬಾಬು

ಕೇಂದ್ರ ಮಾದರಿ ವೇತನ ಪರಿಷ್ಕರಣೆಗೆ `ಅಧಿಕಾರಿಗಳ ವೇತನ ಸಮಿತಿ' ರಾಜ್ಯ ನೌಕರರ ಸಂಘದ ಮನವಿಗೆ ಸಿಎಂ ತಾತ್ವಿಕ ಒಪ್ಪಿಗೆ-ಸುರೇಶ್‌ಬಾಬು

ಕೇಂದ್ರ ಮಾದರಿ ವೇತನ ಪರಿಷ್ಕರಣೆಗೆ `ಅಧಿಕಾರಿಗಳ ವೇತನ ಸಮಿತಿ'
ರಾಜ್ಯ ನೌಕರರ ಸಂಘದ ಮನವಿಗೆ ಸಿಎಂ ತಾತ್ವಿಕ ಒಪ್ಪಿಗೆ-ಸುರೇಶ್‌ಬಾಬು

ಕೋಲಾರ:- ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಪರಿಷ್ಕರಣೆಗಾಗಿ `ಅಧಿಕಾರಿಗಳ ವೇತನ ಸಮಿತಿ' ರಚಿಸಲು ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಈ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸುವುದಾಗಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರಿಗೆ  ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ.


ಈ ಕುರಿತು ಜಿಲ್ಲೆಯ ನೌಕರರಿಗೆ ಮಾಹಿತಿ ನೀಡಿರುವ ಅವರು, ಫೆ.25 ರಂದು ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಈ ಭರವಸೆ ಸಿಕ್ಕಿರುವುದಾಗಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
2022-23 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಮಂತ್ರಿಗಳೊAದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿವರು ಹಾಗೂ ಪದಾಧಿಕಾರಿಗಳ ನಿಯೋಗವು ಭಾಗವಹಿಸಿ ಕೇಂದ್ರ ಮಾದರಿಯ ವೇತನ ಜಾರಿ ಹಾಗೂ ಎನ್.ಪಿ.ಎಸ್. ರದ್ದುಗೊಳಿಸುವ ಸಂಬAಧ ಅಂಕಿ-ಅAಶಗಳೊAದಿಗೆ ಪ್ರಸ್ತಾವನೆಯನ್ನು ಮಂಡಿಸಿದರು.


ಇತ್ತೀಚಿಗೆ ರಾಜಸ್ಥಾನ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಘೋಷಿಸಿದ್ದು, ಅದರಂತೆ ಅಧ್ಯಯನ ನಡೆಸಿ ಒ.ಪಿ.ಎಸ್. ಜಾರಿಗೆ ತರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಸಿಎಂ ತಿಳಿಸಿದರು.


ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ/ನೌಕರರ ಮೇಲಿನ ಹಲ್ಲೆಗಳನ್ನು ನಿಯಂತ್ರಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತಂದು ಜಾಮೀನುರಹಿತ ಬಂಧನದAತಹ ಕಠಿಣ ಕಾನೂನನ್ನು ಜಾರಿಗೆ ತರುವ ಭರವಸೆ ನೀಡಿದರು.


ನೌಕರರುಗಳ ತರಬೇತಿಗಾಗಿ 6 ಜಿಲ್ಲಾ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅನುಭವಿ ವಿಷಯ ತಜ್ಞರನ್ನು ನೇಮಿಸುವ ಮೂಲಕ ಪುನಶ್ಚೇತನಗೊಳಿಸುವ ಭರವಸೆ ನೀಡಿದರು.


ಈ ಸಭೆಯಲ್ಲಿ ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಮುಖ್ಯಮಂತ್ರಿಗಳÀ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆಯ ಕಾರ್ಯದರ್ಶಿ  ಪಿ.ಸಿ. ಜಾಫರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ. ಹೇಮಲತರವರು ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.


-__________________________