ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ , ಸ್ಥಳೀಯ ಸಂಸ್ಥೆಗಳ ಕ್ಷೇತ್ರ * ಡಿ. 10ರಂದು ಮತದಾನ * ನ.23ರವರೆಗೆ ನಾಮಪತ್ರ
ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ
ಸ್ಥಳೀಯ ಸಂಸ್ಥೆಗಳ ಕ್ಷೇತ್ರ * ಡಿ. 10ರಂದು ಮತದಾನ * ನ.23ರವರೆಗೆ ನಾಮಪತ್ರ
ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಮತದಾನ ಮಾಡಿ ಆಯ್ಕೆ ಮಾಡಬೇಕಾದ ರಾಜ್ಯದ ವಿಧಾನಪರಿಷತ್‌ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಡಿಸೆಂಬರ್ 10ರಂದು ಮತದಾನ ನಡೆಯಲಿದೆ.
ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಕಣವಾಗಿರುವ ಸ್ಥಳೀಯ ಸಂಸ್ಥೆಗಳ ಈ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ನ.16ರಂದು ಅಧಿಸೂಚನೆ ಜಾರಿಯಾಗಲಿದೆ. ನ.23ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, 24ರಂದು ನಾಮಪತ್ರ ಪರಿಶೀಲನೆಯಾಗಲಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಸಕ್ತಿ ಹೊಂದಿರುವವರು ನ.26ರೊಳಗೆ ನಾಮಪತ್ರವನ್ನು ಹಿಂಪಡೆದುಕೊಳ್ಳಬಹುದು. ಅಗತ್ಯವಿರುವ ಕ್ಷೇತ್ರಗಳಿಗೆ ಡಿ.10ರಂದು ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೂ ಮತದಾನ ನಡೆಯಲಿದೆ. ಡಿ.14ರಂದು ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ. ಡಿ.16ರಂದು ಚುನಾವಣೆ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿವೆ.
ಕರ್ನಾಟಕ ವಿಧಾನಪರಿಷತ್‌ನಲ್ಲಿ ಸ್ಥಳೀಯ ಸಂಸ್ಥೆಗಳಿAದ 25 ಮಂದಿ ಸದಸ್ಯರು ಆಯ್ಕೆಯಾಗುತ್ತಾರೆ. ಅವುಗಳಲ್ಲಿ 20 ಕ್ಷೇತ್ರಗಳ ಪೈಕಿ 25 ಸ್ಥಾನಗಳ ಸದಸ್ಯರು 2022ರ ಜನವರಿ 5ಕ್ಕೆ ನಿವೃತ್ತರಾಗಲಿದ್ದಾರೆ. ಈ ಸ್ಥಾನಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲು ದ್ವೆöÊವಾರ್ಷಿಕ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಕೋವಿಡ್‌ನ ನಿಯಮಾವಳಿಗಳನ್ನು ಪಾಲನೆ ಮಾಡಿ ಚುನಾವಣೆ ನಡೆಸಲು ಸೂಚಿಸಲಾಗಿದೆ. ಕರ್ನಾಟಕದ ಜೊತೆಗೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟç ವಿಧಾನಪರಿಷತ್‌ನ ಕ್ಷೇತ್ರಗಳಿಗೂ ಚುನಾವಣೆ ನಡೆಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ 8 ಕ್ಷೇತ್ರಗಳ 11 ಸ್ಥಾನಗಳಿಗೆ, ತೆಲಂಗಾಣದಲ್ಲಿ ಜನವರಿ 4ರಂದು ತೆರವಾಗುವ 9 ಕ್ಷೇತ್ರಗಳ 11ಸ್ಥಾನಗಳಿಗೆ, ಮಹಾರಾಷ್ಟçದಲ್ಲಿ ಜನವರಿ 1ರಂದು ತೆರವಾಗುವ ಐದು ಕ್ಷೇತ್ರಗಳ 6 ಸ್ಥಾನಗಳಿಗೆ ಡಿ.10ರಂದು ಮತದಾನ ನಡೆಯಲಿದೆ.
ಅವಧಿ ಪೂರೈಸಿದ ಸದಸ್ಯರು
ತುಮಕೂರು- ಬೆಮೆಲ್ ಕಾಂತರಾಜ್(ಜೆಡಿಎಸ್)
ಕೋಲಾರ- ಸಿ.ಆರ್.ಮನೋಹರ್ (ಜೆಡಿಎಸ್)
ಬೆಂಗಳೂರು ಗ್ರಾಮಾಂತರ- ಎಸ್.ರವಿ(ಕಾಂಗ್ರೆಸ್)
ಬೆAಗಳೂರು- ಎಂ.ನಾರಾಯಣಸ್ವಾಮಿ (ಕಾಂಗ್ರೆಸ್)
ಬೀದರ್- ವಿಜಯ್ ಸಿಂಗ್(ಕಾAಗ್ರೆಸ್)
ಕಲಬುರಗಿ- ಬಿ.ಜಿ.ಪಾಟೀಲ್(ಬಿಜೆಪಿ)
ವಿಜಾಪುರ- ಎಸ್.ಆರ್.ಪಾಟೀಲ್(ಕಾಂಗ್ರೆಸ್), ಸುನೀಲ್‌ಗೌಡ ಪಾಟೀಲ್(ಬಿಜೆಪಿ)
ಬೆಳಗಾವಿ- ಮಹಾಂತೇಶ್ ಕವಟಗಿಮಠ(ಬಿಜೆಪಿ) ವಿವೇಕರಾವ್ ವಸಂತರಾವ್ ಪಾಟೀಲ್(ಕಾಂಗ್ರೆಸ್)
ಉತ್ತರ ಕನ್ನಡ- ಶ್ರೀಕಾಂತ್ ಗೋಟ್ನೆಕರ್(ಕಾಂಗ್ರೆಸ್)
ಧಾರವಾಡ- ಪ್ರದೀಪ್ ಶೆಟ್ಟರ್(ಕಾಂಗ್ರೆಸ್), ಶ್ರೀನಿವಾಸ್ ಮಾನೆ(ಕಾಂಗ್ರೆಸ್)
ರಾಯಚೂರು- ಬಸವರಾಜ ಪಾಟೀಲ್ ಇಟಗಿ(ಕಾಂಗ್ರೆಸ್)
ಬಳ್ಳಾರಿ- ಕೆ.ಸಿ.ಕೊಂಡಯ್ಯ(ಕಾAಗ್ರೆಸ್)
ಚಿತ್ರದುರ್ಗ- ರಘು ಆಚಾರ್(ಕಾಂಗ್ರೆಸ್)
ಶಿವಮೊಗ್ಗ- ಆರ್.ಪ್ರಸನ್ನಕುಮಾರ್ (ಕಾಂಗ್ರೆಸ್)
ದಕ್ಷಿಣ ಕನ್ನಡ- ಕೆ.ಪ್ರತಾಪ್ ಚಂದ್ರಶೆಟ್ಟಿ(ಕಾAಗ್ರೆಸ್), ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ),
ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್(ಬಿಜೆಪಿ)
ಹಾಸನ- ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್),
ಮಂಡ್ಯ- ಅಪ್ಪಾಜಿಗೌಡ(ಜೆಡಿಎಸ್)
ಕೊಡಗು- ಸುನೀಲ್ ಸುಬ್ರಹ್ಮಣ್ಯ(ಬಿಜೆಪಿ)
ಮೈಸೂರು- ಆರ್.ಧರ್ಮಸೇನ (ಕಾಂಗ್ರೆಸ್), ಸಂದೇಶ್ ನಾಗರಾಜ್(ಜೆಡಿಎಸ್)