ಮನೆಯಂಗಳವನ್ನ ಪಕ್ಷಿಕಾಶಿ ಮಾಡಿಕೊಂಡ ಪರಿಸರ ಪ್ರೇಮಿ ಪಕ್ಷಿಗಳ ಪೋಷಣೆ ಜೊತೆಗೆ ಸಮಾಜಕ್ಕೆ ಅರಿವು ಮೂಡಿಸುತ್ತಿರುವ ಡಿಕೆಶಿ ಮಾಧ್ಯಮ ವಕ್ತಾರ ಮರಸಪ್ಪ ರವಿ

ಮನೆಯಂಗಳವನ್ನ ಪಕ್ಷಿಕಾಶಿ  ಮಾಡಿಕೊಂಡ ಪರಿಸರ ಪ್ರೇಮಿ   ಪಕ್ಷಿಗಳ ಪೋಷಣೆ ಜೊತೆಗೆ ಸಮಾಜಕ್ಕೆ ಅರಿವು ಮೂಡಿಸುತ್ತಿರುವ ಡಿಕೆಶಿ ಮಾಧ್ಯಮ  ವಕ್ತಾರ ಮರಸಪ್ಪ ರವಿ


ಮನೆಯಂಗಳವನ್ನ ಪಕ್ಷಿಕಾಶಿ ಮಾಡಿಕೊಂಡ ಪರಿಸರ ಪ್ರೇಮಿ


ಪಕ್ಷಿಗಳ ಪೋಷಣೆ ಜೊತೆಗೆ ಸಮಾಜಕ್ಕೆ ಅರಿವು ಮೂಡಿಸುತ್ತಿರುವ ಡಿಕೆಶಿ ಮಾಧ್ಯಮ

ವಕ್ತಾರ ಮರಸಪ್ಪ ರವಿ

ರಾಮನಗರ: ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿರೋ ವ್ಯಕ್ತಿ. ಜೊತೆಗೆ ರಾಜ್ಯದ ಪಕ್ಷವೊಂದರ ಅಧ್ಯಕ್ಷರ ಮಾಧ್ಯಮ ವಕ್ತಾರ. ಆದರೇ ಇಂತಹ ಬ್ಯೂಸಿ ಸೆಡ್ಯೂಲ್‌ನಲ್ಲೂ ಪ್ರಾಣಿ-ಪಕ್ಷಿಗಳ ಬಗ್ಗೆ ಎಲ್ಲಿಲ್ಲದ ಮೋಹ!

ರಾಜಕಾರಣದಲ್ಲಿ ಇರುವ ವ್ಯಕ್ತಿಗಳು ಅದರಲ್ಲಿಯೂ ಅಧಿಕಾರಸ್ಥ ಪ್ರಮುಖ ರಾಜಕಾರಣಿಯೊಬ್ಬರ ಕಿಚನ್ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಕ್ಕಿ ಬಿಟ್ಟರಂತೂ ಅವರ ಕಾಲುಗಳೇ ನೆಲದ ಮೇಲೆ ನಿಲ್ಲುವುದು ಕಡಿಮೆಯೇ. ಅಂತಹದ್ದರಲ್ಲಿ ಈ ವ್ಯಕ್ತಿ ಸ್ವಲ್ಪ ಬಿಡುವು ಸಿಕ್ಕರೂ ಸಾಕು ಕ್ಯಾಮರಾ ಹೆಗಲಿಗೆ ನೇತು ಹಾಕಿಕೊಂಡು ಕಾಡು-ಮೇಡಿನ ಕಡೆ ಮುಖ ಮಾಡುತ್ತಾರೆ. ಅಲ್ಲದೇ ಬಿಡುವು ಸಿಕ್ಕಲಿ ಬಿಡಲಿ ತನ್ನ ಮನೆಯ ಅಂಗಳವನ್ನೇ ಪಕ್ಷಿಕಾಶಿ ಮಾಡಿಕೊಂಡು ನೂರಾರು ಪಕ್ಷಿಗಳಿಗೆ ಆಶ್ರಯ ನೀಡಿದ್ದಾರೆ. ಅವರು ಮತ್ಯಾರೂ ಅಲ್ಲ ಕನಕಪುರದ ಮಳಗಾಳಿನ ಮರಸಪ್ಪ ರವಿ.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಳೆಕೋಟೆ ಇವರ ಮರಸಪ್ಪ ರವಿ ಅವರ ಸ್ವಗ್ರಾಮ. ಪ್ರಸ್ತುತ ಇವರು ಕನಕಪುರ ಪಟ್ಟಣದ ಮಳಗಾಳುವಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಾ, ರಾಜಕಾರಣದ ಜೊತೆಗೆ ರೋಟರಿ, ಲಯನ್ಸ್ ಸಂಸ್ಥೆಗಳAತಹ  ಸಮಾಜ ಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು, ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಪ್ರೇಮಿ. ಪಕ್ಷಿಗಳಿಗಾಗಿಯೇ ಮನೆಯ ಎದುರು ನೂರಾರು ಗೂಡು ನಿರ್ಮಿಸಿ ಪಕ್ಷಿಗಳಿಗೆ ಆಶ್ರಯದಾತರಾಗಿದ್ದಾರೆ. ಜೊತಗೆ ಅವುಗಳಿಗೆ ಅಗತ್ಯವಿರುವ ಸಿರಿಧಾನ್ಯಗಳನ್ನು ಹಾಕಿ ಅವುಗಳ ಪಾಲನೆ ಪೋಷಣೆ ಮಾಡುತ್ತಾ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಇವರು ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳಂತಹ ಪಕ್ಷಿಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ. ತಮ್ಮ ಪುಟ್ಟ ಮನೆಯ ಮುಂಭಾಗ ಬೊಂಬಿನಲ್ಲಿ ರಂಧ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೇ ನಿತ್ಯ ಪಕ್ಷಿಗಳಿಗೆ ಮನೆಯ ಸುತ್ತಲಿನ ಲಭ್ಯ ಇರುವ ಅಲ್ಪ ಸ್ಥಳದಲ್ಲಿ ನಂದನವನವನ್ನಾಗಿಸಿಕೊAಡು ಪಕ್ಷಿಗಳಿಗೆ ಅನುಕೂಲವಾಗಲೆಂದೇ ಮಾವು, ಸೀಬೆ, ದಾಳಿಂಬೆ, ಅಂಜೂರ, ಸಪೋಟಾ, ಬೆಣ್ಣೆ ಹಣ್ಣು ಸೇರಿದಂತೆ ಮೊದಲಾದ ಗಿಡಗಳನ್ನು ಬೆಳೆಸಿದ್ದಾರೆ. ಇವರ ಕಿರು ಉದ್ಯಾನದಲ್ಲಿ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಕಾಜಾಣ, ಕೋಗಿಲೆ, ಗಿಣಿ, ಅಪರೂಪದ ಸನ್ಬರ್ಡ್, ದರ್ಜೆಯ ಹಕ್ಕಿಗಳು ಬರುತ್ತವೆ. ಸುಂದರ ಕೈತೋಟವನ್ನಾಗಿ ಮನೆಯ ಅಂಗಳವನ್ನಾಗಿ ಮಾಡಿಕೊಂಡು, ನಿತ್ಯವೂ ಪಕ್ಷಿಗಳ ಕಲರವದೊಂದಿಗೆ ತಮ್ಮ ಕುಟುಂಬದೊAದಿಗೆ ಖುಷಿ ಅನುಭವಿಸುತ್ತಿರುವುದರ ಜೊತೆಗೆ ತಮ್ಮ ಮನೆಗೆ ಬರುವ ಅತಿಥಿಗಳು, ಸ್ನೇಹಿತರು ಮತ್ತು ಸಂಬAಧಿಗಳಿಗೆ ಪರಿಸರ, ಪ್ರಾಣಿ-ಪಕ್ಷಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಇದಿಷ್ಟೇ ಅಲ್ಲ, ತಾವು ಸಕ್ರಿಯರಾಗಿರುವ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪರಿಸರ, ಪ್ರಾಣಿ-ಪಕ್ಷಿಗಳ ರಕ್ಷಣೆ ಬಗ್ಗೆ ಪುಟ್ಟದೊಂದು ಉಪನ್ಯಾಸ ಇದ್ದೇ ಇರುತ್ತದೆ. ಅಲ್ಲದೇ ತಾವು ಅಧ್ಯಕ್ಷರಾಗಿದ್ದ ಸಂಘಟನೆಗಳಲ್ಲಿ ಹತ್ತಾರು ವರ್ಷಗಳಿಂದ  ಗಿಡಗಳನ್ನು ವಿತರಣೆ ಮಾಡುವುದಲ್ಲದೇ, ಅವುಗಳನ್ನು ತೆಗೆದುಕೊಂಡು ಹೋದ ಗಣ್ಯರು, ಸ್ನೇಹಿತರು ಮತ್ತು ಅತಿಥಿಗಳ ಮನೆಗಳಿಗೆ ಆಕಸ್ಮಿಕವಾಗಿ ಭೇಟಿಯಾದ ಸಂದರ್ಭದಲ್ಲಿ ತಾವು ಕಾರ್ಯಕ್ರಮದಲ್ಲಿ ನೀಡಿದ ಗಿಡಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಬೆಳವಣಿಗೆಯನ್ನು ಸ್ವತಃ ನೋಡಿ, ಕಣ್ತುಂಬಿಕೊಳ್ಳುವ ಪರೀಕ್ಷಾ ಬುದ್ದಿ ಮರಸಪ್ಪ ರವಿಯವರದ್ದು.

ಹವ್ಯಾಸಿ ಛಾಯಾಗ್ರಾಹಕ: ಮರಸಪ್ಪ ರವಿಯವರ ಹವ್ಯಾಸ ಇಷ್ಟಕ್ಕೆ ನಿಂತಿಲ್ಲ. ಸ್ನೇಹಿತರ ಜೊತೆಗೆ ಕಾಡುಮೇಡಿಗೆ ಟ್ರಕಿಂಗ್‌ಗೆ ಹೋಗುವ ಇವರ ಹೆಗಲಲ್ಲಿ ಎರಡ್ಮೂರು ಕ್ಯಾಮೆರಗಳು ಹೆಗಲಿಗೇರುತ್ತವೆ. ಅಲ್ಲಿ ಸಿಗುವ ಪ್ರಾಣಿ-ಪಕ್ಷಿಗಳ ಸಾವಿರಾರು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಚಿತ್ರಿಕರಿಸಿ, ಸಂಗ್ರಹಿಸಿ, ತಾವು  ಕ್ಲಿಕ್ಕಿಸಿ, ಚಿತ್ರಿಕರಿಸಿದ ಪಕ್ಷಿಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ, ಅಲ್ಲದೇ  ಇವರು ತೆಗೆದ ಪಕ್ಷಿ-ಪ್ರಾಣಿಳ ಚಿತ್ರಗಳು ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪಟಾಕಿ ಬಗ್ಗೆ ಅರಿವು: ಪ್ರಸ್ತುತ ದೀಪಾವಳಿ ಹಬ್ಬ ನಡೆಯುತ್ತಿದೆ. ಈ ಕಾರ್ತಿಕ ಮಾಸದಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ. ಅದ್ದರಿಂದ ಪಟಾಕಿ ಹೊಡೆದು ಅನವಶ್ಯಕ ಹಣ ಖರ್ಚು ಮಾಡುವ ಬದಲು ಮಣ್ಣಿನ ಹಣತೆಗಳನ್ನ ಹಚ್ಚಿ, ಪಟಾಕಿ ಸುಡಬೇಡಿ, ಪರಿಸರ ಉಳಿಸಿ ಎಂಬ ಸಂದೇಶವನ್ನು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಸಾರುತ್ತಿದ್ದಾರೆ. 

ಅಲ್ಲದೇ, ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯದ ಜೊತೆಗೆ ನಾಡಿನಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳು ಮತ್ತು ಸಾಕು ಪ್ರಾಣಿಗಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯ ಮಾಡುತ್ತಾ, ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕವಾಗಿ ಪರಿಸರ ಪ್ರಿಯರ ಪ್ರೀತಿಗೆ ಮರಸಪ್ಪ ರವಿ ಪಾತ್ರರಾಗಿದ್ದಾರೆ.

'ಪಟಾಕಿ ಪ್ರಾಣಿ ಪಕ್ಷಿಗಳಿಗೆ ಮಾರಕ'
`ಪ್ರಾಣಿ ಪಕ್ಷಿಗಳು ಪಟಾಕಿ ಸದ್ದಿಗೆ ಬಹಳಷ್ಟು ಹೆದರುತ್ತವೆ. ಕೆಲ ಸಣ್ಣ ಸಣ್ಣ ಪಕ್ಷಿಗಳು ಪಟಾಕಿ ಸದ್ದಿಗೆ ಪ್ರಾಣವನ್ನೇ ಕಳೆದುಕೊಳ್ಳುತ್ತವೆ. ಇದರಿಂದ ಪಕ್ಷಿ ಸಂಕುಲವೆ ಮುಂದಿನ ದಿನಗಳಲ್ಲಿ ಅಳಿವಿನ ಅಂಚಿಗೆ ಬಂದು ತಲುಪಲಿದೆ. ಅದ್ದರಿಂದ ದೀಪಾವಳಿಯನ್ನು ಹಣತೆ ಹಚ್ಚುವ ಮೂಲಕ ಆಚರಿಸಿ, ಪ್ರಾಣಿ-ಪಕ್ಷಿಗಳ ಜೊತೆಗೆ ಪರಿಸರವನ್ನು ಬೆಳಗಿಸುವಂತೆ ವಿನಂತಿಸುತ್ತೇನೆ.'

- ಮರಸಪ್ಪ ರವಿ, ಪಕ್ಷಿ ಪ್ರೇಮಿ