ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಬಿ.ಶಿವಕುಮಾರ ಆಯ್ಕೆ

   ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಬಿ.ಶಿವಕುಮಾರ ಆಯ್ಕೆ

       ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಬಿ.ಶಿವಕುಮಾರ ಆಯ್ಕೆ

ಕೋಲಾರ : 66ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಶ್ವ ಕನ್ನಡಿಗರ ಸಂಸ್ಥೆ ಹಾಗೂ ಬೀದರ ಜಿಲ್ಲಾ ಘಟಕ ವತಿಯಿಂದ 66 ಜನ ಕನ್ನಡ ಸಾಧಕರಿಗೆ `ಕರ್ನಾಟಕ ರಾಜ್ಯೊತ್ಸವ ರತ್ನ' ಪ್ರಶಸ್ತಿ ನವೆಂಬರ 27 ರಂದು ಬೀದರ ನಗರದ  ಡಾ|| ಚನ್ನಬಸವ ಪಟ್ಟದೇವರ  ಜಿಲ್ಲಾ ರಂಗಮAದಿರದಲ್ಲಿ ಪ್ರದಾನಗೊಳ್ಳಲಿದೆ.
ಕೋಲಾರ ಜಿಲ್ಲೆಯಿಂದ ಬಿ ಶಿವಕುಮಾರ ರವರಿಗೆ ಪ್ರಶಸ್ತಿ ಲಭಿಸಲಿದೆ.
ಶ್ರೀ ರಮಣ ಮಹರ್ಷಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶಿವಕುಮಾರ ಅವರ ಸಮಾಜ ಮುಖಿಯಾಗಿ ಕಾರ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಆಯ್ಕೆಯನ್ನು ಮಾಡಲಾಗಿದೆಯೆಂದು ವಿಶ್ವ ಕನ್ನಡಿಗರ ಸಂಸ್ಥೆಯ ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.