ಗಾಂಧೀಜಿ ಅವರ ಆದರ್ಶ ತತ್ವ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು  - ನ್ಯಾ.ಕೆ. ಆರ್. ನಾಗರಾಜ

ಗಾಂಧೀಜಿ ಅವರ ಆದರ್ಶ ತತ್ವ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು  - ನ್ಯಾ.ಕೆ. ಆರ್. ನಾಗರಾಜ
ಗಾಂಧೀಜಿ ಅವರ ಆದರ್ಶ ತತ್ವ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು  - ನ್ಯಾ.ಕೆ. ಆರ್. ನಾಗರಾಜ

ಗಾಂಧೀಜಿ ಅವರ ಆದರ್ಶ ತತ್ವ ಮೌಲ್ಯಗಳನ್ನು ಪ್ರತಿಯೊಬ್ಬರು

ಜೀವನದಲ್ಲಿ ಆಳವಡಿಸಿಕೊಳ್ಳಬೇಕು  - ನ್ಯಾ.ಕೆ. ಆರ್. ನಾಗರಾಜ


ಕೋಲಾರ : ಮಹಾತ್ಮ ಗಾಂಧೀಜಿಯವರ ಆದರ್ಶ ತತ್ವಗಳು ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನಾಗರಿಕ ಪ್ರಬುದ್ಧ ಪ್ರಜಾಪ್ರಭುತ್ವ ಸಮಾಜ ನಿರ್ಮಾಣ ಮಾಡಿದರೆ ದೇಶ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಆರ್. ನಾಗರಾಜ ಅವರು ತಿಳಿಸಿದರು. 
ಇಂದು ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೊಲೀಸ್ ಇಲಾಖೆ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾಕಾರಾಗೃಹ, ಕೆ.ಎಸ್.ಆರ್.ಟಿ.ಸಿ, ಅರಣ್ಯ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಇಲಾಖೆ, ಕಾನೂನು ವಿದ್ಯಾಲಯಗಳು ಹಾಗೂ ವಿವಿಧ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಡಿದ್ದ, ಭಾರತದ 75ನೇ ವರ್ಷದ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ದೇಶವಾಸಿಗಳಿಗೆ ರಾಷ್ಟಿçÃಯತೆ ಜಾಗೃತಿ ಮತ್ತು ಅಪರಿಮಿತ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಗಾಂಧಿಜಯAತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಗಾಂಧೀಜಿಯ ತತ್ವಗಳಾದ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಸ್ವಚ್ಛತೆ, ರಾಮರಾಜ್ಯ ಕನಸು ಅವರ ಆದರ್ಶಗಳು ಜೀವನದಲ್ಲಿ ಉಳಿದುಹೋಗಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಪ್ರಜ್ಞಾವಂತ ನಾಗರಿಕರಾಗಿ ಮಾಡಿದರೆ ಭ್ರಷ್ಟರಹಿತ ಸಮಾಜ, ಭ್ರಷ್ಟರಹಿತ ಆಡಳಿತ ವ್ಯವಸ್ಥೆ, ಸ್ವಚ್ಛ ಭಾರತ ನಿರ್ಮಾಣವಾಗಿ ಗಾಂಧೀಜಿ ಕಂಡ ಕನಸು ನನಸಾಗುತ್ತದೆ ಎಂದು ಅವರು ತಿಳಿಸಿದರು.
 ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನ ಪ್ರಜಾಪ್ರಭುತ್ವ ಆಡಳಿತದ ಕೈಗನ್ನಡಿ, ಸಂವಿಧಾನದ ಅಡಿಯಲ್ಲಿ ಎಲ್ಲಾ ಕಾನೂನುಗಳು ರಚನೆಯಾಗುತ್ತದೆ. ಸಂವಿಧಾನದ ಅನುಚ್ಛೇದ 12ನ್ನು ಅರಿತುಕೊಂಡರೆ ಯಾವುದೇ ರಾಜ್ಯ ಸರ್ಕಾರದ ಶಾಸಕಾಂಗ ಶಾಸನವನ್ನು ಮಾಡಬೇಕಾದರೆ ಸಂವಿಧಾನದ ಅಡಿಯಲ್ಲಿ ಕಾನೂನುಗಳನ್ನು ರಚಿಸಬೇಕಾಗುತ್ತದೆ. ಸಂವಿಧಾನದ ಅನುಚ್ಛೇದ 39ಎ ಅಡಿಯಲ್ಲಿ ಎಲ್ಲಾ ಭಾರತೀಯ ನಾಗರಿಕರಿಗೆ ಉಚಿತ ಕಾನೂನು ಸೇವೆ ನೀಡಲಾಗುತ್ತದೆ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರ ಅಧಿನಿಯಮ 1995 ರಲ್ಲಿ ಜಾರಿಗೆ ಬಂತು. ಈ ಕಾನೂನಿನ ಅಡಿಯಲ್ಲಿ ಕಾನೂನುಗಳ ಪ್ರಸಾರ, ಕಾನೂನಿನ ನೆರವು, ಜನತಾ ನ್ಯಾಯಲಯಗಳನ್ನು ಮಾಡುವಂತಹ ಜವಾಬ್ದಾರಿಯನ್ನು ನ್ಯಾಯಾಧೀಶರಿಗೆ ರಾಜ್ಯ ವಹಿಸಿದೆ. ಈ ಕಾನೂನಿನಲ್ಲಿ ರಾಷ್ಟ್ರದಿಂದ ತಾಲ್ಲೂಕಿನವರೆಗೆ ಕಾನೂನು ಸೇವೆಗಳ ವ್ಯವಸ್ಥೆಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
 ಈ ವರ್ಷದಲ್ಲಿ 75 ನೇ ಸ್ವಾತಂತ್ರೋತ್ಸವ ಅಮೃತಮಹೋತ್ಸವದ ಅಂಗವಾಗಿ ಅಕ್ಟೋಬರ್ 2 ರಿಂದ ನವೆಂಬರ್ 14 ರವರೆಗೆ ದೀರ್ಘಕಾಲ ಕಾನೂನು ಬಗ್ಗೆ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಕಾನೂನು ಸಾರ್ವಭೌಮತ್ವವಾಗಿರುತ್ತದೆ. ಪ್ರತಿಯೊಬ್ಬರು ಕಾನೂನಿನ ಪ್ರಕಾರ ಸಮನಾಗಿರುತ್ತದೆ, ಸರ್ವರಿಗೂ ಸಮಬಾಳು ಎಂದು ಸಂವಿಧಾನದಲ್ಲಿ ಘೋಷಣೆ ಮಾಡಲಾಗಿದೆ. ಸಮಾನತೆಯನ್ನು ಹೊಂದಬೇಕದಾರೆ ಪ್ರತಿಯೊಬ್ಬರಿಗೂ ತಮ್ಮ ಹಕ್ಕುಗಳನ್ನು ತಿಳಿಯಬೇಕಾಗುತ್ತದೆ. ಪ್ರತಿಯೊಬ್ಬರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅರಿವು ಮೂಡಿಸಲಾಗುತ್ತದೆ. ಜನತಾ ನ್ಯಾಯಲಯಾದಲ್ಲಿ ನೀಡಿದ ತೀರ್ಪು ನ್ಯಾಯಲಯಾದಲ್ಲಿ ನೀಡುವ ತೀರ್ಪಿಗೆ ಸಮಾವಾಗಿರುತ್ತದೆ. ಪ್ರತಿಯೊಬ್ಬ ನಾಗರೀಕರು ತಮ್ಮ ಹಕ್ಕುಗಳನ್ನು ಪಡೆದಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ತಿಳಿಸಿದರು.
 ಜಿಲ್ಲಾಧಿಕಾರಿ  ಡಾ. ಆರ್.ಸೆಲ್ವಮಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗಾಂಧೀಜಿಯವರು ದುರ್ಬಲ ವರ್ಗಗಳ ಏಳಿಗೆಗಾಗಿ ಹೋರಾಟ ಮಾಡಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ನಾಗರಿಕ ಸಮುದಾಯ ಉತ್ತಮವಾಗಿರಬೇಕಾದರೆ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವು ಇರಬೇಕು. ತಮ್ಮ ಕಷ್ಟ ನಷ್ಟಗಳಿಗೆ ತೊಂದರೆಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನಿನ ನೆರವು ಪಡೆದುಕೊಂಡು ಇತ್ಯರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ. ನಾಗರಾಜ್ ಅವರು ಮಾತನಾಡಿ ಪ್ರತಿಯೊಬ್ಬರಿಗೂ ನೀರು, ಗಾಳಿ, ಬೆಳಕು ಹೇಗೆ ಸಮನಾಗಿ ದೊರೆಯುತ್ತದೆಯೋ ಹಾಗೆ ಕಾನೂನು ನೆರವು ಕೂಡ ಸಿಗುತ್ತದೆ. ಯಾವುದೇ ಪ್ರಜೆಯೂ ನ್ಯಾಯದಿಂದ ವಂಚಿತರಾಗಬಾರದು. ಕಾನೂನುಸೇವೆಗಳ ಪ್ರಾಧಿಕಾರದಿಂದ ಎಲ್ಲರಿಗೂ ಕಾನೂನು ಸೇವೆ ದೊರೆಯುತ್ತದೆ. ಎಲ್ಲರೂ ಕಾನೂನು ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
 ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀಧರ್ ಅವರು ಮಾತನಾಡಿ ಪ್ರತಿಯೊಬ್ಬ ನಾಗರಿಕರು ಮಹಾತ್ಮ ಗಾಂಧಿಯವರ ಆದರ್ಶ ಮೌಲ್ಯಗಳನ್ನು ಪ್ರಜ್ಞಾವಂತರಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಲೋಕ್ ಅದಾಲತ್‌ನ ಮುಖ್ಯ ಉದ್ದೇಶ ದೇಶದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ನೆರವು ದೊರೆಯಬೇಕು ಎನ್ನುವುದು. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಮುಖ್ಯ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಹೆಚ್. ಗಂಗಾಧರ್, ಉಪ ವಿಭಾಗಧಿಕಾರಿ ಅನಂದ್ ಪ್ರಕಾಶ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಗದೀಶ್, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮುನಿರಾಜಪ್ಪ ಬಿ.ಎಂ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿ ಗೌಡ, ನಗರಸಭೆ ಆಯುಕ್ತ ಎಸ್. ಪ್ರಸಾದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.