ಮುಂದುವರಿದ ಅತಿಥಿ ಉಪನ್ಯಾಸಕರ ಮುಷ್ಕರ

lecturers-strike-continues-in-kolar

ಮುಂದುವರಿದ ಅತಿಥಿ ಉಪನ್ಯಾಸಕರ ಮುಷ್ಕರ

ಮುಂದುವರಿದ ಅತಿಥಿ ಉಪನ್ಯಾಸಕರ ಮುಷ್ಕರ

ಕೋಲಾರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸೇವಾ ಭದ್ರತೆಗಾಗಿ ರಾಜ್ಯದ ಅತಿಥಿ ಉಪನ್ಯಾಸಕರು ಕಳೆದ 12 ದಿನಗಳಿಂದ ರಾಜ್ಯಾದ್ಯಂತ ಸಾಮೂಹಿಕ ತರಗತಿಗಳ ಬಹಿಷ್ಕಾರ ಮಾಡಿದ್ದು, ಬುಧವಾರವೂ ಸಹ ಮುಂದುವರಿಯಿತು.
 ನಗರದ ಸರ್ವಜ್ಞ ಪಾರ್ಕ್ ಮುಂಭಾಗ ಜಿಲ್ಲಾ ಅತಿಥಿ ಉಪನ್ಯಾಸಕರು ಭಾಗವಹಿಸಿ, ತರಕಾರಿಗಳನ್ನು ಮಾರುತ್ತಾ, ಬೂಟ್ ಪಾಲಿಶ್ ಮಾಡುತ್ತಾ, ಇಸ್ತಿçà ಮಾಡುತ್ತಾ, ಗುಜರಿ ಅಂಗಡಿಯನ್ನು ತೆರೆದು, ಕಾಫಿ-ಟೀಯನ್ನು ಮಾರುತ್ತಾ, ಹಾಗೂ ಸೌಂದರ್ಯ ವರ್ಧಕಗಳನ್ನು ಮಾರಾಟ ಮಾಡುತ್ತಾ, ಸರ್ಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
 ಈ ಸಂದAರ್ಭದಲ್ಲಿ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿ£ Àಅಧ್ಯಕ್ಷರಾದ ನಾಡೋಜಡಾ|| ಮಹೇಶ್‌ಜೋಷಿ ರವರು ಹಾಗೂ ಕೋಲಾg Àಜಿಲ್ಲಾ ಕ.ಸಾ.ಪ ಅಧ್ಯಕ್ಷ ಗೋಪಾಲಗೌಡ, ಜೆ.ಜೆ.ನಾಗರಾಜ್ ರವರು ಸಹ ಭಾಗವಹಿಸುವುದರ ಮೂಲಕ ಅತಿಥಿ ಉಪನ್ಯಾಸಕರ ಸೇವಾ ಭಧ್ರತೆಯ ಹೋರಾಟಕ್ಕೆ ರಾಜ್ಯ ಕ.ಸಾ.ಪ ಕಡೆಯಿಂದಲೂ ಬೆಂಬಲವಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


 ಕಾರ್ಯಕ್ರಮದಲ್ಲಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ||ನೂರ್‌ಅಹ್ಮದ್ ಮಾತನಾಡಿ, ಅತಿಥಿ ಉಪನ್ಯಾಸಕರು ಪದವಿ, ಸ್ನಾತಕೋತ್ತರ ಪದವಿ ಅನೇಕರು ಡಾಕ್ಟರೇಟ್‌ನ್ನು ಸಹ ಪಡೆದಿದ್ದರೂ ಇಂದೂ ನಮ್ಮಗಳ ಪರಿಸ್ಥಿತಿ ಕೂಲಿ ಕಾರ್ಮಿಕರಿಗಿಂತ ಹೀನಾಯ ಪರಿಸ್ಥಿತಿ ತಲುಪಿದೆ. ವಿದ್ಯಾರ್ಹತೆಯಿಲ್ಲದ ತರಕಾರಿ ಮಾರುವ, ಕಾಫೀ-ಟೀ ಮಾರುವವರು, ಇಸ್ತಿçà ಮಾಡುವವರು, ಗುಜರಿ ಇಟ್ಟಿರುವವರು ಸಹ ಡಾಕ್ಟರೇಟ್ ಪಡೆದಂತಹ ಅತಿಥಿ ಉಪನ್ಯಾಸಕರಿಗಿಂತ ಹೆಚ್ಚಿನ ಹಣವನ್ನು ಸಂಪಾದಿಸುತ್ತಿದ್ದಾರೆ.
 ಜೀತ ಮುಕ್ತ ಸಮಾಜ - ಶೋಷಣೆಯ ಮುಕ್ತ ಸಮಾಜ ನಿರ್ಮಾಣ ಮಾಡಲು ಕಾನೂನುಗಳನ್ನು ತರುತ್ತಿರುವ ಸರ್ಕಾರಗಳು ಇಂದುತನ್ನ ಶಿಕ್ಷಣ ಇಲಾಖೆಯಲ್ಲಿಜೀತ& ಶೋಷಣೆಯ ವಾತಾವರಣವನ್ನು ನಿರ್ಮಿಸಿರುವುದು ನಮ್ಮದೇಶದದುರಂತವಾಗಿದೆಎAದರು.
 ಜಿಲ್ಲಾ ಅತಿಥಿ ಉಪನ್ಯಾಸಕ ಸಂಘದ ಕಾರ್ಯದರ್ಶಿ ಶಿವ.ವಿ ಮಾತನಾಡಿ, ಭಾರತ ಸರ್ಕಾರ ನಮ್ಮದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು 1966ರಲ್ಲಿ ಜಾರಿಗೆ ತಂದ ಅಂತರಾಷ್ಟಿçÃಯ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಒಪ್ಪಂದಕ್ಕೆ ದಿನಾಂಕ:10/ಏಪ್ರಿಲ್/1979 ರಂದು ಭಾರತ ಸಹಿ ಹಾಕಿದ್ದು, ಅದರನ್ವಯ ಸಮಾನ ಕೆಲಸಕ್ಕೆ - ಸಮಾನ ವೇತನವನ್ನು ನೀಡಬೇಕೆಂದು ಮಾನ್ಯ ಸುಪ್ರೀಂಕೋರ್ಟ್ ಸೋಮವಾರದಂದು ತನ್ನ ತೀರ್ಪನ್ನು ಕೊಟ್ಟಿರುತ್ತದೆ. ಆದ ಕಾರಣ ರಾಜ್ಯ ಸರ್ಕಾರ ಖಾಯಂ ಉಪನ್ಯಾಸಕರಿಗೆ ನೀಡುವಂತಹ ಸಂಬಳದ ಜೊತೆಗೆಅವರಿಗೆ ನೀಡುವ ಎಲ್ಲಾ ರೀತಿಯ ಸೇವಾ ಭದ್ರತೆಗಳನ್ನು ಒದಗಿಸಬೇಕು. ಇಲ್ಲದೇ ಹೋದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರದ ಶೋಷಣೆಯ ವಿರುದ್ದ ನ್ಯಾಯಾಲಯದ ಖದವನ್ನುತಟ್ಟುವೆವು ಎಂದು ಸರ್ಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
 ಗೌರವಾಧ್ಯಕ್ಷ ಲಕ್ಷಿö್ಮÃನಾರಾಯಣ ಮಾತನಾಡಿ, ಅತಿಥಿ ಉಪನ್ಯಾಸಕರರನ್ನು ಖಾಯಂ ಮಾಡುವವರೆಗೂ ನಮ್ಮ ಸಾಮೂಹಿಕ ತರಗತಿ ಬಹಿಷ್ಕಾರದ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ. ವಿಧಾನಸಭೆಯ ಕಲಾಪ ಬೆಳಗಾವಿಯಲ್ಲಿ ಮುಗಿದ ನಂತರ ಎಲ್ಲಾ ಅತಿಥಿ ಉಪನ್ಯಾಸಕರು ಬೆಂಗಳೂರು ಚಲೋ ಎಂಬ ಬೃಹತ್ ಪ್ರತಿಭಟನೆಯನ್ನು ಕೈಗೊಂಡು ವಿಧಾನಸೌಧವನ್ನು ಮುತ್ತಿಗೆ ಹಾಕುವೆವು. ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
 ಜಿಲ್ಲಾ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಡಾ||ಲಕ್ಷೀದೇವಿ ಮಾತನಾಡಿ, ಸರ್ಕಾರಗಳು ಮಹಿಳಾ ಸಬಲೀಕರಣದ ಭಾಷಣಗಳನ್ನು ವೇದಿಕೆಗಳಲ್ಲಿ ಮಾಡುತ್ತಿದ್ದಾರೆಯೇ ವಿನಹಃ ನಮ್ಮ ಸಬಲೀಕರಣಕ್ಕಾಗಿ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡದೆ, ಕನಿಷ್ಠ ತರಕಾರಿ ಮಾರುವನಗಿಂತ ಕಡಿಮೆ ಗೌರವಧನವನ್ನು ನೀಡುತ್ತಾ, ಶೋಷಣೆಯನ್ನು ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ನಮ್ಮಗಳನ್ನು ಖಾಯಂ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನಿಟ್ಟರು.
ರಾಜ್ಯ ಅ.ಉ.ಸಂ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಳ ಮುನಿಯಪ್ಪ, ರವೀಂದ್ರ, ಪೊಲೀಸ್ ಇಲಾಖೆಯ ನಿವೃತ್ತ ನೌಕರರಾದ ಟೈಗರ್ ವೆಂಕಟೇಶ, ಉಪನ್ಯಾಸಕರುಗಳಾದ ರವಿ, ತ್ಯಾಗರಾಜು, ಹೆಚ್.ಎಂ ಶಿವರಾಜ್, ಅಶೋಕ್ ತುರುವಾಲಟ್ಟಿ ಪ್ರಕಾಶ್‌ಕುಮಾರ್, ಕೆ.ರಮಾನಂದ, ಕಾವೇರಪ್ಪ, ಹೆಚ್.ಎಂ, ಬಾಲಾಜಿ, ಗೋಪಿ, ಇದ್ದರು.