ಮೇಲ್ಮನೆ ಚುನಾವಣೆ: 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

90 mlc election candidates list 2021

ಮೇಲ್ಮನೆ ಚುನಾವಣೆ: 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಮೇಲ್ಮನೆ ಚುನಾವಣೆ: 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಹಣವಾಗಿ ಮಾರ್ಪಟ್ಟಿರುವ ವಿಧಾನಪರಿಷತ್‌ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. 


ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಶಾಸಕರು, ಲೋಕಸಭಾ ರಾಜ್ಯಸಭೆ, ಪಟ್ಟಣ್ಣ ಪಂಚಾಯ್ತಿ, ನಗರಸಭೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತದಾನದ ಹಕ್ಕನ್ನು ಹೊಂದಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ತೆಗೆದುಕೊಂಡಿದೆ. 20 ಕ್ಷೇತ್ರಗಳ ಒಟ್ಟು 25 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಣದಲ್ಲಿ 90 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಚಿಕ್ಕಮಗಳೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗಾಯತ್ರಿ ಶಾಂತೇಗೌಡ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

ಬಂಹಿರAಗ ಪ್ರಚಾರವು ಈಗಾಗಲೇ ಮುಕ್ತಾಯವಾಗಿದ್ದು, ಶುಕ್ರವಾರ ಮಧ್ಯರಾತ್ರಿ 12ರವರೆಗೆ 5 ಜನಕ್ಕಿಂತ ಹೆಚ್ಚಾಗಿ ಅಧಿಕೃತವಾಗಿ ಗುಂಪು ಸೇರುವುದು ಮತ್ತು ಬಹಿರಂಗ ಚುನಾವಣಾ ಸಭೆಗಳನ್ನು ನಿಷೇಧಿಸಲಾಗಿದೆ. ಮತದಾನ ನಡೆಯುವ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದ ಮತದಾನ ಕೇಂದ್ರಗಳ ಸುತ್ತಲು 200 ಮೀ. ಪ್ರದೇಶದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಎರಡು ದಿನ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ 20 ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ದರೆ, ಜೆಡಿಎಸ್ ತನ್ನ ಪ್ರಾಬಲ್ಯವಿರುವ 6 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಮೇಲ್ನೋಟಕ್ಕೆ ಈ ಚುನಾವಣಾ ಫಲಿತಾಂಶ ಸರಕಾರ ಹಾಗೂ ಪ್ರತಿಪಕ್ಷಗಳಿಗೆ ಯಾವುದೇ ರೀತಿಯಲ್ಲೂ ಅತಂಹ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂಬ ಮಾತುಗಳು ರಾಜಕೀಯ ಪಾಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಆದರೆ ಮುಂಬರುವ ಜಿಲ್ಲಾ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದ ಪಕ್ಷವು ಆತ್ಮವಿಶ್ವಾಸದಿಂದ ಮುನ್ನಗ್ಗಿ, 2023 ರ ವಿಧಾನಸಭಾ ಚುನಾವಣೆಗೆ ವೇದಿಕೆ ಮಾಡಿಕೊಳ್ಳಲು ಸಜಜ್ಜಾಗಲಿವೆ. ಒಂದು ವೇಳೆ ಬಿಜೆಪಿ 12ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಜನಾದೇಶ ತಮ್ಮ ಪರವಾಗಿದೆ ಎಂದು ಬಿಂಬಿಸಿಕೊಳ್ಳಲಿದೆ. ಅಲ್ಲದೆ, ಮೇಲ್ಮನೆಯಲ್ಲೂ ಬಹಮತ ಸಿಗಲಿದ್ದು, ಸಭಾಧ್ಯಕ್ಷ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿದೆ.

ಕೆಲವು ಮಸೂದೆಗಳ ಅಂಗೀಕಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪದೇ ಪದೇ ಮೇಲ್ಮನೆಯಲ್ಲಿ ಅಡ್ಡಿ ಪಡಿಸುತ್ತಿರುವ ಕಾರಣ, ಪರಿಷತ್ ನಲ್ಲಿ ಬಹುಮತ ಪಡೆಯಬೇಕೆಂಬ ಬಹುದಿನಗಳ ಕನಸನ್ನು ನನಸು ಮಾಡಲು ಕಮಲಪಡೆ ಈ ಚುನಾವಣೆಯಲ್ಲಿ ತನ್ನೆಲ್ಲಾ ಶಕ್ತಿಯನ್ನು ಧಾರೆ ಎರೆದಿದೆ. ಕಾಂಗ್ರೆಸ್‌ಗೂ ಪ್ರತಿಷ್ಠೆ: ಇನ್ನು ಪ್ರತಿಪಕ್ಷ ಕಾಂಗ್ರೆಸ್ ಕನಿಷ್ಟ ಪಕ್ಷ 10 ಸ್ಥಾನವನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿದೆ.

ನಿವೃತ್ತಿಯಾಗಲಿರುವ ಒಟ್ಟು 25 ಸದಸ್ಯರ ಪೈಕಿ ಕಾಂಗ್ರೆಸ್ 12 ಸದಸ್ಯರು ಇದ್ದಾರೆ. ಕನಿಷ್ಟ. 10 ಸ್ಥಾನಗಳನ್ನು ಗೆದ್ದರೆ, ಪರಿಷತ್‌ನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಲೆಕ್ಕಾಚಾರ ಕೈ ಪಕ್ಷದ್ದು. ಬಿಜೆಪಿಗೆ ಬಹುಮತ ಬಾರದಂತೆ ತಡೆಯುವುದು ಹಾಗೂ ಹೆಚ್ಚು ಸ್ಥಾನ ಗೆದ್ದರೆ, ಜನಾದೇಶವು ಬಿಜೆಪಿ ವಿರುದ್ದವಾಗಿದೆ ಎಂಬುದನ್ನು ಬಿಂಬಿಸಲು ಮುಂದಾಗಿದೆ. ಹೀಗಾಗಿಯೇ ಎಷ್ಟೇ ಅಸಮಾಧಾನಗಳಿದ್ದರೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಈ ಚುನಾವಣೆಯಲ್ಲಿ ತಮ್ಮ ತಮ್ಮ ಮುನಿಸುಗಳನ್ನು ಮರೆತು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಸಾಲು ಸಾಲು ಚುನಾವಣಾ ಸೋಲು ಪ್ರಮುಖ ನಾಯಕರ ವಲಸೆಯಿಂದ ದಿಕ್ಕೆಟ್ಟಿರುವ ಜೆಡಿಎಸ್ ಈ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬದಲು ಸೀಮಿತ ಕ್ಷೇತ್ರದಲ್ಲೇ ಅಂದರೆ ಆರು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ.

ತನ್ನ ಪ್ರಾಬಲ್ಯವಿರುವ ಹಳೇ ಮೈಸೂರಿನಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಂಡು ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಹಾಗೂ 2023ರ ವಿಧಾನಸಭೆ ಚುನಾವಣೆಗೆ ಸಂದೇಶ ರವಾನಿಸಲು ದಳಪತಿಗಳು ಸಜ್ಜಾಗಿದ್ದಾರೆ. ಇದೇ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 16ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ.

ಹಾಸನ
ಬಿಜೆಪಿ - ವಿಶ್ವ ನಾಥ್
ಕಾಂಗ್ರೆಸ್ - ಹಾಸನ- ಶಂಕರಪ್ಪ
ಜೆಡಿಎಸ್ - ಸೂರಜ್ ರೇವಣ್ಣ


ಮಂಡ್ಯ
ಬಿಜೆಪಿ - ಮಂಜು ಕೆ.ಆರ್.ಪೇಟೆ
ಕಾಂಗ್ರೆಸ್ - ದಿನೇಶ್ ಗೂಳಿಗೌಡ
ಜೆಡಿಎಸ್ - ಅಪ್ಪಾಜಿಗೌಡ


ತುಮಕೂರು
ಬಿಜೆಪಿ - ಎನ್. ಲೋಕೇಶ್
ಕಾಂಗ್ರೆಸ್ - ತುಮಕೂರು- ರಾಜೇಂದ್ರ
ಜೆಡಿಎಸ್ - ಅನಿಲ್ ಕುಮಾರ್


ಬೆಂ. ಗ್ರಾಮಾಂತರ
ಬಿಜೆಪಿ - ಬಿ.ಎಂ.ನಾರಾಯಣಸ್ವಾಮಿ
ಕಾAಗ್ರೆಸ್ - ಎಸ್.ರವಿ
ಜೆಡಿಎಸ್ - ಹೆಚ್.ಎಂ.ರಮೇಶ್ ಗೌಡ


ಕೋಲಾರ
ಬಿಜೆಪಿ - ಕೆ.ಎನ್.ವೇಣುಗೋಪಾಲ್
ಕಾಂಗ್ರೆಸ್ - ಎಂ.ಎಲ್.ಅನಿಲ್‌ಕುಮಾರ್
ಜೆಡಿಎಸ್ - ವಕ್ಕಲೇರಿ ರಾಮು


ಮೈಸೂರು
ಬಿಜೆಪಿ - ಮೈಸೂರು- ರಘು ಕೌಟಿಲ್ಯ
ಕಾಂಗ್ರೆಸ್ - ಡಾ. ಡಿ.ತಿಮ್ಮಯ್ಯ
ಜೆಡಿಎಸ್ - ಸಿ.ಎನ್.ಮಂಜೇಗೌಡ


ಕೊಡಗು
ಬಿಜೆಪಿ - ಸುಜಾ ಕುಶಾಲಪ್ಪ
ಕಾಂಗ್ರೆಸ್ - ಮಂಥರ್‌ಗೌಡ


ಕಲಬುರಗಿ
ಬಿಜೆಪಿ - ಬಿ.ಜಿ. ಪಾಟೀಲ
ಕಾಂಗ್ರೆಸ್ - ಶಿವಾನಂದ ಮರ್ತೂರ್


ಬೆಳಗಾವಿ
ಬಿಜೆಪಿ - ಮಹಂತೇಶ ಕವಟಗಿಮಠ
ಕಾಂಗ್ರೆಸ್ - ಚನ್ನರಾಜ್ ಹಟ್ಟಿಹೊಳಿ
ಲಖನ್ ಜಾರಕಿಹೊಳಿ- ಪಕ್ಷೇತರ


ಉತ್ತರ ಕನ್ನಡ
ಬಿಜೆಪಿ - ಗಣಪತಿ ಉಳ್ವೇಕರ್
ಕಾಂಗ್ರೆಸ್ - ಭೀಮಣ್ಣ ನಾಯ್ಕ


ಧಾರವಾಡ
ಬಿಜೆಪಿ ? ಪ್ರದೀಪ್ ಶೆಟ್ಟರ್
ಕಾಂಗ್ರೆಸ್ ? ಸಲೀಂ ಅಹ್ಮದ್


ರಾಯಚೂರು
ಬಿಜೆಪಿ - ವಿಶ್ವನಾಥ್ ಎ. ಬನಹಟ್ಟಿ
ಕಾಂಗ್ರೆಸ್ - ಶರಣಗೌಡ ಪಾಟೀಲ್


ಚಿತ್ರದುರ್ಗ
ಬಿಜೆಪಿ - ಕೆ.ಎಸ್.ನವೀನ್
ಕಾಂಗ್ರೆಸ್ - ಸೋಮಶೇಖರ್


ಶಿವಮೊಗ್ಗ
ಬಿಜೆಪಿ - ಡಿ.ಎಸ್.ಅರುಣ್
ಕಾಂಗ್ರೆಸ್ - ಪ್ರಸನ್ನಕುಮಾರ್


ದಕ್ಷಿಣ ಕನ್ನಡ
ಬಿಜೆಪಿ - ಕೋಟಾ ಶ್ರೀನಿವಾಸ ಪೂಜಾರಿ
ಕಾಂಗ್ರೆಸ್ - ಮಂಜುನಾಥ ಭಂಡಾರಿ


ಚಿಕ್ಕಮಗಳೂರು
ಬಿಜೆಪಿ - ಎಂ.ಕೆ. ಪ್ರಾಣೇಶ್
ಕಾಂಗ್ರೆಸ್ - ಗಾಯಿತ್ರಿ ಶಾಂತಗೌಡ


ವಿಜಯಪುರ
ಬಿಜೆಪಿ - ಪಿ.ಹೆಚ್. ಪೂಜಾರ್
ಕಾಂಗ್ರೆಸ್ - ಸುನೀಲ್‌ಗೌಡ ಪಾಟೀಲ್


ಬಳ್ಳಾರಿ
ಬಿಜೆಪಿ - ವೈ.ಎಂ. ಸತೀಶ್
ಕಾಂಗ್ರೆಸ್ - ಕೆ.ಸಿ. ಕೊಂಡಯ್ಯ


ಬೆAಗಳೂರು ನಗರ
ಬಿಜೆಪಿ - ಗೋಪಿನಾಥ್ ರೆಡ್ಡಿ
ಕಾಂಗ್ರೆಸ್ - ಕೆಜಿಎಫ್ ಬಾಬು


ಬೀದರ್
ಬಿಜೆಪಿ - ಪ್ರಕಾಶ್ ಖಂಡ್ರೆ
ಕಾAಗ್ರೆಸ್ - ಭೀಮರಾವ್ ಪಾಟೀಲ್