ಅಪ್ರಸ್ತುತತೆಯ ವ್ಯವಸ್ಥಿತ ಬಿತ್ತನೆ! ಮುಂದಿನ ಪೀಳಿಗೆಗೆ ಕೃತಕ ಇತಿಹಾಸ ತುಂಬುವ ಕಸರತ್ತು!! -ಕರಣಂ ರಮೇಶ್

ಅಪ್ರಸ್ತುತತೆಯ ವ್ಯವಸ್ಥಿತ ಬಿತ್ತನೆ! ಮುಂದಿನ ಪೀಳಿಗೆಗೆ ಕೃತಕ ಇತಿಹಾಸ ತುಂಬುವ ಕಸರತ್ತು!! -ಕರಣಂ ರಮೇಶ್

 


ಅಪ್ರಸ್ತುತತೆಯ ವ್ಯವಸ್ಥಿತ ಬಿತ್ತನೆ! ಮುಂದಿನ ಪೀಳಿಗೆಗೆ ಕೃತಕ ಇತಿಹಾಸ ತುಂಬುವ ಕಸರತ್ತು!!


ಕರಣಂ ರಮೇಶ್


ನಾವೆಲ್ಲ ಸುಮಾರು ನಾಲ್ಕೈದು ದಶಕಗಳಿಂದ ಶಾಲೆಯ ಪಠ್ಯದಲ್ಲಿ ಓದಿ, ಕಲಿತು, ತಿಳಿದುಕೊಂಡಿರುವ ಇತಿಹಾಸದ ಮೂಲಕ ನಮ್ಮ ಹಿಂದಿನ, ಪೂರ್ವದವರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರö್ಯ ಬಂದಿತು ಎಂದು ನಂಬಿಕೊಂಡು ಬಂದಿದ್ದೇವೆ. ನಮ್ಮ ಮಕ್ಕಳಿಗೂ ಅದರ ಬಗ್ಗೆಯೇ ಹೇಳಿದ್ದೇವೆ. ಕಲಿಸಿದ್ದೇವೆ. ಲಭ್ಯವಿರುವ ಇತಿಹಾಸದ ದಾಖಲೆಗಳ ಪ್ರಕಾರ ನಾವು ಕಲಿತದ್ದು ಮತ್ತು ನಮ್ಮ ಮುಂದಿನ ಪೀಳಿಗೆಗೆ ಅರುಹಿ ತಿಳಿಸಿದ್ದನ್ನೇ ಪುಷ್ಟೀಕರಿಸುತ್ತಿದೆ!


ಆದರೆ, ತೀರಾ ಇತ್ತೀಚೆಗೆ ಅಂದರೆ, ನಮಗೆ ಢಾಳಾಗಿ ಕಾಣಿಸುತ್ತಿರುವಂತೆ ಕಳೆದ ಏಳೆಂಟು ವರ್ಷಗಳಿಂದ ನಾವು ಇತಿಹಾಸದಲ್ಲಿ ಓದಿರುವುದೇ ತಪ್ಪು ಎಂಬ ಭಾವನೆಯನ್ನು ಪ್ರಸ್ತುತದ ತಲೆಮಾರಿನ ಯುವ ಸಮುದಾಯದಲ್ಲಿ ಬಿತ್ತುವ ವ್ಯವಸ್ಥಿತ ಕಾರ್ಯ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ.  ಹಾಗೆ ನೋಡಿದರೆ, ಇತಿಹಾಸವನ್ನು ಸ್ವಲ್ಪ ಕೆದಕಿ ನೋಡಿದರೆ, ಈ ರೀತಿಯ ಕೆಲಸ 1925ರಷ್ಟು ಹಿಂದೆಯೇ ಅಂದರೆ, ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಿಗೊಳಿಸಬೇಕೆಂಬ ಆಶಯದಲ್ಲಿ ನಡೆಯುತ್ತಿದ್ದ ಸ್ವಾತಂತ್ರö್ಯ ಸಂಗ್ರಾಮಕ್ಕೆ ಸಮಾನಾಂತರವಾಗಿಯೇ ಇದು ಆರಂಭವಾಗಿತ್ತು!


ತೀರಾ ಗುಪ್ತವಾಗಿ, ಅಷ್ಟೇ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಪ್ರಕ್ರಿಯೆ ಎಲ್ಲರಿಗೂ ಕಾಣುವಂತೆ ಬೆಳಕಿಗೆ ಬಂದದ್ದು ತೀರಾ ಇತ್ತೀಚಿನ ವರ್ಷಗಳಲ್ಲಿ ಅಂದರೆ 2010-11ರಲ್ಲಿ. ಆ ವೇಳೆಗಾಗಲೇ ಪ್ರಬಲವಾಗಿ ಬೆಳೆಯುತ್ತಿದ್ದ, ಅಲ್ಲಿ ಬರುತ್ತಿರುವುದೇ ಸತ್ಯ ಎಂದು ಎಲ್ಲರೂ ಸುಲಭವಾಗಿ ನಂಬುವಂತಹ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಕ್ರಿಯಾತ್ಮಕವಾಗಿ ಬಳಸಿಕೊಳ್ಳಲಾಯಿತು. ಇದೇ ಸತ್ಯ ಎಂದು ನಂಬಿಸುವ ಕೆಲಸವೂ ಕೂಡಾ ಅಷ್ಟೇ ಪ್ರಬಲವಾಗಿ ನಡೆಯಿತು. ಇದಕ್ಕೆ ಬಲಿಯಾದ ಮೊದಲ ವ್ಯಕ್ತಿ ಅಂದರೆ ಸ್ವಾತಂತ್ರö್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ!


ಮಹಾತ್ಮ ಗಾಂಧೀಜಿ ನಮ್ಮ ಭಾರತದ ಇತಿಹಾಸದಲ್ಲಿ, ನಮ್ಮ ದೇಶದ ಸಂಸ್ಕೃತಿಯಲ್ಲಿ, ನಡೆ, ನುಡಿ.. ಹೀಗೆ ಎಲ್ಲೆಲ್ಲಿ ನಮ್ಮ ಜೀವನ ಇದೆಯೋ ಅಲ್ಲೆಲ್ಲಾ ಪ್ರಸ್ತುತರಾಗಿದ್ದಾರೆ. ಗಾಂಧೀಜಿಯನ್ನು ಹೊರತುಪಡಿಸಿದ ಇತಿಹಾಸ ಇಲ್ಲ. ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗೆ ನೋಡಿದರೆ ಸ್ವಚ್ಛತೆಗೆ ಅನ್ವರ್ಥವಾದವರೇ ಗಾಂಧೀಜಿ. ಅಸ್ಪೃಶ್ಯತೆಯನ್ನು ತೊಡೆದು ಹಾಕುವ ಸಂಕಲ್ಪಕ್ಕೆ ನಾಂದಿ ಹಾಡಿದವರೇ ಗಾಂಧೀಜಿ!


ಗಾAಧೀಜಿಯ ಸ್ವಚ್ಛತಾ ಆಶಯಗಳನ್ನಿಟ್ಟುಕೊಂಡೇ ಬಹಳ ದೊಡ್ಡ ರೀತಿಯಲ್ಲೇ ರಾಷ್ಟಾçದ್ಯಂತ ಆರಂಭಿಸಲಾದ ಸ್ವಚ್ಛತಾ ಭಾರತ್ ಅಂತಹ ದೊಡ್ಡ ಆಂದೋಲನದ ಪ್ರಚಾರದಲ್ಲಿ ಗಾಂಧೀಜಿಯನ್ನೇ ಹೊರಗಿಟ್ಟು ಆತನ ಕನ್ನಡಕವನ್ನಷ್ಟೇ ಸಾಂಕೇತಿಕವಾಗಿ ಬಳಸಲಾಯಿತು. ಇಲ್ಲಿಂದಲೇ ಅಧಿಕೃತವಾಗಿ ಆರಂಭವಾಗಿದ್ದು ಗಾಂಧೀಜಿಯನ್ನು ಅಪ್ರಸ್ತುತಗೊಳಿಸುವ ಹುನ್ನಾರ!


ಇದಕ್ಕೂ ಮುಂಚೆಯೇ ಗಾಂಧೀಜಿಯ ಬಗ್ಗೆ ಅಪಪ್ರಚಾರಗಳು, ಮಹಾತ್ಮನನ್ನು ಹೀಯಾಳಿಸುವ, ಆತನನ್ನ ಸಾಯಿಸಿದ್ದೇ ಒಳಿತಾಯಿತು ಹೀಗೇ ಇಂತಹ ಹತ್ತಾರು ಪ್ರಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯಿತು. ಆತನನ್ನು ಕೊಂದುಹಾಕಿದವರನ್ನೇ ಹೀರೋಗಳಂತೆ ಬಿಂಬಿಸಲಾಯಿತು. ಈ ರೀತಿಯ ಪ್ರಯತ್ನಗಳು ಈಗಲೂ ನಡೆಯುತ್ತಲೇ ಇವೆ. ಹೀಗೆ ಗಾಂಧೀಜಿಯವರ ಬಗ್ಗೆ ಅಸಹನೆಯ ಬೀಜವನ್ನು ಬಿತ್ತುವ ಕಾರ್ಯವನ್ನು ಮಾಡುತ್ತಲೇ ಬರಲಾಗುತ್ತಿದೆ. ಆದರೆ, ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಗಾಂಧೀಜಿಯನ್ನು ಜನಮಾನಸದಿಂದ ದೂರ ಮಾಡುವಲ್ಲಿ ನಿರೀಕ್ಷಿಸಿದ ಯಶ ಕಾಣಲಿಲ್ಲ ಎಂಬುದು ಬೇರೆ ಮಾತು!


ಈಗ ಸ್ವಾತಂತ್ರö್ಯ ಸಂಗ್ರಾಮದತ್ತ ಹೊರಳುತ್ತಿದೆ ಹಿತಾಸಕ್ತಿಗಳ ನೋಟ. ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವವನ್ನು ಅತ್ಯಂತ ಸಂಭ್ರಮದಿAದಲೇ ಆಚರಿಸಿಕೊಂಡು ಬರಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲೇ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಭಾಗವಹಿಸಿ ಹುತಾತ್ಮರಾದ ಲಕ್ಷಾಂತರ ಜನರ ತ್ಯಾಗ-ಬಲಿದಾನಗಳನ್ನು ಅಲ್ಲಗಳೆಯುವ ಯತ್ನಕ್ಕೆ ಕೈಹಾಕಲಾಗಿದೆ!


ಇಲ್ಲಿಂದ ಮುಂದೆ ಹೋಗುವ ಮುನ್ನ ನಾವೆಲ್ಲಾ ಇತಿಹಾಸದ ಪುಟಗಳಿಂದ ಓದಿ ತಿಳಿದಿರುವ ಸ್ವಾತಂತ್ರö್ಯ ಸಂಗ್ರಾಮದ ಬಗ್ಗೆ ಅತ್ಯಂತ ಸೂಕ್ಷö್ಮವಾಗಿ ಒಂದೆರಡು ಮಾತುಗಳು. ಬ್ರಿಟೀಷರ ವಿರುದ್ಧದ ಭಾರತೀಯ ಹೋರಾಟ ಆರಂಭಗೊAಡಿದ್ದು 1710ರ ಆಸುಪಾಸಿನಲ್ಲಿ. ಅತ್ಯಂತ ಪ್ರಖರವಾಗಿ ಸ್ಫೋಟಿಸಿದ್ದು 1857ದಲ್ಲಿ. ಲಭ್ಯವಿರುವ ಮಾಹಿತಿಯ ಪ್ರಕಾರ ಸ್ವಾತಂತ್ರö್ಯ ಸಂಗ್ರಾಮಕ್ಕೆ ತಮ್ಮ ಯೌವನದಲ್ಲೇ ಧುಮುಕಿ ಬ್ರಿಟೀಷರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದವರ ಸಂಖ್ಯೆ ಸುಮಾರು ಎಂಟರಿAದ ಹತ್ತು ಲಕ್ಷ! ಅಂದರೆ ಎಂಟು ಹತ್ತು ಲಕ್ಷದಷ್ಟು ಕುಟುಂಬಗಳು ತಮ್ಮ ಕುಟುಂಬದವರೊಬ್ಬರನ್ನು ದೇಶಕ್ಕಾಗಿ ಬಲಿಕೊಟ್ಟರು. ಅದಕ್ಕಾಗಿ ಹೆಮ್ಮೆ ಪಟ್ಟರು! ಈ ಹೋರಾಟದಲ್ಲಿ ನಮಗೆ ಪ್ರಧಾನವಾಗಿ ಕಂಡುಬರುವ ಮಂಗಲ್‌ಪಾAಡೆಯವರಿAದ ಹಿಡಿದು ರಾಜಗುರು ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್, ಸುಖದೇವ್, ಇಂತಹ ಲಕ್ಷಾಂತರ ಯುವಕರು ದೇಶಕ್ಕಾಗಿ ನಗುನಗುತ್ತಲೇ ಮುನ್ನುಗ್ಗಿ ಬ್ರಿಟೀಷರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗಿದ್ದಾರೆ.


ಇದೆಲ್ಲಕ್ಕಿಂತಲೂ ಹೆಚ್ಚಾಗಿ ಸ್ವಾತಂತ್ರö್ಯ ಸಂಗ್ರಾಮದ ಕಿಚ್ಚು ಬರೀ ಯುವಕರಲ್ಲಿ ಮಾತ್ರ ಇರಲಿಲ್ಲ. ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಬೇಕೆಂಬ ಕಿಚ್ಚು ಹಚ್ಚಿಸಿಕೊಂಡು ಕೆಚ್ಚಿನಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹಲವಾರು ಧೀರೋದಾತ್ರ ಮಹಿಳೆಯರ ಉಲ್ಲೇಖಗಳೂ ಇತಿಹಾಸದ ರಕ್ತಸಿಕ್ತ ಪುಟಗಳಲ್ಲಿವೆ.
ಅಂತಹವರಲ್ಲಿ ಒಬ್ಬಳು ಅಸ್ಸಾಮಿನ 19 ವರ್ಷದ ಯುವತಿ ಕನಕರತ್ನ ಬರೂವಾ! ಬಹುಶಃ ಚಿಕ್ಕಂದಿನಿAದಲೆ ಸ್ವಾಂತAತ್ರö್ಯ ಹೋರಾಟವನ್ನೇ ಹತ್ತಿರದಿಂದ ಕಂಡು ಕಿಚ್ಚು ತುಂಬಿಕೊAಡ ಕನಕರತ್ನ ಎಂಬ ದಿಟ್ಟ ಹೋರಾಟಗಾರ್ತಿ 1942ರ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡವಳು. ಇದಷ್ಟೇ ಅಲ್ಲದೆ, ಸ್ವಾತಂತ್ರö್ಯ ಸಂಗ್ರಾಮಕ್ಕಾಗಿ ಪ್ರಾಣಕೊಡಲೂ ಸಿದ್ಧವಾದ ಆತ್ಮಹತ್ಯಾ ದಳದಲ್ಲಿದ್ದಳು. ಗೋಹ್ಪುರ್ ಪೊಲೀಸ್ ಠಾಣೆಯ ಮೇಲೆ ಭಾರತದ ತ್ರಿವರ್ಣವನ್ನು ಹಾರಿಸಬೇಕೆಂಬ ರಣೋತ್ಸಾಹದಿಂದ ತನ್ನ ಸ್ನೇಹಿತೆಯರೊಂದಿಗೆ ತೆರಳಿ ಬ್ರಿಟೀಷರ ಗುಂಡಿಗೆ ಬಲಿಯಾದಳು.
ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಬೇಕೆಂಬ ಕಿಚ್ಚಿನಿಂದ ಹೋರಾಡಿ ಪ್ರಾಣತೆತ್ತ ಇವರುಗಳ ಪ್ರಾಣಕ್ಕೆ ಬೆಲೆಯೇ ಇಲ್ಲ ಎಂಬ ಮಾತುಗಳು ಕೇಳಿದಾಗ, ಸ್ವಾತಂತ್ರö್ಯ ಹೋರಾಟವನ್ನೇ ಭಿಕ್ಷೆ ಎಂಬAತೆ ಬಿಂಬಿಸುವ ಯತ್ನಗಳನ್ನು ಕಂಡಾಗ ನಿಜವಾದ ದೇಶಪ್ರೇಮಿಗಳ ರಕ್ತ ಕುದಿಯುವುದು ಸಹಜ! ಅದೇ ಅನುಭವ ನನಗೂ ಆಗುತ್ತಿದೆ.


ಭಿಕ್ಷೆ ಎಂಬ ಪದ ಬಳಕೆಯಿಂದ ನಾನು ಯಾರ ಬಗ್ಗೆ, ಯಾವ ವಿಷಯದ ಬಗ್ಗೆ ಮಾತನಾಡ್ತಿದೇನೆ ಅಂತ ನಿಮಗೆ ಈಗಾಗಲೇ ಅರ್ಥವಾಗಿರಬಹುದು. ಹೌದು ನಾನು ಇಷ್ಟೆಲ್ಲಾ ಹೇಳಿದ್ದು ತನ್ನ ಅಭಿನಯದ ಮೂಲಕ ಎಂಬುದಕ್ಕಿAತ ಹೆಚ್ಚಾಗಿ ತನ್ನ ಹಲವಾರು ವಿವಾದಾತ್ಮಕ ಹೇಳಿಕೆಗಳ ಮೂಲಕ, ಬಿಜೆಪಿಯ ಪರವಾದ ಹೇಳಿಕೆಗಳ ಮೂಲಕ ಪ್ರಸಿದ್ಧಿ ಪಡೆದ, ಕೇಂದ್ರದಿAದ ವಿಶೇಷ ಭದ್ರತೆಯ ಸೌಲಭ್ಯ ಪಡೆದುಕೊಂಡಿರುವ ಬಾಲಿವುಡ್ ನಟಿ ಕಂಗನಾ ರಾನೌಟ್‌ಳ ಹೇಳಿಕೆ ಬಗ್ಗೆಯೇ. ಆದರೆ, ಆಕೆಯ ಬಗ್ಗೆ ನಾನೇನೂ ಹೆಚ್ಚು ಹೇಳುವುದಿಲ್ಲ. ಯಾಕೆಂದರೆ ನಮ್ಮ ಪ್ರತಿ ಪ್ರತಿಕ್ರಿಯೆಗಳಿಗೂ ಅದರದೇ ಆದ ಯೋಗ್ಯತೆ ಇರುತ್ತದೆ. ಈ ವಿಷಯದಲ್ಲಿ ನನ್ನ ಅಭಿಪ್ರಾಯದ ಯೋಗ್ಯತೆ ಕಳೆಯಲು ನಾನು ಸಿದ್ಧನಿಲ್ಲ.


ನನ್ನ ಕೋಪ, ಆಕ್ರೋಶ ಇರುವುದು ಆಕೆಯನ್ನ ಸಂದರ್ಶನ ನಡೆಸಿದ ರಾಷ್ಟ್ರೀಯ ಮಾಧ್ಯಮಗಳಲ್ಲಿ ಒಂದಾದ ಟೈಮ್ಸ್ ಆಫ್ ಇಂಡಿಯಾದ ಅಂಗ ಸಂಸ್ಥೆಯಾದ ಟೈಮ್ಸ್ ನೌ ಬಗ್ಗೆ ಮತ್ತು ಕಂಗನಾಳ ಸಂದರ್ಶನ ಮಾಡಿದ ಅದರ ಸಂಪಾದಕಿ ನವಿಕಾ ಕುಮಾರ್ ಬಗ್ಗೆ.


ಮಾಧ್ಯಮಗಳಿಂದ ದೃಷ್ಟಿಕೋನಗಳು ರೂಪುಗೊಳ್ಳುತ್ತವೆ. ದೃಷ್ಟಿಕೋನಗಳು ಜನಾಭಿಪ್ರಾಯವನ್ನು ನಿರ್ದೇಶಿಸುತ್ತವೆ. ಜನಾಭಿಪ್ರಾಯ ದೇಶದ ಸಂಸ್ಕೃತಿಯನ್ನು ಪ್ರಭಾವಿಸುತ್ತದೆ ಎಂಬ ಮಾತುಗಳಲ್ಲಿ ನಂಬಿಕೆ ಇಟ್ಟವನು ನಾನು. ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿ ನಾನು ಕಂಡುಕೊAಡ ಹಾಗೂ ಪಾಲಿಸಿಕೊಂಡು ಬಂದಿರುವ ಸತ್ಯವೂ ಇದೇ.


ಈ ಹಿನ್ನೆಲೆಯಲ್ಲಿ ಮಾಧ್ಯಮದಲ್ಲಿ ದೇಶಕ್ಕೆ ಅವಮಾನವಾಗುವ ರೀತಿಯಲ್ಲಿ ಯಾರಾದರೂ ಅಜ್ಞಾನದಿಂದಲೇ ಅಥವಾ ತಮ್ಮ ಸೀಮಿತ ಜ್ಞಾನದಿಂದಲೋ ಅಥವಾ ಉದ್ದೇಶಪೂರಕವಾಗಿಯೋ ಅವಹೇಳನಕಾರಿಯಾಗಿ, ದೇಶದ ಇತಿಹಾಸಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದರೆ ಅದನ್ನ ಅಲ್ಲೇ ಧಿಕ್ಕರಿಸಿ, ತಪ್ಪು ತಿದ್ದುವ ಕೆಲಸ ಮಾಡಲೇಬೇಕು. ಆ ಮೂಲಕ ಸಮಾಜಕ್ಕೆ ರವಾನೆಯಾಗಬಹುದಾಗಿದ್ದ ತಪ್ಪು ಸಂದೇಶವನ್ನು ತಿದ್ದುವ ಕೆಲಸ ಮಾಡಬೇಕು.


ಆದರೆ, ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಕಂಗನಾ ಉದ್ಧಟತನದಿಂದ, ಮತ್ತಿನ್ಯಾರನ್ನೋ ಓಲೈಸುವ ದೃಷ್ಟಿಯಿಂದ ಸ್ವಾತಂತ್ರö್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಾಗ ಈ ಮೇಲಿನ ಯಾವುದೇ ಕ್ರಮಕ್ಕೆ ಮುಂದಾಗದೇ ಮೌನವಾಗಿದ್ದ ಸಂದರ್ಶಕಿ, ಸಂಪಾದಕಿ ನವಿಕಾ ಕುಮಾರ್‌ದು ಅದಿನ್ನೆಂತಹ ಬೇಜವಾಬ್ದಾರಿತನ? ತಮ್ಮ ಸ್ಥಾನದ ಜವಾಬ್ದಾರಿ ಅರಿವಿಲ್ಲದೇ ಅಲ್ಲಿ ಕುಳಿತಿರುವುದಾ? ಅಥವಾ ಅದು ಉದ್ದೇಶಪೂರ್ವಕ ಮೌನವಾ?


ಈ ಪ್ರಕರಣ ದೇಶಾದ್ಯಂತ ವಿವಾದ ಸೃಷ್ಟಿಸಿದ ನಂತರ ಟೈಮ್ಸ್ ನೌ ಚಾನೆಲ್ ಟ್ವೀಟ್ ಮಾಡಿ ಕಂಗನಾ ಅಭಿಪ್ರಾಯ ದೇಶಕ್ಕಾಗಿ ತ್ಯಾಗ ಮಾಡಿದವರ ಅವಹೇಳನವನ್ನು ಅಲ್ಲಗಳೆದಿದ್ದು, ಅದು ಆಕೆಯ ಅಭಿಪ್ರಾಯವಾಗಿದೆ. ಅದನ್ನು ತಾನು ಬೆಂಬಲಿಸುವುದಿಲ್ಲ ಅಂತ ಹೇಳಿ ಕೈತೊಳೆದುಕೊಂಡಿದೆ.
ಆದರೆ, ಆ ಸಂಸ್ಥೆಗೆ ದೇಶದ ಬಗ್ಗೆ, ದೇಶದ ಸ್ವಾತಂತ್ರö್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಬಗ್ಗೆ ನಿಜವಾದ ಗೌರವ ಇದ್ದಿದ್ದರೆ ಇಂತಹ ಪ್ರಮಾದಕ್ಕೆ ಸಾಕ್ಷಿಯಾಗಿದ್ದೂ ಮೌನವಾಗಿದ್ದ ಸಂಪಾದಕಿ ನವಿಕಾ ಕುಮಾರ್ ಅವರನ್ನು ವಜಾ ಮಾಡಬೇಕಿತ್ತು. ಮತ್ತು ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಿಂದ ಕಿತ್ತೆಸೆಯಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಬರೀ ಟ್ವೀಟ್ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿರುವುದು ದೇಶ ದ್ರೋಹದ ಕೆಲಸ.


ದೇಶದಲ್ಲಿ ಪ್ರಸ್ತುತ ಮಾಧ್ಯಮಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇಂತಹ ಅಪಾಯಕಾರಿ ಧೋರಣೆಗಳು ಹೀಗೇ ಮುಂದುವರಿದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾಗಿರುವ ಮಾಧ್ಯಮ ಕ್ಷೇತ್ರ ಮಹತ್ವ ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ತನ್ನಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯೇ ಕುಸಿಯಲು ಕಾರಣವಾಗುತ್ತದೆ. ಈ ಬಗ್ಗೆ ನಿರಂತರ ಕಣ್ಣಾಗಿ, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದು ಯಾವುದೇ ಜವಾಬ್ದಾರಿಯುತ ಮಾಧ್ಯಮದ ಕರ್ತವ್ಯವಾಗಿದೆ.


ಗಾಂಧೀಜಿಯನ್ನು ಅಪ್ರಸ್ತುತಗೊಳಿಸಲು ಮುಂದಾಗಿರುವAತೆಯೇ ಸ್ವಾತಂತ್ರö್ಯ ಸಂಗ್ರಾಮವನ್ನೂ ಅಪ್ರಸ್ತುತಗೊಳಿಸುವ ಯತ್ನಕ್ಕೆ ಕೈಹಾಕಲಾಗಿದೆಯಾ ಎಂಬ ಅನುಮಾನ ಕಾಡುತ್ತಿದೆ. ಅದರ ಮೊದಲ ಭಾಗವಾಗಿಯೇ ಕಂಗನಾ ಎಂಬ ನಟಿಯ ಮೂಲಕ, ಬಾಲ ಅಲ್ಲಾಡಿಸುವ ಮಾಧ್ಯಮದ ಮೂಲಕ ಅಪ್ರಸ್ತುತತೆಯ ಬೀಜ ಬಿತ್ತುವ ಕೆಲಸವಾಗಿದೆಯಾ? ಇದಷ್ಟೇ ಅಲ್ಲ, ಆ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ ಆಗಮಿಸಿದವರಲ್ಲಿ ಹಲವರು ಕಂಗನಾ ಮಾತಿಗೆ ಚಪ್ಪಾಳೆ ಹೊಡೆದು ತಮ್ಮ ಸಹಮತ ವ್ಯಕ್ತಪಡಿಸಿದ್ದು, ಬದಲಾಗುತ್ತಿರುವ ಜನರ ಮನಸ್ಥಿತಿಯ ಬಗ್ಗೆ ಹೆದರಿಕೆ ಹುಟ್ಟಿಸುತ್ತಿದೆ. ಇದನ್ನು ಬಯಸಿಯೇ ಸಂದರ್ಶನದ ನಾಟಕ ಮಾಡಿದ್ದಾ?


ರಾಷ್ಟçದ ಗೌರವಕ್ಕೆ ಧಕ್ಕೆ ತರುವಂತಹ, ಮಾತುಮಾತಿಗೂ ಯೋಧರ ಬಗ್ಗೆ ಮಾತನಾಡುವ ನಾಯಕರು, ಲಕ್ಷಾಂತರ ಜನರ ತ್ಯಾಗ-ಬಲಿದಾನಗಳಿಂದ ದೊರಕಿದ ನಮ್ಮ ಸ್ವಾತಂತ್ರö್ಯವನ್ನು ಭಿಕ್ಷೆಗೆ ಹೋಲಿಸಿ ಮಾತನಾಡಿದರೂ ಏನೂ ಹೇಳದೇ ಮೌನಕ್ಕೆ ಜಾರಿರುವುದು ನನ್ನ ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ.


ಒಮ್ಮೆ, ಇದೇನಾದರೂ ನಿಜವಾಗಿದ್ದಲ್ಲಿ, ಆ ಬಗ್ಗೆ ವಹಿಸುವ ಪ್ರತಿ ಮೌನವೂ ಭವ್ಯ ಭಾರತದ ನೈಜ ಇತಿಹಾಸದ ಬಗ್ಗೆ ಮುಂದಿನ ಪೀಳಿಗೆಯ ತಲೆಯಲ್ಲಿ ಕೃತಕ ಇತಿಹಾಸ ತುಂಬಿಕೊಳ್ಳಬಹುದಾದ ಅಪಾಯವಿದೆ!