ಕಂಗನಾ ರಣಾವತ್‌ ಹೇಳಿಕೆ ಬೌದ್ಧಿಕ ದಾರಿದ್ರ್ಯದ ಪರಾಕಾಷ್ಟೆ --ನಾ ದಿವಾಕರ

ಕಂಗನಾ ರಣಾವತ್‌ ಹೇಳಿಕೆ ಬೌದ್ಧಿಕ ದಾರಿದ್ರ್ಯದ ಪರಾಕಾಷ್ಟೆ --ನಾ ದಿವಾಕರ

ಕಂಗನಾ ರಣಾವತ್‌ ಹೇಳಿಕೆ ಬೌದ್ಧಿಕ ದಾರಿದ್ರ್ಯದ ಪರಾಕಾಷ್ಟೆ


ನಾದಿವಾಕರ



"2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947 ರಲ್ಲಿ ಸಿಕ್ಕಿದ್ದು ಭಿಕ್ಷೆ" ಎಂದು ವಿವಾದಿತ ಹೇಳಿಕೆನೀಡುವಮೂಲಕ ಬಾಲಿವುಡ್ನಟಿ ಕಂಗನಾರಣಾವತ್,  ತಾವು ಯಾವ ಶಾಲೆಯಲ್ಲಿ ಇತಿಹಾಸದ  ಪಾಠ ಕಲಿತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಾವಿರಾರು ಜನರ ತ್ಯಾಗ ಬಲಿದಾನಗಳ ಫಲ ಭಾರತದ ಸ್ವಾತಂತ್ರ್ಯ. ಈ ವಿಮೋಚನೆಯಪೂರ್ಣ ಸಾರ್ಥಕತೆಯನ್ನು ಹಾಳುಗೆಡಹಿದ ವಿಕೃತಶಕ್ತಿಗಳ ಗರಡಿಯಲ್ಲಿ ಪಳಗಿರುವುದರಿಂದ ಪದ್ಮಶ್ರೀ ಕಂಗನಾ ಗುರುಕಾಣಿಕೆ ಸಲ್ಲಿಸಿದ್ದಾರೆ.

೨೦೧೪ರಲ್ಲಿನಿಜವಾದಸ್ವಾತಂತ್ರ್ಯಲಭಿಸಿರುವುದು, ಎಗ್ಗಿಲ್ಲದೆಮಾತನಾಡುವಪೂರ್ಣಸ್ವಾತಂತ್ರ್ಯಲಭಿಸಿರುವುದು, ಈವಿಕೃತಿಯಸಂತತಿಯಲ್ಲೇಬೆಳೆದುಬಂದಕೂಸುಗಳಿಗೆ. 1947 ರಲ್ಲಿ ಭಾರತಕ್ಕೆ ಭಿಕ್ಷೆ ಲಭಿಸಿದ್ದರೆ ಆ ಭಿಕ್ಷಾಪಾತ್ರೆಯಲ್ಲಿ ಬಿತ್ತಬೀಜ, ಮೊಳಕೆಯೊಡೆದು, ಚೆಂದದ ಸಸಿಯಾಗಿ ಹೆಮ್ಮರವಾಗಿ ರೂಪು ಗೊಂಡಬಾಲಿವುಡ್ಪ್ರಸ್ಥಭೂಮಿಯ ಒಂದುಕುಡಿ ಈಕಂಗನಾ. ಈಕೆ ತನಗೊಲಿದ ಪ್ರಶಸ್ತಿಗಳನ್ನು ಬದಿಗಿಟ್ಟು, ಅಹಮಿಕೆಯನ್ನು ಅದಮಿಟ್ಟುಒಮ್ಮೆಹಿಂದಿರುಗಿನೋಡಿದರೂಸಾಕು, ನಟನೆಯಲ್ಲಿತನ್ನಸಾಧನೆ ಏನೇನೂ ಅಲ್ಲಎಂದು ಅರ್ಥವಾಗಿಬಿಡುತ್ತದೆ. ಆದಿಗ್ಗಜನಟನಟಿಯರಮುಂದೆನಟಿಯಾಗಿಕುಬ್ಜರಾಗಿಕಾಣುವ ಕಂಗನಾ ತಮ್ಮ ಆಲೋಚನೆಯಲ್ಲೂ ಕುಬ್ಜರಾಗಿಬಿಟ್ಟಿದ್ದಾರೆ. ಇತಿಹಾಸದಅರಿವಿಲ್ಲದೆಯೇಐತಿಹಾಸಿಕ ಪಾತ್ರಗಳಲ್ಲಿ ನಟಿಸುವನಟರುನಟಿಯರು ಯಾರೇ ಆದರೂ ಬಾಲಿವುಡ್ಚಿತ್ರರಂಗದ ಸೊಹ್ರಾಬ್ಮೋದಿ, ಪೃಥ್ವಿರಾಜ್ಕಪೂರ್, ಕೆ.ಎ.ಅಬ್ಬಾಸ್, ಕೆ.ಆಸಿಫ್, ಮೆಹಬೂಬ್, ವಿ.ಶಾಂತಾರಾಮ್ ಅವರಹೆಜ್ಜೆಗಳನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲವಾದರೆ ತೆರೆಯ ಮೇಲೆ ವಿಜೃಂಭಿಸುವ ಪಾತ್ರಧಾರಿಗಳು ಥಿಯೇಟರಿನಲ್ಲೇ ಕಳೆದುಹೋಗುತ್ತಾರೆ. ಕಂಗನಾ ಇಂಥವರಲ್ಲೊಬ್ಬರು.

ಆಮ್ರಪಾಲಿ ಯವೈಜಯಂತಿಮಾಲಾ, ಮುಘಲ್ ಎ ಅಜಂನಪೃಥ್ವಿರಾಜ್, ದಿಲೀಪ್-ಮಧುಬಾಲಾ, ಅನಾರ್ಕಲಿಯ ಬೀನಾರಾಯ್, ಕಿತ್ತೂರುರಾಣಿಯ ಸರೋಜಾದೇವಿ,  ಪುಕಾರ್  ಚಿತ್ರದ ಸೊಹ್ರಾಬ್ಮೋದಿ, ಕೃಷ್ಣದೇವರಾಯ ಚಿತ್ರದ ರಾಜಕುಮಾರ್, ಕಟ್ಟಬೊಮ್ಮನ್ಶಿವಾಜಿ ಇವರೆಲ್ಲಾ ಚಿರಸ್ಮರಣೀಯರಾಗುವುದು ಈ ಕಾರಣಕ್ಕಾಗಿಯೇ ಅಲ್ಲವೇ ? ಇವರಾರೂ ಇತಿಹಾಸ ತಜ್ಞರಲ್ಲ, ಇತಿಹಾಸದ ವಿದ್ಯಾರ್ಥಿಗಳೂ ಅಲ್ಲಆದರೆ ಭಾರತದವಿಮೋಚನೆಯತ್ಯಾಗಬಲಿ ದಾನಗಳನ್ನು ಅವಮಾನಿಸಲಿಲ್ಲ. ಸ್ವತಂತ್ರಭಾರತದಪರಿಪಕ್ವಫಲಾನುಭವಿಗಳಾಗಿ ತಮ್ಮಕಲೆಯನ್ನುಆರಾಧಿಸಿದ ಈಮಹಾನ್ನಟ ನಟಿಯರು ತಮ್ಮನ್ನು ಪೋಷಿಸಿಸಲಹಿದ ಮೇರು ವೃಕ್ಷಕ್ಕೆ, ಅರ್ಥಾತ್ಸ್ವತಂತ್ರ ಭಾರತಕ್ಕೆ, ಸಮರ್ಪಣಾಭಾವದಿಂದಲೇ ತಮ್ಮಕಲೆ ಎಂಬಪವಿತ್ರ ನೀರನ್ನೆರೆದಿದ್ದಾರೆ. ಅಲ್ಲವೇ ಕಂಗನಾಜೀ.

ನೀವು 1947 ರಸ್ವಾತಂತ್ರ್ಯವನ್ನು ಭಿಕ್ಷೆ ಎನ್ನುವ ಮೂಲಕಕೋಟ್ಯಂತರ ಜನರನ್ನು ಒಂದೇ ಮಾತಿನಲ್ಲಿ ಅವಮಾನಿಸಿದ್ದೀರಿ. ಅವರಪೈಕಿ ನಿಮ್ಮಪೂರ್ವಿಕರೂ ಇದ್ದಾರೆ ಅಲ್ಲವೇ ?ನೀವುಬಾಚಿಕೊಂಡಿರುವ ರಾಷ್ಟ್ರಪ್ರಶಸ್ತಿಗಳ ಮೂಲಕ ನಿಮಗೆಸಂದಾಯವಾಗಿರುವ ಕೋಟ್ಯಂತರ ಹಣ ಅದೇಭಿಕ್ಷಾಪಾತ್ರೆಯಲ್ಲಿ ಬಿತ್ತಬೆವರು ಬೀಜಗಳ ಫಲ. ನೀವು ಪಡೆದ ಫಲಕ, ಟ್ರೋಫಿಗಳತಯಾರಿಕೆಯ ಹಿಂದೆಸಹ ಇದೇ ಭಿಕ್ಷಾಪಾತ್ರೆಯಲ್ಲಿ ಹರಿದ ಬೆವರು ನೆತ್ತರಿನ ವಾಸನೆ ಇದೆ. ಭಾರತದಸ್ವಾತಂತ್ರ್ಯಲಭಿಸಿದ್ದುಕೋಟ್ಯನುಕೋಟಿ ಜನತೆಗೆ ವಸಾಹತು ದಾಸ್ಯದ ಸಂಕೋಲೆಗಳಿಂದವಿಮೋಚನೆದೊರೆತಅಮೂಲ್ಯಗಳಿಗೆ. ಅಂದುನೂರಾರು ಹುತಾತ್ಮರತ್ಯಾಗ ಬಲಿದಾನಗಳಿಂದ ಪಡೆದಸ್ವಾತಂತ್ರ್ಯದ ಫಲವೇ ನೀವು ಆರಾಧಿಸುವ ನಟನೆ ಎಂಬ ಕಲೆ.

ಆಕಲೆಯ ಆರಾಧಕರಾದ ನಿಮಗೆಅಮೂಲ್ ಯಸ್ವಾತಂತ್ರ್ಯವೂ ಭಿಕ್ಷೆಎಂದೆನಿಸುವುದು ನಿಮ್ಮ ತಪ್ಪಲ್ಲ. ನಿಮ್ಮಂತಹ ಕ್ಷುದ್ರಮನಸ್ಥಿತಿಯ ಲಕ್ಷಾಂತರ ಜನರನ್ನು ಈದೇಶದ ಸಾಂಸ್ಕೃತಿ ಕಮತೀಯ ರಾಜಕಾರಣ ಸೃಷ್ಟಿಸಿದೆ. ನೀವು ಎಷ್ಟೇಮಹಾನಟಿ ಎನಿಸಿಕೊಂಡರೂಕೊನೆಗೆಆವಿಕೃತಿಯಕೂಸು ಎಂಬುದನ್ನುಈಹೇಳಿಕೆಯಮೂಲಕನಿರೂಪಿಸಿಬಿಟ್ಟಿರಿ. ಕಲೆಯನ್ನುಆರಾಧಿಸುವವರಲ್ಲಿ, ಕಲೆಯನ್ನೇ ಜೀವಿಸುವವರಲ್ಲಿಸೂಕ್ಷ್ಮ ಸಂವೇದನೆಗಳುಸತ್ತುಹೋದರೆ ನೀವುಪರದೆಯ ಮೇಲೆಬಣ್ಣಬಣ್ಣದ Caricature ನಂತೆ  ಕಾಣುತ್ತೀರಿ. ನಿಮ್ಮಕಲಾಕೌಶಲ ಪ್ರತಿಭೆ ಪ್ರಶಸ್ತಿ ಎಲ್ಲವೂ ಮಾರುಕಟ್ಟೆಯಜಗುಲಿಯಿಂದ ಕೆಳಗಿಳಿಯಲು ಸಾಧ್ಯವೇಇಲ್ಲ. ಬಹುಶಃ ನೀವು ಆಚೌಕಟ್ಟನ್ನುಸ್ವತಃ ನಿರ್ಮಿಸಿಕೊಂಡಿದ್ದೀರಿ, ಈಹೇಳಿಕೆಯಮೂಲಕ.

ಸ್ವತಂತ್ರ ಭಾರತ ಸಾವಿರಾರು ಸಂಗ್ರಾಮಿಗಳ,  ಕೋಟ್ಯಂತರ ಶ್ರಮಜೀವಿಗಳ ಬೇರುಗಳನ್ನು ಹೊತ್ತಒಂದು ಬೃಹತ್ ಆಲದಮರ. ಈಮರದ ಕಾಂಡವೇ ಈನಮ್ಮ ಬಹುತ್ವದ ಸಮಾಜ. ಒಳಗೆ ಟೊಳ್ಳು ಪೊಟರೆಗಳೆಷ್ಟೇ ಇದ್ದರೂ ಗಟ್ಟಿಯಾಗಿ ನಿಂತಿದ್ದರೆ ಅದಕ್ಕೆ ಕಾರಣ ಬಲಿಷ್ಠ ಬೇರುಗಳು. ಈಬೃಹತ್ ಆಲದ ಟೊಂಗೆಗಳಂತೆ ಕಲೆ, ಸಂಸ್ಕೃತಿ, ಸಿನಿಮಾ, ಸಂಗೀತ, ಇತ್ಯಾದಿ. ಇದರಿಂದ ಕೆಳಗಿಳಿಯುವ ಮರಿಬೇರುಗಳೇ ಕಲಾವಿದರು, ಸಾಹಿತಿಗಳು, ಬರಹಗಾರರು, ಕ್ರೀಡಾಪಟುಗಳು, ಜನಪದ ಕಲಾವಿದರು, ಸಂಗೀತಗಾರರು ಮತ್ತು ಚಲನ ಚಿತ್ರಕ ಲಾವಿದರೂ ಸಹ. ಅಂತಹ ಲಕ್ಷಾಂತರ ಮರಿ ಬೇರುಗಳ ಅಂಚಿನಲ್ಲಿ ನೀವೊಂದು ಪೀಚು. ಇಷ್ಟುಪರಿಜ್ಞಾನನಿಮ್ಮಲ್ಲಿದ್ದರೆನಿಮ್ಮನ್ನುಕಲಾವಿದೆಎನ್ನಲುಸಾಧ್ಯ.

ನಿಮ್ಮ ವಿಕೃತ ಹೇಳಿಕೆಗೆ ಮೌನವಹಿಸಿರುವ ನಿಮ್ಮ ಪೋಷಕರು ನಿಮಗಿಂತಲೂ ದೊಡ್ಡ ಅಪರಾಧಿಗಳು ಎನ್ನುವುದು ನಿಸ್ಸಂದೇಹ ವಾಸ್ತವ