ತಂತ್ರ ಜ್ಞಾನ -ಡಾ.ಪ್ರಿಯಾಂಕ ಎಂ.ಜಿ , ಮೆಟಾವರ‍್ಸ್ ಎಂಬ ಡಿಜಿಟಲ್ ಯುನಿವರ‍್ಸ್ 

ತಂತ್ರ ಜ್ಞಾನ ಡಾ.ಪ್ರಿಯಾಂಕ ಎಂ.ಜಿ

ತಂತ್ರ ಜ್ಞಾನ  -ಡಾ.ಪ್ರಿಯಾಂಕ ಎಂ.ಜಿ ,  ಮೆಟಾವರ‍್ಸ್ ಎಂಬ ಡಿಜಿಟಲ್ ಯುನಿವರ‍್ಸ್ 

“ಇರುವುದನ್ನು ಬಿಟ್ಟು ಇರದುದರ ಕಡೆಗೆ ತುಡಿವುದೇ ಜೀವನ “ ಎನ್ನುವ ಕವಿವಾಣಿಯಂತೆ ನಿರಂತರ ಪ್ರಯೋಗಶಾಲಿ ಮನುಷ್ಯನ ಹೊಸ ಅನ್ವೇಷಣೆ ಮೆಟಾರ‍್ಸ್. ಈಗ ನಾವು ಇಂಟರ್‌ನೆಟ್‌ನಲ್ಲಿ ಹೊರಗಿದ್ದುಕೊಂಡು  ಅದರ ಅನುಭವವನ್ನು ಪಡೆದುಕೊಳ್ಳುತ್ತೇವೆ, ಮುಂದೆ ವೆಬ್ ೩.೦ ತಂತ್ರ ಜ್ಞಾನ ಬಳಕೆಯಾಗಲಿರುವ ಮೆಟಾರ‍್ಸ್ ನಲ್ಲಿ ನಾವೇ ನಮಗೆ ಬೇಕಾದ ಒಂದು ಅವತಾರವನ್ನು ಸೃಷ್ಟಿಸಿಕೊಂಡು, ಆ ರೂಪದಲ್ಲಿ ಅದರ ಒಳ ಹೊಕ್ಕು ಅಲ್ಲಿರುವ ಇನ್ನೊಂದು ಜಗತ್ತಿನ ಅನುಭವ ಪಡೆದುಕೊಳ್ಳುತ್ತೇವೆ. ಇದನ್ನು ಮೆಟಾರ‍್ಸ್ ಎಂಬ ಹೊಸ ತಂತ್ರ ಜ್ಞಾನ ದಕ್ಕಿಸಿಕೊಡಲಿದೆ. ಮೆಟಾರ‍್ಸ್ ಕುರಿತ ಕುತೂಹಲವನ್ನು ತಣಿಸುವ ಕುತೂಹಲಕಾರಿ ಲೇಖನ ನಿಮಗಾಗಿ- ಸಂಪಾದಕ 

ತಂತ್ರ ಜ್ಞಾನ

ಡಾ.ಪ್ರಿಯಾಂಕ ಎಂ.ಜಿ


ಮೆಟಾವರ‍್ಸ್ ಎಂಬ ಡಿಜಿಟಲ್ ಯುನಿವರ‍್ಸ್ 

ಮೆಟಾವರ‍್ಸ್ ಭವಿಷ್ಯದ ಯುನಿವರ‍್ಸ್  ಆಗೋ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಒಂದು ಜಗತ್ತು. ಈ ಜಗತ್ತು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ದಾಪುಗಾಲನ್ನು ಇಡುತ್ತಿದೆ.  ೩೦ ವರ್ಷದ ಹಿಂದೆ ‘ವರ್ಲ್ಡ ವೈಡ್ ವೆಬ್’ ಅನ್ನೋ ಒಂದು ವೆಬ್‌ಸೈಟ್ ಸೃಷ್ಟಿಯಾದಾಗ, ೨೦೦೫ರಲ್ಲಿ ಯು ಟ್ಯೂಬ್ ಕೋ ಫೌಂಡರ್ ಆದಂತ ಜಾವಿದ್ ಗರೀಮಿ ‘ಮೀ ಅಟ್ ಜೂ’ ಅನ್ನೋ ಮೊದಲ ಯುಟ್ಯೂಬ್ ವೀಡಿಯೋ ಮಾಡಿದಾಗ ಯಾರೂ ಅಂದು ಕೊಂಡಿರಲಿಲ್ಲ ಆಡಿಯೋ ವೀಡಿಯೋ ಕ್ಷೇತ್ರದಲ್ಲಿ ಇಷ್ಟು ಕ್ರಾಂತಿ ಮಾಡುತ್ತೆ ಅಂತ. ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಹೊರ ತಂದಾಗ ಆತನಿಗೂ ಅದು ತಿಳಿದಿರಲಿಲ್ಲ ಮುಂದೊAದು ದಿನ ಇದು ಮನುಕುಲದ ಸಂವಹನವನ್ನೇ ಬದಲಾಯಿಸುತ್ತದೆ ಅಂತ. ಈಗ ನಾವು ಇಂಥ ಅತ್ಯಾಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ.


 ಕಳೆದ ವರ್ಷ ಫೋರ್ಟ್ ನೈಟ್ ಗೇಮ್ ಯುನಿವರ್ಸ್ನಲ್ಲಿ ಗಾಯಕಿ ರ‍್ಯಾನ ಗ್ರಾಂಡೆ ನೀಡಿದ ರ‍್ಚುವಲ್ ಸಂಗೀತ ಕಚೇರಿಯಲ್ಲಿ  ಒಂದು ಕೋಟಿಗೂ ಹೆಚ್ಚಿನ ಗೇಮರ‍್ರ್ಸ್ ವರ‍್ಚುವಲ್ ಆಗಿಯೇ ಪಾಲ್ಗೊಂಡಿದ್ದರು. ಟ್ರಾವಿಸ್‌ಕಾಟ್ ಅವರ ರ‍್ಚುವಲ್ ಕಚೇರಿಗೆ 1.2 ಕೋಟಿ ಗೇಮರ್ಸ್ ಪಾಲ್ಗೊಂಡಿದ್ದರು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ 2012ರಲ್ಲೇ ಗುಜರಾತಿನ ಚುನಾವಣಾ ಪ್ರಚಾರದ ವೇಳೆಯಲ್ಲೇ ‘೩ಡಿ ಮೋದಿ’ ಅನ್ನೋ ಹೆಸರಿನಲ್ಲಿ ಏಕಕಾಲದಲ್ಲಿ ೫೦ಕ್ಕೂ ಹೆಚ್ಚಿನ ರ‍್ಯಾಲಿಗಳಲ್ಲಿ 3ಡಿ ಅವತಾರದಲ್ಲಿ ತಮ್ಮ ಪ್ರಚಾರ ಮಾಡಿದ್ದರು. ಹೇಗೆ ತಂತ್ರಜ್ಞಾನ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಅದೇ ರೀತಿ ಈಗ ಹೊಸದಾಗಿ ಬರಲು ಸಜ್ಜಾಗುತ್ತಿರುವ ತಂತ್ರಜ್ಞಾನವೇ “ಮೆಟಾವರ‍್ಸ್ ”. 


ಮೆಟಾರ‍್ಸ್ ಅಂದರೆ ಪರ್ಯಾಯ ಜಗತ್ತು (Parallel Universe)ಮೆಟಾ+ವರ‍್ಸ್, ಮೆಟಾ ಅನ್ನುವುದು ಗ್ರೀಕ್ ಮೂಲದ ಪದ. ಅದರರ್ಥ ವಾಸ್ತವವನ್ನು ಮೀರಿದ ಎಂದು ಅರ್ಥ ಬರುತ್ತದೆ. ಯೂನಿರ‍್ಸ್ ಅನ್ನೊ ಪದದಿಂದ ರ‍್ಸ್  ತೆಗೆದುಕೊಂಡಿದ್ದಾರೆ, ಯುನಿವರ‍್ಸ್  ಅಂದರೆ ವಿಶ್ವ ಅಥವಾ ಜಗತ್ತು . ನಿಯಾಸ್ ಸ್ಟೀಫನ್ ಸನ್ ೧೯೯೨ರಲ್ಲಿ ಬರೆದ ಪುಸ್ತಕ ‘ಸ್ನೋ ಕ್ರಾಷ್’ ಎಂಬ ಪುಸ್ತಕದಲ್ಲಿ ಮೊಟ್ಟ ಮೊದಲ ಬಾರಿಗೆ ಮೆಟಾರ‍್ಸ್ ಪದವನ್ನು ಪ್ರಯೋಗ ಮಾಡಿದ್ದರು. ಆತನ ಪ್ರಕಾರ ಮೆಟಾರ‍್ಸ್ ಅಂದರೆAugmented reality, physical reality, web 3.೦ ಸೇರಿ ನಿರ್ಮಾಣ ಆಗುವ ಒಂದು ಡಿಜಿಟಲ್ ಯುನಿವರ‍್ಸ್.  ಅಗ್‌ಮೆಂಟೆಡ್ ರಿಯಾಲಿಟಿಯಲ್ಲಿ ವಾಸ್ತವದ ಜಗತ್ತಿಗೆ ಅನೇಕ ಭಾಗಗಳನ್ನು ಸೇರಿಸುವುದು. ಫಿಸಿಕಲ್ ರಿಯಾಲಿಟಿಯಲ್ಲಿ ಇಡೀ ಜಗತ್ತೇ ಡಿಜಿಟಲ್ ಆಗಿರುತ್ತದೆ. ಹಿಂದೆ ಇದ್ದಂತಹ ವರ್ಲ್ಡ್‌  ವೈಡ್ ವೆಬ್’ ಅದು ವೆಬ್ 1.0 ಅಗಿತ್ತು, ಇಂದು ನಾವು ಬಳಕೆ ಮಾಡುತ್ತಿರುವುದು ವೆಬ್ 2.0, ಭವಿಷ್ಯದ ಕ್ರಾಂತಿಯನ್ನು ಮಾಡಲಿಕ್ಕೆ ಬರುತ್ತಿರುವ ಆವಿಶ್ಕಾರ ವೆಬ್ 3.0. ಈಗ ನಾವು ಇಂಟರ್‌ನೆಟ್‌ನಲ್ಲಿ ಹೊರಗಿದ್ದುಕೊಂಡು  ಅದರ ಅನುಭವವನ್ನು ಪಡೆದುಕೊಳ್ಳುತ್ತೇವೆ, ಆದರೆ ವೆಬ್ 3.0ದಲ್ಲಿ ನಾವೇ ಅದರ ಒಳಗೆ ಹೋಗಿ ಅಲ್ಲಿರುವ ಇನ್ನೊಂದು ಜಗತ್ತಿನ ಅನುಭವ ಪಡೆದುಕೊಳ್ಳುತ್ತೇವೆ. 


ಈಗ ನಾವು ನಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ನಮ್ಮನ್ನು ಪ್ರತಿನಿಧಿಸುವುದಕ್ಕೆ ನಮ್ಮ ಪ್ರಫೈಲ್ ಚಿತ್ರಗಳನ್ನು, ಡಿಪಿಗಳನ್ನು ಹಾಕುತ್ತೇವೆ. ಆದರೆ ಮೆಟಾವರ್ಸ್ನಲ್ಲಿ ಜನರ ೩ಡಿ ಅವತಾರಗಳು ವ್ಯಕ್ತಿಗಳನ್ನು ಪ್ರತಿನಿಧಿಸುತ್ತದೆ. ಅಲ್ಲಿ ನಮ್ಮನ್ನು ನಾವು ನಮಗೆ ಬೇಕಾದ ರೀತಿಗೆ ಬದಲಾಯಿಸಿಕೊಳ್ಳಬಹುದು. ಉದಾ: ನಮ್ಮ ಮೈ ಬಣ್ಣ, ಸಣ್ಣ, ದಪ್ಪ, ಕಾರ್, ಮನೆ ಹೀಗೆ ಬೇಕಾದ ಹಾಗೆ ಬದಲಾಯಿಸಿಕೊಳ್ಳಬಹುದು. ಇತ್ತೀಚೆಗೆ ಚೆನ್ನೆöÊನ ಒಂದು ಜೋಡಿ ಮೆಟಾರ‍್ಸ್  ಮೂಲಕ ತಮ್ಮ ಆರತಕ್ಷತೆ ಮಾಡಿಕೊಂಡಿತ್ತು. ಇದರಲ್ಲಿ ವಧುವಿನ ದಿವಂಗತ ತಂದೆ ವಧು ವರರಿಗೆ ಆಶೀರ್ವಾದ ಮಾಡಿದ ಹಾಗೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಇದರಲ್ಲಿ ಹೆಚ್ಚು ಜನಪ್ರಿಯವಾಗುವ ಮೆಟಾರ‍್ಸ್ಗಳಿಗೆ ಹೆಚ್ಚು ಬೇಡಿಕೆ ಬರಬಹುದು, ಆಗ ಮೆಟಾರ‍್ಸ್ನಲ್ಲಿ ಜಾಗಗಳಿಗೂ ಹೆಚ್ಚು ಬೆಲೆ ಬರಬಹುದು. ಮೆಟಾರ‍್ಸ್ ರಿಯಲ್ ಎಸ್ಟೇಟ್ ಒಂದು ದೊಡ್ಡ÷ ವ್ಯಾಪಾರವಾಗಬಹುದು, ಇಲ್ಲಿ ಸೈಟ್ ತಗೆದುಕೊಳ್ಳುವ ದಿನಗಳು ಕೂಡ ಬರಬಹುದು. ಒಂದು ಅಂದಾಜಿನ ಪ್ರಕಾರ ಕೆಲವೇ ವರ್ಷಗಳಲ್ಲಿ (2032) ಜನ ತಮ್ಮ ವಾಸ್ತವಿಕ ಜೀವನಕ್ಕಿಂತ ರ‍್ಯಾಯ ಜಗತ್ತಿನಲ್ಲೇ ಹೆಚ್ಚಿನ ಸಮಯ ಕಳೆಯೊ ದಿನಗಳೂ ಬರಬಹುದು. ಮೆಟಾವರ‍್ಸ್ನಲ್ಲಿ ಭಾಗವಹಿಸಲು, ಮೆಟಾವರ‍್ಸ್ ಅನುಭವ ಪಡೆಯಲು 3ಡಿ ತಂತ್ರಜ್ಞಾನ ಬಳಕೆಯಾಗುವ ಕಣ್ಣಿಗೆ ಹಾಕಿಕೊಳ್ಳುವ ಹೆಡ್ ಸೆಟ್ ಗಳು ಬೇಕು, ಈಗಾಗಲೇ ಇಂಥ ರ‍್ಚುವಲ್ ರಿಯಾಲಿಟಿ ಮೆಟಾರ‍್ಸ್ ಹೆಡ್‌ಸೆಟ್‌ಗಳು ಮಾರುಕಟ್ಟೆಗೆ ಬಂದಿವೆ, ಐದಾರು ವರ್ಷಗಳಿಂದ ಇವು  ಲಭ್ಯವಿವೆೆ. ಹಾಗಾಗಿ ಮೆಟಾವರ‍್ಸ್ನಂತಹ ಜಗತ್ತು ನಮ್ಮಿಂದ ಬಹಳ ದೂರವೇನಿಲ್ಲ. ಈಗಾಗಲೇ ಇಂತಹ ಹಲವು ಮೆಟಾವರ‍್ಸ್ಗಳ ಸೃಷ್ಟಿಯ ಕೆಲಸ ಬಹಳ ವೇಗವಾಗಿ ನಡೆಯುತ್ತಿದೆ. ಅದರಲ್ಲಿ ನಾವು ನಮಗೆ ಬೇಕಾದ ಅವತಾರಗಳನ್ನು ತಳೆದು ಸಂಚರಿಸಬಹುದು, ಇದಕ್ಕೆ ಮೆಟಾರ‍್ಸ್ನಲ್ಲಿ ‘ಅವತಾರ್’ ಎಂಬ ಹೆಸರನ್ನೇ ನೀಡಲಾಗಿದೆ.  ಶಾಪಿಂಗ್, ಗೇಮಿಂಗ್, ಮೋಜು ಮಸ್ತಿ ಎಲ್ಲವನ್ನು ಮಾಡಬಹುದು. ಇದು ಕಂಟೆಂಟ್ ಕ್ರಿಯೇಟರ‍್ಸ್ ಮತ್ತು ಗ್ರಾಹಕರ ಮಧ್ಯೆಯಿರುವ ಸಂಬಂಧದ ಸ್ವರೂಪವನ್ನೇ ಬದಲಾಯಿಸುತ್ತದೆ. ಇಲ್ಲಿ ಜನರು ವಿಸ್ಮಯ ಲೋಕದಲ್ಲಿ ಗೇಮಿಂಗ್ ನಡೆಸುತ್ತಾರೆ. ಮನೆಯಲ್ಲೇ ಕುಳಿತುಕೊಂಡು ವಿಶ್ವದ ಯಾವುದೇ ಮೆಟಾರ‍್ಸ್ ಥಿಯೇಟರ್‌ನಲ್ಲಿ ವೀಕ್ಷಕರ ಪಕ್ಕದಲ್ಲಿ ಕುಳಿತುಕೊಂಡು ಶಿಲ್ಲೆ, ಚಪ್ಪಾಳೆಗಳನ್ನು ಹೊಡೆಯುತ್ತಾ ಸಿನೆಮಾ ನೋಡಬಹುದಾಗಿದೆ. 


ಬಾರಿ ಹೂಡಿಕೆ


        ಮೊದಲೆಲ್ಲ ಟಿ.ವಿ ಜಾಹಿರಾತಿನ ಮೂಲಕ ಈ-ಕಾರ‍್ಸ್ ಶುರುವಾಯಿತು, ಇಂಟರ್‌ನೆಟ್ ಮೂಲಕ ಆನ್‌ಲೈನ್ ಶಾಪಿಂಗ್ ಬಂದು ಒಂದು ಹೊಸ ಭಾಷ್ಯವನ್ನೇ ಬರೆಯಿತು, ಭವಿಷ್ಯದಲ್ಲಿ ಮೆಟಾರ‍್ಸ್ ಶಾಪಿಂಗ್ ಎನ್ನುವುದು ಒಂದು ದೊಡ್ಡ ಮೈಲಿಗಲ್ಲನ್ನೆ ಸೃಷ್ಟಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಫೇಸ್‌ಬುಕ್, ಎಪಿಕ್ ಗೇಮ್, ಮೈಕ್ರೋಸಾಫ್ಟ್, ಗೂಗಲ್, ಆಪಲ್, ಏರ್‌ಟೆಲ್, ಜಿಯೋ ಇನ್ನೂ ಮುಂತಾದ ಕಂಪೆನಿಗಳು ತಮ್ಮದೇ ಮೆಟಾವರ‍್ಸ್ಗಳ ಮೇಲೆ ಬಾರೀ ಪ್ರಮಾಣದ ಹೂಡಿಕೆಗಳನ್ನು ಮಾಡುತ್ತಿದೆ. ಇತ್ತೀಚೆಗೆ ಫೇಸ್‌ಬುಕ್ಕಿನ ಜುಕರ್‌ಬರ್ಗ್ ತಮ್ಮ ಕಂಪನಿಯ ಹೆಸರನ್ನು ‘ಮೆಟಾ’ ಎಂದು ಬದಲು ಮಾಡಿದ್ದಾರೆ. ಫೇಸ್‌ಬುಕ್ ಅನ್ನು ಭವಿಷ್ಯದಲ್ಲಿ ಮೆಟಾರ‍್ಸ್ ಆಗಿ ಪರಿವರ‍್ತಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ. ಹಾಗಾದರೆ ಈ ಮೆಟಾವರ‍್ಸ್ನ ಸೃಷ್ಟಿಯ ಅಂದಾಜು ಮೊತ್ತ ಎಷ್ಟು ಗೊತ್ತಾ? 47 ಬಿಲಿಯನ್ ಡಾಲರ್ ಅಂದರೆ 347800 ಕೋಟಿ ರೂ ಎಂದು ಹೇಳಲಾಗುತ್ತಿದೆ. ಆದರೆ 2024ರಲ್ಲಿ ಇದರ ಅಂದಾಜು 800 ಬಿಲಿಯನ್ ಡಾರ‍್ಸ್ ಆಗುತ್ತದೆ ಅಂದರೆ 5920000 ಕೋಟಿ ರೂ ದಾಟುತ್ತದೆ ಎಂದು ಹೇಳಲಾಗಿದೆ. ಹಾಗಾಗಿಯೇ ಪ್ರಸ್ತುತ ಲಕ್ಷಾಂತರ ಕೋಟಿ ನಷ್ಟವಾಗುತ್ತಿದ್ದರೂ ಜುಕರ್‌ಬರ್ಗ್ ನಿರಂತರವಾಗಿ ಹಣವನ್ನು ಹೂಡಿಕೆ ಮಾಡುತ್ತಿರುವುದು. 


2003ರಲ್ಲಿ ಸೆಕೆಂಡ್ ಲೈಫ್ ಅನ್ನುವ ವರ್ಚುಯಲ್ ಸ್ಪೇಸ್ ಅನ್ನು ಮಾರ್ಕೆಟ್‌ಗೆ ಬಿಡಲಾಗಿತ್ತು. ರಿಯಲ್ ಲೈಫ್‌ನಲ್ಲಿ ಸಂತೋಷವಾಗಿ ಇರದವರು ಇಲ್ಲಿ ಆನಂದಿಸಬಹುದು ಎಂದು ಸಾಕಷ್ಟು ಕಂಪೆನಿಗಳು ತಮ್ಮ ಬ್ರಾಂಡ್ ಲೋಗೋಗಳನ್ನು ಹಾಕಿ ಅದರ ಸೇವೆಯನ್ನು ನೀಡುತ್ತಿದ್ದವು, ಆದರೆ ಅಲ್ಲಿ ವೀಕ್ಷಣೆ ಮಾತ್ರ ಆಗುತ್ತಿತ್ತು, ಆದರೆ ಮೆಟಾರ‍್ಸ್ನಲ್ಲಿ ಇರುವ ಹಾಗೆ ಅಲ್ಲಿ ವೀಕ್ಷಣೆಯ ಜೊತೆ ಅನುಭವ ಪಡೆಯುವುದಕ್ಕೆ ಆಗುತ್ತಿರಲಿಲ್ಲ. ಮಲ್ಟಿ ಡೈಮೆನ್ಷÀನಲ್ ಅನುಭವಗಳನ್ನು ಪಡೆಯುವುದಕ್ಕೆ ಆಗುತ್ತಿರಲಿಲ್ಲ. ಹಾಗಾಗಿ ಇದರ ಕ್ರೇಸ್ ಕಡಿಮೆ ಆಯಿತು. ಈಗ ಮೆಟಾರ‍್ಸ್ ಅದೆಲ್ಲವನ್ನು ಮೀರಿಸಲಿದೆ. ಈ ಜಗತ್ತಿನಲ್ಲಿ ವ್ಯಾಪಾರ, ಸಂವಹನ, ಮನರಂಜನೆ ಹಾಗು ಸೋಶಿಯಲ್ ಲೈಫ್ ಅನ್ನು ಬದಲು ಮಾಡಲಿದೆ ಎಂದು ಹೇಳಲಾಗುತ್ತಿದೆ. 


ಅಪಾಯಗಳು
ಇತ್ತೀಚೆಗೆ ಭಾರತದ ಮೂಲ ಬ್ರಿಟನ್‌ನ ಪ್ರಜೆ ನೀನಾ ಜೈನ್ ಪಟೇಲ್ ತನ್ನ ಮೇಲೆ ಮೆಟಾರ‍್ಸ್ನಲ್ಲಿದ್ದಾಗ ಅಂದರೆ ಅವರ ಅವತಾರ್ ಇದ್ದಾಗ ಅವರ ಮೇಲೆ ೫ ಜನ ಬಂದು ಮೆಟಾರ‍್ಸ್  ಒಳಗೇನೆ ಸಾಮೂಹಿಕ ಅತ್ಯಾಚಾರ ಮಾಡಿದರು ಎಂದು ಹೇಳಿಕೆ ಕೊಟ್ಟಿದ್ದರು. ಹಾಗೆ ಇಲ್ಲಿ ವೈಯಕ್ತಿಕ ಡೇಟಾ ಕಳ್ಳತನದ ಅಪಾಯವಿದೆ. ಮುಖ್ಯವಾಗಿ ಮಕ್ಕಳು ಇದಕ್ಕೆ ಹೆಚ್ಚು ಮಾರು ಹೋಗುವ ಸಾಧ್ಯತೆಯಿದೆ. ಈ ರೀತಿ ಒಳ್ಳೆಯದರ ಜೊತೆಗೆ ಅಲ್ಲಿ ಕೆಟ್ಟದ್ದೂ ಕೂಡ ಸಮವಾಗಿ ಇರುವುದರಿಂದ ಅಂತಿಮವಾಗಿ ಆಯ್ಕೆ ನಮ್ಮದೇ ಆಗಬೇಕು ಅಲ್ವಾ.


ಮೆಟಾವರ‍್ಸ್ನಲ್ಲಿ ಶಿಕ್ಷಣ, ವ್ಯಾಪಾರ !


ಮೆಟಾವರ್ಸ್ನಲ್ಲಿ ಶಿಕ್ಷಣಕ್ಕೆ ಶಾಲಾ, ಕಾಲೇಜುಗಳು ಕಟ್ಟಡ ರೂಪದಲ್ಲೇ ಇರಬೇಕು ಅಂತ ಏನಿಲ್ಲ, ಮಕ್ಕಳು ಮನೆಯಲ್ಲಿದ್ದುಕೊಂಡೆ ಮೆಟಾರ‍್ಸ್ ಕ್ಲಾಸ್‌ರೂಮಿನಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಪಾಠವನ್ನು ಕೇಳಬಹುದು. ಇದರ ಚಹರೆ ಹೇಗಿರುತ್ತದೆ ಅಂದರೆ ವಿದ್ಯಾರ್ಥಿಗಳ ಅವತಾರ್ ಅಲ್ಲಿ ಕುಳಿತಿರುತ್ತದೆ ಆದರೆ ಮಾತನಾಡುವ ಆಡಿಯೋ ರಿಯಲ್ ಆಗಿ ಹೆಡ್‌ಸೆಟ್‌ನಲ್ಲಿ ನಾವು ಕೇಳಿಸಿಕೊಳ್ಳುವುದಕ್ಕೆ ಮತ್ತು ಸಂವಹನ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ತರಗತಿಗಳಲ್ಲಿ ಇರದೇನೆ ಶಿಕ್ಷಕರ ಬಳಿ ನಮ್ಮ ಸಂಶಯವನ್ನು ಕೇಳಬಹುದಾಗಿದೆ. ಬೋರ್ಡ್ ಮೇಲೆ ರೇಖಾ ಚಿತ್ರ ಬರೆಯುವುದರ ಬದಲು 3ಡಿ ಲೈಫ್‌ಗಳ ಗ್ರಾಫಿಕ್ಸ್ ಮೂಲಕ ಮಕ್ಕಳಿಗೆ ಪಾಠ ಮಾಡಬಹುದು. 


ಲಕ್ಷಾಂತರ ರೂಪಾಯಿ ಕೊಟ್ಟು ನೋಡಬೇಕಾದ ಪ್ರವಾಸಿ ತಾಣಗಳನ್ನು ಕುಳಿತಲ್ಲೇ ಕಂಡು ಅನುಭವಿಸಬಹುದು. ನಮ್ಮ ಅವತಾರ್‌ಗಳ ಮೂಲಕ ಶಾಪಿಂಗ್ ಮಾಡಿದಾಗ ಕ್ರಿಪ್ಟೋ ಕರೆನ್ಸಿಗಳ ಮೂಲಕ ಹಣವನ್ನು ಪಾವತಿಸಬೇಕಾಗುತ್ತದೆ. ಈಗಾಗಲೇ ಕೆಲ ರ‍್ನಿಚರ್, ರಿಯಲ್ ಎಸ್ಟೇಟ್, ಶೂ ಕಂಪನೆಗಳು ಮೆಟಾರ‍್ಸ್ ಅಲ್ಲದೇ ಹೋದರೂ ಕೂಡ ಅದಕ್ಕೆ ಹತ್ತಿರದ ಪ್ರಯೋಗ ನಡೆಸುತ್ತಿದೆ. ನಾವು ರ‍್ನಿಚರ್ ಖರೀದಿಸುವ ಮೊದಲೇ ಅದನ್ನು ನಮ್ಮ ಮನೆಯಲ್ಲಿ ಇಟ್ಟರೆ ಹೇಗೆ ಕಾಣುತ್ತದೆ ಎಂದು ಮೊದಲೆ ಅದರ ಚಿತ್ರಣವನ್ನು ಮಾಡಿ ತೋರಿಸಲಾಗುತ್ತದೆ. ಶೂಗಳನ್ನು ನಮ್ಮ ಕಾಲಿಗೆ ಹಾಕಿದರೆ ಅದು ನಮ್ಮ ಕಾಲಿಗೆ ಹೇಗೆ ಕಾಣುತ್ತದೆ ಅನ್ನುವುದನ್ನು ಆನ್‌ಲೈನ್‌ನಲ್ಲೇ ಕಂಡುಕೊಳ್ಳಬಹುದಾಗಿದೆ. ಅದರಲ್ಲೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಂತೂ ಇದು ಒಂದು ಕ್ರಾಂತಿಯನ್ನೇ ಮಾಡಬಹುದು, ಜಾಗವನ್ನು ಖರೀದಿ ಮಾಡಲು ಆಸಕ್ತಿ ಇರುವವರಿಗೆ ಜಾಗಕ್ಕೇ ಹೋಗಿ ಜಾಗ ನೋಡಬೇಕು ಅನ್ನೋದಿರೋದಿಲ್ಲ, ಮೆಟಾವರ್ಸ್ನಲ್ಲೇ ಕುಳಿತು ಜಾಗಕ್ಕೆ ಹೋಗಿ ಅಲ್ಲಿ ಓಡಾಡಬಹುದು.