‘ಜಾಮಾತೊ ದಶಮ ಗ್ರಹ’ದ ಮೀಸೆ ಮಾವನಾಗಿ -ಚಿಕ್ಕಣ್ಣ ಐಎಎಸ್(ನಿ)
‘ಜಾಮಾತೊ ದಶಮ ಗ್ರಹ’ದ ಮೀಸೆ ಮಾವನಾಗಿ
‘ಜಾಮಾತೊ ದಶಮ ಗ್ರಹ’ದ ಮೀಸೆ ಮಾವನಾಗಿ
ಹಾಸ್ಟೆಲ್‌ನ ವಿದ್ಯಾರ್ಥಿ ಸಂಘದ ವತಿಯಿಂದ ಈ ವರ್ಷ ನಾಟಕ ಮಾಡುವುದೆಂದು ತೀರ್ಮಾನಿಸಿದೆವು. ಸಂಘದ ಅಧ್ಯಕ್ಷರಾಗಿ ಎ.ಎಸ್. ರಾಮಪ್ಪ ಇದ್ದರು, ನಾನು ಕಾರ್ಯದರ್ಶಿ, ಬಹಳಷ್ಟು ಚರ್ಚೆಗಳಾದ ನಂತರ ಖ್ಯಾತ ನಾಟಕಕಾರ ಗುಂಡಣ್ಣನವರ 'ಅಳಿಯ ದೇವರು (ಜಾಮಾತೋ ದಶಮ ಗ್ರಹ) ಎಂಬ ಸಾಮಾಜಿಕ ನಾಟಕ ಆಡಲು ತೀರ್ಮಾನಿಸಿದೆವು. ಆದರಲ್ಲಿ ನನ್ನದು ಮಾವನ ಪಾತ್ರ. ಮಾಗಡಯ್ಯನಿಗೆ ಅಳಿಯನ ಪಾತ್ರ, ನನ್ನ ರೂಂಮೇಟ್ ಕೃಷ್ಣಯ್ಯನಿಗೆ ಮಗಳ ಪಾತ್ರ, ಮಿಕ್ಕ 3 ಪಾತ್ರಧಾರಿಗಳ ಹೆಸರು ನೆನಪಿಲ್ಲ. ಸೆಪ್ಟೆಂಬರ್‌ನಿAದಲೇ ನಾಟಕದ ಪ್ರಾಕ್ಟೀಸ್ ಆರಂಭವಾಯಿತು.
ಡಿಸೆAಬರ್ 25 ಕ್ರಿಸ್ಮಸ್ ಹಬ್ಬದ ದಿನ ನಾಟಕ, ಅದೇ ದಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಹ, ಮುಖ್ಯ ಅತಿಥಿಗಳಾಗಿ ಸಮುದಾಯದವರೇ ಆದ ಪುಟ್ಟರಂಗಸ್ವಾಮಿ IಂS (ಖ), ಮಾಜಿ ಮುಖ್ಯಕಾರ್ಯದರ್ಶಿಗಳು ಮೈಸೂರು ಸರ್ಕಾರ ಇವರನ್ನು ಆಹ್ವಾನಿಸಿದ್ದೆವು. ಜತೆಗೆ ಹಾಸ್ಟೆಲ್ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ವ್ಯವಸ್ಥಾಪಕರುಗಳನ್ನು ಆಹ್ವಾನಿಸಿದ್ದೆವು. ಸಂಜೆ 6-30ಕ್ಕೆ ಲಘು ಉಪಹಾರದ ನಂತರ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಆರಂಭವಾದವು. ಕಾಶಿವಿಶ್ವನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಸಮಾರಂಭ ಆಯೋಜಿಸಿದ್ದು, ಸುಮಾರು 8 ಗಂಟೆಗೆ ಅತಿಥಿಗಳ ಭಾಷಣವೆಲ್ಲ ಆದಮೇಲೆ, ನಾಟಕ ಆರಂಭವಾಯಿತು, ಅಂದಾಜು 1 ಗಂಟೆ ಸಮಯದ ನಾಟಕ, ನವಗ್ರಹದಂತೆ ತನ್ನ ಮನೆಗೆ ಬಂದು ಜಾಂಡಾ ಹೊಡೆದು, ಮಾವನ ಆಸ್ತಿ ಮೇಲೆ ಕಣ್ಣಿಟ್ಟು, ಮಾವ ಯಾವ ಉಪಾಯ ಮಾಡಿದರೂ ಮನೆ ಬಿಟ್ಟು ತೊಲಗದ ಅಳಿಯ ದೇವರು ದಶಮ ಗ್ರಹದಂತೆ ಮಾವನನ್ನು ಕಾಡುವ ನಗೆ ನಾಟಕ, ಸಕತ್ ಡೈಲಾಗುಗಳು, ಪ್ರೇಕ್ಷಕರು, ಅತಿಥಿಗಳು ಮನಸಾರೆ ನಗುವಂತಿದ್ದವು.
ಮಗಳ ಪಾತ್ರವನ್ನು ವಹಿಸಿದ್ದ ಕೃಷ್ಣಯ್ಯ ಸುಂದರ ಸ್ಪುರದ್ರೂಪಿ ಹುಡುಗ, ಆತನಿಗೆ ಸೀರೆ ಉಡಿಸಿ, ಬಳೆ ತೊಡಿಸಿ ನಕಲಿ ಒಡವೆಗಳನ್ನು ಹಾಕಿ ಮೇಕಪ್ ಮ್ಯಾನ್ ಸಿಂಗರಿಸಿದ್ದು, ನೋಡಲು ಒಳ್ಳೆ ಸಿನಿಮಾ ಸ್ಟಾರ್ ತರಹ ಮಿಂಚುತ್ತಿದ್ದನು. ನಾನು ಮಾವನ ಪಾತ್ರ. ಮೇಕಪ್ ಮ್ಯಾನ್ ನನಗೆ ಬಾಡಿಗೆಗೆ ತಂದಿದ್ದ ಸಿಲ್ಕ್ ಶರ್ಟ್, ಅಂಗಿ, ಪಂಚೆ, ಶಲ್ಯ, ಮೈಸೂರು ಪೇಟ ತೊಡಿಸಿ ಮುಖಕ್ಕೆ ಬಣ್ಣ ಬಳಿದು, ತುಟಿಗಳ ಮೇಲೆ ದಪ್ಪ ಗಿರಿಜಾ ಮೀಸೆ ಅಂಟಿಸಿದ್ದನು. ಆಗಾಗ ಮೀಸೆ ಮೇಲೆ ಕೈ ಆಡಿಸುತ್ತಿದ್ದೆ. ಅಳಿಯನ ಪಾತ್ರದಲ್ಲಿ ಮಾಗಡಯ್ಯ ಪ್ಯಾಂಟು, ಷರಟು ಕೋಟು ಧರಿಸಿ, ತನ್ನ ಸ್ವಂತ ಬೂಟು ಧರಿಸಿದ್ದರು.
ನಾಟಕ ಆರಂಭವಾಯಿತು. ಮೊದಲ ಸೀನ್‌ನಲ್ಲಿ ನಾನು ಮಗಳ ಜತೆ ತಮಾಷೆ ಮಾಡುತ್ತಾ ಇರುವಾಗ ಅಳಿಯ ದೇವರ ಪ್ರವೇಶ, ಮೊನಚಾದ ಸಂಭಾಷಣೆ ನಡೆದು ಮೊದಲ ಸೀನ್ ನಡೆಯಿತು. 2ನೇ ಸೀನಿನಲ್ಲಿ ಅಳಿಯ-ಮಗಳ ಸಂಭಾಷಣೆ ಇತ್ಯಾದಿ, ಮೂರನೇ ಸೀನಿನಲ್ಲಿ ನಾನು ಮನೆಯಲ್ಲಿ ಕುರ್ಚಿ ಮೇಲೆ ಕುಳಿತುಕೊಂಡು, ಕಾಲ ಮೇಲೆ ಕಾಲು ಹಾಕಿಕೊಂಡು ಅಳಿಯನ ಮುಂದೆ ಜಂಭಕೊಚ್ಚಿಕೊಳ್ಳುವ ದೃಶ್ಯ ಸಂಭಾಷಣೆ ಹೇಳುತ್ತ ಮೀಸೆಯ ಕೊನೆಯಲ್ಲಿ ಹುರಿ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಮುಖಕ್ಕೆ ಅಂಟಿಸಿದ್ದ ಮೀಸೆ ಕಿತ್ತುಕೊಂಡು ಕೆಳಗೆ ಬಿತ್ತು. ಗೊಳ್ಳೆಂದು ಪ್ರೇಕ್ಷಕರೆಲ್ಲ ನಗುತ್ತಿರುವಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು 'ಹೋ' ಎಂದು ಚಪ್ಪಾಳೆ ತಟ್ಟುತ್ತಾ, ನನ್ನನ್ನು ನೋಡಿ ಕುಣಿಯುತ್ತಿದ್ದುದನ್ನು ಕಂಡೆ. ಅಷ್ಟರಲ್ಲಿ ಪರದೆ ಬಿಟ್ಟರು.
ಮೀಸೆ ಅಂಟಿಸಿದ ನಂತರ ಸೀನು ಮತ್ತೆ ಆರಂಭವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ನಾಟಕ ಮುಗಿಯಿತು. ಕೃಷ್ಣಯ್ಯನಿಗೆ ಮೊದಲ ಬಹುಮಾನ, ನನಗೆ ಎರಡನೇದು. ಕೆ. ಪುಟ್ಟರಂಗಸ್ವಾಮಿಯವರು ಬಹುಮಾನ ನೀಡಿ ನನ್ನ ಬೆನ್ನ ತಟ್ಟಿದರು.
ಗ್ರೀನ್ ರೂಂಗೆ ಹೋಗಿ ನನ್ನ ಡ್ರೆಸ್‌ನೆಲ್ಲ ಬಿಚ್ಚಿಕೊಟ್ಟು, ಬಣ್ಣ ಒರೆಸಿಕೊಳ್ಳುತ್ತಾ ಅಟ್ಟಣಿಕೆಯಿಂದ ಕೆಳಗೆ ಇಳಿಯುತ್ತಿದ್ದೆ. ಮೆಟ್ಟಿಲ ಹತ್ತಿರವೇ ನಿಂತಿದ್ದು ಆ ಹುಡುಗಿ ನನ್ನ ಜೇಬಿಗೆ ಒಂದು ಚಾಕಲೇಟ್ ತುರುಕಿ, 'ನಾಟಕ ಚೆನ್ನಾಗಿತ್ತು ಮೀಸೆ ಮಾವ' ಎಂದು ಹೇಳಿ ಫೇರಿ ಕಿತ್ತಳು. ನಾನು ಏನು ಹೇಳಲಾರದಂತೆ ಮೂಕವಿಸ್ಮಿತನಾದೆ. ಅವಳು ಯಾರು, ಎಲ್ಲ ಹೋದಳು ಎಂಬುದು ಗೊತ್ತಾಗದೆ ಹಾಗೆಯೇ ಭೂಮಿಗೆ ಬಂದೆ. ಜೇಬಲ್ಲಿ ಅವಳು ಇಟ್ಟ ಚಾಕಲೇಟ್ ನೋಡಿದೆ. ತಿನ್ನಲಿಲ್ಲ ಹಾಗೆಯೇ ಟಂಕ್‌ನಲ್ಲಿಟ್ಟೆ.
ಊಟಕ್ಕೆ ಕುಳಿತಾಗ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಯಿತು. ವಾರ್ಷಿಕೋತ್ಸವವೂ ಚೆನ್ನಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ಬಂದಿದ್ದ ಪುಟ್ಟರಂಗಸ್ವಾಮಿಯವರ ಹಿತನುಡಿಗಳು ಎಲ್ಲರ ಮನಸ್ಸಿಗೆ ಮುದ ನೀಡಿದ್ದವು ಎಂದು ಅನಿಸುತ್ತಿತ್ತು. ನಾಟಕ, ಚೆನ್ನಾಗಿ ನಡೆದು ಅದರಲ್ಲಿ ನಟಿಸಿದ್ದ ಎಲ್ಲ ಪಾತ್ರಧಾರಿಗಳಿಗೂ ಅಭಿನಂದನೆ ಹೇಳಲಾಯಿತು.
ರಾತ್ರಿ ಮಲಗಿದರೆ ಬಹಳ ಹೊತ್ತು ನಿದ್ದೆ ಹತ್ತಲಿಲ್ಲ. ಮೀಸೆ ಕೆಳಕ್ಕೆ ಬಿದ್ದದ್ದು, ಒಂದು ಹುಡುಗಿ ಅದನ್ನು ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು, ಅಟ್ಟಣಿಗೆಯಿಂದ ಇಳಿದು ಬರುವಾಗ ಜೇಬಿನಲ್ಲಿ ಚಾಕಲೇಟ್ ತುರುಕಿ ‘ ಮೀಸೆ ಮಾವ ‘ ಎಂದು ಛೇಡಿಸಿ ಕಣ್ಮರೆಯಾಗಿದ್ದು, ಚರ್ವಿತ ಚರ್ವಣವಾಗಿ ಒಂದೇ ಸಮನೆ ಇಡೀ ರಾತ್ರಿ ಕಾಡುತ್ತಿದ್ದವು. ಪಕ್ಕದಲ್ಲಿ ಮಲಗಿದ್ದ ರೆಡ್ಡಿ, 'ಏನೋ ಅಷ್ಟೊಂದು ಒದ್ದಾಡ್ತಿದ್ಯಾ ಕನಸಿನಲ್ಲಿ ಯಾವುದಾದರೂ ಹುಡುಗಿ ಬಂದು ಕಾಡಿದಳಾ' ಎಂದರು. 'ಹಾಗೇ ಅಂದ್ರೆ' ಎಂದು ಹೇಳಿ ಪಕ್ಕಕ್ಕೆ ಹೊರಳಿ, ಮುಖವನ್ನು ಟವಲ್ಲಿನಿಂದ ಮುಚ್ಚಿಕೊಂಡು ಮಲಗಿದೆ. ಆಗ ರಾತ್ರಿ 1 ಗಂಟೆ ಸಮಯ ಆಗಿತ್ತು.
ಎರಡು ದಿನಗಳ ನಂತರ ವಾರ್ಷಿಕೋತ್ಸವ ಮತ್ತು ನಾಟಕದ ಕೆಲವು ಫೋಟೋಗಳನ್ನು ರಾಣೋಜಿರಾವ್ ನನ್ನ ಕೈಗೆ ತಂದುಕೊಟ್ಟರು. ತುಂಬಾ ಚೆನ್ನಾಗಿ ಮೂಡಿದ್ದವು. ನಾಟಕದ ಮಾವನ ಪಾತ್ರದಲ್ಲಿ ವಿವಿಧ ಭಂಗಿಗಳಿAದ ತೆಗೆದಿದ್ದ ನನ್ನ ಫೋಟೋಗಳು, ಕೃಷ್ಣಯ್ಯನ ಫೋಟೋಗಳು ತುಂಬಾ ಹಿಡಿಸಿದವು. ಸಂಜೆ ಅವುಗಳನ್ನು ನೋಟೀಸು ಬೋರ್ಡ್ನಲ್ಲಿ ಅಂಟಿಸಿದೆವು. ನಂತರ ಸ್ಟುಡಿಯೋಗೆ ಹೋಗಿ ರಾಣೋಜಿರಾವ್ ಅವರನ್ನು ಕಂಡು ಖಿhಚಿಟಿಞs ಹೇಳಿ, ಬಿಲ್ ಪೇಮೆಂಟ್ ಮಾಡಿದೆ. ಸ್ಟುಡಿಯೋದ ಆisಠಿಟಚಿಥಿ ಃoಚಿಡಿಜನಲ್ಲಿ ನನ್ನ ಮೀಸೆ ಹೊತ್ತ ಕ್ಲೋಸಪ್ ಫೋಟೊವನ್ನು ಇಟಿಟಚಿಡಿge ಮಾಡಿ ಆಂಟಿಸಿದ್ದರು. 'ನಾಟಕ ಹೇಗಿತ್ತು ಸಾರ್' ಎಂದೆ. 'Suಠಿeಡಿ ಆಗಿತ್ತು, ನೀನು ಒಳ್ಳೆ ಂಛಿಣoಡಿ ಆಗೋ ಎಲ್ಲಾ ಲಕ್ಷಣಗಳಿವೆ. ಯಾವುದಾದರೂ ನಾಟಕದ ಕಂಪನಿ ಸೇರಿಕೋ ಅಥವಾ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೋ' ಅಂದರು. 'ನನ್ನಂತವರಿಗೆ ಅದೆಲ್ಲ ಯಾಕೆ ಸಾರ್, ಸದ್ಯ ಡಿಗ್ರಿ ಮುಗಿಸಿ ಯಾವುದಾದರೂ ಒಂದು ಕೆಲಸ ಗಿಟ್ಟಿಸಿಕೊಂಡರೆ ಸಾಕು' ಎಂದು ಹೇಳಿ ಹಿಂದಿರುಗಿದೆ.
( ಮುಂದಿನ ಕಿನ್ನರಿಗೆ)