ಪುನೀತ್ ಅಗಲಿಕೆ ರಾಜ್ಯಕ್ಕಾದ ದೊಡ್ಡ ಆಘಾತ: ಪರಮೇಶ್ವರ್

ಪುನೀತ್ ಅಗಲಿಕೆ ರಾಜ್ಯಕ್ಕಾದ ದೊಡ್ಡ ಆಘಾತ: ಪರಮೇಶ್ವರ್

ಪುನೀತ್ ಅಗಲಿಕೆ ರಾಜ್ಯಕ್ಕಾದ ದೊಡ್ಡ ಆಘಾತ: ಪರಮೇಶ್ವರ್


ಕೊರಟಗೆರೆ: ಪುನೀತ್ ರಾಜ್‌ಕುಮಾರ್‌ರವರ ಹಠಾತ್ ಮರಣ ಕರ್ನಾಟಕ ರಾಜ್ಯಕ್ಕೆ ಮತ್ತು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಬಹಳ ದೊಡ್ಡ ಅಘಾತ ತಂದಿದೆ ಎಂದು ಶಾಸಕ ಡಾ. ಜಿ. ಪರಮೇಶ್ವರ ತಿಳಿಸಿದರು.
ಅವರು ಪಟ್ಟಣದ ಬಸ್ ಸ್ಟಾಂಡ್ ವೃತ್ತದಲ್ಲಿ ಕರ್ನಾಟಕ ಡಾ. ರಾಜ್ ರಕ್ಷಣಾ ಸೇನೆ ಮತ್ತು ತಾಲೂಕು ಡಾ. ವಿಷ್ಣು ಅಭಿಮಾನಿ ಬಳಗದ ವತಿಯಿಂದ ನಡೆದ ಪುನೀತ್ ರಾಜ್‌ಕುಮಾರ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಸಹ ಡಾ. ರಾಜ್‌ಕುಮಾರ್‌ರವರಂತೆ ವiಹಾನ್ ಕಲಾವಿದರಾಗಿದ್ದು ಮೇರು ನಟರಾಗಿ ಬಾಲ್ಯದಿಂದಲೇ ನಟಿಸಿದ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದರು. ಪ್ರತಿಯೊಬ್ಬರನ್ನು ಗೌರವಿಸುವ ಪ್ರೀತಿಸುವ ಗುಣ ಉಳ್ಳವರಾಗಿದ್ದರು. ಸಮಾಜಸೇವೆಯಲ್ಲಿ ತಮ್ಮನ್ನು ತಾವು ಪ್ರಚಾರವಿಲ್ಲದೆ ತೊಡಗಿಸಿಕೊಂಡು ಸಾವಿರಾರು ಅನಾಥ ಮಕ್ಕಳಿಗೆ ಅಸರೆಯಾಗಿದ್ದರು. ಸಾವಿನಲ್ಲೂ ತಮ್ಮ ಕಣ್ಣುಗಳನ್ನು ದಾನ ನೀಡಿ ಅವರ ಬಾಳು ಬೆಳಗಿದ ಸಮಾಜ ಕೆಲವೇ ಹೃದಯವಂತರು ಮಾಡುವ ಕೆಲಸ ಮಾಡಿದ್ದಾರೆ ಎಂದರು.
ನನಗೆ ಅತ್ಯಂತ ವಿಶ್ವಾಸಿಗಳು, ಚಿರಪಚಿತರು, ಉತ್ತಮ ಬಾಂಧವ್ಯ ಹೊಂದ್ದಿದ್ದು, ಭೇಟಿಯಾದಾಗಲ್ಲೆಲ್ಲಾ ಆತ್ಮೀಯತೆಯಿಂದ ಮಾತನಾಡುತ್ತಿದ್ದರು. ಅಂತಹ ಉತ್ತಮ ವ್ಯಕ್ತಿಯ ಸಾವಿನ ಸುದ್ದಿ ತಿಳಿದ ತಕ್ಷಣ ಅಘಾತವಾಯಿತು. ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಹೋದಾಗ ದುಃಖ ತುಂಬಿ ಬಂತು. ಇನ್ನು ಅವರ ಕುಟುಂಬದವರ ದುಃಖವನ್ನು ಉಹಿಸಲು ಸಾಧ್ಯವಿಲ್ಲ. ಅವರಿಗೆ ಆ ದೇವರು ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಆಶಿಸಿದರು. 
ಅವರ ಅಭಿಮಾನಿಗಳಿಗೂ ನೋವು ಭರಿಸುವ ಶಕ್ತಿ ನೀಡಲಿ. ರಾಜ್ಯ ಸೇರಿದಂತೆ ದೇಶದಲ್ಲಿ ಹಲವಾರು ಸಂಘ ಸಂಸ್ಥೆಗಳು ಅವರ ಶ್ರÀದ್ಧಾಂಜಲಿಗಳನ್ನು ವಿವಿಧ ರೀತಿಯಲ್ಲಿ ಮಾಡುತ್ತಿವೆ ಆದೇ ರೀತಿÀಯಲ್ಲಿ ಈ ಎರಡು ಸಂಘಟನೆಗಳು ಇಂತಹ ಅರ್ಥಪೂರ್ಣ ಉತ್ತಮ ಕೆಲಸ ಮಾಡಿದ್ದು ಅವರಿಗೆ ಧನ್ಯವಾದಗಳನ್ನು ತಿಳಿಸಿದರು. 
ಕಾರ್ಯಕ್ರಮದಲ್ಲಿ ಡಾ. ರಾಜ್ ರಕ್ಷಣಾ ಸೇನೆ ಅಧ್ಯಕ್ಷ ರಾಜಣ್ಣ, ಡಾ. ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಕೆ.ಎಂ. ಸುರೇಶ್, ಕಾರ್ಯದರ್ಶಿ ಕೆ.ಬಿ. ಲೋಕೇಶ್, ಪ.ಪಂ ಸದಸ್ಯ ಕೆ.ಆರ್. ಓಬಳರಾಜು ಮಾಜಿ ಉಪಾಧ್ಯಕ್ಷ ಕೆ.ವಿ. ಮಂಜುನಾಥ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್, ಎರಡೂ ಸಂಘಗಳ ಪದಾಧಿಕಾರಿಗಳಾದ ನಟರಾಜು, ಧರ್ಮೇಂದ್ರ, ಸಾಗರ್, ಗೋಪಿನಾಥ್, ಚಿಕ್ಕನಾರಾಯಣ್, ದೀಪಕ್, ರಂಜಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು.