ಅಪ್ಪ-ಅಮ್ಮನ ಪಕ್ಕದಲ್ಲೇ ಚಿರನಿದ್ರೆಗೆ ಅಪ್ಪು ಮಂಗಳವಾರದ ನಂತರ ಸಮಾಧಿ ದರ್ಶನಕ್ಕೆ ಅವಕಾಶ ಸಂಯಮದಿAದ ಸಹಕರಿಸಲು ಶಿವರಾಜ್‌ಕುಮಾರ್ ಮನವಿ 

ಅಪ್ಪ-ಅಮ್ಮನ ಪಕ್ಕದಲ್ಲೇ ಚಿರನಿದ್ರೆಗೆ ಅಪ್ಪು ಮಂಗಳವಾರದ ನಂತರ ಸಮಾಧಿ ದರ್ಶನಕ್ಕೆ ಅವಕಾಶ ಸಂಯಮದಿAದ ಸಹಕರಿಸಲು ಶಿವರಾಜ್‌ಕುಮಾರ್ ಮನವಿ 
ಅಪ್ಪ-ಅಮ್ಮನ ಪಕ್ಕದಲ್ಲೇ ಚಿರನಿದ್ರೆಗೆ ಅಪ್ಪು ಮಂಗಳವಾರದ ನಂತರ ಸಮಾಧಿ ದರ್ಶನಕ್ಕೆ ಅವಕಾಶ ಸಂಯಮದಿAದ ಸಹಕರಿಸಲು ಶಿವರಾಜ್‌ಕುಮಾರ್ ಮನವಿ 

ಅಪ್ಪ-ಅಮ್ಮನ ಪಕ್ಕದಲ್ಲೇ ಚಿರನಿದ್ರೆಗೆ ಅಪ್ಪು
ಮಂಗಳವಾರದ ನಂತರ ಸಮಾಧಿ ದರ್ಶನಕ್ಕೆ ಅವಕಾಶ
ಸಂಯಮದಿAದ ಸಹಕರಿಸಲು ಶಿವರಾಜ್‌ಕುಮಾರ್ ಮನವಿ 


ಬೆಂಗಳೂರು: ಶುಕ್ರವಾರ ಇಹಲೋಕ ತ್ಯಜಿಸಿದ್ದ ಯುವನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಬೆಳಗ್ಗೆ ನಡೆಯಿತು.
ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್‌ಕುಮಾರ್ ಮತ್ತು ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಪುನೀತ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ ಕುಟುಂಬದ ಸದಸ್ಯರೊಂದಿಗೆ ಆಯ್ದ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಗೋಪಾಲಯ್ಯ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು. ಚಿತ್ರರಂಗದ ಬಹುತೇಕ ಗಣ್ಯರು ಹಾಜರಿದ್ದು ಪುನೀತ್ ಅವರಿಗೆ ಕಣ್ಣೀರಿನ ವಿದಾಯ ಹೇಳಿದರು.
ಇದಕ್ಕೂ ಮುನ್ನ ಶನಿವಾರ ರಾತ್ರಿ ಇಡೀ ಪುನೀತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ದಂಡು ನಿರಂತರವಾಗಿ ಆಗಮಿಸುತ್ತಲೇ ಇತ್ತು. ಸುಮಾರು ನಾಲ್ಕೂವರೆ ಹೊತ್ತಿಗೆ ಪುನೀತ್ ಅವರ ಅಂತಿಮ ಯಾತ್ರೆಗೆ ಸಿದ್ಧತೆಗಳು ಪೂರ್ಣಗೊಂಡು ಅಲಂಕೃತ ವಾಹನದಲ್ಲಿಡಲಾಯಿತು.
ಇದಕ್ಕೂ ಮುನ್ನ ಪುನೀತ್ ಕುಟುಂಬ ಸದಸ್ಯರು ಪುನೀತ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪುನೀತ್ ಪಾರ್ಥಿವ ಶರೀರದ ಹಣೆಗೆ ಮುತ್ತಿಟ್ಟು ಕೆನ್ನೆ ಸವರಿದರು. ಕಳೆದ ಮೂರು ದಿನಗಳಿಂದಲೂ ತಡೆದುಕೊಂಡಿದ್ದ ದುಃಖವನ್ನು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಭಾವುಕರಾದರು.
ಸುಮಾರು ಐದೂವರೆ ವೇಳೆಗೆ ಕಂಠೀರವ ಕ್ರೀಡಾಂಗಣ ತಲುಪಿದ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರಕ್ಕೆ ವಿಧಿವಿಧಾನಗಳಿಂದ ಅಂತಿಮ ಸಂಸ್ಕಾರ ನಡೆಸಲಾಯಿತು. ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಿದರು.
ಸಮಾಧಿಗೆ ಪೂಜೆ ಸಲ್ಲಿಸಿದ ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಮತ್ತು ವಂದನಾ, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ರಾಜ್ ಕುಟುಂಬದ ಸದಸ್ಯರು ರಾಜ್ ಮತ್ತು ಪಾರ್ವತಮ್ಮ ಸಮಾಧಿಗೆ ನಮಸ್ಕರಿಸಿ ಮನೆಗಳಿಗೆ ತೆರಳಿದರು.
ಕಂಠೀರವ ಕ್ರೀಡಾಂಗಣದಿAದ ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಅಲ್ಲದೆ, ಸ್ಟುಡಿಯೋ ಒಳಗೆ ಮತ್ತು ಹೊರಗೆ ಹೆಚ್ಚಿನ ಪಡೆ ನಿಯೋಜಿಸಲಾಗಿತ್ತು.
ಸಾವಿರಾರು ಅಭಿಮಾನಿಗಳು ಕಂಠೀರವ ಕ್ರೀಡಾಂಗಣದತ್ತ ಬೆಳಗಿನ ಜಾವವೇ ಆಗಮಿಸಿ ಕಾಯುತ್ತಿದ್ದರೂ ಅವರಿಗೆ ಸ್ಟುಡಿಯೋ ಪ್ರವೇಶಕ್ಕೆ ಅವಕಾಶವಿಲ್ಲದ ಕಾರಣ ಹೊರಗಡೆಯೇ ಕಾಯುತ್ತ ನಿಂತಿದ್ದರು. ಪುನೀತ್ ರಾಜ್‌ಕುಮಾರ್ ಅವರನ್ನು ಕಾಣಲು ದೂರುದೂರುಗಳಿಂದ ಆಗಮಿಸಿದ್ದ ನೂರಾರು ಅಭಿಮಾನಿಗಳಿಗೆ ದರ್ಶನ ದೊರೆಯದೆ ನಿರಾಶರಾಗಿ ರೋದಿಸುತ್ತಿದ್ದುದು ಕಂಠೀರವ ಕ್ರೀಡಾಂಗಣದ ಹೊರಗೆ ಕಂಡು ಬಂದಿತು.
ಮAಗಳವಾರ ಹಾಲು-ತುಪ್ಪ: ಇಂದು ಅಂತಿಮ ಸಂಸ್ಕಾರದ ನಂತರ ಸಂಜೆ ವೇಳೆಗೆ ಹಾಲು-ತುಪ್ಪ ಕಾರ್ಯಕ್ರಮ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕುಟುಂಬದ ಮೂಲಗಳ ಪ್ರಕಾರ ಮಂಗಳವಾರ ಹಾಲು-ತುಪ್ಪ ಶಾಸ್ತç ಮಾಡಲಾಗುತ್ತದೆ ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದರು.
ಆ ಕಾರ್ಯಕ್ರಮದ ನಂತರ ಸಮಾಧಿ ವೀಕ್ಷಣೆಗೆ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲಿಯವರೆಗೂ ಅಭಿಮಾನಿಗಳು ಸಂಯಮದಿAದ ಇರಬೇಕೆಂದು ಮನವಿ ಮಾಡಿದರು.
ಆತ್ಮಹತ್ಯೆಯ ನಿರ್ಧಾರ ಬೇಡ: ಪುನೀತ್ ರಾಜ್‌ಕುಮಾರ್ ಅವರ ದಿಢೀರ್ ನಿರ್ಗಮನದಿಂದ ಆಘಾತಗೊಂಡಿದ್ದ ಅಭಿಮಾನಿಗಳಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂತಹ ನಿರ್ಧಾರ ಬೇಡ. ಇಂತಹ ಸಂದರ್ಭದಲ್ಲಿ ದುಃಖವಾಗೋದು ಸಹಜ. ಆದರೆ ನಿಮಗೂ ನಿಮ್ಮ ಕುಟುಂಬದವರಿರುತ್ತಾರೆ ಅವರ ಬಗ್ಗೆ ಯೋಚಿಸಿ. ದಯವಿಟ್ಟು ಯಾರೂ ಆತ್ಮಹತ್ಯೆಯಂತಹ ದುಡುಕು ನಿರ್ಧಾರ ಮಾಡದೆ ನಿಮ್ಮವರಿಗಾಗಿ ಜೀವಿಸಿರಬೇಕೆಂದು ಮನವಿ ಮಾಡಿದರು.