ತಮ್ಮದೇ ಸಮುದಾಯದವರನ್ನು ನೇಮಿಸಿಕೊಂಡ ಅಂಗನವಾಡಿ!

ತಮ್ಮದೇ ಸಮುದಾಯದವರನ್ನು ನೇಮಿಸಿಕೊಂಡ ಅಂಗನವಾಡಿ!

ತಮ್ಮದೇ ಸಮುದಾಯದವರನ್ನು ನೇಮಿಸಿಕೊಂಡ ಅಂಗನವಾಡಿ!

ತಮ್ಮದೇ ಸಮುದಾಯದವರನ್ನು ನೇಮಿಸಿಕೊಂಡ ಅಂಗನವಾಡಿ!

ಕುಣಿಗಲ್ : ಅಧಿಕಾರಿಗಳ ವರ್ತನೆಗೆ ಬೇಸತ್ತು ಗ್ರಾಮಸ್ಥರು ಅಂಗನವಾಡಿ ಕೇಂದ್ರವನ್ನ ಜಮಾತ್ ನಿಂದಲೇ ಖಾಸಗಿಯಾಗಿ ಆರಂಭಿಸಿ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರನ್ನಾಗಿ ಸಮುದಾಯದ ಮಹಿಳೆಯರನ್ನೇ ನೇಮಿಸಿಕೊಂಡಿರುವ ಘಟನೆ ಬೊಮ್ಮೇನಹಳ್ಳಿ ಪಾಳ್ಯದಲ್ಲಿ ನಡೆದಿದೆ.


 ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಬೊಮ್ಮೇನಹಳ್ಳಿ ಪಾಳ್ಯದಲ್ಲಿ ಬಹುತೇಖ ಮಂದಿ ಮುಸ್ಲೀಮರಿದ್ದು ಕಳೆದ ಒಂದು ತಿಂಗಳಿನಿAದ ಸಮುದಾಯದ ಮಹಿಳೆಯರನ್ನ ಅಂಗನವಾಡಿ ಕಾರ್ಯಕರ್ತೆಯಾಗಿ ಕೇಂದ್ರಕ್ಕೆ ನೇಮಿಸಿಕೊಳ್ಳಬೇಕೆಂದು ಮನವಿ ಕೊಟ್ಟು ಒತ್ತಾಯಿಸಿ ಅಲ್ಲಿಗೆ ವರ್ಗಾವಣೆಯಾಗಿ ಬಂದಿದ್ದ ಸುಮಾ ರವರಿಗೆ ಕೆಲಸ ಮಾಡಲುಬಿಡದೆ ಅಡ್ಡಿ ಪಡಿಸಿದ್ದಲ್ಲದೆ ಕೇಂದ್ರಕ್ಕೆ ಬೀಗಹಾಕಿ ಮುಳ್ಳು ಬೇಲಿ ಹಾಕಿದ್ದರು. ತೆರವುಗೊಳಿಸುವಂತೆ ಸಾಕಷ್ಟುಬಾರಿ ಮನವೊಲಿಸಿ ಸಫಲತೆ ಕಾಣದೆ ಸಿಡಿಪಿಒ ಅನುಷಾ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮನವೊಲಿಸುವಲ್ಲಿ ಯಶಸ್ವಿಕಾಣದೆ ಗ್ರಾಮಸ್ಥರ ವಿರೋಧದ ನಡುವೆಯೂ ಬೇಲಿ ತೆರವುಗೊಳಿಸಿ ಬೀಗ ತೆಗೆಸಿ ಸುಮಾರವರಿಗೆ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದರು. ಈ ಸಂಬAಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಸರ್ಕಾರದ ಅಂಗನವಾಡಿ ಸಹವಾಸವೇ ಬೇಡ ಎಂದು ತೀರ್ಮಾನಿಸಿ ಪ್ರತ್ಯೇಕ ಅಂಗನವಾಡಿ ತೆರೆದು ಮಕ್ಕಳಿಗೆ ಊಟದ ವ್ಯವಸ್ಥೆ, ಬಾಣಂತಿ, ಗರ್ಭಿಣಿಯರಿಗೆ ಆಹಾರ ಸಾಮಾಗ್ರಿಗಳನ್ನ ಜಮಾತ್ ನಿಂದಲೇ ನೀಡಲು ತೀರ್ಮಾನಿಸಿ ಆಹಾರ ಸಾಮಗ್ರಿಗಳನ್ನ ವ್ಯವಸ್ಥೆ ಮಾಡಿದ್ದಾರೆ. ನಮ್ಮ ಸಮುದಾಯಕ್ಕೆ ಕೆಲಸ ಕೊಡಿ ಎಂದು ನಮ್ಮ ಮಹಿಳೆಯರು ಮನವಿ ಮಾಡಿದರೆ, ನಮ್ಮ ಮಹಿಳೆಯರಮೇಲೆಯೇ ಕೇಸು ಹಾಕುತ್ತಾರೆ. ಇದರಿಂದ ನಮ್ಮ ಮಕ್ಕಳನ್ನ ಎಲ್ಲಿಗೂ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಾಗ ನಮ್ಮ ಜಮಾತ್ ನಿಂದಲೇ ನಡೆಸುತ್ತಿರುವ ಅಂಗನವಾಡಿಗೆ ಮಕ್ಕಳನ್ನ ಕಳುಹಿಸುತ್ತಿದ್ದಾರೆ ಎಂದು ನೇಮಕ ಗೊಂಡ ಅಂಗನವಾಡಿ ಕಾರ್ಯಕರ್ತೆಯರಾದ ಶಬಾನ ಬಾನು, ಬೀಬಿ ಹಜೀರಾ ತಿಳಿಸಿದ್ದಾರೆ. 


 ಮತ್ತೊಂದು ಕಡೆ ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಬೇಲಿ ಹಾಕಿ ಬಂದ್ ಮಾಡಿ ಕೇಂದ್ರ ತೆರೆದು ಒಂದು ವಾರ ಕಳೆಯುತ್ತಿದ್ದರೂ ಮಕ್ಕಳು ಬಾರದೆ ಅಂಗನವಾಡಿ ಕಾರ್ಯಕರ್ತೆಮಾತ್ರ ಇದ್ದು ಬಿಕೋ ಎನ್ನುತ್ತಿತ್ತು. ಮನೆಮನೆಗೆ ಭೇಟಿ ನೀಡಿ ಗರ್ಭಿಣಿ ಬಾಣಂತಿಯರಿಗೆ ಆಹಾರ ಸಾಮಾಗ್ರಿ ನೀಡುವುದರ ಜೊತೆಗೆ ಗ್ರಾಮಸ್ಥರ ಮನವೊಲಿಸಿ ಮಕ್ಕಳನ್ನ ಕೇಂದ್ರಕ್ಕೆ ಕರೆತರವುದಾಗಿ ಕಾರ್ಯಕರ್ತೆ ಸುಮಾ ತಿಳಿಸಿದ್ದಾರೆ. 


ಇಷ್ಟೆಲ್ಲಾ ಘಟನೆಗಳು ನಡೆದರೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗ್ರಾಮಕ್ಕೆ ಬಂದು ಜನರ ಸಮಸ್ಯೆ ಆಲಿಸಿ ಇತ್ಯರ್ಥ ಪಡಿಸದಿದ್ದಕ್ಕೆ ಗ್ರಾ.ಪಂ. ಸದಸ್ಯ ಮಹಮ್ಮದ್ ಸಮಿ ಉಲ್ಲಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


 ಸಣ್ಣಪುಟ್ಟ ಸಮಸ್ಯೆ ಏನೇ ಇರಲಿ ಯಾರೂ ಹೇಳಿಲಿ ಬಿಡಲಿ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸಿ ಹೋರಾಟ ಮಾಡುತ್ತಿದ್ದ ಅಂಗನವಾಡಿ ನೌಕರರ ಸಂಘ ಮಾತ್ರ ತಟಸ್ಥ ನಿಲುವು ತಳೆದಿರುವುದು ಎಲ್ಲರಿಗೂ ಕುತೂಹಲ ಮೂಡಿಸಿರುವುದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.

ಕೆಎನ್‌ಜಿ: ಜಮಾತ್‌ನಿಂದ ನಡೆಯುತ್ತಿರುವ ಖಾಸಗಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆರೈಕೆ.
ಕೆಎನ್‌ಜಿ೧: ಮಕ್ಕಳಿಲ್ಲದೆ ಬಿಕೋ ಎನ್ನುತ್ತಿರುವ ಸರ್ಕಾರಿ ಅಂಗನವಾಡಿಕೇಂದ್ರ.