ಹೆಚ್ಚುತ್ತಲೇ ಇರುವ ಆರ್ಥಿಕ ಅಸಮಾನತೆ
ಬೇರೆ ಬೇರೆ ಅಧ್ಯಯನಗಳು ಶೇ.80 ರಷ್ಟು ಸಂಪತ್ತನ್ನು ಶೇ.10 ರಷ್ಟು ಜನರು ಹೊಂದಿದ್ದಾರೆ ಎಂದು ಹೇಳುತ್ತಿವೆ. ಆದರೆ ಈ ಅಧ್ಯಯನ ಮಾಡಿದವರು ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದ್ದರಿಂದ ಈ ಸಂಶೋಧನೆಗೊಂದು ಅಧಿಕೃತತೆ ದೊರಕಿದೆ.
ಡಾ.ವೆಂಕಟೇಶಯ್ಯ ನೆಲ್ಲುಕುಂಟೆ
ಅತ್ಯಂತ ನಂಬಿಕಾರ್ಹ ಅರ್ಥಶಾಸ್ತ್ರಜ್ಞರುಗಳು ಈ ಅಧ್ಯಯನ ಮಾಡಿದ್ದಾರೆ. ಮಾರ್ಚ್-18-2024 ರಂದು ಈ ಸಂಶೋಧನಾ ಬರೆಹವನ್ನು ಪಬ್ಲಿಷ್ ಮಾಡಿದ್ದಾರೆ. 85 ಪುಟಗಳ ಈ ಬರೆಹ ದೇಶ ನಡೆದು ಬಂದ/ ನಡೆಯುತ್ತಿರುವ ಕಾಲುದಾರಿ, ಬಂಡಿದಾರಿ, ಹೆದ್ದಾರಿಗಳನ್ನು ತೋರಿಸುತ್ತಿದೆ.
1993 ರವರೆಗೆ ಕೇವಲ ಒಬ್ಬರು ಅತಿ ಶ್ರೀಮಂತ ದೇಶದಲ್ಲಿದ್ದರು, ಅವರ ಒಟ್ಟು ಸಂಪತ್ತಿನ ಪ್ರಮಾಣ 0.7 ಇತ್ತು. 2014 ರಲ್ಲಿ 51 ಜನ ಇದ್ದರು. ಅವರ ಒಟ್ಟು ಸಂಪತ್ತು ಶೇ. 10.9 ರಷ್ಟಿತ್ತು. 2022 ರಲ್ಲಿ 162 ಜನ ಅತಿ ಶ್ರೀಮಂತರಿದ್ದಾರೆ, ಇವರ ಬಳಿ ಶೇ.24.6 ರಷ್ಟು ಸಂಪತ್ತು ಶೇಖರಣೆಗೊಂಡಿದೆ.
ಇಲ್ಲಿನ ಟೇಬಲ್ಲನ್ನೆ ನೋಡಿ 2022-23 ರಲ್ಲಿ 92.24 ಕೋಟಿ ವಯಸ್ಕ ಜನರಿದ್ದಾರೆ.
- ಇವರಲ್ಲಿ 46.12 ಕೋಟಿ ಜನರು ಬಡವರಾಗಿದ್ದು ಅವರ ಒಟ್ಟು ವಾರ್ಷಿಕ ಆದಾಯವು ಶೇ.15 ರಷ್ಟಿದೆ ಹಾಗೂ ಇವರ ಒಟ್ಟು ಸಂಪತ್ತು ಕೇವಲ ಶೇ.6.4 ರಷ್ಟಿದೆ.
- ಮಧ್ಯಮ ಆದಾಯದ ಗುಂಪಿನವರು ಶೇ.40 ರಷ್ಟಿದ್ದು ಅವರ ಸಂಖ್ಯೆ 36.9 ಕೋಟಿಗಳಷ್ಟಿದೆ. ಇವರ ವಾರ್ಷಿಕ ಆದಾಯದ ಪ್ರಮಾಣ ಶೇ.27.3 ರಷ್ಟು ಹಾಗೂ ಶೇ.28.6 ರಷ್ಟು ಸಂಪತ್ತು ಹೊಂದಿದ್ದಾರೆ.
- ದೇಶದ ಶ್ರೀಮಂತರ ಸಂಖ್ಯೆ 9.23 ಕೋಟಿಯಾಗಿದ್ದು ಇವರ ಪ್ರಮಾಣ ಶೇ10 ರಷ್ಟಿದೆ. ವಾರ್ಷಿಕ ಆದಾಯದಲ್ಲಿ ಇವರ ಪಾಲು ಶೇ.57.7 ರಷ್ಟು ಹಾಗೂ ಶೇ.65 ರಷ್ಟು ಸಂಪತ್ತು ಹೊಂದಿದ್ದಾರೆ.
- ದೇಶದ ಅತಿ ಶ್ರೀಮಂತರು ಶೇ.1 ರಷ್ಟಿದ್ದು ಅವರ ಸಂಖ್ಯೆ 92.24 ಲಕ್ಷ ಮಾತ್ರ. ಇವರ ಆದಾಯ ಶೇ.22.6 ರಷ್ಟು ಹಾಗೂ ಸಂಪತ್ತು ಶೇ.40.1 ರಷ್ಟು.
- ಅತ್ಯಂತ ಶ್ರೀಮಂತರು ಶೇ.೦.1 ರಷ್ಟು ಅವರ ಸಂಖ್ಯೆ 9.23 ಲಕ್ಷ. ಇವರ ಆದಾಯ ಶೇ.- 9.6 ರಷ್ಟು, ಸಂಪತ್ತು ಶೇ.27.7 ರಷ್ಟು.
- ದೇಶದ ಅತ್ಯಂತ ಅತ್ಯಂತ ಶ್ರೀಮಂತರು 92234 ಜನ ಅಥವಾ ಶೇ.0.01ರಷ್ಟು ಇವರ ಆದಾಯ ಶೇ.4.3 ರಷ್ಟು , ಸಂಪತ್ತು ಶೇ.22.2ರಷ್ಟು.
- ಅತ್ಯಂತ ಅತಿ ಅತ್ಯಂತ ಶ್ರೀಮಂತರ ಸಂಖ್ಯೆ 9223 ಜನ ಅಥವಾ ಶೇ. 0.001 ರಷ್ಟು. ಇವರ ಆದಾಯ ಶೇ.2.1 ರಷ್ಟು, ಸಂಪತ್ತು ಶೇ.16.8 ರಷ್ಟು.
ಬೇರೆ ಬೇರೆ ಅಧ್ಯಯನಗಳು ಶೇ.80 ರಷ್ಟು ಸಂಪತ್ತನ್ನು ಶೇ.10 ರಷ್ಟು ಜನರು ಹೊಂದಿದ್ದಾರೆ ಎಂದು ಹೇಳುತ್ತಿವೆ. ಆದರೆ ಈ ಅಧ್ಯಯನ ಮಾಡಿದವರು ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದ್ದರಿಂದ ಈ ಸಂಶೋಧನೆಗೊಂದು ಅಧಿಕೃತತೆ ದೊರಕಿದೆ.