ಫೆ. 14ರಿಂದ ಪ್ರೌಢಶಾಲೆಗಳು ಆರಂಭ: ಬೊಮ್ಮಾಯಿ

ಫೆ. 14ರಿಂದ ಪ್ರೌಢಶಾಲೆಗಳು ಆರಂಭ: ಬೊಮ್ಮಾಯಿ, cm bommai, hijab, school from feb 14

ಫೆ. 14ರಿಂದ ಪ್ರೌಢಶಾಲೆಗಳು ಆರಂಭ: ಬೊಮ್ಮಾಯಿ


ಫೆ. 14ರಿಂದ ಪ್ರೌಢಶಾಲೆಗಳು ಆರಂಭ: ಬೊಮ್ಮಾಯಿ


ಬೆಂಗಳೂರು: ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆಯಂತೆ ಮೊದಲ ಹಂತವಾಗಿ ಫೆ. 14 ರ ಸೋಮವಾರದಿಂದ ಪ್ರೌಢಶಾಲೆಗಳು ಆರಂಭಗೊಳ್ಳಲಿವೆ. ಎರಡನೇ ಹಂತದಲ್ಲಿ ದ್ವಿತೀಯ ಪಿಯುಸಿ ಮತ್ತು ಪದವಿ ತರಗತಿಗಳ ಆರಂಭದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ರಾಜ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ನಂತರ ಶಿಕ್ಷಣ ಹಾಗೂ ಗೃಹ ಇಲಾಖೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಸೂಚನೆಯಂತೆ ಅಂತಿಮ ಆದೇಶ ಬರುವವರೆಗೂ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಪರಸ್ಪರ ಒಗ್ಗಟ್ಟಿನಿಂದ, ಸೌಹಾರ್ದತೆಯಿಂದಿರಬೇಕೆAದು ಮನವಿ ಮಾಡಿದರು.


ಶಿಕ್ಷಣ, ಗೃಹ ಸಚಿವರು, ಪ್ರಮುಖ ಇಲಾಖೆಯ ಹಿರಿಯ ಅಧಿಕಾರಿಗಳು ಜೊತೆ ಚರ್ಚೆ ನಡೆಸಲಾಗಿದ್ದು, ಸೋಮವಾರದಿಂದ ಶಾಲೆಗಳ ಆರಂಭಕ್ಕೆ ತೀರ್ಮಾನಿಸಲಾಗಿದೆ ಎಂದರು.


ಶುಕ್ರವಾರ ಸಂಜೆ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಸಿಇಓಗಳ ಸಭೆ ನಡೆಸಿ ಜಿಲ್ಲೆಗಳಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದು ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.


ಘಟನೆಗಳ ಹಿನ್ನೆಲೆಯಲ್ಲಿ ತಾವು, ಶಿಕ್ಷಣ, ಗೃಹ ಸಚಿವರು ಮತ್ತು ಜಿಲ್ಲಾ ಸಚಿವರು ಆಯಾ ಜಿಲ್ಲಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಿAದಿರಲಿದ್ದೇವೆ. ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಿAದಿರಬೇಕೆAದು ಸೂಚಿಸಲಾಗಿದೆ. ಹೈಕೋರ್ಟ್ನಿಂದ ಅಂತಿಮ ಆದೇಶ ಬರುವವರೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.


ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಕಳೆದ ಎರಡು ದಿನಗಳಿಂದ ಮಕ್ಕಳಲ್ಲಿ ಗೊಂದಲ ಕಡಿಮೆ ಆಗಿದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕೆಲವು ದೃಶ್ಯಾವಳಿಗಳು ಹರಿದಾಡುತ್ತಿದ್ದು, ಹೊರಗಿನವರ ಪ್ರಚೋದನೆ ಕೆಲವು ಕಡೆ ಕಂಡುಬAದಿದ್ದು ಯಾವುದೇ ಪ್ರಚೋದನೆಗೆ ಒಳಗಾಗದೇ ಶಾಂತಿಯಿAದಿರಬೇಕೆAದು ಮನವಿ ಮಾಡಿದರು. ಅವರು ಕೂಡಾ ಶಾಂತವಾಗಿರಬೇಕೆAದು ಮನವಿ ಮಾಡುವುದಾಗಿ ತಿಳಿಸಿದ ಅವರು, ಶಾಲೆ, ಕಾಲೇಜುಗಳಲ್ಲಿ ಮಕ್ಕಳು ಸಂಯಮದಿAದ ವರ್ತಿಸುತ್ತಿದ್ದು ಅವರಿಗೆ ಅತ್ಯಂತ ಪ್ರೀತಿದಾಯಕ ಧನ್ಯವಾದ ತಿಳಿಸುವುದಾಗಿ ಹೇಳಿದರು.