ಪತ್ರಕರ್ತ ಕುಮಾರ್ ಹೃದಯಾಘಾತದಿಂದ ನಿಧನ

Journalist Kumar

ಪತ್ರಕರ್ತ ಕುಮಾರ್ ಹೃದಯಾಘಾತದಿಂದ ನಿಧನ

ಪತ್ರಕರ್ತ ಕುಮಾರ್ ಹೃದಯಾಘಾತದಿಂದ ನಿಧನ


ತುಮಕೂರು- ಪತ್ರಕರ್ತ ಸಿ.ಎಸ್. ಕುಮಾರ್(48 ವರ್ಷ) ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾಗಿದ್ದಾರೆ. ತಾಯಿ, ತಮ್ಮ ಹಾಗೂ ತಂಗಿಯನ್ನು ಹಾಗೂ ಅಪಾರ ಪತ್ರಕರ್ತ ಗೆಳೆಯರನ್ನು ಅವರು ಅಗಲಿದ್ದಾರೆ.
ಇತ್ತೀಚೆಗಷ್ಟೆ ಹೃದಯಾಘಾತಕ್ಕೊಳಗಾಗಿದ್ದ ಕುಮಾರ್ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು. ಸೋಮವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಚೇಳೂರಿನ ಮನೆಯಲ್ಲಿದ್ದ ಅವರಿಗೆ ಊಟ ಮಾಡಿದ ಬಳಿಕ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬದವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು ಅಲ್ಲಿಂದ ಆಂಬ್ಯುಲೆನ್ಸ್ನಲ್ಲಿ ತುಮಕೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕುಮಾರ್ ಕೊನೆಯುಸಿರೆಳದಿದ್ದಾರೆ. ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅವರು ಹಾದಿಯಲ್ಲೇ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಭಾನುವಾರ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಹೃದಯ ತಪಾಸಣಾ ಶಿಬಿರದಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರಸ್ತುತ ಈ ಸಂಜೆ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ್ದ ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರೂ ಆಗಿದ್ದರು. ಸುದ್ದಿ ಗೋಷ್ಟಿಗಳಲ್ಲಿ ಎತ್ತರದ ದನಿಯಲ್ಲಿ ನೇರ ಪ್ರಶ್ನೆಗಳನ್ನು ಹಾಕುತ್ತಿದ್ದ ಕುಮಾರ್ ಅಪರಾಧ ಪ್ರಕರಣಗಳು ಹಾಗೂ ರಾಜಕೀಯ ವರದಿಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.
ಸೋರೆಕುAಟೆಯ ಪ್ರೌಢ ಶಾಲೆಯಲ್ಲಿ ಕ್ರಾಫ್ಟ್ ಟೀಚರ್ ಆಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಿದ್ದ ಕುಮಾರ್, ಕೆಲ ಕಾಲ ಹೇಮಾವತಿ ನಾಲಾ ನಿರ್ವಹಣೆ ಕಾರ್ಯವನ್ನೂ ಮಾಡಿದ್ದರು. ನಂತರ ಚೇಳೂರಿನಲ್ಲಿ ಪತ್ರಿಕಾ ಏಜೆಂಟರಾಗಿ, ನಂತರ ದಿ. ಬಾಲಕೃಷ್ಣ ಕಾಕತ್ಕರ್ ಅವರ ಕ್ರೈಂ ಸ್ಟೋರಿ ತಂಡದ ವರದಿಗಾರರಾಗಿ ಹಾಗೂ ಸ್ಥಳೀಯ ದಿನಪತ್ರಿಕೆಯೊಂದರ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.
ಪತ್ರಕರ್ತ ಕುಮಾರ್ ಅವರ ನಿಧನಕ್ಕೆ ಶಾಸಕರಾದ ಜ್ಯೋತಿಗಣೇಶ್, ಗೌರಿಶಂಕರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಜಿಲ್ಲಾ ಸಂಘದ ಮರಣ ಪರಿಹಾರ ನಿಧಿಯಿಂದ ಕುಮಾರ್ ಕುಟುಂಬಕ್ಕೆ ರೂ. 10 ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕುಮಾರ್ ನಿಧನಕ್ಕೆ ಸಂತಾಪ ಸಲ್ಲಿಸಿದ್ದು ಮೃತ ಪತ್ರಕರ್ತನ ಕುಟುಂಬಕ್ಕೆ ರಾಜ್ಯ ಸಮಿತಿಯ ಮರಣ ಪರಿಹಾರ ನಿಧಿಯಿಂದ ರೂ. 10 ಸಾವಿರ ನೀಡುವುದಾಗಿ ತಿಳಿಸಿದ್ದಾರೆ.
ಪತ್ರಕರ್ತ ಕುಮಾರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಚೇಳೂರಿಗೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟಂಬದವರಿಗೆ ಸಾಂತ್ವ್ವನ ಹೇಳಿದರು. ಪತ್ರಕರ್ತರ ಸಂಘದ ಅಧ್ಯಕ್ಷರ ಸಂಘದ ಜಿಲ್ಲಾ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಕಾರ್ಯದರ್ಶಿ ರಂಗರಾಜು ಸೇರಿ ಸಂಘದ ಪದಾಧಿಕಾರಿಗಳು ಹಾಗು ಜಿಲ್ಲೆಯ ಬಹುಪಾಲು ಪತ್ರಕರ್ತರು ಚೇಳೂರಿಗೆ ಧಾವಿಸಿ ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.
ಪತ್ರಕರ್ತ ಕುಮಾರ್ ಅವರ ಅಂತ್ಯಕ್ರಿಯೆ ಗುಬ್ಬಿ ತಾಲ್ಲೂಕಿನ ಅವರ ಸ್ವಗ್ರಾಮ ಚೇಳೂರಿನಲ್ಲಿ ಮಧ್ಯಾಹ್ನ ನೆರವೇರಿತು.
ಇಂದು ಸಂತಾಪ ಸಭೆ
ಅಕಾಲಿಕವಾಗಿ ಮರಣ ಹೊಂದಿದ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯವನ್ನು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘ ತಿಳಿಸಿದೆ.