ನಗರದಲ್ಲಿ ಮರುನಾಮಕರಣ ಪರ್ವ!, 25 ಲಕ್ಷ ಉಳಿಕೆ ಮೊತ್ತ : ಹೊಸ ಕ್ರಿಯಾ ಯೋಜನೆ, ಟೂಡಾ ಸದಸ್ಯರಾಗಿ ನವೀನ ಅರುಣಾ

TUDA Naveena Aruna Tumakuru Mahanagara Palike

ನಗರದಲ್ಲಿ ಮರುನಾಮಕರಣ ಪರ್ವ!, 25 ಲಕ್ಷ ಉಳಿಕೆ ಮೊತ್ತ : ಹೊಸ ಕ್ರಿಯಾ ಯೋಜನೆ, ಟೂಡಾ ಸದಸ್ಯರಾಗಿ ನವೀನ ಅರುಣಾ

 ನಗರದಲ್ಲಿ ಮರುನಾಮಕರಣ ಪರ್ವ!,

25 ಲಕ್ಷ ಉಳಿಕೆ ಮೊತ್ತ : ಹೊಸ ಕ್ರಿಯಾ ಯೋಜನೆ,

ಟೂಡಾ ಸದಸ್ಯರಾಗಿ ನವೀನ ಅರುಣಾ


ತುಮಕೂರು: ತುಮಕೂರು ನಗರದ ವಿವಿಧ ವಾರ್ಡ್ಗಳಲ್ಲಿರುವ ರಸ್ತೆ, ವೃತ್ತ, ಬಡಾವಣೆ ಮತ್ತು ಉದ್ಯಾನವನಗಳಿಗೆ ಹೊಸ ಹೆಸರು ನಾಮಕರಣ ಮಾಡಲು ತುಮಕೂರು ಮಹಾನಗರ ಪಾಲಿಕೆಯು ಮಹತ್ವದ ನಿರ್ಣಯ ಕೈಗೊಂಡಿದೆ. 
1)ಅಂತರಸನಹಳ್ಳಿ ಬೈಪಾಸ್ ವೃತ್ತಕ್ಕೆ ಶ್ರೀ ಅಟವಿ ಮಹಾಸ್ವಾಮಿಗಳ ವೃತ್ತ, 2) ಸಿದ್ಧಗಿರಿ ನಗರದ ಎಸ್.ಸಿ. ಕಾಲೋನಿಗೆ ಸ್ವಾಮಿ ವಿವೇಕಾನಂದ, 3) 25 ನೇ ವಾರ್ಡ್ ವ್ಯಾಪ್ತಿಯ ನಿಸರ್ಗ ಲೇಔಟ್‌ನ ಉದ್ಯಾನಕ್ಕೆ ನಿಸರ್ಗ ಬೃಂದಾವನ, 4) 28 ನೇ ವಾರ್ಡ್ ವ್ಯಾಪ್ತಿಯ ಕುಣಿಗಲ್ ಜಂಕ್ಷನ್ ಬಳಿಯ ಬಡಾವಣೆಗಳಿಗೆ ಕೆಂಪೇಗೌಡ ನಗರ ಮತ್ತು ಪ್ರಗತಿ ಬಡಾವಣೆ, 5) 29 ನೇ ವಾರ್ಡ್ ವ್ಯಾಪ್ತಿಯ ಮರಳೂರು ದಿಣ್ಣೆ ಈದ್ಗಾ ಮೈದಾನದ ಮುಂಭಾಗದ ಬಡಾವಣೆಗೆ ಮೆಹಬೂಬ್ ನಗರ, 6) 24 ನೇ ವಾರ್ಡ್ ವ್ಯಾಪ್ತಿಯ ಉರ್ದು ಶಾಲೆ ಮುಖ್ಯರಸ್ತೆ ಮತ್ತು ಆ ಭಾಗಕ್ಕೆ ವಿದ್ಯಾರಣ್ಯ ನಗರ, 7) 30 ನೇ ವಾರ್ಡ್ ವ್ಯಾಪ್ತಿಯ ಗೆದ್ದಲಹಳ್ಳಿ ಮುಖ್ಯರಸ್ತೆಯಲ್ಲಿ ಸಪ್ತಗಿರಿ ಬಡಾವಣೆಯ 40 ಅಡಿ ರಸ್ತೆಗೆ ಮೂರು ರಸ್ತೆಗಳು ಸೇರುವ ಜಾಗಕ್ಕೆ ಸಪ್ತಗಿರಿ ವೃತ್ತ, ಹಾಗೂ ಗೆದ್ದಲಹಳ್ಳಿ ಮುಖ್ಯರಸ್ತೆಯ 60 ಅಡಿ ರಸ್ತೆಯನ್ನು ಪುರುಷೋತ್ತಮಾನಂದ ಮಾರ್ಗ, 8) ನಗರದ ಶ್ರೀರಾಮನಗರದ 1 ನೇ ಅಡ್ಡರಸ್ತೆಗೆ ಮಾಜಿ ಸಂಸದ ಸಿ.ಎನ್. ಭಾಸ್ಕರÀಪ್ಪ ರಸ್ತೆ, 9) ಸ್ವಾತಂತ್ರö್ಯ ಚೌಕದಿಂದ ಹಿಡಿದು ಶ್ರೀ ಕರಿಬಸವ ಸ್ವಾಮಿ ವೃತ್ತದವರೆಗಿನ ಹೊರಪೇಟೆ ಮುಖ್ಯರಸ್ತೆಗೆ ಡಾ. ರಾಜಕುಮಾರ್ ರಸ್ತೆ, 10) ಅಮಾನಿಕೆರೆ ಪಕ್ಕದ ರಸ್ತೆಗೆ ನೀರಾವರಿ ತಜ್ಞ ಪರಮಶಿವಯ್ಯ ರಸ್ತೆ, 11) ಕೋಟೆ ಆಂಜನೇಯ ಪ್ರತಿಮೆಯಿಂದ ಚಿಕ್ಕಪೇಟೆ ವೃತ್ತದವರೆಗಿನ ರಸ್ತೆಗೆ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ರಸ್ತೆ, 12) ನಗರದ 13 ನೇ ವಾರ್ಡ್ನ ಗ್ಯಾಸ್ ಪಂಪ್ ಎದುರಿನ ನಗರಕ್ಕೆ ಹಂಜಾ ನಗರ, 13) ನಗರದ 23 ನೇ ವಾರ್ಡ್ ವ್ಯಾಪ್ತಿಯ ಸತ್ಯಮಂಗಲದ ರಾಷ್ಟಿçÃಯ ಹೆದ್ದಾರಿ-4 ಪಕ್ಕದ ಬಲಭಾಗದ ಬಡಾವಣೆಗೆ ಪ್ರಗತಿ ಲೇಔಟ್, 14) ನಗರದ 30 ನೇ ವಾರ್ಡ್ನ ಸಪ್ತಗಿರಿ ಬಡಾವಣೆಯ ದಕ್ಷಿಣ ಭಾಗದ 4 ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರಿಡಲು ಪಾಲಿಕೆಯು ಸರ್ವಾನುಮತದ ತೀರ್ಮಾನ ಕೈಗೊಂಡಿದೆ.
ಈ ಹಿಂದಿನ ಮೇಯರ್ ಫರೀದಾಬೇಗಂ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 25-08-2021 ರಂದು ನಡೆದಿದ್ದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಮೇಲ್ಕಂಡAತೆ ಹೆಸರಿಡಲು ತೀರ್ಮಾನ ಕೈಗೊಳ್ಳಲಾಗಿತ್ತು. ನಂತರ ಪಾಲಿಕೆಯು ದಿನಾಂಕ 25-11-2020 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು. ಆದರೆ ಇದಕ್ಕೆ ಯಾವುದೇ ಆಕ್ಷೇಪಣೆಗಳು ಬರದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಈಗಿನ ಮೇಯರ್ ಬಿ.ಜಿ. ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಭೆಯಲ್ಲಿ ಈ ವಿಷಯ ಮಂಡಿಸಿದಾಗ ಸಭೆಯು ಸರ್ವಾನುಮತದಿಂದ ಅನುಮೋದಿಸಿದೆ. ಪಾಲಿಕೆಯು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಟೂಡಾ ಸದಸ್ಯರಾಗಿ ನವೀನಾ ಅರುಣ

ತುಮಕೂರು ಮಹಾನಗರ ಪಾಲಿಕೆಯ 34 ನೇ ವಾರ್ಡ್ (ಕ್ಯಾತಸಂದ್ರ) ಸದಸ್ಯೆ ಬಿಜೆಪಿಯ ಎಂ.ಸಿ. ನವೀನಾ ಅರುಣ ಅವರನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಪಾಲಿಕೆ ವತಿಯಿಂದ ನಾಮನಿರ್ದೇಶನ ಮಾಡಲಾಗಿದೆ.
ಇವರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಹಾನಗರ ಪಾಲಿಕೆಯನ್ನು ಪ್ರತಿನಿಧಿಸುವರು. 
ಪ್ರತಿ ವರ್ಷ ಪಾಲಿಕೆಯಿಂದ ಓರ್ವ ಸದಸ್ಯರನ್ನು ಪ್ರಾಧಿಕಾರಕ್ಕೆ ನಾಮ ನಿರ್ದೇಶನ ಮಾಡಲಿದ್ದು, ಅದರಂತೆ ಈ ಬಾರಿ ಈ ಸ್ಥಾನವು ಓರ್ವ ಮಹಿಳೆಗೆ ಲಭಿಸಿದೆ.
ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಪಾಲಿಕೆಗೆ ಬರೆದಿದ್ದ ಶಿಫಾರಸು ಪತ್ರದ ಅನ್ವಯ ಈ ಆಯ್ಕೆ ನಡೆದಿದೆ. ಮಹಾನಗರ ಪಾಲಿಕೆಯ ಇತ್ತೀಚಿನ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಗಿದೆ. 

25 ಲಕ್ಷ ರೂ. ಉಳಿಕೆ ಮೊತ್ತ:
ಪಾಲಿಕೆ ಹೊಸ ಕ್ರಿಯಾಯೋಜನೆ
 ಎಸ್.ಎಫ್.ಸಿ. ಮುಕ್ತನಿಧಿ ಮತ್ತು ತುಮಕೂರು ಮಹಾನಗರ ಪಾಲಿಕೆಯ ಮುಕ್ತನಿಧಿಯಲ್ಲಿ ಉಳಿಕೆಯಾಗಿರುವ ಒಟ್ಟು 25,61,274 ರೂ. ಗಳನ್ನು ನಿಗದಿತ ಉದ್ದೇಶಕ್ಕೆÀ ಬದಲಿಯಾಗಿ ಉಪಯೋಗಿಸಿಕೊಳ್ಳಲು ಮೂರು ಹೊಸ ಕ್ರಿಯಾಯೋಜನೆಗಳನ್ನು ರೂಪಿಸಿದ್ದು, ಅದಕ್ಕೆ ಮಹಾನಗರ ಪಾಲಿಕೆಯು ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ನೀಡಿದೆ.
2017-18 ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿಯಲ್ಲಿ 10,73,069 ರೂ. ಉಳಿಕೆಯಾಗಿತ್ತು. ಈ ಮೊತ್ತವನ್ನು ಉದ್ದೇಶಿತ ಕಾರ್ಯದ ಬದಲಿಗೆ ಪೌರಕಾರ್ಮಿಕರ ಬೆಳಗಿನ ಉಪಹಾರ ಸರಬರಾಜು ಮಾಡಲು ಮೀಸಲಿಟ್ಟ ಕೊರತೆ ಅನುದಾನವಾಗಿ ಉಪಯೋಗಿಸಲು ಒಪ್ಪಲಾಗಿದೆ.
2018-19 ನೇ ಸಾಲಿನ ಮಹಾನಗರ ಪಾಲಿಕೆ ಮುಕ್ತನಿಧಿಯ ಉಳಿಕೆ ಮೊತ್ತ 3,42,525 ರೂ. ಗಳನ್ನು ಪೌರಕಾರ್ಮಿಕರಿಗೆ ಅಗತ್ಯವಿರುವ ರೈನ್ ಕೋಟ್ ಮತ್ತು ರಿಫ್ಲೆಕ್ಟೀವ್ ಜಾಕೆಟ್‌ಗಳನ್ನು ಖರೀದಿಸುವ ಸಲುವಾಗಿ ಬಳಸಿಕೊಳ್ಳಲು ಸಮ್ಮತಿಸಲಾಗಿದೆ.
2019-20 ನೇ ಸಾಲಿನ ಮಹಾನಗರ ಪಾಲಿಕೆ ಮುಕ್ತನಿಧಿಯಲ್ಲಿ 11,45,680 ರೂ. ಉಳಿಕೆಯಾಗಿದ್ದು, ಈ ಮೊತ್ತವನ್ನು ಪೌರಕಾರ್ಮಿಕರಿಗೆ ದೈನಂದಿನ ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ಸಾಧನಾ ಸಲಕರಣೆಗಳನ್ನು ಖರೀದಿಸುವ ಸಲುವಾಗಿ ಉಪಯೋಗಿಸಲು ಅನುಮೋದನೆ ನೀಡಲಾಗಿದೆ.