“ಅಭೂತಪೂರ್ವ ಬೆಂಬಲಕ್ಕೆ ಚಿರರುಣಿ” ನೂತನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ 

ks siddalingappa president tumkur kannada sahitya parishat

“ಅಭೂತಪೂರ್ವ ಬೆಂಬಲಕ್ಕೆ ಚಿರರುಣಿ” ನೂತನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ 

“ಅಭೂತಪೂರ್ವ ಬೆಂಬಲಕ್ಕೆ ಚಿರರುಣಿ”
ನೂತನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ 


ತುಮಕೂರು: ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಕೆ.ಎಸ್.ಸಿದ್ಧಲಿಂಗಪ್ಪ  ಮಾತನಾಡಿ, ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಆಜೀವ ಸದಸ್ಯರು ನನಗೆ ಹೆಚ್ಚು ಓಟುಗಳನ್ನು ನೀಡುವ ಮೂಲಕ ನನ್ನ ಸ್ಪರ್ಧೆಯನ್ನು ಅನುಮೋದಿಸಿದ್ದಾರೆ. ನನ್ನ ಮೇಲೆ ವಿಶ್ವಾಸವಿಟ್ಟು ನೀಡಿರುವ ಹೊಣೆಗಾರಿಕೆಯನ್ನು ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ನಿರ್ವಹಿಸುವ ಪ್ರಯತ್ನ ಮಾಡುತ್ತೇನೆ. ಪ್ರಣಾಳಿಕೆಗಳಲ್ಲಿ ನೀಡಿರುವ ಎಲ್ಲ ಭರವಸೆಗಳನ್ನೂ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಹಿತೈಷಿಗಳು ನೀಡಿರುವ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರರುಣಿ” ಎಂದರು.


“ ನನ್ನ ಸಹಸ್ಪರ್ಧಿಗಳು ಚುನಾವಣೆ ಮುಕ್ತಾಯಗೊಳ್ಳುವವರೆಗೆ ಮಾತ್ರವೇ ಸ್ಪರ್ಧಿಗಳು, ಇನ್ನು ಮುಂದೆ ಅವರು ಪರಿಷತ್‌ನ ಆಜೀವ ಸದಸ್ಯರೇ , ಅವರೆಲ್ಲರ ಸಹಮತದಿಂದ ಪರಿಷತ್ ಅನ್ನು ಸಮಗ್ರ ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ” ಎಂದು ಸಿದ್ದಲಿಂಗಪ್ಪ ಭರವಸೆ ನೀಡಿದರು.


ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ಅಧ್ಯಕ್ಷರಾಗಿ ಚುನಾಯಿತರಾದ ಕೆ.ಎಸ್.ಸಿದ್ಧಲಿಂಗಪ್ಪ ಅವರನ್ನು ಅವರ ಅಭಿಮಾನಿಗಳು, ಹಿತೈಷಿಗಳು ಮತ ಎಣಿಕೆ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ಅಭಿನಂದಿಸಿದರು.