``ತಮ್ಮ ಅಧಿಕಾರಾವಧಿಯ ಅಭಿವೃದ್ಧಿ ಕಾರ್ಯದ ಫಲ’’ ತುಂಬಿ ಹರಿದ ಚೆಕ್ ಡ್ಯಾಂಗಳು: ಕೆ.ಎನ್. ರಾಜಣ್ಣ ಹರ್ಷ

``ತಮ್ಮ ಅಧಿಕಾರಾವಧಿಯ ಅಭಿವೃದ್ಧಿ ಕಾರ್ಯದ ಫಲ’’ ತುಂಬಿ ಹರಿದ ಚೆಕ್ ಡ್ಯಾಂಗಳು: ಕೆ.ಎನ್. ರಾಜಣ್ಣ ಹರ್ಷ

``ತಮ್ಮ ಅಧಿಕಾರಾವಧಿಯ ಅಭಿವೃದ್ಧಿ ಕಾರ್ಯದ ಫಲ’’
ತುಂಬಿ ಹರಿದ ಚೆಕ್ ಡ್ಯಾಂಗಳು: ಕೆ.ಎನ್. ರಾಜಣ್ಣ ಹರ್ಷ


ಮಧುಗಿರಿ:  ನನ್ನ ಐದು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನ ಜಯಮಂಗಲಿ ನದಿ ನೀರಿಗೆ ಅಡ್ಡಲಾಗಿ ಅಂದಾಜು 20 ಕೋಟಿ ರೂ.ಗಳ ವೆಚ್ಚದಲ್ಲಿ 3 ಚೆಕ್ ಡ್ಯಾಂ ಹಾಗೂ ಬೃಹತ್ ಸೇತುವೆ ನಿರ್ಮಿಸಿದ ಫಲವಾಗಿ ಚೆಕ್ ಡ್ಯಾಂಗಳು ಭರ್ತಿಯಾಗಿ ತುಂಬಿ ಹರಿಯುತ್ತಿದೆ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೀರನಾಗೇನಹಳ್ಳಿ ಹಾಗೂ ಇಮ್ಮಡಗೊಂಡನಹಳ್ಳಿ ಗ್ರಾಮಗಳ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ ಕಟ್ಟಿರುವ 6 ಕೋಟಿ 75 ಲಕ್ಷ ರೂ. ಗಳ ವೆಚ್ಚದಲ್ಲಿ 2014 ರಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದುರ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆ ಜನರ ವಿಶ್ವಾಸ ಹೆಚ್ಚಿಸಿದೆ ಎಂದರು.


1932 ರಲ್ಲಿಯೇ ಮೈಸೂರು ಹಾಗೂ ನೆರೆಯ ಆಂಧ್ರಪ್ರದೇಶದ ಅಂದಿನ ಸರಕಾರಗಳೊಂದಿಗೆ ಆಂಧ್ರಪ್ರದೇಶ ಹಾಗೂ ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಅಕ್ಕಿರಾಂಪುರದವರೆಗೆ 18 ಕಿ.ಮೀ.ವರೆಗೆ ನೀರಿನ ವಿಚಾರಕ್ಕೆ ಸಂಬAಧಿಸಿದAತೆ ಈ ಹಿಂದೆಯೇ ಒಡಂಬಡಿಕೆಯಾಗಿತ್ತು ಹಾಗೂ ಜಯಮಂಗಲಿಯ ನೀರಿಗೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತಿರಲಿಲ್ಲ. ಆದರೆ ರಿಪೇರಿಗಳಿಗೆ ಆದ್ಯತೆ ಇರುವುದನ್ನು ಮನಗೊಂಡು ತಾಲ್ಲೂಕಿನ ಜನರ ಹಿತದೃಷ್ಟಿಯಿಂದ ಅಂದಿನ ಅಧಿಕಾರಿಗಳ ಪರಿಶ್ರಮದ ಮೂಲಕ ಜಯಮಂಗಲಿಗೆ ವೀರನಾಗೇನಹಳ್ಳಿ ಮತ್ತು ಕಾಳೇನಹಳ್ಳಿಯ ಸಮೀಪ 1 ಕೋಟಿ 41 ಲಕ್ಷ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದರಿಂದ ಜಯಮಂಗಲಿ ನೀರು ತುಂಬಿ ಹರಿಯುತ್ತಿದ್ದು ನನ್ನ ಅಭಿವೃದ್ಧಿ ಕಾರ್ಯಕ್ಕೆ ಖುಷಿ ತಂದಿದೆ ಎಂದರು.


ಜೊತೆಗೆ ಈ ಭಾಗದಲ್ಲಿನ ಹಳ್ಳದ ಸಮೀಪದ ಗ್ರಾಮಸ್ಥರು ನೀರಿಗಾಗಿ ಜಗಳವಾಡುವುದನ್ನು ಮನಗಂಡು ಜಯಮಂಗಲಿ ನದಿಗೆ ಸಬ್ ಚೆಕ್ ಡ್ಯಾಂಗಳನ್ನು ಸಹ ನಿರ್ಮಿಸಲಾಗಿದೆ. ಈ ಭಾಗದ ರೈತರು ಬಹಳಷ್ಟು ಶ್ರಮ ಜೀವಿಗಳಾಗಿದ್ದು ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೆ ಅವರು ನೀರು ಕೊಡಲೇ ಬೇಕು ಎಂಬ ಉದ್ದೇಶದಿಂದ ನನ್ನ ಅವಧಿಯಲ್ಲಿ ಚೆಕ್ ನಿರ್ಮಿಸಲಾಗಿದೆ ಎಂದರು.



ತಮ್ಮ ಅವಧಿಯಲ್ಲಿ ನಿರ್ಮಿಸಿದ ಚೆಕ್ ಡ್ಯಾಂನಲ್ಲಿ ನೀರು ಹರಿಯುತ್ತಿದ್ದನ್ನು ಕಂಡು  ಜಯಮಂಗಲಿ ನದಿಯ ನೀರನ್ನು ಕಣ್ಣಿಗೆ ಸ್ಪರ್ಶಿಸಿಕೊಂಡು ನಂತರ ಪ್ರೋಕ್ಷಣೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸುಗುಮವಾಗಿ ನಡೆಯಲಿ ಎಂದು ಶುಭಹಾರೈಸುತ್ತೇನೆ.
- ಕೆ.ಎನ್. ರಾಜಣ್ಣ, ಮಾಜಿ ಶಾಸಕ 


ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆಯ ಮಾಜಿ ಅಧ್ಯಕ್ಷರಾದ ಎಂ.ಕೆ.ನAಜುAಡಯ್ಯ , ಎನ್ ಗಂಗಣ್ಣ ಮುಖಂಡರುಗಳಾದ ಆದಿನಾರಾಯಣರೆಡ್ಡಿ, ಪಿ.ಸಿ.ಕೃಷ್ಣರೆಡ್ಡಿ, ತಿಮ್ಮಾರೆಡ್ಡಿ, ವಿ.ಆರ್.ಭಾಸ್ಕರ್. ಜೆಡಿ.ವೆಂಕಟೇಶ್, ಎಸ್ ಡಿ ಕೆ ವೆಂಕಟೇಶ್ ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕರಾದ ರಾಮಕೃಷ್ಣ,  ನರಸಿಂಹಮೂರ್ತಿ, ಸೀತರಾಂ, ಸಂತೋಷ್,  ಗ್ರಾಪಂ ಅಧ್ಯಕ್ಷ ಸೀನಪ್ಪ, ಪ್ರಸಾದ್ ರೆಡ್ಡಿ, ಕಾಂತರಾಜು, ನಾಗರಾಜು , ಪುನೀತ್, ಹಾಗೂ ಗ್ರಾಮಸ್ಥರು ಇದ್ದರು.