2ನೇ ಡೋಸ್ ಲಸಿಕೆ ಕಡ್ಡಾಯ: ಡಿಸಿ  ಜಿಲ್ಲೆಯಲ್ಲಿ 2.47 ಲಕ್ಷ ಜನ ಬಾಕಿ: ಅ.8 ರಂದು ಲಸಿಕಾ ಮೇಳ

DC ys patil

2ನೇ ಡೋಸ್ ಲಸಿಕೆ ಕಡ್ಡಾಯ: ಡಿಸಿ  ಜಿಲ್ಲೆಯಲ್ಲಿ 2.47 ಲಕ್ಷ ಜನ ಬಾಕಿ: ಅ.8 ರಂದು ಲಸಿಕಾ ಮೇಳ

2ನೇ ಡೋಸ್ ಲಸಿಕೆ ಕಡ್ಡಾಯ: ಡಿಸಿ 

ಜಿಲ್ಲೆಯಲ್ಲಿ 2.47 ಲಕ್ಷ ಜನ ಬಾಕಿ: ಅ.8 ರಂದು ಲಸಿಕಾ ಮೇಳ

ತುಮಕೂರು: ರೋಗ ನಿರೋಧಕ ಶಕ್ತಿ ವೃದ್ಧಿಗೆ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆಯುವುದು ಕಡ್ಡಾಯವಾಗಿದ್ದು, ಈಗಾಗಲೇ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಯನ್ನು ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿಯಿರುವ 247718 ಅರ್ಹತೆಯುಳ್ಳವರಿಗೆಲ್ಲರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಲಸಿಕೆ ವಿತರಣೆ ಸಂಬAಧ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಅಗತ್ಯ ಲಸಿಕೆ ಪೂರೈಕೆಯಾಗಲಿದ್ದು, ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಸಮರ್ಪಕವಾಗಿ ಲಸಿಕೆ ಲಭ್ಯವಾಗಲಿದೆ. ಹಾಗಾಗಿ, ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಕಡ್ಡಾಯವಾಗಿ ಲಸಿಕೆ ನೀಡಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಶೇ. 76% ಮೊದಲ ಡೋಸ್ ಲಸಿಕಾಕರಣ ಯಶಸ್ವಿಯಾಗಿ ನಡೆದಿದೆ. ಕೋವ್ಯಾಕ್ಸಿನ್ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯಲು 25513, ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಪಡೆಯಲು 2,22,205 ಸೇರಿ ಒಟ್ಟು 2,47,718 ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿದ್ದು, ಅವರೆಲ್ಲರಿಗೂ ಲಸಿಕೆ ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶೇ. 75, ಗುಬ್ಬಿ ಶೇ. 76, ಕೊರಟಗೆರೆ ಶೇ. 80, ಕುಣಿಗಲ್ ಶೇ. 80, ಮಧುಗಿರಿ ಶೇ. 67, ಪಾವಗಡ ಶೇ. 61, ಶಿರಾ ಶೇ. 68, ತಿಪಟೂರು ಶೇ. 86, ತುಮಕೂರು ಶೇ. 86 ಹಾಗೂ ತುರುವೇಕೆರೆ ತಾಲೂಕಿನಲ್ಲಿ ಶೇ. 80 ಲಸಿಕಾ ಪ್ರಮಾಣ ನಡೆದಿದೆ. ಲಸಿಕೆ ಕಡಿಮೆ ನೀಡಿರುವ ಮಧುಗಿರಿ, ಪಾವಗಡ ಮತ್ತು ಶಿರಾ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಲಸಿಕಾ ಮೇಳ: ಅಕ್ಟೋಬರ್ 8ರ ಶುಕ್ರವಾರದಂದು ಜಿಲ್ಲೆಯಲ್ಲಿ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ಲಸಿಕಾ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಪಾಟೀಲರು ಸೂಚಿಸಿದ್ದಾರೆ.