ಅಮಾನುಷತೆಯ ನಡುವೆ ಸಂವೇದನೆಯ ಹುಡುಕಾಟ
ಪುರುಷಾಧಿಪತ್ಯದ ಮೂಲ ಇಂಗಿತವನ್ನು ಸಮಾಜ ರ‍್ಥ ಮಾಡಿಕೊಳ್ಳಬೇಕಿದೆ. ಈ ಸಮಾಜ ಹೆಣ್ಣನ್ನು ‘ ಹೊರಗಿಟ್ಟು ’ ನೋಡುತ್ತದೆ. ಪ್ರಚಲಿತ ಸಮಾಜದ ಸಮಾಜೋ ಸಾಂಸ್ಕೃತಿಕ ಚೌಕಟ್ಟಿನಲ್ಲೇ ಪ್ರತ್ಯೇಕಿಸಿ, ‘ ರಕ್ಷಿಸಲ್ಪಡಬೇಕಾದ ’ ಒಂದು ಸಮುದಾಯವಾಗಿ ಹೆಣ್ಣನ್ನು ನೋಡುತ್ತದೆ. ಹಾಗಾಗಿಯೇ ಶಾಸನ ಸಭೆಗಳಲ್ಲಿ ಮೀಸಲಾತಿ ಸೌಲಭ್ಯವನ್ನೂ ನಮ್ಮ ಪುರುಷ ಪ್ರಧಾನ ಸಂಸತ್ತು ‘ ಕಲ್ಪಿಸಬೇಕಿದೆ ’ !
ವರ‍್ತಮಾನ
ನಾ ದಿವಾಕರ
ಅಮಾನುಷತೆಯ ನಡುವೆ ಸಂವೇದನೆಯ ಹುಡುಕಾಟ
ದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಸಮಾಜಘಾತುಕ, ಸ್ತ್ರೀವಿರೋಧಿ ಘಟನೆಗಳು ಸಮಾಜದ ಸುಪ್ತ ಪ್ರಜ್ಞೆಯನ್ನೂ ಬಡಿದೆಬ್ಬಿಸುವಂತಿವೆ. ಸೂಕ್ಷ್ಮತೆಯನ್ನು ಕಳೆದುಕೊಂಡು ಜಡಗಟ್ಟಿರುವ ಸಮಾಜವೂ ಸಹ ಈ ಘಟನೆಗಳಿಂದ ಮೈಕೊಡವಿ ನಿಲ್ಲುವಂತಾಗಿದೆ. ಆದರೆ ಏಕೋ ಸಮಾಜದ ಒಂದು ರ‍್ಗ ಇನ್ನೂ ಜಡತ್ವದಿಂದ ಹೊರಬಂದಿಲ್ಲ ? ಇನ್ನೂ ಸಹ ಸರ‍್ವಜನಿಕ ವಲಯದ ಸಂಕಥನಗಳಲ್ಲಿ ಇಂತಹ ಅಮಾನುಷ ಘಟನೆಗಳು ಪ್ರಧಾನವಾಗಿ ಕಾಣುತ್ತಿಲ್ಲವೇಕೆ ? ಆಡಳಿತ ವ್ಯವಸ್ಥೆಯನ್ನು ನರ‍್ವಹಿಸುವ ಅಧಿಕಾರಸ್ಥರಿಗೆ ಸರ‍್ವಜನಿಕ ವಲಯದಲ್ಲಿ ಸಂಭವಿಸುವ ಎಲ್ಲ ದುರಂತಗಳೂ ಪರಿಹರಿಸಬಹುದಾದ ಒಂದು ಸಮಸ್ಯೆಯಾಗಿ ಮಾತ್ರವೇ ಕಾಣಲು ಸಾಧ್ಯ. ಏಕೆಂದರೆ ಈ ದುರಂತಗಳು ಏಕೆ ಸಂಭವಿಸುತ್ತವೆ ಎಂದು ಯೋಚಿಸುವ ಪರಿಜ್ಞಾನವನ್ನು ಕಳೆದುಕೊಂಡ ನಂತರವಷ್ಟೇ ರಾಜಕೀಯ ಅಧಿಕಾರ ಪ್ರಾಪ್ತಿಯಾಗುತ್ತದೆ.
ಬಹುಶಃ ಆತ್ಮನರ‍್ಭರ ಭಾರತದಲ್ಲಿ ಎಲ್ಲ ರಾಜ್ಯಗಳಲ್ಲೂ ಏಕಕಾಲಕ್ಕೆ ಸಂಭವಿಸುತ್ತಿರುವ ಘಟನೆಗಳೆಂದರೆ ಮಹಿಳೆಯರ ಮೇಲಿನ ಅತ್ಯಾಚಾರ, ದರ‍್ಜನ್ಯ ಮತ್ತು ಲೈಂಗಿಕ ಕಿರುಕುಳ. ಜಾತಿ ಮತಗಳ ಎಲ್ಲೆಯನ್ನೂ ಮೀರಿ, ಮೇಲು ಕೀಳು ಎಂಬ ತಾರತಮ್ಯವೂ ಇಲ್ಲದೆ ಈ ದೇಶದ ಪುರುಷಾಧಿಪತ್ಯ ಅಟ್ಟಹಾಸ ಮೆರೆಯುತ್ತಿದೆ. ನರ‍್ಭಯ ಪ್ರಕರಣದ ನಂತರ ಹೆಚ್ಚಾಗುತ್ತಲೇ ಇರುವ ಅತ್ಯಾಚಾರ ಪ್ರಕರಣಗಳ ಬಗ್ಗ ಆಡಳಿತಾರೂಢ ಪಕ್ಷಗಳ ಸಚಿವರಾಗಲೀ, ಶಾಸಕ/ಸಂಸದರಾಗಲಿ ಜವಾಬ್ದಾರಿಯುತವಾಗಿ ಮಾತನಾಡಲೂ ಹಿಂಜರಿಯುತ್ತಿದ್ದಾರೆ. ಈ ದೇಶದ ಗೃಹ ಸಚಿವರು, ಪ್ರಧಾನಮಂತ್ರಿಗಳು ಈ ಬೆಳವಣಿಗೆಗಳ ಬಗ್ಗೆ ತುಟಿಪಿಟಕ್ ಎನ್ನದೆ ಮೌನ ವಹಿಸಿದ್ದಾರೆ. ರಾಜಧಾನಿ ದೆಹಲಿಯಿಂದ ರ‍್ನಾಟಕದ ಪಾರಂಪರಿಕ ನಗರಿ ಮೈಸೂರಿನವರೆಗೂ ಅಸಹಾಯಕ ಮಹಿಳೆಯರು ಪುರುಷ ಸಮಾಜದ ವಿಕೃತ ಕಾಮಕ್ಕೆ ಬಲಿಯಾಗುತ್ತಲೇ ಇದ್ದಾರೆ. ಮೈಸೂರಿನ ಸಾಮೂಹಿಕ ಅತ್ಯಾಚಾರದ ಸುದ್ದಿ ಮರೆಯಾಗುವ ಮುನ್ನವೇ ಯಾದಗಿರಿ ಜಿಲ್ಲೆಯಲ್ಲಿ ಒಂದು ರ‍್ಷದ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ.
ನರ‍್ಭಯ ಪ್ರಕರಣವನ್ನೇ ಹೋಲುವ ಯಾದಗಿರಿ ಘಟನೆಯಲ್ಲಿ ಮಹಿಳೆಯನ್ನು ಅಪಹರಿಸಿ ಹೊರವಲಯಕ್ಕೆ ಕೊಂಡೊಯ್ದಿರುವ ನಾಲ್ವರು ದುಷ್ರ‍್ಮಿಗಳು ಆಕೆಯನ್ನು ವಿವಸ್ತ್ರಗೊಳಿಸಿ, ದೈಹಿಕ ಹಲ್ಲೆ ನಡೆಸಿರುವುದೇ ಅಲ್ಲದೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಕೃತ್ಯದ ವಿಡಿಯೋ ಚಿತ್ರೀಕರಣವನ್ನೂ ಮಾಡಲಾಗಿದ್ದು, ಈ ಚಿತ್ರಗಳು ಲಭ್ಯವಾದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ೧೪ ರ‍್ಷದ ನಾಲ್ವರು ಬಾಲೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. ಒಂದು ಪ್ರಕರಣದಲ್ಲಿ ೩೪ ರ‍್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಮಿನಿ ಬಸ್ ಒಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ೨೫ ರ‍್ಷದ ಕಿವಿ ಕೇಳಿಸದ ಅಂಧ ಮಹಿಳೆಯ ಮೇಲೆ ೨೦ ರ‍್ಷದ ಯುವಕನಿಂದ ಅತ್ಯಾಚಾರ ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೊಂಬಿವಿಲಿಯಲ್ಲಿ ೧೪ ರ‍್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ೨೯ ಜನರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ೨೧ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳೆಲ್ಲರೂ ಸಂತ್ರಸ್ತ ಬಾಲಕಿಯ ಸ್ನೇಹಿತರೇ ಆಗಿದ್ದರೆಂದು ಹೇಳಲಾಗಿದೆ.
ಕಲ್ಲು ಮನಸಿನವರನ್ನೂ ಕಲಕಿಬಿಡುವ ಇಂತಹ ಹೃದಯವಿದ್ರಾವಕ ಘಟನೆಗಳೂ ಸಹ ರಾಜಕೀಯ ವಲಯದಲ್ಲಿ ತಪ್ಪು ಒಪ್ಪುಗಳ ನೆಲೆಯಲ್ಲಿ, ಹೊಣೆಗಾರಿಕೆ-ರ‍್ತವ್ಯಲೋಪದ ನೆಲೆಯಲ್ಲಿ, ಕಾನೂನು ಸುವ್ಯವಸ್ಥೆಯ ನೆಲೆಯಲ್ಲಿ ಮಾತ್ರವೇ ರ‍್ಚೆಗೊಳಗಾಗುತ್ತವೆ. ಸದನದಲ್ಲಿ ವಿರೋಧ ಪಕ್ಷಗಳ ಏರುದನಿಯ ಖಂಡನೆ, ಸಚಿವರು ಮತ್ತು ಮುಖ್ಯಮಂತ್ರಿಗಳ ಆಶ್ವಾಸನೆ ಮತ್ತು ಅಂತಿಮವಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಒಂದು ಭರವಸೆ ಎಲ್ಲ ಪ್ರಕರಣಗಳನ್ನೂ, ಸರ‍್ವಜನಿಕ ಶಿಸ್ತು ಕಾಪಾಡುವುದರೊಂದಿಗೆ ಪರಾರ‍್ಶಿಸಲಾಗುತ್ತದೆ. ಈ ಶಿಸ್ತು ಮತ್ತು ಕ್ರಮದ ಹೆಜ್ಜೆಗಳಿಂದಾಚೆಗೆ ಯೋಚಿಸಿದಾಗ, ನಮ್ಮ ಸಮಾಜದಲ್ಲಿ ಬೇರೂರಿರುವ ತಾರತಮ್ಯದ ಧೋರಣೆ, ಶ್ರೇಷ್ಠತೆಯ ಅಹಮಿಕೆ ಮತ್ತು ದರ‍್ಜನ್ಯ ಎಸಗುವ ಮನೋಭಾವ ಗೋಚರಿಸಲು ಸಾಧ್ಯ. ಈ ಸೂಕ್ಷ್ಮ ದೃಷ್ಟಿಯನ್ನು ಆಳುವ ರ‍್ಗಗಳು ಕಳೆದುಕೊಂಡಿರುವುದರಿಂದಲೇ ಎಂತಹ ಕಠಿಣ ಕಾನೂನು ಜಾರಿಯಾದರೂ ನಿಷ್ಪ್ರಯೋಜಕವಾಗುತ್ತಿವೆ.
ಹಾಗಾಗಿಯೇ ಮರಣದಂಡನೆಯ ಭೀತಿಯ ನಡುವೆಯೂ ನರ‍್ಭಯಾ ನಮ್ಮನ್ನು ಭೂತದಂತೆ ಕಾಡುತ್ತಲೇ ಇದ್ದಾಳೆ. ರ‍್ಮಾ ಆಯೋಗದ ಶಿಫಾರಸುಗಳು, ಸಂಸತ್ತಿನಲ್ಲಿ ಅನುಮೋದನೆಯಾದ ಕಠಿಣ ಕಾನೂನು ಮತ್ತು ನ್ಯಾಯಾಂಗದ ನಿಷ್ಠುರ ನಿಲುವುಗಳ ಹೊರತಾಗಿಯೂ ಮಹಿಳೆಯರ ಮೇಲಿನ ದರ‍್ಜನ್ಯ, ಅತ್ಯಾಚಾರ ಮತ್ತು ತಾರತಮ್ಯಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಮತ್ತೊಂದು ಬದಿಯಲ್ಲಿ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸಲು ಕಠಿಣ ಕಾಯ್ದೆಗಳು ಜಾರಿಯಲ್ಲಿರುವಾಗಲೂ ದೇಶದ ಮೂಲೆ ಮೂಲೆಗಳಲ್ಲಿ ದಲಿತರನ್ನು ‘ ಹೊರಗಿಡುವ ’ ಪ್ರವೃತ್ತಿ ಇನ್ನೂ ಗಟ್ಟಿಯಾಗುತ್ತಲೇ ಇದೆ. ಅತ್ಯಾಚಾರ ಎಸಗುವವರಿಗೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವವರಿಗೆ ಕಾನೂನು ಭಯ ಇರುವಷ್ಟೇ , ಅಧಿಕಾರಸ್ಥರ ಅಭಯವೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ನಾಗರಿಕ ಸಮಾಜದಲ್ಲೂ ಬೇರೂರಿರುವ ಪುರುಷ ಪ್ರಧಾನ ಧೋರಣೆ ಮತ್ತು ಸಮಾಜದ ಒಂದು ರ‍್ಗದ ನಿಷ್ಕ್ರಿಯ ಮೌನ ಅತ್ಯಾಚಾರ ಪ್ರಕರಣಗಳನ್ನು ಒಂದು ಸಹಜ ಸಮಾಜಘಾತುಕ ಘಟನೆಗಳನ್ನಾಗಿ ಮಾಡಿಬಿಡುತ್ತವೆ. ಹಾಗೆಯೇ ಜಾತಿ ವ್ಯವಸ್ಥೆಯ ಮೂಲ ಧಾತು, ಶ್ರೇಷ್ಠತೆಯ ಅಹಮಿಕೆ, ಮೇಲ್ಜಾತಿಗಳ ಮತ್ತು ಸುಶಿಕ್ಷಿತ ರ‍್ಗಗಳ ಸರ‍್ವಜನಿಕ ಪ್ರಜ್ಞೆಯನ್ನು ನಿಷ್ಕ್ರಿಯಗೊಳಿಸುತ್ತದೆ.
ನರ‍್ಭಯ ಪ್ರಕರಣದ ನಂತರ ದೇಶದ ನ್ಯಾಯ ವ್ಯವಸ್ಥೆ ಜಾಗೃತವಾಗಿದೆ, ಆಡಳಿತ ವ್ಯವಸ್ಥೆ ಚುರುಕಾಗಿದೆ, ಕಾನೂನು ವ್ಯವಸ್ಥೆ ಹೆಚ್ಚು ಕ್ರಿಯಾಶೀಲವಾಗಿದೆ. ಆದರೆ ಈ ಸಕಾರಾತ್ಮಕ ಬೆಳವಣಿಗೆಗಳು ಮಹಿಳೆಯರ ಮೇಲಿನ ದರ‍್ಜನ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ದಿನಕ್ಕೊಂದರಂತೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಶೋಷಿತ ಸಮುದಾಯಗಳ ಮಹಿಳೆಯರು ಹೆಚ್ಚಿನ ಶೋಷಣೆ, ದರ‍್ಜನ್ಯಕ್ಕೊಳಗಾಗುತ್ತಿದ್ದಾರೆ. ಕಾನೂನು-ಅಪರಾಧ ಸಂಹಿತೆ-ಶಿಕ್ಷೆ ಈ ವ್ಯೂಹ ಸಮಾಜದ ಒಂದು ಮೂಲೆಯಲ್ಲಿ ಭೀತಿಯನ್ನು ಸೃಷ್ಟಿಸಿದ್ದರೂ, ದರ‍್ಜನ್ಯಗಳನ್ನು ತಡೆಗಟ್ಟಬಹುದಾದ ಸರ‍್ವಜನಿಕ ಪ್ರಯತ್ನಗಳು ಶೈಕ್ಷಣಿಕ ವಲಯದಲ್ಲಾಗಲೀ, ಬೌದ್ಧಿಕ ವಲಯದಲ್ಲಾಗಲೀ ನಡೆಯುತ್ತಿಲ್ಲ. ಹೆಣ್ಣು ಮಕ್ಕಳಲ್ಲಿ ಹೆಚ್ಚಿನ ಆತ್ಮಸ್ಥರ‍್ಯ ತುಂಬುವ ಸೃಜನಶೀಲ ಪ್ರಯತ್ನಗಳೂ ನಡೆಯುತ್ತಿಲ್ಲ. ಹೆಚ್ಚೆಂದರೆ, ದರ‍್ಜನ್ಯಗಳ ವಿರುದ್ಧ ದನಿಎತ್ತುವ ಮಟ್ಟಿಗೆ ಜಾಗೃತಿಯಂತೂ ಮೂಡುತ್ತಿದೆ.
ಆದರೆ ಇದು ಶಿಥಿಲಗೊಂಡಿರುವ ಸೂಕ್ಷ್ಮ ಸಂವೇದನೆಯ ಬೇರುಗಳನ್ನು ಗಟ್ಟಿಗೊಳಿಸುವುದಿಲ್ಲ ಅಥವಾ ವ್ಯಕ್ತಿಗತ ನೆಲೆಯಲ್ಲಿ ಸಮಾಜದಲ್ಲಿ ಬೇರೂರಿರುವ ಪುರುಷ ಪ್ರಧಾನ ಧೋರಣೆಯ ಅಪಾಯಗಳನ್ನು ಅರಿಯಲು ಪೂರಕವಾಗುವುದಿಲ್ಲ. ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ನಂತರದಲ್ಲಿ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯೊಬ್ಬರ ಹೊಣೆಗೇಡಿ ಮಾತುಗಳು ಮತ್ತು ಪೊಲೀಸ್ ಇಲಾಖೆಯ ನಿಧಾನಗತಿಯ ಕರ‍್ಯಾಚರಣೆ ಇವೆಲ್ಲವೂ ಈ ಪುರುಷ ಪ್ರಧಾನ ಧೋರಣೆಯ ಪ್ರತಿಫಲವೇ ಆಗಿದೆ. “ ಆ ಹೊತ್ತಿನಲ್ಲಿ ಅಲ್ಲಿಗೆ ಏಕೆ ಹೋಗಬೇಕಿತ್ತು ”, “ ಆಕೆ ಏಕಾಂಗಿಯಾಗಿ ಓಡಾಡಬಾರದಿತ್ತು ” , “ ಆಕೆ ಪ್ರಚೋದಕ ಉಡುಪು ಧರಿಸಬಾರದಿತ್ತು ”, “ ಹೆಣ್ಣು ಮಕ್ಕಳು ಜಾಗ್ರತೆಯಿಂದ ಹೊರಗೆ ಓಡಾಡಬೇಕು ”, ಈ ರೀತಿಯ ಹಲವು ಹೇಳಿಕೆಗಳು ಪ್ರತಿಯೊಂದು ಅತ್ಯಾಚಾರದ ನಂತರವೂ ಕೇಳಿಬರುತ್ತವೆ. ಕೆಲವು ಮಹಿಳೆಯರು, ರ‍್ಮನಿಷ್ಠರು, ರಾಜಕೀಯ ನಾಯಕರು ಎಲ್ಲರಿಂದಲೂ ಇದೇ ರ‍್ಥದ ಹೇಳಿಕೆಗಳು ಬರುತ್ತಲೇ ಇರುತ್ತವೆ. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು “ ಸಂಜೆಯ ನಂತರ ವಿಶ್ವವಿದ್ಯಾಲಯದ ಆವರಣದಲ್ಲಿ ಹೆಣ್ಣುಮಕ್ಕಳು ಓಡಾಡುವಂತಿಲ್ಲ ” ಎಂಬ ರ‍್ಮಾನು ಹೊರಡಿಸುತ್ತಾರೆ. ಇದು ಪುರುಷಾಧಿಪತ್ಯದ ರ‍್ವವ್ಯಾಪಿ ಲಕ್ಷಣವನ್ನಷ್ಟೇ ತೋರಿಸುತ್ತದೆ.
ಈ ಪುರುಷಾಧಿಪತ್ಯದ ಮೂಲ ಇಂಗಿತವನ್ನು ಸಮಾಜ ರ‍್ಥಮಾಡಿಕೊಳ್ಳಬೇಕಿದೆ. ಈ ಸಮಾಜ ಹೆಣ್ಣನ್ನು ‘ ಹೊರಗಿಟ್ಟು ’ ನೋಡುತ್ತದೆ. ಪ್ರಚಲಿತ ಸಮಾಜದ ಸಮಾಜೋ ಸಾಂಸ್ಕೃತಿಕ ಚೌಕಟ್ಟಿನಲ್ಲೇ ಪ್ರತ್ಯೇಕಿಸಿ, ‘ ರಕ್ಷಿಸಲ್ಪಡಬೇಕಾದ ’ ಒಂದು ಸಮುದಾಯವಾಗಿ ಹೆಣ್ಣನ್ನು ನೋಡುತ್ತದೆ. ಹಾಗಾಗಿಯೇ ಶಾಸನ ಸಭೆಗಳಲ್ಲಿ ಮೀಸಲಾತಿ ಸೌಲಭ್ಯವನ್ನೂ ನಮ್ಮ ಪುರುಷ ಪ್ರಧಾನ ಸಂಸತ್ತು ‘ ಕಲ್ಪಿಸಬೇಕಿದೆ ’ ! ಇತರ ಯಾವುದೇ ಸಮುದಾಯಗಳಿಗೆ ಅನ್ವಯಿಸದ ರಕ್ಷಣೆಯ ಗೋಡೆಗಳು, ಔದರ‍್ಯದ ನೆಲೆಗಳು ಹೆಣ್ಣಿಗೆ ಅನಿವರ‍್ಯವೇನೋ ಎನಿಸುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಪರಿಸ್ಥಿತಿಗೆ ಕಾರಣವೇನು ? ಈ ಆಧುನಿಕ ಕಾಲಘಟ್ಟದಲ್ಲೂ ಈ ಅಸೂಕ್ಷ್ಮತೆ ನಮ್ಮ ನಡುವೆ ಏಕಿದೆ ? ಹೆಣ್ಣು ಜಾಗ್ರತೆಯಿಂದಿರಬೇಕು ಎಂದು ಬೋಧಿಸುವ ಸಮಾಜ, ಪುರುಷನಾದವನು ತನ್ನ ಸಂಯಮವನ್ನು ಕಾಪಾಡಿಕೊಂಡು, ಹೆಣ್ಣನ್ನು ಒಂದು ವ್ಯಕ್ತಿಯಾಗಿ ಮಾತ್ರವೇ ನೋಡುವಂತೆ ಏಕೆ ಬೋಧಿಸಲು ಸಾಧ್ಯವಿಲ್ಲ ? ಹೆಣ್ಣಿನ ಮೇಲೆ ದರ‍್ಬಲ ಎನ್ನುವ ಗುಣವಿಶೇಷಣವನ್ನು ಆರೋಪಿಸಿ, ಅಬಲೆಯರ ಸಬಲೀಕರಣವನ್ನು ಬಯಸುವುದರಲ್ಲೇ, ಈ ಪ್ರತ್ಯೇಕತಾ ಭಾವ ನಿಚ್ಚಳವಾಗಿ ಕಾಣುವುದಲ್ಲವೇ ?
ತೆಲಂಗಾಣದಲ್ಲಿ ಸಂಭವಿಸಿದ ಒಂದು ಅತ್ಯಾಚಾರದ ಪ್ರಕರಣದಲ್ಲಿ, ತಪ್ಪಿತಸ್ಥರನ್ನು ಬಂಧಿಸಿದ ಕೂಡಲೇ ಎನ್ ಕೌಂಟರ್ ಮಾಡುವುದಾಗಿ ಸಚಿವರೇ ಘೋಷಿಸುತ್ತಾರೆ, ರ‍್ನಾಟಕದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಲಾಗುವುದು, ತ್ವರಿತ ಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸದನದಲ್ಲೇ ಆಶ್ವಾಸನೆ ನೀಡುತ್ತಾರೆ. ಸರ‍್ವಜನಿಕ ವಲಯದಲ್ಲೂ ಅತ್ಯಾಚಾರಿಗಳನ್ನು ಗುಂಡಿಟ್ಟುಕೊಲ್ಲಬೇಕು ಎನ್ನುವ ಆಕ್ರೋಶಭರಿತ ಮಾತುಗಳು ಸಹಜವಾಗಿಯೇ ಕೇಳಿಬರುತ್ತವೆ. ಆದರೆ ಒಂದು ಸಮಾಜದ ಆಂತರಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಬೌದ್ಧಿಕ ಪ್ರಕ್ರಿಯೆಗೆ ನಮ್ಮ ಶೈಕ್ಷಣಿಕ ವಲಯದಲ್ಲಾದರೂ ಪ್ರಯತ್ನಗಳು ನಡೆಯುತ್ತಿವೆಯೇ ? ಎಷ್ಟು ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀ ಸಂವೇದನೆಯನ್ನು ತೀಕ್ಷ್ಣಗೊಳಿಸುವ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯುತ್ತಿವೆ ? ಕೇವಲ ವಿಚಾರ ಸಂಕಿರಣಗಳಿಂದ, ಸಮಾಜದ ಆಂರ‍್ಯವನ್ನು ಬಗೆದು ನೋಡುವ ಸಂಶೋಧನಾತ್ಮಕ ಕ್ರಿಯೆಗಿಂತಲೂ ಹೆಚ್ಚಾಗಿ ಇಂದು ಬೇಕಿರುವುದು ಯುವ ಪೀಳಿಗೆಯಲ್ಲಿ ಸ್ತ್ರೀ ಸಂವೇದನೆಯನ್ನು ಮತ್ತು ಮನುಜ ಸೂಕ್ಷ್ಮತೆಯನ್ನು ಬೆಳೆಸುವ ಸೃಜನಶೀಲತೆಯನ್ನು ಹೆಚ್ಚಿಸುವ ಬೌದ್ಧಿಕ ಪ್ರಯತ್ನಗಳು. ಈ ನಿಟ್ಟಿನಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಿದೆ.
ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಸಮಯದಲ್ಲೇ ದೆಹಲಿಯಲ್ಲಿ ರ‍್ವ ಐಪಿಎಸ್ ಅಧಿಕಾರಿ ಮಹಿಳೆ ಅತ್ಯಾಚಾರಕ್ಕೀಡಾಗಿ ಕೊಲೆಯಾಗುತ್ತಾರೆ. ಹೈದರಾಬಾದಿನ ಸೈದಾಪೇಟೆಯಲ್ಲಿ ರ‍್ವ ಮಹಿಳೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗುತ್ತಾಳೆ. ಜಗ್ತಿಯಾಲ್ ಜಿಲ್ಲೆಯಲ್ಲಿ ಆರು ರ‍್ಷದ ಹಸುಳೆ ಅಪ್ರಾಪ್ತ ಯುವಕನೊಬ್ಬನ ಕಾಮತೃಷೆಗೆ ಬಲಿಯಾಗುತ್ತದೆ. ಮಂಗಲ್ಹಟ್ ಜಿಲ್ಲೆಯಲ್ಲಿ ಒಂಬತ್ತು ರ‍್ಷದ ಹಸುಳೆ ಅತ್ಯಾಚಾರಕ್ಕೀಡಾಗುತ್ತದೆ. ಬೆಂಗಳೂರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಯುವತಿ ಕ್ಯಾಬ್ ಚಾಲಕನಿಂದಲೇ ಅತ್ಯಾಚಾರಕ್ಕೀಡಾಗುತ್ತಾಳೆ. ಐದು ರ‍್ಷದ ಹಸುಳೆಯೊಂದು ನೆರೆಮನೆಯ ವ್ಯಕ್ತಿಯಿಂದಲೆ ಲೈಂಗಿಕ ದರ‍್ಜನ್ಯಕ್ಕೀಡಾಗುತ್ತದೆ. ಈ ಘಟನೆಗಳು ನಮ್ಮ ಸರ‍್ವಜನಿಕ ವಲಯದಲ್ಲಿ ಬೇರೂರಿರುವ ಅಸೂಕ್ಷ್ಮತೆಗೆ ಕನ್ನಡಿ ಹಿಡಿದಂತಿದೆ. ನ್ಯಾಯಾಂಗದ ವಿಚಾರಣೆ ಮತ್ತು ನ್ಯಾಯ ವಿತರಣೆ ಎಷ್ಟೇ ಕ್ಷಿಪ್ರಗತಿಯಲ್ಲಿ ನಡೆದರೂ ಅದು ಅಪರಾಧಿಗಳನ್ನು ಶಿಕ್ಷಿಸುವುದರಲ್ಲಿ ಅಂತ್ಯ ಕಾಣುತ್ತದೆಯೇ ಹೊರತು ಇಂತಹ ಘಟನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನೆರವಾಗುವುದಿಲ್ಲ.
ಮುಂದೇನು ? ನಮ್ಮ ಪ್ರಜ್ಞಾವಂತ ಸಮಾಜವನ್ನು ಈ ಪ್ರಶ್ನೆ ಕಾಡಬೇಕಿದೆ. ಇತ್ತೀಚೆಗೆ ಬೆಂಗಳೂರಿನ ಬನ್ನೇರುಘಟ್ಟದ ಬಳಿ ಕ್ಯಾಬ್ ಚಾಲಕನಿಂದ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸುದ್ದಿಮನೆಗಳು ಪದೇ ಪದೇ ಉಚ್ಚರಿಸಿದ ಪದ “ ಪಾನಮತ್ತಳಾಗಿದ್ದ ಮಹಿಳೆ ”. ಸಂತ್ರಸ್ತೆಯಲ್ಲೇ ತಪ್ಪನ್ನು ಹುಡುಕುವ ಅಸೂಕ್ಷ್ಮತೆಯನ್ನು ಇದರಲ್ಲಿ ಕಾಣಬಹುದಲ್ಲವೇ ? ಅಲ್ಲಿ ಮಹಿಳೆ ಪಾನಮತ್ತಳಾಗಿದ್ದರಿಂದಲೇ ಅತ್ಯಾಚಾರಕ್ಕೀಡಾದಳೇ, ಮೈಸೂರಿನಲ್ಲಿ ಕತ್ತಲಿನ ಹೊತ್ತಿನಲ್ಲಿ ಅಡ್ಡಾಡಲು ಹೋಗಿದ್ದರಿಂದಲೇ ದರ‍್ಜನ್ಯಕ್ಕೀಡಾದಳೇ ? ಈ ಪ್ರಶ್ನೆಗೆ ಮಾಧ್ಯಮದ ಸಂಪಾದಕ ರ‍್ಗವೇ ಉತ್ತರಿಸಬೇಕಿದೆ. ಏಕೆಂದರೆ ಅದು ಪುರುಷಪ್ರಧಾನ ವ್ಯವಸ್ಥೆಯ ಒಂದು ಭಾಗವಾಗಿಯೇ ಕರ‍್ಯನರ‍್ವಹಿಸುತ್ತಿರುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರ, ದರ‍್ಜನ್ಯ ಮತ್ತು ಲೈಂಗಿಕ ಕಿರುಕುಳಗಳನ್ನು ಕೇವಲ ಒಂದು ಘಟನೆಯನ್ನಾಗಿ ನೋಡುವ ವಿಕೃತ ಚಿಂತನಾವಾಹಿನಿ ಇಲ್ಲಿ ಕಾಣುತ್ತದೆ. ಬಹುತೇಕ ಮಾಧ್ಯಮಗಳು ಇದೇ ಪರಿಭಾಷೆಯಲ್ಲೇ ಮಾತನಾಡುತ್ತವೆ.
ಈ ಪರಂಪರೆಯಿಂದ ಹೊರಬರುವ ಪ್ರಯತ್ನಗಳನ್ನು ತಳಮಟ್ಟದಿಂದಲೇ ಮಾಡಬೇಕಿದೆ. ಇಂತಹ ಅಮಾನುಷ ಘಟನೆಗಳ ವಿರುದ್ಧ ಸರ‍್ವಜನಿಕವಾಗಿ ದೇಶವ್ಯಾಪಿ ಪ್ರತಿಭಟನೆಗಳು ಕಂಡುಬರುತ್ತವೆ. ಜನಸಾಮಾನ್ಯರ ನಡುವೆಯೂ ಆಕ್ರೋಶ ಎದ್ದುಕಾಣುತ್ತದೆ. ಸಾಮಾಜಿಕ ತಾಣಗಳಲ್ಲಿ ಈ ಆಕ್ರೋಶ ಮತ್ತು ಹತಾಶೆಗಳು ಹಲವು ರೀತಿಯ ಅಭಿವ್ಯಕ್ತಿಯೊಂದಿಗೆ ಕಾಣಿಸಿಕೊಳ್ಳುತ್ತವೆ. ಮುದ್ರಣ ಮಾಧ್ಯಮದ ಸಂಪಾದಕೀಯಗಳು ಈ ಘಟನೆಗಳನ್ನು ಖಂಡಿಸುತ್ತವೆ. ವಿದ್ಯುನ್ಮಾನ ಮಾಧ್ಯಮದ ಸುದ್ದಿಮನೆಗಳು ರೋಚಕವಾಗಿ ಸುದ್ದಿ ಬಿಂಬಿಸುವ ನಡುವೆಯೇ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ರ‍್ಚೆಗಳ ಮೂಲಕ ತೆರೆದಿಡುತ್ತವೆ. ಆಳುವ ರ‍್ಗದ ಪ್ರತಿನಿಧಿಗಳು ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ, ಸರ‍್ವಜನಿಕ ವೇದಿಕೆಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಆಗ್ರಹಿಸುತ್ತಾರೆ. ಕಾನೂನು ಪಾಲಕರು, ನ್ಯಾಯ ವ್ಯವಸ್ಥೆ ಅಪರಾಧಿಗಳನ್ನು ಗುರುತಿಸಿ ಶಿಕ್ಷಿಸುವಲ್ಲಿ ಕ್ರಿಯಾಶೀಲತೆಯಿಂದಲೇ ಕರ‍್ಯನರ‍್ವಹಿಸುತ್ತಾರೆ.
ಈ ಎಲ್ಲ ಸಕಾರಾತ್ಮಕ ಅಂಶಗಳ ನಡುವೆಯೂ ನಮ್ಮನ್ನು ಕಾಡಬೇಕಿರುವುದು ಸಂತ್ರಸ್ತ ಮಹಿಳೆಯ ಅಸ್ಮಿತೆ, ಅಸ್ತಿತ್ವ ಮತ್ತು ಸರ‍್ವತ್ರಿಕ ಸ್ತ್ರೀ ಸಂವೇದನೆಯ ಸೂಕ್ಷ್ಮಗಳು. ಈ ಸೂಕ್ಷ್ಮಗಳ ಹಿನ್ನೆಲೆಯಲ್ಲೇ ಮಹಿಳಾ ಸಮುದಾಯವನ್ನು ನಿತ್ಯ ಕಾಡುವ ಹತಾಶೆ, ಆತಂಕ ಮತ್ತು ಭೀತಿ. ಮಿ ಟೂ ವಿವಾದ ಸ್ಫೋಟಗೊಂಡ ಸಂರ‍್ಭದಲ್ಲೂ ಈ ಅಂಶಗಳು ಸರ‍್ವಜನಿಕ ರ‍್ಚೆಗೊಳಗಾಗಿದ್ದವು. ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಮಹಿಳೆಯೂ ತನ್ನ ಸುತ್ತ ಒಂದು ಸಾಂಕೇತಿಕ ರಕ್ಷಣಾ ಗೋಡೆಯನ್ನು ನರ‍್ಮಿಸಿಕೊಂಡೇ ಇರಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ವಾಸ್ತವ. ಈ ರಕ್ಷಣಾ ಗೋಡೆಗಳು ಇವತ್ತಿನ ಕಾಲಘಟ್ಟದಲ್ಲೂ ಅನಿವರ‍್ಯವೇ ಎಂಬ ಪ್ರಶ್ನೆ ಪುರುಷ ಸಮಾಜವನ್ನು ಕಾಡಿದರೆ ಒಳ್ಳೆಯದಲ್ಲವೇ ?
ಈ ಪ್ರಶ್ನೆಗೆ ಪ್ರತಿಯೊಂದು ಕುಟುಂಬದ ನಾಲ್ಕು ಗೋಡೆಗಳ ನಡುವೆಯೂ, ಪ್ರತಿಯೊಂದು ಕಚೇರಿಯ ವಾತಾವರಣವೂ, ಪ್ರತಿಯೊಂದು ರಾಜಕೀಯ ಪಕ್ಷವೂ, ಸಂಘಟನೆಯ ಆವರಣವೂ, ಉತ್ತರ ಬಯಸುತ್ತದೆ. ಏಕೆಂದರೆ ದೇಶದ ಆಡಳಿತ ವ್ಯವಸ್ಥೆಯನ್ನು ರೂಪಿಸುವ, ನರ‍್ವಹಿಸುವ ಮತ್ತು ನಿಯಂತ್ರಿಸುವ ಸಂಸ್ಥೆಗಳೂ ಸಹ ಪುರುಷ ಪ್ರಧಾನ ಧೋರಣೆಯಿಂದ ಮುಕ್ತವಾಗಿಲ್ಲ. ಮಹಿಳಾ ಮೀಸಲಾತಿಯ ವಿಚಾರವನ್ನು ಅಪ್ಪಿತಪ್ಪಿಯಯೂ ಪ್ರಸ್ತಾಪಿಸದ ಶಾಸನ ಸಭೆಗಳು ಈ ಮನೋರ‍್ಮದ ದ್ಯೋತಕವಾಗಿಯೇ ಕಾಣುವುದಲ್ಲವೇ ? ಇದು ಮಹಿಳೆಯರ ಅಸ್ಮಿತೆ ಮತ್ತು ಅಸ್ತಿತ್ವದ ಪ್ರಶ್ನೆ. ಈ ಪ್ರಶ್ನೆಯನ್ನೇ ಅಸಂಗತಗೊಳಿಸುವ ಪ್ರಯತ್ನಗಳನ್ನು ಹಾಥ್ರಸ್ ನಂತಹ ಘಟನೆಗಳಲ್ಲಿ ಗುರುತಿಸಬಹುದು. ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ವಿಫಲವಾಗುವುದರಲ್ಲಿ ಕಾಣಬಹುದು.
ರ‍್ಥಿಕ ಸಮಾನತೆ ಮತ್ತು ಸುಸ್ಥಿರತೆಯನ್ನು ಸಾಧಿಸದ ಹೊರತು ಮಹಿಳಾ ಸಮುದಾಯ ಈ ಪಿತೃಪ್ರಧಾನ ವ್ಯವಸ್ಥೆಯಲ್ಲಿ ತನ್ನ ಅಸ್ಮಿತೆ-ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ. ಮೇಲ್ಜಾತಿಯ, ಮೇಲ್ರ‍್ಗದ ಮಹಿಳೆಯರೊಂದಿಗೇ ಶೋಷಿತ ಸಮುದಾಯದ ಮಹಿಳೆಯರೂ ತಮ್ಮ ಸಾಮಾಜಿಕ ಘನತೆ ಮತ್ತು ರ‍್ಥಿಕ ಸಮಾನತೆಗಾಗಿ ಹೋರಾಡುವುದು ಇಂದಿನ ಅನಿವರ‍್ಯತೆಯಾಗಿಯೇ ಕಾಣುತ್ತದೆ. ಈ ನಿಟ್ಟಿನಲ್ಲಿ ಅಡ್ಡಿಯಾಗಬಹುದಾದ ಸಂಪ್ರದಾಯ, ಪರಂಪರೆ, ಜಾತಿ ಸೂಕ್ಷ್ಮಗಳು ಮತ್ತು ಧರ‍್ಮಿಕ ಆಚರಣೆಗಳನ್ನು ತೊಡೆದುಹಾಕುತ್ತಲೇ ಈ ಹೋರಾಟ ಮುನ್ನಡೆಯಬೇಕಿದೆ. ಗ್ರಾಂಥಿಕವಾಗಿ ಸಂವಿಧಾನ ನೀಡಬಹುದಾದ ರಕ್ಷಣಾ ಕವಚಗಳನ್ನು ಬಳಸಿಕೊಳ್ಳುತ್ತಲೇ, ಮಹಿಳಾ ಸಮುದಾಯ ಆಂತರಿಕ ಗೋಡೆಗಳನ್ನು ಕೆಡವುತ್ತಾ ಒಂದು ಭೂಮಿಕೆಯನ್ನು ಸಿದ್ಧಪಡಿಸಬೇಕಿದೆ. ಇದಕ್ಕೆ ಅಡ್ಡಿಯಾಗಬಹುದಾದ ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ, ಸಾಂಘಿಕ ಮತ್ತು ಕೌಟುಂಬಿಕ ಅಡೆತಡೆಗಳನ್ನು ನಿವಾರಿಸಿಕೊಂಡೇ ಮುನ್ನಡೆಯಬೇಕಿದೆ.
ಅಪರಾಧಿಗಳಿಗೆ ಉಗ್ರ ಶಿಕ್ಷೆ ವಿಧಿಸುವುದರಿಂದಾಚೆಗೂ ನಾವು ಬೌದ್ಧಿಕ ನೆಲೆಯಲ್ಲಿ ಯೋಚಿಸುವುದು ಇಂದಿನ ತರ‍್ತು. ನಾವು ಎನ್ ಕೌಂಟರ್ ಮಾಡಬೇಕಿರುವುದು ಈ ಪಿತೃಪ್ರಧಾನ ವ್ಯವಸ್ಥೆಯನ್ನು, ಪುರುಷ ಪ್ರಧಾನ ಧೋರಣೆಯನ್ನು. ಬೇರುಮಟ್ಟದಿಂದ ಕಿತ್ತುಹಾಕಬೇಕಿರುವುದು ಜಾತಿ ಶ್ರೇಷ್ಠತೆಯೊಂದಿಗೇ ಬೆಳೆದುಬಂದಿರುವ ಪುರುಷ ಶ್ರೇಷ್ಠತೆಯ ಅಹಮಿಕೆಯನ್ನು. ತೊಡೆದುಹಾಕಬೇಕಿರುವುದು ಆಂತರಿಕ ತಡೆಗೋಡೆಗಳನ್ನು. ಸ್ತ್ರೀ ಸಂವೇದನೆ ಮತ್ತು ಮನುಜ ಸೂಕ್ಷ್ಮತೆಯನ್ನು ಗಟ್ಟಿಗೊಳಿಸುವ ಪ್ರಯತ್ನಗಳಿಗಾಗಿ ಹಂಬಲವಂತೂ ಇದ್ದೇ ಇರುತ್ತದೆ.
-೦-೦-೦-