ಅಯ್ಯೋ ಪಾಪ - ಇದುನಮ್ಮೂರಿನ‘ಕಾಡುಪಾಪ’ !--ಮಲ್ಲಿಕಾರ್ಜುನ ಹೊಸಪಾಳ್ಯ

ಅಯ್ಯೋ ಪಾಪ - ಇದುನಮ್ಮೂರಿನ‘ಕಾಡುಪಾಪ’ !--ಮಲ್ಲಿಕಾರ್ಜುನ ಹೊಸಪಾಳ್ಯ, bevarahani-mallikarjuna-hosapalya-kadupapa-nagavalli-gundappa

ಅಯ್ಯೋ ಪಾಪ - ಇದುನಮ್ಮೂರಿನ‘ಕಾಡುಪಾಪ’ !--ಮಲ್ಲಿಕಾರ್ಜುನ ಹೊಸಪಾಳ್ಯ

ಹೆಚ್ಚು ಜನರನ್ನು ಸೇರದತನ್ನ ಪಾಡಿಗೆತಾನುಇರುತ್ತಿದ್ದ ಹುಡುಗರನ್ನುಚಿಕ್ಕಂದಿನಲ್ಲಿ ‘ ಕಾಡು ಪಾಪ’ ಅಂತ ಗೇಲಿ ಮಾಡುತ್ತಿದ್ದೆವು, ಮನುಷ್ಯನಅಭಿವೃದ್ಧಿಯಅವಾಂತರಕ್ಕೆ ಸಿಲುಕಿ ಅಳಿವನ ಅಂಚಿನಲ್ಲಿರುವ ಸಂತತಿಗಳಲ್ಲಿ ಕಾಡು ಪಾಪವೂ ಒಂದು. ತುಮಕೂರುಜಿಲ್ಲೆಯ ನಾಗವಲ್ಲಿ, ಬಳ್ಳಗೆರೆ,ಹೆಬ್ಬೂರು ಆಸುಪಾಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಕಾಡು ಪಾಪಗಳನ್ನು ಸಂರಕ್ಷಿಸುವ ಹೊಣೆಯನ್ನು ಶಿಕ್ಷಕ ಬಿ.ವಿ.ಗುಂಡಪ್ಪನವರು ಸ್ವಯಂ ವಹಿಸಿಕೊಂಡಿದ್ದರು. ಈ ‘ಕಾಡು ಪಾಪ’ಗಳ ಕುರಿತ ವಿಶೇಷ ಬರವಣಿಗೆ ‘ ಬೆವರ ಹನಿ’ ದಿನಪತ್ರಿಕೆಯ ಭಾನುವಾರದ ಪುರವಣಿ ‘ಕಿನ್ನರಿ’ಯಲ್ಲಿ ಮಾತ್ರ- ಸಂಪಾದಕ
ಪರಿಸರ ಕಾಳಜಿಅಯ್ಯೋ ಪಾಪ - ಇದುನಮ್ಮೂರಿನ‘ಕಾಡುಪಾಪ’ !--ಮಲ್ಲಿಕಾರ್ಜುನ ಹೊಸಪಾಳ್ಯ


ನಮ್ಮೂರಿನ- ಅಂದರೆ ತುಮಕೂರಿನ ಅಪರೂಪದಜೀವಿಯೊಂದು ಎಲೆಮರೆಯಲ್ಲಿದ್ದುಕೊಂಡೇ ಜಗತ್ತಿನ  ಗಮನಸೆಳೆಯುತ್ತಿದೆ. ಅದೇ ಕಾಡು ಪಾಪ.


ತುಮಕೂರಿನಿಂದ ಕುಣಿಗಲ್‌ಗೆ ಹೋಗುವ ಮಾರ್ಗದಲ್ಲಿ ನಾಗವಲ್ಲಿಎಂಬ ಊರು. ಬಸ್ ನಿಲ್ದಾಣಕ್ಕೆತುಸುವೇ ಹಿಂದೆ ಸಿಗುವ ಕಾಲೇಜುಕಾಂಪೌಂಡ್ ಬಳಿ ‘ಇದುಅಪರೂಪದ ವನ್ಯಜೀವಿ ಕಾಡುಪಾಪಗಳ ಸಂರಕ್ಷಣಾ ಪ್ರದೇಶ’ ಎಂಬ ಬೋರ್ಡ್ ಕುತೂಹಲ ಹುಟ್ಟಿಸುತ್ತದೆ. ಹಾಗೆಂದು ಇದೇನು ಅರಣ್ಯ ಇಲಾಖೆಯೋ, ವನ್ಯಜೀವಿ ಇಲಾಖೆಯೋ ಹಾಕಿರುವ ಅಥವಾ ಸರ್ಕಾರ ಘೋಷಿಸಿರುವ ಸಂರಕ್ಷಣಾ ಪ್ರದೇಶವಲ್ಲ. ಸ್ಥಳೀಯ ಶಾಲಾ ಮಾಸ್ತರೊಬ್ಬರ ಆಸಕ್ತಿಯ ಪ್ರತಿಫಲ. ಈಗ ನಿವೃತ್ತಿ ಬದುಕು ಅನುಭವಿಸುತ್ತಿರುವ ಆ ಮಾಸ್ತರು ಬಿ.ವಿ.ಗುಂಡಪ್ಪ.


1996ರವರೆಗೂ ನಾಗವಲ್ಲಿ ಸುತ್ತಮುತ್ತಲ ಊರುಗಳಾದ ಹೆಬ್ಬೂರು, ಹೊನ್ನುಡಿಕೆ, ಗೂಳೂರು, ಬಳ್ಳಗೆರೆ ಮುಂತಾದವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡುಪಾಪಗಳ ಇರುವಿಕೆ ಬಗ್ಗೆ ಹೊರಜಗತ್ತಿಗೆ ಮಾಹಿತಿಇರಲಿಲ್ಲ. ಸ್ವತಃಗುಂಡಪ್ಪನವರಿಗೂ. ರೈತರುರಾತ್ರಿ ಹೊತ್ತು ಹೊಲಕ್ಕೆ ಹೋದಾಗಟಾರ್ಚ್ ಬೆಳಕಿಗೆ ಇವುಗಳನ್ನು ನೋಡಿದ್ದರೂಯಾರಿಗೂ ಏನೂ ಉಪಟಳ ಮಾಡದ, ಬೆಳಿಗ್ಗೆ ಹೊತ್ತುಕಣ್ಣಿಗೇ ಬೀಳದ ಇವುಗಳ ಬಗ್ಗೆ ಅವರ ಗಮನವೇ ಇರಲಿಲ್ಲ. ಮೊಲ, ಕೋತಿ, ಮುಸಿಯ, ಕಪ್ಪಲಾಟಗಳಂತೆ ಇದೂಯಾವುದೋಜೀವಿ ಅಂತ ಸುಮ್ಮನಾಗಿದ್ದರು. ಎಷ್ಟೋ ಜನ ಕೋತಿಗಳಲ್ಲೇ ಇದೊಂದು ಬಗೆ ಎಂದುಕೊAಡವರೂಇದ್ದರು.


ಆದರೆವನ್ಯಜೀವಿ ಕಾಯ್ದೆ, 1972ರಪ್ರಕಾರ ಇವು ಅಳಿವಿನಂಚಿನ ಜೀವಿಗಳು. ಹಾಗೇ ಪಠ್ಯಪುಸ್ತಕದಲ್ಲೂ ದಾಖಲಾಗಿತ್ತು. ಒಂದು ದಿನ ಪಾಠ ಮಾಡುತ್ತಾ ಗುಂಡಪ್ಪನವರು ಕಾಡು ಪಾಪವೂ ಅಳಿವಿನತ್ತ ಸಾಗುತ್ತಿದೆಎಂದರು. ಕೂಡಲೇ ಕೆಲ ವಿದ್ಯಾರ್ಥಿಗಳ ಬುದ್ಧಿ ಚುರುಕಾಯಿತು. ಕಾಡುಪಾಪ ನಮ್ಮ ನಾಗವಲ್ಲಿಯಲ್ಲೇ ಇವೆ ಅಂತ ತಿಳಿಸಿದರು. ಈಗ ಗುಂಡಪ್ಪನವರ ಕಿವಿ ಚುರುಕಾಯಿತು. ಕೆಲ ವರ್ಷಗಳ ಹಿಂದೆ ಅವರು ಮೈಸೂರು ಝೂ  ನಲ್ಲಿ ಕಾಡುಪಾಪ ನೋಡಿದ್ದರು, ಹುಲಿ, ಚಿರತೆಗಳಂತೆ ಎಲ್ಲೂ ದೂರದ ದಟ್ಟಕಾಡಿನಲ್ಲಿ ಕೆಲವೇ ಉಳಿದಿವೆ ಎಂಬುದು ಅವರ ನಂಬಿಕೆ. ಈಗ ನಾಲ್ಕೆöÊದು ವಿದ್ಯಾರ್ಥಿಗಳು ನಮ್ಮೂರಲ್ಲೇ ಇವೆ ಎಂದಾಗ ರೋಮಾಂಚನ. ಪುಸ್ತಕ ಮುಚ್ಚಿಟ್ಟರು. ಎಲ್ಲಿವೆ, ಏನು, ಎತ್ತ ಅಂತ ವಿಚಾರಣೆ ಶುರು. ಒಬ್ಬನಂತೂ ನಮ್ಮ ಸ್ಕೂಲ್ ಪಕ್ಕದಲ್ಲೇ ಇವೆ ಎಂದು ಆತ್ಮವಿಶ್ವಾಸದಿಂದ ಹೇಳಿದಾಗ ಕ್ಲಾಸು ಬರಾಕಾಸ್ತು ಮಾಡಿ ನಡೀರಿ ನೋಡೋಣ ಅಂತ ಹೊರಟೇ ಬಿಟ್ಟರು.


ಆಗ ಇನ್ನೂ ಹೈಸ್ಕೂಲ್ ಅಷ್ಟೇ ಇತ್ತು. ಸುತ್ತಲೂ ಸೀಮೆಜಾಲಿ ಕಾಂಪೌಂಡ್. ಆ ಜಾಲಿ ಸಾಲಿನಲ್ಲೇ ನೋಡುತ್ತಾ ಹೋದರೆ ಅಲ್ಲಿ ಗಿಡದ ಮೇಲೆ ಕಂಡವು. ಒಮ್ಮೆಗೇ ನಾಲ್ಕು. ಬೆಳಗಿನ ಬಿಸಿಲು ಕಾಯಿಸುತ್ತಾ ಸುಖವಾಗಿ ಕುಳಿತಿದ್ದ ಅವುಗಳನ್ನು ಸ್ಪಷ್ಟವಾಗಿ ನೋಡಿದರು ಗುಂಡಪ್ಪ. ಇವೇ, ತರಗತಿಯ ಒಳಗೆ ಪಠ್ಯಪುಸ್ತಕದ ಚಿತ್ರಗಳಲ್ಲಿ ಕಂಡಿದ್ದವು, ತರಗತಿಯಾಚೆ, ಕೆಲವೇ ಅಡಿಗಳ ದೂರದಲ್ಲಿ ಜೀವಂತಕಂಡಿದ್ದವು. 
ವಿಜ್ನಾನ ಶಿಕ್ಷಕರೂ, ಪರಿಸರ ಪ್ರಿಯರೂಆಗಿದ್ದ ಗುಂಡಪ್ಪನವರು ಆ ಕ್ಷಣದಿಂದ ಮುಂದಿನ ಎರಡು ದಶಕಗಳ ಕಾಲ ಅಥವಾ ಜೀವಮಾನವಿಡೀ ‘ಕಾಡುಪಾಪದಮೇಷ್ಟುç’ ಆದ ಘಟನೆಅಲ್ಲಿ ಸಂಭವಿಸಿತು. ಅಲ್ಲದೆ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಅಪರೂಪದ ಜೀವಿಯೊಂದರ ಬಗ್ಗೆ ಬೆಳಕು ಚೆಲ್ಲಿದ ಪ್ರಸಂಗವೂ. 


ಅಲ್ಲಿ ಅವುಗಳನ್ನು ನೋಡಿ ಖುಷಿ ಪಟ್ಟು ಸುಮ್ಮನಾಗದ ಗುರು-ಶಿಷ್ಯ ಬಳಗ ಇಡೀ ನಾಗವಲ್ಲಿ ಸುತ್ತ ಕಾಡುಪಾಪಗಳ ಗಣತಿ ಆರಂಭಿಸಿದರು. ಹಗಲು ಶಾಲೆಯಲ್ಲಿ ಪಾಠ, ಸಂಜೆಯಾಗುತ್ತಿದ್ದAತೆಕೈಯಲ್ಲಿಟಾರ್ಚ್ ಹಿಡಿದು ಕಾಡುಪಾಪಗಳನ್ನು ಹುಡುಕಿ ಸುತ್ತಾಟ. ಕಲಕತ್ತಾದಒಂದು ಸಂಸ್ಥೆಯೂ ಕೈಜೋಡಿಸಿತು. ಉತ್ಸಾಹಿ ವಿದ್ಯಾರ್ಥಿಗಳಂತೂ ಇದ್ದೇಇದ್ದರು. ಅವರ ಪೋಷಕರನ್ನೂ ಮಾತಾಡಿಸಿ ಅವು ಹೆಚ್ಚಾಗಿ ಎಲ್ಲಿಇರುತ್ತವೆ ಎಂಬ ಮಾಹಿತಿ ಸಂಗ್ರಹಿಸಲಾಯಿತು. ಬೇಲಿ ಸಾಲು, ಬಿದಿರು ಮೆಳೆ, ಹುಣಸೆಮರ, ಲಂಟಾನ ಪೊದೆಗಳಲ್ಲಿ ರಾತ್ರಿಯೆಲ್ಲಾಟಾರ್ಚ್ ಹಾಕಿಕೊಂಡು ಸುತ್ತಿದ್ದೇ ಸುತ್ತಿದ್ದು. ಕೆಲವೇ ದಿನಗಳಲ್ಲಿ ಈ ತಂಡಕAಡ ಕಾಡುಪಾಪಗಳೆಷ್ಟು ಗೊತ್ತೇ. ಬರೋಬ್ಬರಿ 58. ನಂತರದ ವರ್ಷಗಳಲ್ಲಿ ಇವರುಕಂಡ ಸಂಖ್ಯೆ 70ನ್ನು ದಾಟಿತು.


ಬೇರೆ-ಬೇರೆ ಮೂಲಗಳಿಂದ ಕಾಡುಪಾಪಗಳ ಮಾಹಿತಿ ಸಂಗ್ರಹಿಸಿ ತಾವುಗಣತಿ ಸಂದರ್ಭದಲ್ಲಿಕಲೆಹಾಕಿದ ಮಾಹಿತಿ, ಫೋಟೊಗಳನ್ನೆಲ್ಲಾ ಸೇರಿಸಿ ಸ್ಲೆöÊಡ್ ತಯಾರಿಸಿದ ಗುಂಡಪ್ಪನವರು ಇವು ಹೆಚ್ಚಾಗಿ ಇರುವ ತಾಲ್ಲೂಕುಗಳಾದ ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಇತ್ಯಾದಿ ತಾಲ್ಲೂಕುಗಳ ಶಾಲೆಗಳಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಜಾಗೃತಿ ಮೂಡಿಸಿದರು. ಇದರಲ್ಲಿ ನಾಗವಲ್ಲಿ ಶಾಲಾ ಮಕ್ಕಳೂ ಭಾಗಿಯಾಗಿದ್ದು ವಿಶೇಷ.
ಇವರ ನಾಗವಲ್ಲಿಶಾಲಾ ಕಾಂಪೌಂಡ್ ಮೇಲೆ ಒಂದು ಬೋರ್ಡ್ ಬರೆಸಿ ಹಾಕಿದರು. ಇದರಿಂದ ಒಂದು ಎಡವಟ್ಟಾಯಿತು. ಶಾಲೆಯಲ್ಲಿಯೇ ಕಾಡುಪಾಪಗಳನ್ನು ಸಾಕಿದ್ದಾರೆಂದು ಜನ ಬರತೊಡಗಿದರು. ಎಲ್ಲರಿಗೂ ನಿಜಾಂಶ ತಿಳಿಸಿ ಅವರ ಊರುಗಳಲ್ಲಿ ಕಂಡರೆರಕ್ಷಿಸುವಂತೆ ಹೇಳಿ ಕಳಿಸುತ್ತಿದ್ದರು.


ಮುಂದಿನ ಕೆಲ ದಿನಗಳಲ್ಲಿ ಗುಂಡಪ್ಪ ಮತ್ತೊಂದುಜವಾಬ್ದಾರಿ ಹೊರಬೇಕಾಯಿತು. ಮಕ್ಕಳು ಹಾಗೂ ಅವರ ತಂದೆ-ತಾಯಿಗಳು ಎಲ್ಲಾದರೂಗಾಯವಾದಕಾಡುಪಾಪ ಸಿಕ್ಕರೆ ಸೀದಾ ಗುಂಡಪ್ಪನವರ ಮನೆಗೋ ಶಾಲೆಗೋ ತರುತ್ತಿದ್ದರು. ಅದಕ್ಕೇನೂ ಬೇಸರಪಡದಇವರು ಹತ್ತಿರದ ಪಶುಚಿಕಿತ್ಸಾಕೇಂದ್ರದಲ್ಲಿಚಿಕಿತ್ಸೆ ಕೊಡಿಸಿ ಮತ್ತೆ ಸಹಜ ಪರಿಸರಕ್ಕೆ ಬಿಡುತ್ತಿದ್ದರು. ತೀವ್ರವಾಗಿಗಾಯಗೊಂಡ ಕೆಲವು ಅಸುನೀಗಿದ್ದೂಇದೆ.
ಕಾಡಿನಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ಅಪಾಂiÀiಕಾರಿಯಲ್ಲದ, ಭಯ ಹಾಗೂ ನಾಚಿಕೆಯ ಸ್ವಭಾವದಪ್ರಾಣಿ ಕಾಡುಪಾಪ. ‘ಕಾಡಿನ ಮಗು’ ಎಂಬ ಅನ್ವರ್ಥ ಹೆಸರೇಇದೆ. ಇಂಗ್ಲಿಶ್ ನಲ್ಲಿ ಸ್ಲೆಂಡರ್ ಲೋರಿಸ್‌ಅಥವಾ ಸ್ಲೋ ಲೋರಿಸ್‌ಎಂದುಕರೆಯುತ್ತಾರೆ. ದುಂಡುತಲೆ, ಗಿಡ್ಡಮೂತಿ. ಉದ್ದನೆಯ ಮೂಗು, ದೊಡ್ಡಕಿವಿ, ಹೊಳೆಯುವ ದುಂಡನೆಯದೊಡ್ಡಕಂದು ಬಣ್ಣದ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲು ಚಿಕ್ಕವು ಹಾಗೂ ಬಾಲವಿಲ್ಲ. ಇದರ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು, ಮನುಷ್ಯನ ಹೋಲಿಕೆಯನ್ನುಕಾಡುಪಾಪದಲ್ಲಿಕಾಣಬಹುದು. 


ಕಂದು ಮತ್ತು ಕಿತ್ತಳೆ ಬಣ್ಣದಎರಡು ಜಾತಿಗಳಿವೆ. ನಾಗವಲ್ಲಿ ಸುತ್ತ-ಮುತ್ತಇರುವುದುಕಂದು ಪ್ರಬೇಧ. ನಿಶಾಚರಿ ಹಾಗೂ ವನವಾಸಿ. ಹಾಗಾಗಿಯೇನಮ್ಮಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ.ಮರದ ಮೇಲೆಯೇತನ್ನ ಬಹುತೇಕಜೀವನವನ್ನು ಕಳೆಯುತ್ತದೆ. ಸ್ವಭಾವದಲ್ಲಿತುಂಬಾಸೋಮಾರಿ. ಮಂಗನ ಚುರುಕುತನವಾಗಲಿ, ಒಂದು ಮರದಿಂದಇನ್ನೊಂದು ಮರಕ್ಕೆಜಿಗಿಯುವ ಸಾಮರ್ಥ್ಯವಾಗಲೀಇಲ್ಲ. ಆದರೆತನ್ನ ಉದ್ದನೆಯ ತೋಳಿನಿಂದ ಒಂದು ಮರದಿಂದಇನ್ನೊAದು ಮರಕ್ಕೆ ಸಾಗಬಲ್ಲದು. ಮುಂಗೈನಿAದ ಮರದ ಕೊಂಬೆಗಳನ್ನು ಬಲವಾಗಿ ಹಿಡಿದುಕೊಳ್ಳುತ್ತವೆ.ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ ಹಕ್ಕಿಗಳ ಮೊಟ್ಟೆಗಳು ಹೀಗೆ ಸುಲಭದಲ್ಲಿ ದೊರೆಯುವುದನ್ನೆಲ್ಲಾ ತಿನ್ನುತ್ತವೆ.ಚೆಂಡಿನಂತೆ ತನ್ನನ್ನುತಾನೇ ಸುತ್ತಿಕೊಂಡು ನಿದ್ರಿಸುತ್ತದೆ.


ಕಾಡುಪಾಪದ ಸಂತತಿ ಶ್ರೀಲಂಕಾ, ಜಾವಾ, ಮಲಯ ದ್ವೀಪಗಳಲ್ಲಿ ಕಂಡುಬರುತ್ತವೆ. ದಕ್ಷಿಣ ಭಾರತದಲ್ಲಿಅದರಲ್ಲೂಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆಎನ್ನುವುದೇ ವಿಶೇಷ. ನೀಲಗಿರಿ, ಆಲದ ಮರ, ಅರಳಿಮರ, ಹುಣಸೇ ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮಳೆ ಕಾಡು ಮತ್ತುಅರೆ ಮಲೆನಾಡಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. 


ಕಾಡುಪಾಪಆಕಾರದಲ್ಲಿ ಕೇವಲ 24 ರಿಂದ 38 ಸೆಂ.ಮೀ ದೊಡ್ಡದು ಮತ್ತುತೂಕದಲ್ಲಿಎರಡುಕೆ.ಜಿಗಿಂತಲೂ ಹಗುರ. ಸುಮಾರು 15 ವರ್ಷ ಬದುಕ ಬಲ್ಲದು. ನಾಲ್ಕೆöÊದು ಸೇರಿಚಿಕ್ಕ ಬಳಗ ರಚಿಸಿಕೊಂಡಿರುತ್ತದೆ. ಆದರೆ, ಹೆಚ್ಚಾಗಿ ಏಕಾಂತದಲ್ಲಿಜೀವಿಸುತ್ತವೆ. ಲೈಂಗಿಕ ಕ್ರಿಯೆಯಲ್ಲಿ ಮಾತ್ರ ಸಂಗಾತಿಯೊAದಿಗೆಇರುತ್ತದೆ. ಹುಟ್ಟಿದ ಮಗು ಎರಡು ವಾರಗಳ ಕಾಲ ತಾಯಿಯನ್ನುತಬ್ಬಿಕೊಂಡು ಬೆಳೆಯುತ್ತದೆ. 


ಇದರ ಸ್ವರಕ್ಷಣಾಉಪಾಯಕುತೂಹಲಕಾರಿ. ಅಪಾಯಕಾರಿ ಕೀಟಗಳ ಕಡಿತದಿಂದ ರಕ್ಷಿಸಿಕೊಳ್ಳಲು ತನ್ನದೇಮೂತ್ರವನ್ನುಕೈಗಳಿಂದ ಕಾಲು ಮತ್ತು ಮುಖಗಳಿಗೆ ಉಜ್ಜಿಕೊಳ್ಳುತ್ತದೆ. ಆದರೆ ಕಾಗೆ, ಗಿಡುಗ ಮುಂತಾದವು ಕುಕ್ಕಿ ಗಾಯಗೊಳಿಸುತ್ತವೆ ಎನ್ನುತ್ತಾರೆಗುಂಡಪ್ಪ. ಇವರ ಬಳಿಗೆ ಚಿಕಿತ್ಸೆಗೆಂದು ಬಂದವುಗಳಲ್ಲಿ ಕಾಗೆಗಳಿಂದ ಗಾಯಗೊಂಡವೇ ಹೆಚ್ಚು.ಅಲ್ಲದೆ ಇವು ಒಂದು ಪೊದೆಯಿಂದಇನ್ನೊAದು ಪೊದೆಗೆದಾಟುವಾಗ ನಾಯಿ, ಬೆಕ್ಕುಗಳೂ ಒಮ್ಮೊಮ್ಮೆಅಟ್ಟಾಡಿಸುತ್ತವೆ. ಹೆಚ್ಚಾಗಿ ಹಳ್ಳಿ ಪಕ್ಕ ಇದ್ದಾಗಇದು ನಡೆಯುತ್ತದೆ. 


ತಮಗೆಅಪಾಯ ಎದುರಾಗಿದೆ ಎಂದು ಕಂಡು ಬಂದಾಗ ಎರಡೂ ಕೈಗಳನ್ನು ತಲೆಗಳಿಗಿಂತ ಮೇಲಕ್ಕೆ ಎತ್ತಿ ನಿಂತುಕೊಳ್ಳುತ್ತದೆ. ಕಾಡು ಪಾಪ ಔಷಧಿಯ ಗುಣ ಹೊಂದಿದೆ. ಹೀಗಾಗಿ ನಾಟಿಔಷಧಿ ಮತ್ತು ಹಣದಾಸೆಗಾಗಿ ಇವುಗಳ ಹಲ್ಲುಗಳನ್ನು ಕಿತ್ತು ಮಾರಲಾಗುತ್ತಿದೆ. ಇದರಿಂದಾಗಿ ಮುದ್ದು ಮುಖದಕಾಡುಪಾಪ ಅಳಿವಿನ ಅಂಚಿನಲ್ಲಿದೆ. ಆದರೆ ನಾಗವಲ್ಲಿ ಸುತ್ತ-ಮುತ್ತ ಈ ರೀತಿಯಉದ್ದೇಶಕ್ಕೆ ಕಾಡುಪಾಪಗಳನ್ನು ಯಾರೂ ಬೇಟೆಯಾಡುವುದಿಲ್ಲ. ಆದರೆ ಬೇರೆಯದೇ ಅಪಾಯಗಳು ಕಾಡುಪಾಪಗಳ ಸಂಖ್ಯೆ ಈ ಭಾಗದಲ್ಲಿಕಡಿಮೆಯಾಗಲುಕಾರಣವಾಗುತ್ತಿವೆ. 


ಅವುಗಳಲ್ಲೊಂದು, ನಾಗವಲ್ಲಿ ಮೂಲಕ ಹಾದು ಹೋಗುವ ರಸ್ತೆಅಗಲೀಕರಣ. 1996ರಲ್ಲಿ ಇದು ಸಣ್ಣರಸ್ತೆ. ವಾಹನಗಳೂ ಹೆಚ್ಚಾಗಿ ಇರಲಿಲ್ಲ. 2010ರಿಂದೀಚೆಗೆ ಇದನ್ನುರಾಜ್ಯ ಹೆದ್ದಾರಿಯಾಗಿ ದ್ವಿಪಥ ಮಾಡಲಾಯಿತು. ವಾಹನಗಳ,ಅದರಲ್ಲೂ ಲಾರಿಗಳ ಓಡಾಟ ವಿಪರೀತ ಹೆಚ್ಚಿತು. ರಸ್ತೆಯ ಈ ಕಡೆ ಪೊದೆಯಿಂದಆಕಡೆ ಪೊದೆಗೆ ಹೋಗಲು ಪ್ರಯತ್ನಿಸುವಾಗ ವಾಹನಗಳಿಗೆ ಸಿಲುಕಿ ತುಂಬಾ ಕಾಡುಪಾಪಗಳು ಅಸುನೀಗುತ್ತಿವೆ. 


ಇದಲ್ಲದೆ ಇವುಗಳ ಮರದಿಂದ ಮರಕ್ಕೆ ಸಾಗುವ ಸ್ವಭಾವವೇ ಸಾವಿಗೆ ಕಾರಣವಾಗುತ್ತಿರುವುದು ಮತ್ತೊಂದುದುರAತ. ಹೇಗೆಂದರೆ, ಮುಂಚೆಯೆಲ್ಲಾ ನಾಗವಲ್ಲಿ ಭಾಗದಲ್ಲಿಆಹಾರ ಬೆಳೆ ಹಾಕುತ್ತಿದ್ದರು. ಕ್ರಮೇಣತೆಂಗು, ಅಡಿಕೆ ತೋಟಗಳು ಬಂದು ವಿದ್ಯುತ್ ತಂತಿಗಳ ಜಾಲ ಯತೇಚ್ಚವಾಯಿತು. ಈ ತಂತಿಗಳನ್ನೇ ಮರಗಳ ಕೊಂಬೆ ಎಂದುಕೊಂಡುದಾಟಲು ಹೋಗಿ ಎಷ್ಟೋ ಕಾಡುಪಾಪಗಳು ವಿದ್ಯುತ್ ಶಾಕ್‌ನಿಂದ ಸತ್ತಿವೆ ಎನ್ನುತ್ತಾರೆಗುಂಡಪ್ಪ. 


ಹಾಗೆಯೇ ಬಿದಿರು ಮೆಳೆಗಳು, ಪೊದೆಗಳು ಕ್ರಮೇಣಇಲ್ಲವಾಗುತ್ತಿರುವುದೂ ಕಾಡುಪಾಪಗಳ ಆವಾಸಸ್ಥಾನಕ್ಕೆ ಧಕ್ಕೆತಂದಿದೆ. ಇತ್ತೀಚೆಗೆ ನಾಗವಲ್ಲಿ ಹತ್ತಿರದ ಬಿದಿರುಕಟ್ಟೆ ಬಳಿ ತುಮಕೂರು ವಿಶ್ವವಿದ್ಯಾಲಯಕ್ಕೆ ನೂತನಕ್ಯಾಂಪಸ್ ನಿರ್ಮಾಣವಾಗುತ್ತಿದೆ. ಕುರುಚಲುಕಾಡಿನಂತೆಇದ್ದಇಲ್ಲಿನ ನೂರಾರುಎಕರೆ ಪ್ರದೇಶದಲ್ಲಿ ಕಾಡುಪಾಪಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಈಗ ಅಲ್ಲಿ ಲಾರಿಗಳು, ಟಿಪ್ಪರುಗಳ ರ‍್ರೋ ಎಂಬ ಓಡಾಟ ಹಗಲಿರುಳೂ ನಡೆಯುತ್ತಿದೆ. 


ಗುಂಡಪ್ಪನವರುಇನ್ನೊAದು ಸಂಗತಿಯನ್ನು ವಿಷಾದದಿಂದ ಹೇಳುತ್ತಾರೆ. 1996ರ ಆಸು-ಪಾಸು ಕಾಡುಪಾಪಗಳ ಗಣತಿ ಇತ್ಯಾದಿಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಬಹುತೇಕರುಇಂದುಇಲ್ಲಿಯೇ ಕೃಷಿ ಅಥವಾ ಮತ್ತೊಂದು ವೃತ್ತಿ ಮಾಡುತ್ತಿದ್ದಾರೆ. ಅವರಿಗೆ ಕಾಡುಪಾಪಗಳ ಬಗ್ಗೆ ಅರಿವಿದೆ. ಆದರೆ ಈ ಅಭಿವೃದ್ಧಿಗಂಡಾAತರವನ್ನುತಡೆಯಲುಆಗುತ್ತಿಲ್ಲ, ಕೆಲವರು ಈ ಅಭಿವೃದ್ಧಿಯಜಾಲದಲ್ಲಿತಾವೂಸೇರಿಹೋಗಿದ್ದಾರೆ.


ಆದರೂ ನಿರ್ನಾಮವಾಗುವ ಮಟ್ಟಕ್ಕೇನೂ ಇವುಗಳ ಕ್ಷೀಣಿಸಿಲ್ಲ ಎಂಬ ಆಶಾದಾಯಕ ನುಡಿಗಳನ್ನೂ ಹೇಳುತ್ತಾರೆ ಗುಂಡಪ್ಪ. ಕೆಲವು ವರ್ಷಗಳ ಹಿಂದೆನಾಗವಲ್ಲಿಯಿAದ ಬೇರೊಂದು ಶಾಲೆಗೆ ವರ್ಗವಾದಇವರು ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಆದರೆಇವರ ವ್ಯಕ್ತಿತ್ವದಜೊತೆಗೇಅಂಟಿಕೊAಡ ಕಾಡುಪಾಪಗಳು ಇವರನ್ನು ಬಿಡುತ್ತಿಲ್ಲ. ಎಷ್ಟರಮಟ್ಟಿಗೆಎಂದರೆ ನಾನು ನಾಗವಲ್ಲಿ ಬಳಿ ಈಗ ಕಾಡುಪಾಪಗಳ ಸ್ಥಿತಿ ಹೇಗಿದೆಎಂದುಅಲ್ಲಿನರೈತರೊಬ್ಬರನ್ನು ಕೇಳಿದಾಗ ಅವರು ‘ಈಗ ಅವು ಇಲ್ಲ ಬುಡಿ, ಗುಂಡಪ್ಪ ಮೇಷ್ಟು ಇದ್ದಾಗ ಶ್ಯಾನೆಇದ್ವು, ಅವರು ಹೋದಮೇಲೆ ಅವೂ ಹೋದ್ವು’ ಎಂದುಬಿಟ್ಟರು.


ವರ್ಷದ ಹಿಂದೆತೋವಿನಕೆರೆಯ ಬಳಿ ಒಂದುಕಾಡುಪಾಪ ಸಿಕ್ಕಿತ್ತು. ಅಲ್ಲಿನ ಪತ್ರಕರ್ತ ಪದ್ಮರಾಜುತಕ್ಷಣ ಸಲಹೆಗಾಗಿ ಸಂಪರ್ಕಿಸಿದ್ದು ಅರಣ್ಯಇಲಾಖೆಯನ್ನಲ್ಲ, ಬದಲಿಗೆಗುಂಡಪ್ಪನವರನ್ನು. 


ತೆಂಗು, ತಲಪರಿಗೆ, ಕೊರಲೆ, ಕಡಲೆ ಕಾಯಿಗಳು ಹೇಗೆ ತುಮಕೂರಿನ ಹೆಗ್ಗುರುತುಗಳಾಗಿವೆಯೋ ಹಾಗೇ ಕಾಡುಪಾಪಗಳೂ ಸಹ. ತಲೆಮಾರಿನಿಂದ ತಲೆಮಾರಿಗೆ ಇವುಗಳ ಮಹತ್ವ, ಇರುವಿಕೆ, ಸಂರಕ್ಷಿಸಬೇಕಾದಅಗತ್ಯದ ತಿಳುವಳಿಕೆ ಕೈಬದಲಾಗಬೇಕು.  
ಕಾಡುಪಾಪಕ್ಕೆಹಾಗೆ ಕರೆಯಲುಕಾರಣ ಬಹುಶಃ ಅವುಗಳ ಮುಗ್ಧ ಮುಖವೇ ಎನಿಸುತ್ತದೆ. ಈ ಪುಟ್ಟಜೀವಿಇಷ್ಟು ದೊಡ್ಡಜಗತ್ತಿನಲ್ಲಿತಮ್ಮ ಉಳಿವಿಗಾಗಿ ಒಂದಿಷ್ಟು ಸುರಕ್ಷೆಯ ಸ್ಥಳವಿಲ್ಲದೆ ಒದ್ದಾಡುತ್ತಿದೆ. 
(ಚಿತ್ರ ಕೃಪೆ: ಬಿ.ವಿ.ಗುಂಡಪ್ಪ)

ಗುಂಡಪ್ಪ ಮಾಸ್ಟರ್


ಗುಂಡಪ್ಪ ಮಾಸ್ಟರ್‌ಅಂತಲೇ ಫೇಮಸ್‌ಆಗಿರುವ ಬಿ.ವಿ.ಗುಂಡಪ್ಪನವರು ಜೀವ ಪರ ಮನುಷ್ಯ, ಸೇವಾ ಅವಧಿ ಪೂರಾ ತರಗತಿಗಳ ನಾಲ್ಕು ಗೋಡೆಗಳ ನಡುವೆಕಪ್ಪು ಹಲಗೆಯ ಮುಂದೆಗೊಣಗೊಣ ಪಾಠ ಮಾಡಿ ಮುಗಿಸುವ ಒಣ ಶಿಕ್ಷಕರಾಗಿ ಉಳಿಯಲಿಲ್ಲ ಇವರು, ತಮ್ಮೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಯಆವರಣದಿಂದ ಹೊರಗೆಕರೆದೊಯ್ದು ನಿಸರ್ಗ ಸತ್ಯದರ್ಶನ ಮಾಡಿಸಿದ ಗುರು. 


ಪ್ರಕೃತಿಕುರಿತಂತೆಗುಂಡಪ್ಪನವರ ಅರಿಯುವದಾಹತಣಿಯುವುದೇ ಇಲ್ಲ ಎಂಬುದು ಇವರ ದೈನಂದಿನ ಚಟುವಟಿಕೆಗಳನ್ನು ಗಮನಿಸಿದವರಿಗೆ ಅರ್ಥವಾಗುತ್ತದೆ. ದೇವರಾಯನದುರ್ಗ, ತಿಮ್ಲಾಪುರ ಅರಣ್ಯಗಳಲ್ಲಿ ದೊರಕುವ ವಿಶಿಷ್ಟ ಸಸ್ಯ-ಕೀಟ-ಪ್ರಾಣಿಗಳನ್ನು ಒಂದೊಂದಾಗಿಕ್ಯಾಮೆರಾದಲ್ಲಿ ಸೆರೆಹಿಡಿದುದಾಖಲಿಸುತ್ತಲೇ ಹೊಸ ಸಸ್ಯಗಳನ್ನೂ ಪತ್ತೆ ಹಚ್ಚಿ ದಾಖಲೆ ಮಾಡಿದ್ದಾರೆ. ಇರುವೆಗಳನ್ನು ಜೀವಂತವಾಗಿ ಕಬಳಿಸುವ ಕೀಟಾಹಾರಿ ಗಿಡಗಳನ್ನು ಹುಡುಕಿ ತೋರಿಸಿದ್ದಾರೆ. ಪಕ್ಷಿ ಸಂಕುಲದ ವಿಶಿಷ್ಟ ದಾಖಲೆ ಮಾಡಿದ್ದಾರೆ. ಪರಿಸರ ಹಾಗೂ ಜೀವ ಸಂರಕ್ಷಣೆಕುರಿತಂತೆಜನಜಾಗೃತಿಯಲ್ಲೂ ತೊಡಗಿದ್ದಾರೆ.

(ಕಾಡು ಪಾಪ ಸಂತತಿ ಉಳಿಸುವ ಗುಂಡಪ್ಪನವರ ಪ್ರಯತ್ನಕುರಿತ ಲೇಖನ ಈ ಸಂಚಿಕೆ)