ಹಳ್ಳಿ ಹೈದನ ನೂರೆಂಟು ನೆನಪು-7 ಸಿ.ಚಿಕ್ಕಣ್ಣ, ಐಎಎಸ್(ವಿ) (ಹಿಂದಿನ ‘ಕಿನ್ನರಿ’ಯಿಂದ) ಸ್ಟೇಜ್ ಮೇಲಕ್ಕೆ ಛಂಗನೆ ಹಾರಿದ ರಕ್ತ ಬೀಜಾಸುರ !

ಹಳ್ಳಿ ಹೈದನ ನೂರೆಂಟು ನೆನಪು-7 ಸಿ.ಚಿಕ್ಕಣ್ಣ, ಐಎಎಸ್(ವಿ) (ಹಿಂದಿನ ‘ಕಿನ್ನರಿ’ಯಿಂದ) ಸ್ಟೇಜ್ ಮೇಲಕ್ಕೆ ಛಂಗನೆ ಹಾರಿದ ರಕ್ತ ಬೀಜಾಸುರ !

ಹಳ್ಳಿ ಹೈದನ ನೂರೆಂಟು ನೆನಪು-7   ಸಿ.ಚಿಕ್ಕಣ್ಣ, ಐಎಎಸ್(ವಿ)   (ಹಿಂದಿನ ‘ಕಿನ್ನರಿ’ಯಿಂದ)   ಸ್ಟೇಜ್ ಮೇಲಕ್ಕೆ ಛಂಗನೆ ಹಾರಿದ ರಕ್ತ ಬೀಜಾಸುರ !

ಹಳ್ಳಿ ಹೈದನ ನೂರೆಂಟು ನೆನಪು-7


ಸಿ.ಚಿಕ್ಕಣ್ಣ, ಐಎಎಸ್(ವಿ)


(ಹಿಂದಿನ ‘ಕಿನ್ನರಿ’ಯಿಂದ)


ಸ್ಟೇಜ್ ಮೇಲಕ್ಕೆ ಛಂಗನೆ ಹಾರಿದ ರಕ್ತ ಬೀಜಾಸುರ !


ಮೊದಲನೇ ಸೀನು: ದೇವೇಂದ್ರನ ಒಡೋಲಗ ಊರಿನಲ್ಲಿ ಸಿಕ್ಕಿದ ಎರಡು ಮರದ ಬೆಂಚಿಗೆ ಕೆಂಪು ಬಣ್ಣದ ಬಟ್ಟೆ ಬಿಗಿದು, ಅದರ ಮೇಲೆ ಸಿಂಹಾಸದAತೆ ಕಾಣುವ ಎತ್ತರದ ಕುರ್ಚಿಯನ್ನು ಇಡಲಾಗಿತ್ತು. ನಾಲೈದು ಜನ ಗಂಡಸರು ಒಂದು ಕಡೆ ನಿಂತು ಜೈಕಾರ ಹೇಳಬೇಕು, ಮತ್ತೊಂದು ಕಡೆ ರಂಭೆ, ಊರ್ವಶಿ, ಮೇನಕೆಯರು ಊರಿನ ಹುಡುಗರಿಗೆ ಹೆಂಗಸರ ಪಾತ್ರಕ್ಕೆ ಸರಿಯಾಗಿ ಸಾದನೆ ಮಾಡಿಸಿ ನಿಲ್ಲಿಸಲಾಗಿತ್ತು. ಅವರು ಯಾವ ಸಂಭಾಷಣೆಯನ್ನೂ ಹೇಳುವಂತಿಲ್ಲ.


ಸೈಡ್‌ವಿAಗ್‌ನಲ್ಲಿ ನಾರದರು ತಂಬೂರಿ ಹಿಡಿದು ನಿಂತಿದ್ದರು. ಸ್ವಲ್ಪ ಇರಿ' ಎಂದು ಸನ್ನೆ ಮಾಡಿ, ಒಡ್ಡೋಲಗದಲ್ಲಿ ಎಲ್ಲ ಸರಿಯಾಗಿದೆಯೋ ಎಂದು ಖಾತರಿ ಪಡಿಸಿಕೊಂಡ ನಂತರ ಪ್ರವೇಶ ಮಾಡುವಂತೆ ನಾರದರಿಗೆ ಸೂಚನೆ ನೀಡಿ, ಮೇಷ್ಟ್ರು ಕಡೆಗೆ ಕೈ ತೋರಿಸಿದೆ. ನಾರದರು ನಾರಾಯಣನನ್ನು ಕುರಿತ ಹಾಡನ್ನು ಹಾಡುತ್ತಾ ಪ್ರವೇಶಿಸಿದರು. ಮೇಷ್ಟ್ರು ಹಾರ್ಮೋನಿಯಂ, ತಬಲ, ತಾಳ ಇವುಗಳನ್ನು ಸಂಯೋಜಿಸಿ ಅವರೇ ಹಾಡನ್ನು ಹಾಡಿದರು. ನಾರದನ ಪಾತ್ರಧಾರಿ ಹಾಡಿಗೆ ತಕ್ಕಂತೆ ಬಾಯಿ ಚಲನೆ ಮಾಡುತ್ತಿದ್ದರು. 7 ನಿಮಿಷಗಳ ಸುದೀರ್ಘ ಹಾಡು, ಹಾಡು ನಿಂತ ನಂತರ ಜನ ಚಪ್ಪಾಳೆ ಹಾಕಿದರು. ಅಷ್ಟರಲ್ಲಿ ಒಬ್ಬರು ಸಭಿಕರ ಕಡೆಯಿಂದ ಒಂದು ಸಿಳ್ಳೆ ಹೊಡೆದು 'ಒನ್ಸ್ ಮೋರ್” ಎಂದ. ನನಗೆ ತುಂಬಾ ಸಿಟ್ಟು ಬಂತು. ಇದಕ್ಕೆಲ್ಲಾ ಅವಕಾಶವಿಲ್ಲ' ಎಂದೆ. 'ಯಾಕಿಲ್ಲ' ಎಂದ ಇನ್ನೊಬ್ಬ, ಹೀಗೆ ಮಾತಿಗೆ ಮಾತು ಬೆಳೆದು ಪರದೆ ಬಿಡಿಸಿದೆ. ಮೇಷ್ಟ್ರು ಸ್ಟೇಜಿಗೆ ಬಂದರು. 'ಸರ್, ಒಬ್ಬೊಬ್ಬ ಪಾತ್ರಧಾರಿಗೂ 2-3 ಅವಕಾಶ ಕೊಟ್ಟರೆ ದೇವಿ ಪ್ರವೇಶ ಆಗೋದು ಸೂರ್ಯ ಹುಟ್ಟಿದ ಮೇಲೇನೇ' ಎಂದೆ. "ನೀನು ಹೇಳೋದು ಸರಿ' ಎಂದು ಹೇಳಿದ ಮೇಷ್ಟ್ರು, ಸಭಿಕರಿಗೆ ಕೈ ಮುಗಿದು 'ದಯಮಾಡಿ oಟಿಛಿe ಒoಡಿe ಕೂಗಬೇಡಿ, ಸ್ಟೇಜಿಗೆ ಬಂದು ಪಾತ್ರ ಮಾಡೋರಿಗೆ ದುಡ್ಡು ಸಿಕ್ಕಿಸೋದು, ಉಂಗುರ, ಸರ ಹಾಕೋದು, ಹಾರ ಹಾಕೋದು ಬೇಡ' ಎಂದು ಮನವಿ ಮಾಡಿಕೊಂಡರು. ನಾಟಕ ಶುರು ಆಯ್ತು. ಅದಾದ ನಂತರ ನಾರದರು ದೇವೇಂದ್ರನ ಆಸ್ಥಾನಕ್ಕೆ ಪ್ರವೇಶ ಮಾಡಿದರು. ದೇವೇಂದ್ರ ಸಿಂಹಾಸನದಿAದ ಇಳಿದು ಬಂದು ನಾರದರಿಗೆ ವಂದಿಸಿ ಅವರನ್ನು ಪಕ್ಕದಲ್ಲಿದ್ದ ಬೆಂಚಿನ ಮೇಲೆ ಕೂರಿಸಿ, ಏನು ದಯಮಾಡಿಸಿದಿರಿ' ಎಂದು ಹೇಳಿದರು. (ನಂತರದ ಸಂಭಾಷಣೆ ಇಲ್ಲಿ ಅಪ್ರಸ್ತುತ)


ಎರಡನೇ ಸೀನು: ಈಶ್ವರನು ಪಾರ್ವತಿಯ ಜತೆ ಕೈಲಾಸ ಪರ್ವತದಲ್ಲಿ ಆಸೀನನಾಗಿದ್ದಾನೆ. ಅಲ್ಲಿ ನಂದಿ, ಸೇರಿ ಭೂತಗಣಗಳು ವೇಷಧಾರಿಗಳಾಗಿ ಸಾಲಾಗಿ ನಿಂತಿದ್ದಾರೆ. ಅಲ್ಲಿಗೆ ನಾರದ ಮತ್ತು ದೇವೇಂದ್ರನ ಪ್ರವೇಶ (ಸಂಭಾಷಣೆಗಳು ಇಲ್ಲಿ ಇಲ್ಲಿ ಅಪ್ರಸ್ತುತ)


ಮೂರನೇ ಸೀನು: ವಿಷ್ಣುವಿನ ಪಾತ್ರದಲ್ಲಿ ನಮ್ಮ ತಂದೆಯವರು ಶೇಷಾಚಲನ ಮೇಲೆ ಪವಡಿಸಿದ್ದಾರೆ. ಪಕ್ಕದಲ್ಲಿ ಲಕ್ಷ್ಮಿ ಅವರ ಕಾಲು ಒತ್ತುವಂತೆ ನಟಿಸುತ್ತಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಈಶ್ವರ, ದೇವೇಂದ್ರ, ನಾರದರ ಪ್ರವೇಶ (ಸಂಭಾಷಣೆಗಳು ಇಲ್ಲಿ ಅಪ್ರಸ್ತುತ) ಅಷ್ಟರಲ್ಲಿ ಊರ ಬೀದಿಗಳಲ್ಲಿ ತಮಟೆಯ ಸದ್ದು ಮೊರೆಯಲು ಆರಂಭಿಸಿತು. `ಏನೋ ಇದು' ಎಂದು ಫಕುವನ್ನು ಕೇಳಿದೆ. 'ರಕ್ತಬೀಜಾಸುರ ಮೆರವಣಿಗೆಯಲ್ಲಿ ಬಾ ಇದ್ದಾನೆ' ಎಂದ. ಸ್ವಲ್ಪ ಹೊತ್ತಿನಲ್ಲಿ ಸುಡಿಗೆ ಬೆಳಕಿನಲ್ಲಿ ಬುಡೇಗೌಡರು ರಕ್ತಬೀಜಾಸುರನ ವೇಷದಲ್ಲಿ ಭೋರ್ಗರೆಯುತ್ತ, ಜನಗಳ ಮಧ್ಯೆ ಜಾಗ ಮಾಡಿಕೊಂಡು, ಸ್ಟೇಜಿನ ಹತ್ತಿರ ಹಾಕಿದ್ದ ಮೆಟ್ಟಿಲುಗಳನ್ನು ಹತ್ತುವ ಬದಲು, ಅಲ್ಲಿಂದ ಸ್ಟೇಜಿನ ಮೇಲೆ ರೋಷಾವೇಶದಿಂದ ಛಂಗನೆ ಹಾರಿದರು. ಇಡೀ ಸ್ಟೇಜ್ ನಡುಗಿದಂತೆ ಭಾಸವಾಯಿತು. ನಾಟಕದ ಚಿತ್ರಕಥೆಯ ಪ್ರಕಾರ ರಕ್ತ ಬೀಜಾಸುರನು ವಿಷ್ಣುವಿನ ಹತ್ತಿರ ಮೊದಲು ಹೋಗಿ, ವೈಕುಂಠಕ್ಕೆ ಲಗ್ಗೆ ಇಟ್ಟಿರುವುದಾಗಿ ಹೇಳಿ ನೀವು ಶರಣಾಗಿ ಎಂದು ಹೇಳಬೇಕು. ಆದರೆ ಇಲ್ಲಿ ಆಗಿದ್ದೆ ಬೇರೆ, ಅತೀವ ಕೋಪದಿಂದ ಕುದಿಯುತ್ತಿದ್ದ ರಕ್ತ ಬೀಜಾಸುರ ಸೀದಾ ದೇವೇಂದ್ರನ ಪಾತ್ರದಲ್ಲಿದ್ದ ನಮ್ಮ ಚಿಕ್ಕಪ್ಪ ಅಪ್ಪಯ್ಯನವರು ಕುಳಿತಿದ್ದ ಆಸನದ ಕಡೆ ನುಗ್ಗಿದರು. `ಎಲವೋ, ಮೂರ್ಖ 50 ರೂಪಾಯಿ ನಿನಗೆ ಬೇಕಾ? ಎಲ್ಲರ ಮುಂದೆ ನನಗೆ ಅವಮಾನ ಮಾಡ್ತೀಯಾ?' ಎಂದು ಅಪ್ಪಯ್ಯನವರ ಜುಟ್ಟಿಗೇ ಕೈ ಹಾಕಿದರು. ರೊಟ್ಟಿನಿಂದ ಮಾಡಿದ್ದ ಕಿರೀಟ ನೆಲಕ್ಕೆ ಬಿತ್ತು. ಆಸನದಲ್ಲಿ ಕುಳಿತಿದ್ದ ಅಪ್ಪಯ್ಯನವರು ಹೌಹಾರಿ ಹೋದರು. ಇತರ ಪಾತ್ರಧಾರಿಗಳು ಎದ್ದು ನಿಂತರು. ಹಾವಿನ ಹೆಡೆಯ ಮೇಲೆ ಮಲಗಿದ್ದ ವಿಷ್ಣು ಧಪಕ್ಕನೆ ಎದ್ದು ಬೆಂಚಿನಿAದ ಕೆಳಗಿಳಿಯುವಾಗ ನೆಲಕ್ಕೆ ಬಿದ್ದರು. ಇತ್ತ ರಕ್ತ ಬೀಜಾಸುರನು ಕೋಪದಲ್ಲಿ ಅಪ್ಪಯ್ಯನವರ ರಟ್ಟೆ ಹಿಡಿದು ಸ್ಟೇಜಿನ ಮತ್ತೊಂದು ಕಡೆ ಅವರನ್ನು ದೂಡಿದರು. ಮೊದಲೇ ಕೃಶ ಶರೀರದ ಅಪ್ಪಯ್ಯನವರು ನೆಲಕ್ಕೆ ಬಿದ್ದರು.


ಇದನ್ನೆಲ್ಲಾ ಹತ್ತಿರದಿಂದ ನೋಡುತ್ತಿದ್ದ ನಾನು ಎಚ್ಚೆತ್ತುಕೊಂಡು, ಫಕುಗೆ ಹೇಳಿ ಪರದೆ ಇಳಿಸಿ, ಅಪ್ಪಯ್ಯ ಅವರ ಹತ್ತಿರ ಓಡಿ ಅವರನ್ನು ಎತ್ತಿ ಕೂರಿಸಿದೆ. ಸದ್ಯ  ಗಾಯಗಳಾಗಿರಲಿಲ್ಲ. ಅಷ್ಟು ಹೊತ್ತಿಗೆ ಮೇಷ್ಟ್ರು ಸ್ಟೇಜಿನ ಮೇಲೆ ಬಂದರು. ಬುಡೇಗೌಡರ ಮಕ್ಕಳೂ, ಅಪ್ಪಯ್ಯನ ಮಕ್ಕಳೂ ಸ್ಟೇಜಿನ ಮೇಲೆ ತುಂಬಿಕೊAಡರು. ಯಾವ ಪಾತ್ರಧಾರಿಯ ಬಾಯಲ್ಲೂ ಮಾತೇ ಹೊರಡುತ್ತಿರಲಿಲ್ಲ. ಕೊನೆಗೆ ನಾಟಕದ ಮೇಷ್ಟ್ರು ಧೈರ್ಯ ಮಾಡಿ ಬುಡೇಗೌಡರ ಹತ್ತಿರ ಹೋಗಿ, 'ಏನು ಗೌಡೇ, ಯಾಕೆ ಹೀಗೆ ಮಾಡಿದಿರಿ? ಇದು ನಾಟಕ, ಕಥೆ ಹೆಂಗಿದ್ಯೋ ಹಂಗೆ ನೀವು ನಡ್ಕೊಬೇಕು, ಅದು ಬಿಟ್ಟು ನೀವು ಅಪ್ಪಯ್ಯನ ಗುರಿಯಾಗಿಟ್ಟುಕೊಂಡು ಅವರ ಮೇಲೆ ಹಲ್ಲೆ ಮಾಡಿದ್ದು ಒಂದು ಚೂರೂ ಸರಿ ಇಲ್ಲ. ಏಕೆ ಹೀಗೆ ಮಾಡಿದ್ದೀ' ಎಂದು ಕೇಳಿದರು. ಸಿಟ್ಟಿನಿಂದ ಕುದಿಯುತ್ತಿದ್ದ ಗೌಡರ ಬಾಯಿಂದ ಉತ್ತರ ಬರಲೇ ಇಲ್ಲ, ಬಾಯಿಯ ಎರಡೂ ಕಡೆ ಬಿಳಿಯ ನೂರೆ, ಈಚಲು ಹೆಂಡದ ವಾಸನೆ ನನ್ನ ಮೂಗಿಗೆ ರಾಚಿತು. ಅವರ ಮಗ ಚಂಬಿನಲ್ಲಿ ತಂದಿದ್ದ ನೀರನ್ನು ಕುಡಿಸಿದನು. ಒಂದು ಬೆಂಚಿನ ಮೇಲೆ ಕೂರಿಸಿ ದಣಿವಾರಿಸಿಕೊಳ್ಳಲು ಅವರಿಗೆ ಸೂಚಿಸಲಾಯಿತು.


ಈ ಮಧ್ಯೆ ಪ್ರೇಕ್ಷಕರಿಗೆ ಏಕೆ ಹೀಗೆಲ್ಲಾ ಆಗಿದೆ ಎಂಬ ಅರಿವಿಲ್ಲದೆ ನಾಟಕದ ಮೇಷ್ಟನ್ನು ಮುತ್ತಿಕೊಂಡರು. 'ಎಲ್ಲಾ ಸರಿ ಹೋಗ್ತಿದೆ. ಒಂದು 10 ನಿಮಿಷ ತಾಳ್ಮೆಯಿಂದ ಕೂತಿರಿ, ನಾಟಕ ಮತ್ತೆ ಶುರು ಆಯ್ತದೆ' ಎಂದು ಮೇಷ್ಟ್ರು ಕೋರಿಕೊಂಡ ಮೇಲೆ ಎಲ್ಲರೂ ತಮ್ಮ ತಮ್ಮ ಜಾಗಕ್ಕೆ ಹೋಗಿ ಕುಳಿತರು. ಅಷ್ಟು ಹೊತ್ತಿಗಾಗಲೇ ರಾತ್ರಿ 12 ಗಂಟೆಗಳಾಗಿದ್ದು ಮುಂದೆ ಹೇಗೆ ಎಂದು ಎಲ್ಲರ ಮನದಲ್ಲಿ ಆತಂಕ ಮೇಷ್ಟ್ರು ನನ್ನನ್ನು ಕರೆಸಿದರು. 'ಈಗಾಗಲೇ ಒಂದು ಗಂಟೆ ತಡವಾಗಿದೆ ಏನು ಮಾಡೋಣ' ಎಂದರು. 'ಏನಿಲ್ಲ ಸಾರ್, ಒಂದೆರಡು ಸೀನುಗಳನ್ನು ಕಡಿಮೆ ಮಾಡಿ, ಆದಿಶಕ್ತಿಯ ಪೂಜೆ ಶುರು ಮಾಡೋಣ' ಎಂದೆ. 'ಸರಿ, ಅದಕ್ಕೆ ರೆÀಡಿ ಮಾಡಿ' ಎಂದರು ಮೇಷ್ಟ್ರು.


      ಚಾಮುಂಡೇಶ್ವರಿ ದೇವಿಯ ವೇಷದಲ್ಲಿ ಸಿದ್ಧಗೊಂಡು ಕುಳಿತಿದ್ದ ದೊಡ್ಡಣ್ಣನವರನ್ನು ಸೈಜಿನ ಮುಂದೆ ಪರದೆಯ ಹಿಂದೆ ಕರೆದುಕೊಂಡು ಬಂದು ಅವರಿಗಾಗಿ ತಯಾರಿಸಿದ್ದ ಆಸನದ ಮೇಲೆ ಕೂರಿಸಿದವು. 'ಆ ಗೌಡ ಯಾಕಂಗಾಡಿದನಪಾ?' ಎಂದು ಆತಂಕದಿAದ ನನ್ನ ಕಡೆ ನೋಡಿದರು. 'ನಾಟಕ ಮುಗೀಲಿ, ಎಲ್ಲನೂ ಹೇಳೀನಿ, ನೀವು ಮಾತ್ರ ನಿಮಗೆ ಮೇಷ್ಟ್ರು ಏನು ಹೇಳಿಕೊಟ್ಟಿದ್ದಾರೋ ಅದನ್ನು ಮಾಡಿ' ಎಂದು ಹೇಳಿದೆ.


    ದೇವಿಯನ್ನು ಮಧ್ಯದಲ್ಲಿ ಕುಳ್ಳರಿಸಿ ಆ ಕಡೆ ಈ ಕಡೆ ವಿಷ್ಣು, ಈಶ್ವರ, ದೇವೇಂದ್ರ, ನಾರದರು, ಹೀಗೆ ದೇವತೆಗಳಂತೆ ವೇಷ ಧರಿಸಿದ್ದ ಇತರರನ್ನು ನಿಲ್ಲಿಸಿದೆವು. ದೇವಿಯ ಮುಂದೆ ಒಂದು ಬೆಂಚು, ಅದರ ಮೇಲೆ ಒಂದು ಬಿಳಿ ಬಟ್ಟೆ ಹಾಕಿ ಈಗಾಗಲೇ ಸಿದ್ಧ ಮಾಡಿಕೊಂಡಿದ್ದ ಹೂವು ಹಣ್ಣುಗಳಿಂದ ಕೂಡಿದ ತಟ್ಟೆಯನ್ನು ಅಣಿಗೊಳಿಸಲಾಯಿತು. ಊರಿನ ತಿಗಳ ಜನಾಂಗದವರು ದೇವಿಗಾಗಿಯೇ ತಯಾರಿಸಿದ್ದ ಕಾಕಡ ಹೂವಿನ ಆಳೆತ್ತರದ ಹೂವಿನ ಹಾರವನ್ನು ದೇವಿಯ ಕೊರಳಿಗೆ ಹಾಕಿ, ಊದುಬತ್ತಿ ಹಚ್ಚಿ, ಪರದೆ ಮೇಲೆಳೆಯಲು ಫಕ್ರುಗೆ ಹೇಳಿದೆ. ಮುಂದಿನ ಸಾಲುಗಳಲ್ಲಿ ಕುಳಿತಿದ್ದ ಪ್ರೇಕ್ಷಕರು ತಮ್ಮ ಬಹು ನಿರೀಕ್ಷಿತ ದೇವಿಯ ದರ್ಶನ ಹಾಗೂ ಅವಳ ಪೂಜಾ ಕ್ರಮಗಳಲ್ಲಿ ಭಾಗವಹಿಸುವ ಸಂತಸದಲ್ಲಿ ಕೈ ಮುಗಿದುಕೊಂಡು ಕುಳಿತಿದ್ದರು. ಪರದೆ ಮೇಲೆ ಸರಿಸಿ, ದೇವಿಯನ್ನು ಮೊದಲ ಸಲ ಪರಿಚಯಿಸಲು ದೇವತೆಗಳಿಂದ ಸಾಮೂಹಿಕ ಪ್ರಾರ್ಥನೆ ಆರಂಭ, ಪ್ರೇಕ್ಷಕರೆಲ್ಲ ಭಕ್ತರಾದರು. ಭಕ್ತಿಯಿಂದ ದೇವಿಗೆ ಕೈಮುಗಿಯುತ್ತಾ ಪ್ರಾರ್ಥನೆಯನ್ನು ಗುನುಗುತ್ತಿದ್ದರು. ತಿಪ್ಪನಹಳ್ಳಿ ಚೌಡೇಶ್ವರಿ ದೇವಸ್ಥಾನದ ಪೂಜಾರಿ ದೇವಿಯ ಪೂಜೆಯನ್ನು ಸಾಂಗವಾಗಿ ಮಾಡುತ್ತಾ ಚೌಡೇಶ್ವರಿ ಸ್ತೋತ್ರವನ್ನು ರಾಗವಾಗಿ ಹಾಡಿ ಎಲ್ಲರ ಮೇಲೆ ತೀರ್ಥವನ್ನು ಎರಚಿದರು. ಅಲ್ಲಿಂದ ಶುರುವಾಯ್ತು ಭಕ್ತರ ಕಾಟ. ಅದೆಲ್ಲಿಂದ ತಂದಿಟ್ಟು ಕೊಂಡಿದ್ದರೋ, ಹಣ್ಣುಕಾಯಿ, ಹೂವಿನ ತಟ್ಟೆ ಹಿಡಿದುಕೊಂಡು ನಾಟಕದ ರಂಗ ಮಂಟಪದ ಮುಂದೆ ಕುಳಿತಿದ್ದ ಹೆಂಗಸರೆಲ್ಲಾ ಬಂದು ಸಾಲಾಗಿ ನಮಗೂ ಪೂಜೆ ಮಾಡಿಸಿಕೊಡಿ ಎಂದು ಆಗ್ರಹ ಮಾಡಲು ಶುರು ಮಾಡಿದರು. ಕೆಳಗೆ ಕುಳಿತಿದ್ದ ಮೇಷ್ಟ್ರು ಬಂದು 'ಏನಮ್ಮ ಇದೆಲ್ಲಾ, ನೀವೆಲ್ಲ ಪೂಜೆ ಮುಗಿಸುವ ಹೊತ್ತಿಗೆ ಸೂರ್ಯ ಹುಟ್ಟುತ್ತಾನೆ. ನಾವು ನಾಟಕ ಮುಗಿಸೋದು ಯಾವಾಗ? ಬೇಡ ಹೋಗಿ' ಎಂದರೂ ಕೇಳದೆ, 'ಆಮ್ಮಂಗೆ ಪೂಜೆ ಮಾಡಿಯೇ ಸರಿ' ಎಂದು ಹಠಹಿಡಿದರು. ಮೇಷ್ಟ್ರು ನನ್ನ ಕಡೆ ನೋಡಿದರು. 'ಆಗಲಿ ಬಿಡಿ ಸಾರ್, ಪೂಜೆ ಆದ ಕೂಡಲೇ ರಕ್ತಬೀಜಾಸುರನ ವಧೆ ತೆಗೆದುಕೊಳ್ಳೋಣ, ಅಷ್ಟರೊಳಗೆ ಸೂರ್ಯೋದಯ ಆಗುತ್ತೆ ಎಂದೆ. 'ಒಳ್ಳೆ ಉಪಾಯ' ಎಂದು ಹೇಳಿ 'ಪೂಜೆಯನ್ನು ನಿಧಾನವಾಗಿ ಮಾಡಿಸು' ಎಂದರು ಮೇಷ್ಟ್ರು ಪೂಜೆ ಮುಗಿಯುವ ವೇಳೆಗೆ 5 ಗಂಟೆ ಆಗಿತ್ತು. ನಾಟಕ ಯಾರಿಗೂ ಬೇಕಾಗಿರಲಿಲ್ಲ. ಹೊರ ಊರುಗಳಿಂದ ಬಂದಿದ್ದ ಕೆಲವರು ಚಾಪೆ, ಕಂಬಳಿ ಒದರಿಕೊಂಡು ಹೊರಡಲು ಅಣಿಯಾಗುತ್ತಿದ್ದರು.


   ದಣಿವಾರಿಸಿಕೊಂಡು ಸರಾಗವಾಗಿ ಉಸಿರಾಡುತ್ತ ಇದ್ದ ಬುಡೇಗೌಡ್ರು ನನ್ನನ್ನು ಕರೆದು, 'ನಾಟಕ ಮುಗೀತಾ, ಆಗಲೇ ಜನ ಹೊರಡ್ತಾ ಇದ್ದಾರಂತೆ' ಎಂದರು. 'ಕೆಲವರು ಹೋಗ್ತಾ ಅವರೆ, ಪೂಜೆ ಆದ ಮೇಲೆ, ನೀವು ಸ್ಟೇಜಿಗೆ ಬರಬೇಕು. ಯಾರ ಮೇಲೂ ಗಲಾಟೆ ಮಾಡಬಾರದು. ದೇವಿ ಮತ್ತು ನಿಮ್ಮ ಮಧ್ಯೆ ಮಾತ್ರ ಸಂಭಾಷಣೆ, ಆನಂತರ ನಿಮ್ಮ ವಧೆ, ಅಂದರೆ ರಕ್ತ ಬೀಜಾಸುರನ ವಧೆ' ಎಂದೆ. 'ಒಳ್ಳೆದಾಯ್ತು, ಅಂಗೇ ಮಾಡು ಎಂದರು ಗೌಡರು ನಿರಾಳವಾಗಿ, ನಶೆ ಇಳಿದಂತಿತ್ತು. ಅಂತೂ ಇಂತು ರಕ್ತಬೀಜಾಸುರನ ಸಂಹಾರವಾಗಿ 'ದೇವತೆಗಳೆಲ್ಲಾ ದೇವಿಯನ್ನು ಸ್ತುತಿಸುವ ಹಾಡು ಹೇಳಿ ವೆಂಕಟರಮಣ ಗೋವಿಂದ, ಗೋವಿಂದಾ' ಹೇಳುವ ಹೊತ್ತಿಗೆ ಬೆಳ್ಳಂಬೆಳಗಾಗಿ ಮುಂದಿನ ಪ್ರೇಕ್ಷಕರು ಕುಳಿತಿದ್ದ ಜಾಗ ಖಾಲಿಯಾಗಿ ಭಣಗುಡುತ್ತಿತ್ತು.


50 ರೂ. ಕೈಗಡ 


ಮಧ್ಯಾಹ್ನ ಊಟವಾದ ಮೇಲೆ ಮೇಷ್ಟ್ರು ಈಶ್ವರನ ಪಾತ್ರ ಮಾಡಿದ್ದ ತಿಪ್ಪಣ್ಣ ಕಾಕ, ನಮ್ಮ ತಂದೆಯವರನ್ನು ಕಾಣಲು ಬಂದರು. ಪಕ್ಕದ ಮನೆಯಲ್ಲಿಯೇ ಇದ್ದ ದೇವೇಂದ್ರನ ಪಾತ್ರಧಾರಿ ಅಪ್ಪಯ್ಯ ಕಾಕನನ್ನು ಕರೆತಾ ಎಂದು ನಮ್ಮಪ್ಪ ನನಗೆ ಹೇಳಿದರು. ನಾನು ಹೋಗಿ ಮಲಗಿದ್ದ ಅವರನ್ನು ಏಳಿಸಿ ಮನೆಗೆ ಕರೆ ತಂದೆ. ಅಷ್ಟರಲ್ಲಿ ಸುತ್ತಮುತ್ತಲ ಮನೆಯವರೆಲ್ಲ ನಮ್ಮ ಮನೆಗೆ ಜಮಾಯಿಸಿ ಜಗಲಿ ಮೇಲೆ ಆಸೀನರಾಗಿದ್ದರು. 'ರಾತ್ರಿ ನಾಟಕದಾಗೆ ಅಪ್ಪಯ್ಯನ ಮೇಲೆ ಹಲ್ಲೆ ಮಾಡಿ ಗೌಡನು ಎಳೆದಾಡಿದ್ದು ಸರಿ ಇಲ್ಲ. ಚೌಡಮ್ಮನ ದಯೆಯಿಂದ ಅವನಿಗೆ ಯಾವ ಗಾಯವೂ ಆಗಿಲ್ಲ. ಗಲಾಟೆಯಾಗಿ ನಾಟಕ ನಿಂತು ಹೋದರೆ ನಮ್ಮ ಊರಿಗೆ ಕೆಟ್ಟ ಹೆಸರು ಬರುತ್ತೇ ಅನ್ನೋ ಒಂದೇ ಕಾರಣಕ್ಕೆ ನನ್ನ ಹಲ್ಲು ಕಚ್ಚಿಕೊಂಡು ಸುಮ್ಮೆ ಇದ್ದೆ. ಈಗೇಳಿ ಗೌಡನಿಗೆ ಹೆಂಗ್ ಬುದ್ಧಿಕಲಿಸಬೇಕು' ಎಂದು ತಂದೆಯವರು ನಾಟಕದ ಮೇಸ್ಟನ್ನು ಕೇಳಿದರು. ಗೌಡರು ಅಪ್ಪಯ್ಯ ಕಾಕನನ್ನು ಎಳೆಯೋವಾಗ 50 ರೂಪಾಯಿ ವಾಪಸ್ಸು ಕೇಳೀಯಾ' ಅಂತ ಜೋರಾಗಿ ಕಿರುಚುತ್ತಿದ್ದರು ಎಂದು ಮಧ್ಯೆ ಬಾಯಿ ಹಾಕಿ ನಾನು ಹೇಳಿದೆ. ಅದೇನಪ್ಪಾ ಅದು' ಅಂತಾ ನಮ್ಮಪ್ಪ ಕಾಕನನ್ನು ಕೇಳಿದಾಗ ಅವರು 'ಒಂದು ವರ್ಷದಿಂದ ಈ ಗೌಡ ನನ್ನತ್ರ ನಾಳೆ ಕೊಡ್ತೀನಿ, ಅರ್ಜೆಂಟಾಗಿ ಐವತ್ತು ರೂಪಾಯಿ ಕೈಗಡ ಕೊಡು ಎಂದು ಕೇಳಿದ, ನಾಳೆ ಹೆಂಗೂ ಕೊಡ್ತಾನೆ ಎನ್ನುವ ಧೈರ್ಯದ ಮೇಲೆ ನಾನು ಅದನ್ನು ಕೊಟ್ಟಿದ್ದೆ. ನಾಳೆ ಹೋಗಿ ಕೇಳಿದೆ, ಅವನ ಮನೆ ಮುಂದೆ 'ನಾಳೆ ಬಾ' ಅಂತ ಯಾವುದೋ ಕೂಗು ಮಾರಿಗೆ ಬರೆದಿದ್ದನ್ನು ನನಗೆ ತೋರಿಸಿ ನಾಳೆ ಬಾ ಅಂದ. ಹಿಂಗೆ ಪ್ರತಿ ಸಲ ನಾನು ದುಡ್ಡು ಕೇಳಿದಾಗಲೂ ಹಿಂಗೇ ಹೇಳಿದ್ದು, ನಾಟಕ ಇನ್ನೊಂದು ವಾರ ಇದ್ದಾಗ ಇವತ್ತು ಖಂಡಿತಾ ನಿನ್ನನ್ನು ಬಿಡೋದಿಲ್ಲ. ನನ್ನ ಐವತ್ತು ರೂಪಾಯಿ ಕೊಡು ಇಲ್ಲಂದ್ರೆ ದೇವರ ಮುಂದೆ ಪಂಚಾಯ್ತಿ ಕಲೆ ಹಾಕುಸ್ತೀನಿ ಎಂದು ಹೇಳಿದ್ದೆ, ಆ ಸಿಟ್ಟನ್ನು ನಾಟಕದಲ್ಲಿ ನನ್ನ ಮೇಲೆ ತೀರಿಸಿಕೊಂಡ" ಅಂದರು ಅಪ್ಪಯ್ಯ, 'ಆದಷ್ಟೇ ಅಲ್ಲ ಆ ಗೌಡ ರಾತ್ರಿ ಒಂದು ದೊಡ್ಡ ಬುಂಡೇ ಈಚಲ ಮರದ ಹೆಂಡ ತರಿಸಿ, ನಾಟಕದ ಸ್ಟೇಜಿಗೆ ಬರೋಕೆ ಮುಂಚೆ ಗಡದ್ದಾಗಿ ಕುಡಿದು ತೂರಾಡಿಕೊಂಡು ತಮಟೆ ಬಾರಿಸಿಕೊಂಡು ಸ್ನೇಜಿಗೆ ಬಂದ. ನನಗೆ ಆಗ್ಲೆ ಅನಿಸಿತ್ತು, ಏನೋ ಅನಾಹುತ ಆಗುತ್ತೆ ಅಂತ' ಎಂದು ಗುಂಪಿನಲ್ಲಿದ್ದ ಇನ್ನೊಬ್ಬರು ಹೇಳಿದರು. 'ಅಪ್ಪಯ್ಯ, ನೀನೇನು ಹೇಳೀಯ' ಎಂದು ನಮ್ಮ ತಂದೆಯವರು ಕೇಳಿದಾಗ 'ಗೌಡನನ್ನು ಪಂಚಾಯ್ತಿ ಕಟ್ಟೆಗೆ ಕರೆಸಿ ಛೀಮಾರಿ ಹಾಕಬೇಕು, ನನ್ನ 50 ರೂಪಾಯಿನ ಬಡ್ಡಿ ಸಮೇತ ನನಗೆ ವಾಪಸ್ಸು ಕೊಡಿಸಬೇಕು' ಎಂದರು.


       ಅದರಂತೆ ಸಂಜೆ ಶಾನುಭೋಗರ ಮನೆ ಹಜಾರದಲ್ಲಿ ಊರಿನ ಜನರೆಲ್ಲಾ ಸೇರಿದರು, ಬರಲು ಹೇಳಿ ಕಳುಹಿಸಿದರೂ ಬುಡೇಗೌಡರು ಸಭೆಗೆ ಬರಲಿಲ್ಲ. ಅವರಿಗೆ ಮೈಕೈ ನೋವಾಗಿ ಜ್ವರ ಬಂದು ಮಲಗಿದ್ದಾರೆ, ನೀವೆಲ್ಲಾ ಏನು ಶಿಕ್ಷೆ ಕೊಡ್ತೀರೋ ಅದನ್ನು ಒಪ್ಪೋತ್ತಾರೆ' ಎಂದು ಅವರ ಹಿರಿಯ ಮಗ ಸಭೆಯಲ್ಲಿ ತಿಳಿಸಿದ. ಜತೆಗೆ ಜೇಬಿನಿಂದ 50 ರೂಪಾಯಿ ತೆಗೆದು ಶಾನುಭೋಗರ ಮುಂದಿಟ್ಟು, ಇದನ್ನು ಅಪ್ಪಯ್ಯನವರಿಗೆ ಕೊಡಬೇಕಂತೆ ಎಂದು ಹೇಳಿ ತಿರುಗಿ ನೋಡದೆ ಅಲ್ಲಿಂದ ಹೊರಟು ಹೋದ. 'ಇನ್ನೇನು ಮಾಡೋದಪ್ಪಾ ಊರಿನ ಗೌಡ, ಏನೋ ತಪ್ಪು ಮಾಡಿದ್ದಾರೆ. ಆದದ್ದನ್ನೆಲ್ಲಾ ಮರೆತು ಬಿಡಿ' ಎಂದರು ಶಾನುಭೋಗ ಶಾಮಣ್ಣನವರು, ಅದಕ್ಕೆ ಹಿರಿಯರೆಲ್ಲ ತಲೆ ಅಲ್ಲಾಡಿಸಿದರು. ನಂತರ ಶಾನುಭೋಗರು ಅಪ್ಪಯ್ಯ ಕಾಕನವರನ್ನು ಕರೆದು 'ಅಪ್ಪಯ್ಯ ನಿನ್ನ ದುಡ್ಡು ವಾಪಸ್ಸು ಬಂದಿದೆ. ತೆಗೆದುಕೋ' ಎಂದರು. ಅಪ್ಪಯ್ಯನವರು ಹೋಗಿ ಅದನ್ನು ಶಾನುಭೋಗರಿಂದ ತೆಗೆದುಕೊಂಡರು. 'ಸಭೆ ಮುಗೀತು, ಎಲ್ಲರೂ ಹೊರಡಿ, ಇಂಥ ಸಣ್ಣಪುಟ್ಟ ವಿಷಯಗಳಿಗೆಲ್ಲಾ ಕಿತ್ತಾಡಿ ಊರಿನ ಮರ್ಯಾದೆ ಕಳೀಬೇಡಿ' ಎಂದು ಶಾನುಭೋಗರು ಹಿತವಚನ ಹೇಳಿದರು.


(ಮುಂದಿನ ‘ಕಿನ್ನರಿ’ಗೆ)