ನಮ್ಮ ಪರಿಸರ ಸೋಮಶೇಖರ ಬಿ.ಎಸ್. ಹಳಹಳಿಕೆಯನ್ನುಳಿಸಿದ ಕಾಡುಹಣ್ಣು - ಕವಳೆ
ನಮ್ಮ ಪರಿಸರ ಸೋಮಶೇಖರ ಬಿ.ಎಸ್. ಹಳಹಳಿಕೆಯನ್ನುಳಿಸಿದ ಕಾಡುಹಣ್ಣು - ಕವಳೆ, bs-somashekhar-kavale-hannu-namma-parisara
ಐಸ್‌ಕ್ರೀಮ್ ಸ್ಕೂಪ್ ಮೇಲೆ ಇಟ್ಟಿದ್ದ ಗೋಲಿ ಗಾತ್ರದಕಡುಗೆಂಪು ಬಣ್ಣದಚರ‍್ರಿಹಣ್ಣುನೆನಪಿದೆಯೇ, ಆದರೆಅದು ನಿಜವಾದಚರ‍್ರಿಅಲ್ಲ, ಬದಲಿಗೆ ಸಕ್ಕರೆ ಪಾಕದಲ್ಲಿ ಕುದಿಸಿಟ್ಟ ಕೆಂಪು ಬಣ್ಣಗಟ್ಟಿಸಿದ ಕವಳೆ ಹಣ್ಣುಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹೋಗಲಿ ಬಿಡಿ, ಇಂಥಐಸ್‌ಕ್ರೀAತಿAದಿಲ್ಲ ಎನ್ನುವುದಾದರೆ ಕಳೆದ ಸಾರಿಇಷ್ಟಪಟ್ಟುತಂದ ಬೆರಕೆಉಪ್ಪಿನಕಾಯಿ ಬಾಟಲ್‌ನಲ್ಲಿ ಸಿಕ್ಕಿದ್ದ ಸಣ್ಣಉಂಡೆಚೂರನ್ನುಖAಡಿತಾ ಸವಿದಿರುತ್ತೀರಿ. ಅದು ಕವಳೆಕಾಯಿಯೇ. ಅದನ್ನೂತಿಂದಿಲ್ಲ ಎನ್ನುವುದಾದರೆ ಬಿಡಿ, ಬೆಳಗಿನ ವಾಕಿಂಗ್ ಮುಗಿಸಿ ಬರುವಾಗಜ್ಯೂಸ್‌ಅಂಗಡಿಯಾತ “ಪಿತ್ತಕ್ಕೆರಾಮಬಾಣ” ಎಂದು ಹೇಳಿ ನಿಮಗೆ ಕುಡಿಸಿದ್ದ ಷರಬತ್‌ನಲ್ಲಿ ಕವಳೆ ಹಣ್ಣಿನರಸಇದ್ದೀತು. ಅದೂಇಲ್ಲವೇ, ನೀವು ತಿಂದಿರಬಹುದಾದ ಬೇರೆಬೇರೆ ಬೇಕರಿ ತಿಂಡಿಗಳ ಪೈಕಿ ಒಂದರಲ್ಲಾದರೂಇದುಇದ್ದೀತು. ಹೀಗಾಗಿ, ಇನ್ನಿತರಜನಪ್ರಿಯ ಹಣ್ಣುಗಳ ತಾಜಾರೂಪದಲ್ಲಿ ಕವಳೆಹಣ್ಣು
ನಮ್ಮ ಪರಿಸರ
ಸೋಮಶೇಖರ ಬಿ.ಎಸ್.
ಹಳಹಳಿಕೆಯನ್ನುಳಿಸಿದ ಕಾಡುಹಣ್ಣು - ಕವಳೆ
“ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು,
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?"
ಕನ್ನಡದ ವರಕವಿ ಎಂದೇ ಪ್ರಸಿದ್ಧರಾದ ದ. ರಾ. ಬೇಂದ್ರೆಅವರ ಒಂದುಜನಪ್ರಿಯ ಕವನ ಎನಿಸಿಕೊಂಡ, “ನೀ ಹೀಂಗ ನೋಡಬ್ಯಾಡ ನನ್ನ” ಕವನದ ಒಂದು ಸಾಲು ಇದು. ವಾಸ್ತವವಾಗಿ ಇದು ಶೋಕಗೀತೆ, ಆದರೆಅದರಲ್ಲಿನಭಾವೋತ್ಕಟತೆಯ ಅಂಶಗಳು ಅದನ್ನೊಂದುಉತ್ಕೃಷ್ಟ ಭಾವಗೀತೆಯನ್ನಾಗಿಸಿವೆ. ದ. ರಾ. ಬೇಂದ್ರೆಅವರ ವೈಯಕ್ತಿಕ ಬದುಕಿನ ಒಂದು ಆಘಾತಕಾರಿ ಘಟನೆಯೇ ಇದರ ರಚನೆಗೆ ಪ್ರೇರಣೆ ಎಂಬ ಹಿನ್ನೆಲೆಯೂಇದಕ್ಕಿದೆ. “ಚಿಕ್ಕವಯಸ್ಸಿನ ತಮ್ಮಿಬ್ಬರು ಮಕ್ಕಳು ಒಂದೇ ವಾರದಅವಧಿಯಲ್ಲಿ ಸಾವಿಗೀಡಾದ್ದರಿಂದ ಶೋಕತಪ್ತಳಾದ ತಮ್ಮ ಪತ್ನಿಯ ಮೂಕವೇದನೆ ಹಾಗೂ ಕಳೆಗುಂದಿದ ಮುಖಚಹರೆಯಿಂದ ಬಾಧಿತರಾಗಿ, ಅವರನ್ನು ಸಂತೈಸಲು ಬೇಂದ್ರೆಯವರು ರಚಿಸಿದ ಕವನವಿದು; ಅತೀವದುಃಖದಿಂದಕುಗ್ಗಿಹೋಗಿದ್ದರೂಅದ್ಭುತವಾದಕವನವನ್ನು ಬೇಂದ್ರೆಯವರು ನೀಡಿರುವುದುಇದರ ಹೆಗ್ಗಳಿಕೆ”- ಎಂಬ ವಿಮರ್ಶೆಯೂಇದಕ್ಕೆ ಸಂದಿದೆ.
ಅದು ನಿಜ, ಆದರೆ ತಮ್ಮನ್ನು ಆವರಿಸಿದ್ದ ಅತೀವ ದುಃಖದ ಸನ್ನಿವೇಶದಲ್ಲೂ ಕೂಡ ಬೇಂದ್ರೆಯವರಿಗೆ ತಮ್ಮ ಪತ್ನಿಯ ಕಣ್ಣುಗಳ ಹೊಳಪನ್ನು ನೆನಪಿಸಿದ್ದು, “ಹೊಳೆ ಹೊಳೆವ ಕವಳಿ ಕಂಟಿಯಾ ಹಣ್ಣು”. ಹೊಳೆಹೊಳೆವ ಕವಳೆ ಹಣ್ಣುಗಳ ಹಾಗಿದ್ದ ಕಣ್ಣುಗಳು ಮಂಕಾಗಿರುವುದುತರವಲ್ಲ ಎಂಬುದು ಇದರಲ್ಲಿರುವ ಭಾವ. ಇಂಥ ಸಾಹಿತ್ಯಿಕ ದೃಷ್ಟಿಯಿಂದಾಚೆಗೆ ನೋಡಿದರೆ, ಬೇಂದ್ರೆಯವರ ಈ ಕವನದಲ್ಲಿ ಮತ್ತೊಂದು ವಿಶಿಷ್ಟ ಅಂಶವು ಬೆರೆತಿರುವುದು ಕಾಣುತ್ತದೆ. ಕವನದ ಈ ಸಾಲು ಅಪ್ರಯತ್ನವಾಗಿ, ಕವಳೆ ಹಣ್ಣಿನ ಒಂದು ಪ್ರಮುಖ ಚಹರೆಗುರುತನ್ನೂ ಲಕ್ಷಣವನ್ನೂ ಇಲ್ಲಿ ಶಾಶ್ವತವಾಗಿ ದಾಖಲಿಸಲು ಯಶಸ್ವಿಯಾಗಿದೆ-ಎಂಬುದು ಈ ವಿಶೇಷ ಅಂಶ.
ಇದು ಅಕ್ಷರಶಃ ನಿಜ. ಯಾಕೆಂದರೆ, ಮಾಗಿದ ಕಡುಗಪ್ಪು ಬಣ್ಣದ ಹೊಳಪಾದ ಕವಳೆ ಹಣ್ಣುಗಳು ನೋಡಲು ಹೊಳಪಾದ ಬಟ್ಟಲುಗಣ್ಣುಗಳ ಹಾಗೆಯೇಕಾಣುತ್ತವೆ. ಅಷ್ಟೇಅಲ್ಲ, ಇಬ್ಬನಿಯಲ್ಲಿ ಮಿಂದೆದ್ದರೂಕೂಡ ಹಣ್ಣಿನತೊಟ್ಟಿನಿಂದ ಜಿನುಗಿದ ಹಾಲು, ಕೆನೆಗಟ್ಟಿ ಹಣ್ಣಿನ ಮೇಲ್ಮೈಗೆ ಮೆತ್ತಿಕೊಂಡಿರುತ್ತದೆ ಎಂಬುದು ಕವಳೆ ಹಣ್ಣಿನಒಂದು ಪ್ರಮುಖ ಲಕ್ಷಣ. ಆಸಕ್ತಿದಾಯಕ ಸಂಗತಿಯೆಂದರೆ ಬೇಂದ್ರೆಯವರ ಈ ಸಾಲು ಒಂದುರೂಪಕದ ಹಾಗೆ ತೋರಿದರೂಕೂಡ, ಅದರಲ್ಲಿಅಪ್ರಯತ್ನವಾಗಿ ಕವಳೆಹಣ್ಣಿನ ಈ ಎರಡೂ ಲಕ್ಷಣಗಳು ದಾಖಲಾಗಿವೆ. ಹೀಗಾಗಿ ಕವಳೆಯನ್ನು ಪರಿಚಯಿಸುವ ಈ ಸಂದರ್ಭದಲ್ಲಿ, ಬೇಂದ್ರೆಅವರ ಈ ಕವನದ ಸಾಲು- ಮೂಲತಃರೂಪಕವೇಆದರೂ- ಕವಳೆ ಹಣ್ಣನ್ನು ನಮ್ಮಕಣ್ಮುಂದೆ ಸಾಕಾರಗೊಳಿಸುವ ವಿಶೇಷ ಮಾದರಿಯ ಹಾಗೆ ತೋರುತ್ತದೆ.
ಇದು ಕವಳೆ, “ಹೆಸರು ತಿಳಿದಿದೆ ಆದರೆ, ಹಣ್ಣನ್ನು ನೋಡಿಲ್ಲ”ಎಂದೋ, ಅಥವಾ“ಎಲ್ಲೋ ಕೇಳಿದ್ದುಂಟು ಆದರೆತಿಂದ ಹಾಗೆ ನೆನಪಿಲ್ಲ” ಎಂಬ ಹಳಹಳಿಕೆಯನ್ನು ಉಳಿಸುವ ಹಾಗಿರುವಕಾಡು ಹಣ್ಣು. ಮಾತಿನಲ್ಲಿ ಕೇಳಿರುವ, ಆದರೆಅಷ್ಟೇನೂಕಂಡಿಲ್ಲದಿರುವ, ಇಂದಿನ ತಲೆಮಾರಿನವರಗ್ರಹಿಕೆಯ ವ್ಯಾಪ್ತಿಗೆಅಷ್ಟೇನೂ ಬಾರದ ನಮ್ಮದೇ ನಾಡಿನಒಂದುಕಾಡುಹಣ್ಣು.
ಹಾಗೆ ನೋಡಿದರೆ ಈ ಗ್ರಹಿಕೆ ಸಂಪೂರ್ಣ ನಿಜವಲ್ಲ, ಯಾಕೆಂದರೆ, ಕವಳೆಯನ್ನು ನೇರವಾಗಿಕಾಡುಹಣ್ಣಿನರೂಪದಲ್ಲಿತಿನ್ನದಿದ್ದರೇನಾಯ್ತು? ಅದನ್ನು ಸವಿದಿಲ್ಲದಿರುವ ಸಾಧ್ಯತೆ ಮಾತ್ರಕಡಿಮೆ. ಅದು ಹೇಗಂತೀರೋ? ಕವಳೆ ಹಣ್ಣಿನ ಹಲವು ರೂಪಾಂತರಗಳು ಆಧುನಿಕ ಬದುಕಿನ ನಡುವೆಒಮ್ಮೆಯಾದರೂ ನಮಗೆ ಸಿಕ್ಕಿರುತ್ತವೆ- ಐಸ್‌ಕ್ರೀಮ್ ಸ್ಕೂಪ್ ಮೇಲೆ ಇಟ್ಟಿದ್ದ ಗೋಲಿ ಗಾತ್ರದಕಡುಗೆಂಪು ಬಣ್ಣದಚರ‍್ರಿಹಣ್ಣುನೆನಪಿದೆಯೇ, ಆದರೆಅದು ನಿಜವಾದಚರ‍್ರಿಅಲ್ಲ, ಬದಲಿಗೆ ಸಕ್ಕರೆ ಪಾಕದಲ್ಲಿ ಕುದಿಸಿಟ್ಟ ಕೆಂಪು ಬಣ್ಣಗಟ್ಟಿಸಿದ ಕವಳೆ ಹಣ್ಣುಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹೋಗಲಿ ಬಿಡಿ, ಇಂಥಐಸ್‌ಕ್ರೀAತಿAದಿಲ್ಲ ಎನ್ನುವುದಾದರೆ ಕಳೆದ ಸಾರಿಇಷ್ಟಪಟ್ಟುತಂದ ಬೆರಕೆಉಪ್ಪಿನಕಾಯಿ ಬಾಟಲ್‌ನಲ್ಲಿ ಸಿಕ್ಕಿದ್ದ ಸಣ್ಣಉಂಡೆಚೂರನ್ನುಖAಡಿತಾ ಸವಿದಿರುತ್ತೀರಿ. ಅದು ಕವಳೆಕಾಯಿಯೇ. ಅದನ್ನೂತಿಂದಿಲ್ಲ ಎನ್ನುವುದಾದರೆ ಬಿಡಿ, ಬೆಳಗಿನ ವಾಕಿಂಗ್ ಮುಗಿಸಿ ಬರುವಾಗಜ್ಯೂಸ್‌ಅಂಗಡಿಯಾತ “ಪಿತ್ತಕ್ಕೆರಾಮಬಾಣ” ಎಂದು ಹೇಳಿ ನಿಮಗೆ ಕುಡಿಸಿದ್ದ ಷರಬತ್‌ನಲ್ಲಿ ಕವಳೆ ಹಣ್ಣಿನರಸಇದ್ದೀತು. ಅದೂಇಲ್ಲವೇ, ನೀವು ತಿಂದಿರಬಹುದಾದ ಬೇರೆಬೇರೆ ಬೇಕರಿ ತಿಂಡಿಗಳ ಪೈಕಿ ಒಂದರಲ್ಲಾದರೂಇದುಇದ್ದೀತು. ಹೀಗಾಗಿ, ಇನ್ನಿತರಜನಪ್ರಿಯ ಹಣ್ಣುಗಳ ತಾಜಾರೂಪದಲ್ಲಿ ಕವಳೆಹಣ್ಣು ನಮ್ಮ ಬಳಕೆಗೆ ಬಾರದಿದ್ದರೂಅದರ ವಿವಿಧ ರೂಪಾಂತರಗಳ ಮೂಲಕ ನಮಗೆ ಸ್ವಲ್ಪವಾದರೂ ಪರಿಚಿತವಾಗಿರುತ್ತದೆ.
ನೀವು ಉತ್ತರಕರ್ನಾಟಕದವರಾದರೆ, ಇಷ್ಟೆಲ್ಲ ಪೀಠಿಕೆಯಅಗತ್ಯವೇಇಲ್ಲ. ಯಾಕೆಂದರೆಅಲ್ಲಿನವರ ಪಾಲಿಗೆ ಕವಳೆ ಕಂಟಿಎAಬುದುಅಕ್ಷರಶಃ ನೆರೆಹೊರೆಯ ಪರಿಚಿತ ಸಸ್ಯ. ಅಲ್ಲಿನಉದುರೆಲೆ ಕಾಡುಗಳಲ್ಲೂ, ಊರಾಚೆಗಿನಕುರುಚಲುಗುಡ್ಡದಲ್ಲೂ, ಕೃಷಿ ಜಮೀನಿನಂಚಿನ ಮುಳ್ಳು ಕಂಟಿ ಬಯಲಿನಲ್ಲೂ ಕವಳೆ ಕಂಟಿಗಳು ಸಾಮಾನ್ಯ. ಅದರಲ್ಲೂಇಲ್ಲಿಯ ಹಾನಗಲ್, ಹಾವೇರಿ, ಆನವಟ್ಟಿ, ಗದಗ, ಗಜೇಂದ್ರಗಡ, ಕುಷ್ಟಗಿ, ಬಳ್ಳಾರಿ ಪ್ರಾಂತದಲ್ಲಿ ವ್ಯಾಪಿಸಿರುವ ಅಂತರಘಟ್ಟ ವಲಯದ ವನ್ಯ ನೆಲೆಗಳಲ್ಲಿ ಕವಳೆ ಗಿಡಗಳು ಧಾರಾಳವಾಗಿವೆ. ಬೇಸಿಗೆಯ ದಿನಗಳಲ್ಲಿ ಈ ಪ್ರಾಂತದಎಷ್ಟೋಗ್ರಾಮೀಣ ಮಹಿಳೆಯರು ಸಣ್ಣ ಬಿದಿರುಬುಟ್ಟಿಗಳನ್ನು ತಲೆಯ ಹೊತ್ತುಕೊಂಡುಊರಿನ ಮನೆಗಳ ಮುಂದೆ ಬಂದು “ಕೌಳಿ ಹಣ್ಣು” ಎಂದುರಾಗವಾಗಿಕೂಗುತ್ತಾ ಕವಳೆ ಹಣ್ಣುಗಳನ್ನು ಬಿಕರಿ ಮಾಡುವುದು ಸಾಮಾನ್ಯದೃಶ್ಯ. ಹೀಗಾಗಿ ಉತ್ತರಕರ್ನಾಟಕದವರ ಮಟ್ಟಿಗೆ ಕವಳೆ ಎಂಬುದು ಪರಿಚಿತ ಸಸ್ಯ.
ಅದು ಹಾಗಿರಲಿ, ಈಗ ಕವಳೆಯನ್ನು ಸರಿಯಾಗಿ ಪರಿಚಯಿಸಿಕೊಳ್ಳೋಣ. ಕವಳೆಯ ಪ್ರವರಅಚ್ಚರಿ ಮೂಡಿಸುವಷ್ಟು ಪ್ರಖರವಾದದ್ದು. ಕಣಿಗಲೆ ಹೂವಿನ ಕುಟುಂಬ ಎನಿಸಿಕೊಳ್ಳುವ ಅಪೋಸಯನೇಸೀ ಕುಟುಂಬಕ್ಕೆ ಸೇರಿದೆಇದು. ಇಡೀಕುಟುಂಬವೇ ಒಂದರ್ಥಧಲ್ಲಿಧನ್ವAತರಿಕುಟುAಬ, ಯಾಕೆಂದರೆಇದರಲ್ಲಿರುವ ಬಹುತೇಕಎಲ್ಲ ಸಸ್ಯಗಳೂ ಅದ್ಭುತ ಔಷಧಿಸಸ್ಯಗಳು ಎಂದು ಹೆಸರುವಾಸಿಯಾದವು. ಕಣಿಗಲೆ, ದೇವಕಣಿಗಲೆ, ಕಾಶಿ ಕಣಿಗಲೆ, ನಂಜುಬಟ್ಟಲು, ಸರ್ಪಗಂಧ, ಹಾಲೆ, ಜೀವಾಲೆ, ಕೊಡಸಗ, ಮಧುನಾಶಿನಿ, ಸಪ್ತಪರ್ಣಿ… ಹೀಗೆ ಸಾಲುಸಾಲು ಔಷಧಿಸಸ್ಯಗಳಿವೆ ಇದರಲ್ಲಿ. ಇಂತಹಕುಟುAಬದಿAದ ಬಂದ ಮೇಲೆ ಕವಳೆಯೇನು ಕಮ್ಮಿ? ಇದಕ್ಕೂ ಸಾಕಷ್ಟುಔಷಧೀಯ ಗುಣಗಳಿವೆ. ಕವಳೆಯ ಶಾಸ್ತ್ರೀಯ ಹೆಸರು, ಕ್ಯಾರಿಸ್ಸಾಕರಂಡಾಸ್. ಇಂಗ್ಲಿಷ್‌ನಲ್ಲಿ ಕ್ರೈಸ್ಟ್ಸ್ಥಾರ್ನ್, ಸಂಸ್ಕೃತದಲ್ಲಿಕೃಷ್ಣಫಲ ಎಂಬ ಹೆಸರುಗಳು, ಒಂದರ್ಥದಲ್ಲಿಇವೆರಡೂಇದರಇಅನ್ವರ್ಥಕ ರೂಪವಾಚಕಗಳು. ಹಿಂದಿಯಲ್ಲಿಕರೊAಡಾ.
ಹೆಸರೇ ಹೇಳುವ ಹಾಗೆ, ಕವಳೆ ಮಧ್ಯಮಗಾತ್ರದ ಮುಳ್ಳುಕಂಟಿ ಪೊದರು. ಅಂಕುಡೊAಕಾದ ನಿಲುವು, ರೆಟ್ಟೆಗಾತ್ರದಗಡಸುಕಾಂಡ. ಎಲ್ಲ ದಿಕ್ಕಿನಲ್ಲೂ ಬೆಳೆದು ಜೋತುಬಿದ್ದ ನೀಳ ಕೊಂಬೆಗಳು. ಅದರ ಮೇಲೆ ನಾಲ್ಕೈದು ಗೆಣ್ಣುಗಳಿರುವ ಸಣ್ಣಸಣ್ಣ ಕವಲುಗಳು ಕಾಣುತ್ತವೆ, ಗೆಣ್ಣುಗಳಲ್ಲಿ ಚಮಚೆಯ ನಾಲಿಗೆಯಂತಹ ಹೊಳೆಯುವ ಹಸಿರು ಎಲೆಗಳು. ಎಲೆಯನ್ನುಕಿತ್ತರೆ, ಅಥವಾ ಹಸಿರು ಕೊಂಬೆಗೆ ಗಾಯವಾದರೆ, ಅಲ್ಲಿಂದ ಬಿಳಿ ಅಂಟುಹಾಲುಜಿನುಗುತ್ತದೆ. ಇಡೀಗಿಡವನ್ನು ಸ್ವಲ್ಪದೂರದಿಂದ ನೋಡಿದರೆ, ಸೂಜಿಮಲ್ಲಿಗೆಯ ಬಳ್ಳಿ ಇರಬಹುದೇನೋ ಎನಿಸುವಂತಹರೂಪ. ಆದರೆ ಕೊಂಬೆಗಳಲ್ಲಿನ ಒಂದಿAಚು ಉದ್ದದಗಡುಸಾದ ಮುಳ್ಳುಗಳು, ಇದು ಮಲ್ಲಿಗೆಬಳ್ಳಿಯಲ್ಲ ಎಂದುದೃಢಪಡಿಸುತ್ತವೆ.
ಚೆನ್ನಾಗಿ ಬೆಳೆದ ಕವಳೆ ಕಂಟಿಯ ಕವಲುಗಳ ತುದಿಯಲ್ಲಿ ಹೂಗಳು ಜನವರಿ ತಿಂಗಳಿನಲ್ಲಿ ಕಾಣಿಸುತ್ತವೆ. ಮಲ್ಲಿಗೆ ಹೂವಿನ ತದ್ರೂಪದ ಅಚ್ಚ ಬಿಳುಪು ಬಣ್ಣ. ಹೂಗಳು ಒಣಗಿದ ಮೇಲೆ ಮಣಿಯಂತಹ ಸಣ್ಣ ಕಾಯಿ ಗೋಚರಿಸುತ್ತದೆ. ಮಾರ್ಚ್-ಏಪ್ರಿಲ್ ಮುಗಿಯುವ ಹೊತ್ತಿಗೆ ಈ ಮಣಿಯಂಥ ಕಾಯಿಗಳು ಗೋಲಿ ಗಾತ್ರಕ್ಕೆ ಬೆಳೆದಿರುತ್ತವೆ. ಹಸಿರು ಕಾಯಿಗಳು ಬಲಿತಾಗ ನಸುಗೆಂಪು ಬಣ್ಣ ತಾಳಿ, ಮಾಗಿದಂತೆ, ಕಡುಗಪ್ಪು ಬಣ್ಣಕ್ಕೆತಿರುಗುತ್ತವೆ.
ಎಳೆಯ ಕಾಯಿಯನ್ನುಕಿತ್ತರೆ ಸಮೃದ್ಧವಾದ ಬಿಳಿ ಅಂಟುಹಾಲು ಸುರಿದುಅಲ್ಲೇಕೆನೆಗಟ್ಟುತ್ತದೆ. ಕಾಯಿಗಳು ಮಾಗಿದಂತೆ, ಹಾಲಿನ ಸ್ರಾವಕಡಿಮೆಯಾಗುತ್ತದೆ. ಆದರೆ ಮಾಗಿದ ಹಣ್ಣನ್ನುಕಿತ್ತಾಗಲೂತುಸುವೇ ಹಾಲು ಜಿನುಗಿಒಣಗಿಹಣ್ಣಿನ ಮೇಲೆ ಮೆತ್ತಿಕೊಂಡಿರುತ್ತದೆ. ಇದು ಕವಳೆಯ ಪ್ರಮುಖ ಲಕ್ಷಣಗಳ ಪೈಕಿ ಒಂದು. ಮಾಗಿದಕಡುಗಪ್ಪು ಹಣ್ಣುಗಳು ಹೊಳೆಯುವ ಬಟ್ಟಲುಗಣ್ಣುಗಳ ಹಾಗೆ ಕಾಣುತ್ತವೆ. ಇಬ್ಬನಿಯಲ್ಲಿ ತೊಳೆದರೂ ಕೂಡ, ಅಂಟುಹಾಲು ಮೆತ್ತಿಕೊಂಡ ಹೊಳೆಯುವ ಕಡುಗಪ್ಪು ಹಣ್ಣುಗಳು, ಬೇಂದ್ರೆಯವರ ಕವಿಹೃದಯವನ್ನುತಟ್ಟಿದ್ದು ಹೀಗೆ.
ಮಾಗಿದ ಹಣ್ಣು ಸಿಹಿ ಮತ್ತು ಹುಳಿ ಎರಡರ ಸಂಗಮ. ಅದರಒಟ್ಟುಗುಣಮಟ್ಟ ನಿರ್ಧಾರವಾಗುವುದು, ಹಣ್ಣಿನಗಾತ್ರ, ರುಚಿ ಮತ್ತು ಸ್ರವಿಸುವ ಹಾಲಿನ ಪ್ರಮಾಣದಿಂದ. ಹೆಚ್ಚು ಹುಳಿ ಅಂಶ, ಗೋಲಿಗಾತ್ರ, ಹೆಚ್ಚು ಹಾಲಿರುವ ಕವಳೆ ಹಣ್ಣುಗಳು ಉಪ್ಪಿನಕಾಯಿಯ ಬಳಕೆಗೆ ಪ್ರಶಸ್ತವಾದವು; ಹೆಚ್ಚಿನ ಸಿಹಿ ಅಂಶ, ಕಡಿಮೆ ಹಾಲು, ಹೆಚ್ಚುವರಿ ಬಣ್ಣವಿರುವ ಹಣ್ಣುಗಳು ಕ್ಯಾಂಡಿತಯಾರಿಕೆಗೂ, ಹೆಚ್ಚು ರಸಭರಿತ ಹಣ್ಣುಗಳು ಷರಬತ್‌ತಯಾರಿಕೆಗೂ ಸರಿಯಾದವು. ಉತ್ತರಕರ್ನಾಟಕದ ಪುಟ್ಟ ಊರುಗಳ ಸ್ಥಳೀಯ ಮಾರುಕಟ್ಟೆಯಲ್ಲಿ, ಕವಳೆಹಣ್ಣುಗಳನ್ನು ಇಂಥದೊAದು ನವಿರಾದ ಸೂತ್ರದಲ್ಲಿ ವಿಂಗಡಿಸುವುದನ್ನುಕಾಣಬಹುದು. ತಾಜಾ ಹಣ್ಣುಗಳು ಸಾಮಾನ್ಯವಾಗಿ, ಉಪ್ಪಿನಕಾಯಿ, ಗೊಜ್ಜುತಯಾರಿಕೆಗೂ, ಒಣಗಿಸಿಟ್ಟುಕೊಳ್ಳಲೂ ಮನೆಮಟ್ಟದಲ್ಲಿ ಬಳಕೆಯಾಗುವುದೇ ವಾಡಿಕೆ. ಹೆಚ್ಚುವರಿ ಹಣ್ಣುಗಳು ವಿವಿಧ ಗೃಹಕೈಗಾರಿಕೆಗಳಿಗೆ ಮುರಬ್ಬ, ಕ್ಯಾಂಡಿ ಮತ್ತುಷರಬತ್‌ತಯಾರಿಕೆಗೆ ಕಚ್ಚಾ ಸಾಮಗ್ರಿಯಾಗಿ ಬಿಕರಿಯಾಗುತ್ತವೆ.
“ಮರೆತುಹೋದಕಾಡು ಹಣ್ಣು, ಬಾಲ್ಯಕಾಲದ ನೆನಪಿನ ಒಂದು ಭಾಗ” ಎಂಬ ಭಾವನಾತ್ಮಕ ಹಿನ್ನೆಲೆಯನ್ನು ಬದಿಗಿರಿಸಿ ನೋಡಿದರೆ ಕವಳೆ ಅದ್ಭುತವಾದ ಔಷಧಗಳ ಖನಿ ಎಂಬುದುಕಾಣುತ್ತದೆ. ಹಣ್ಣಿನಲ್ಲಿಕಬ್ಬಿಣ, ವಿಟಮಿನ್-ಸಿ (ಆಸ್ಕಾರ್ಬಿಕ್‌ಆಮ್ಲ) ಮತ್ತು ಪೆಕ್ಟಿನ್ ಧಾರಾಳವಾಗಿದೆ. ಹೀಗಾಗಿ ತಂಪುಪಾನೀಯಗಳ ತಯಾರಿಕೆಯಲ್ಲಿ ಬಲಿತ, ಮಾಗಿದ ಹಣ್ಣುಗಳು ಬಳಕೆಯಾಗುತ್ತವೆ. ಹಣ್ಣಿಗೆ ಶಾಮಕ, ಪಿತ್ತಶಾಮಕ, ಜ್ವರನಿವಾರಕ, ಉರಿನಿವಾರಕ, ತಂಪುಕಾರಕ, ಆಹ್ಲಾದಕಾರಕ, ಜಂತುನಾಶಕ ಗುಣಗಳಿವೆ. ಹೀಗಾಗಿ ರಕ್ತಹೀನತೆ, ಪಿತ್ತಶಮನ, ಉರಿ, ಮೈಕಡಿತ, ಚರ್ಮ ಸಂಬAಧಿ ತೊಂದರೆಗಳ ಚಿಕಿತ್ಸೆಗೆ ಹಣ್ಣುಗಳು ಬಳಕೆಯಾಗುತ್ತವೆ. ಇದಲ್ಲದೆ ಹಲವು ಆಲ್ಕಲಾಯ್ಡ್ ಗಳು ಫ್ಲೇವನಾಯ್ಡ್ಗಳು, ಟ್ಯಾನಿನ್‌ಗಳು, ಫೀನಾಲಿಕ್ ರಸಾಯನಿಕಗಳು ಹಣ್ಣಿನಲ್ಲಿ ಪತ್ತೆಯಾಗಿವೆ. ಕ್ಯಾರಿಸಾಲ್, ಕ್ಯಾರಿಯೋಫಿಲ್ಲೀನ್, ಕ್ಯಾರಿಸ್ಸೋನ್, ಕ್ಯಾರಿಸ್ಸಿಕ್ ಆಮ್ಲ, ಕ್ಯಾರಿಂಡೋನ್ ಇವೇ ಮೊದಲಾದ ನಿರ್ದಿಷ್ಟ ರಸಾಯನಿಕಗಳು ಹಣ್ಣಿನಲ್ಲಿವೆಎಂದು ಅಧ್ಯಯನಗಳು ತಿಳಿಸುತ್ತವೆ. ಹೀಗಾಗಿ ಕವಳೆ ಹಣ್ಣುಗಳು ವಿವಿಧ ಔಷಧಗಳ ತಯಾರಿಕೆಗೂ ಬಳಕೆಯಾಗುತ್ತವೆ. ಆಯುರ್ವೇದದ ಮರ್ಮ ಗುಟಿಕಾ, ಕ್ಷುದ್ರಕರವಂಡಯೋಗ, ಮಾರೀಚಾದಿ ವಟಿ ಮೊದಲಾದವು ಕವಳೆಹಣ್ಣನ್ನು ಆಧರಿಸಿದ ಕೆಲವು ಔಷಧಗಳು.
ಉತ್ತರಕರ್ನಾಟಕದ ಬಹಳಷ್ಟು ಕಡೆಗ್ರಾಮೀಣ ಮಹಿಳೆಯರ ಮತ್ತು ಶಾಲಾ ಮಕ್ಕಳ ಒಡನಾಟಕ್ಕೆ ಹೇಳಿಮಾಡಿಸಿದಂತೆ ಕವಳೆ ಹಣ್ಣು ಬೇಸಿಗೆಯಲ್ಲಿ ದೊರಕುತ್ತದೆ. ಚೆನ್ನಾಗಿ ಬೆಳೆದ ಒಂದು ಕವಳೆಕಂಟಿಯಲ್ಲಿ, ಏನಿಲ್ಲವೆಂದರೂಒAದುಚಿಕ್ಕ ಬಿದಿರುಬುಟ್ಟಿಯನ್ನುತುಂಬಿಸುವಷ್ಟು ಸಮೃದ್ಧ ಫಸಲು ಸಿಗುತ್ತದೆ. ಹೀಗಾಗಿ, ಗಜೇಂದ್ರಗಡ, ಕುಷ್ಟಗಿ, ಗದಗ, ಹಾವೇರಿ, ಹಾನಗಲ್ಲ ತಾಲ್ಲೂಕುಗಳ ಕೆಲವು ನಿರ್ದಿಷ್ಟ ಅರಣ್ಯವಾಸಿ ಸಮುದಾಯಗಳ ಮಹಿಳೆಯರ ಪಾಲಿಗೆ ಕವಳೆ ಹಣ್ಣು ಸಂಗ್ರಹಣೆ, ಶೇಖರಣೆ ಮತ್ತು ಮಾರಾಟದಿಂದದೊರೆಯುವ ಹೆಚ್ಚುವರಿಆದಾಯಎಂಬುದುಅಚ್ಚುಮೆಚ್ಚಿನ ವಾರ್ಷಿಕ ವಿದ್ಯಮಾನ. ಹಲವು ತಲೆಮಾರುಗಳ ಹಿಂದಿನಿAದಲೂಇದರಲ್ಲಿತೊಡಗಿಕೊAಡಿರುವಇವರ ಈ ಸಂಗ್ರಹಣೆ-ಶೇಖರಣೆ-ಮಾರಾಟ ಎಂಬ ಪರಿಪಾಠವು ಈ ಸಮುದಾಯಗಳ ಪಾಲಿನ ಪಾರಂಪರಿಕ ಸಂಪ್ರದಾಯವೇನೋ ಎನಿಸುವಷ್ಟುಗಾಢವಾಗಿಇವರ ಬದುಕಿನಲ್ಲಿ ಬೆರೆತಿದೆ, ಕವಳೆಯ ಜೊತೆಗೊಂದುಆತ್ಮೀಯವಾದಒಡನಾಟ ಬೆಸೆದಿದೆಎಂಬುದುಇಲ್ಲಿಯ ವಿಶೇಷ. ಆದರೆಆಧುನಿಕಜೀವನಶೈಲಿಯ ಪ್ರಭಾವದಿಂದ ಬದಲಾದ ಈಗಿನ ದಿನಗಳಲ್ಲಿ, ಇಂತಹ ಪರಿಚಿತ ದೃಶ್ಯಗಳು ಮರೆಯಾಗುತ್ತಿವೆಎಂಬುದು ವಿಷಾದನೀಯ ಬೆಳವಣಿಗೆ.
ಕವಳೆಯನ್ನು ಒಂದು ಉಪಬೆಳೆಯಾಗಿ ಬೆಳೆಸುವ ಪ್ರಯತ್ನಗಳು ಅಲ್ಲಲ್ಲಿ ಆಗಿವೆ. ದೊಡ್ಡಗಾತ್ರದ ಹಣ್ಣುಗಳುಳ್ಳ ಕೆಲವು ದೇಶಿ ತಳಿಗಳನ್ನು ಅಭಿವೃದ್ಧಿಪಡಿಸಿ ಹಣ್ಣಿನ ತೋಟಗಳನ್ನು ಬೆಳೆಸುವ ಕಿರುಪ್ರಯತ್ನಗಳು, ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲವೆಡೆ ಆಗಿವೆ. ಉತ್ಕೃಷ್ಟಗುಣಮಟ್ಟದ ವನ್ಯ ತಳಿಗಳ ಜೀವದ್ರವ್ಯ ಸಾಮಗ್ರಿಯನ್ನುಕಾಪಿಡುವ ಪ್ರಯತ್ನ ಹಿಂದೊಮ್ಮೆ ನಮ್ಮ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆದಿತ್ತು. ಇದರ ವಿನಾ ಕರ್ನಾಟಕದ ಮಟ್ಟಿಗೆ ಹೆಚ್ಚಿನ ಕೆಲಸ ಆಗಿಲ್ಲ. ಪಿತ್ತಶಾಮಕ ಗುಣವುಳ್ಳ ಆಹ್ಲಾದಕರ ಪೇಯಗಳ ಸಾಲಿಗೆ ಸೇರಬಲ್ಲ ಎಲ್ಲಾ ಅರ್ಹತೆಯುಳ್ಳ ಕಾಡು ಹಣ್ಣುಎಂದರೆಅದು ನಮ್ಮ ಕವಳೆ. ಉತ್ತರಕರ್ನಾಟಕದಲ್ಲಿಇದರಕೃಷಿಯನ್ನು ಸುಲಭವಾಗಿ ಕೈಗೊಳ್ಳಲು ಸಾಧ್ಯ. ನಮ್ಮ ಕೃಷಿ ವಿವಿಗಳು ಇತ್ತಕಡೆ ನೋಡಬೇಕು.
##
(ತುಮಕೂರು ನಗರದ ವಾಸಿ ಸೋಮಶೇಖರ ಬಿ.ಎಸ್ ರವರುಪರಿಸರ ವಿಜ್ಞಾನಿ ಹಾಗೂ ವಿಜ್ಞಾನ ಲೇಖಕರು, ಇವರ ಸಂಪರ್ಕದೂರವಾಣಿ -7259284410ಇಮೇಲ್ -
)