ಪಿ.ಶೇಷಾದ್ರಿಯವರ ಹೊಸ ಮಕ್ಕಳ ಸಿನಿಮಾ

ಪಿ.ಶೇಷಾದ್ರಿಯವರ ಹೊಸ ಮಕ್ಕಳ ಸಿನಿಮಾ
ಪಿ.ಶೇಷಾದ್ರಿಯವರ ಹೊಸ ಮಕ್ಕಳ ಸಿನಿಮಾ

ಪಿ.ಶೇಷಾದ್ರಿಯವರ ಹೊಸ ಮಕ್ಕಳ ಸಿನಿಮಾ

ಕನ್ನಡದ ಹೆಸರಾಂತ ಸಿನಿಮಾ ನಿರ್ದೇಶಕ, ಒಂಬತ್ತು ರಾಷ್ಟçಪ್ರಶಸ್ತಿ ಪುರಸ್ಕೃತ ಪಿ.ಶೇಷಾದ್ರಿ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಅವರ ಹೊಸ ಸಿನಿಮಾ ‘ ಮೋಹನ ದಾಸ’ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.
‘ಮೋಹನ ದಾಸ’ ಮಹಾತ್ಮ ಗಾಂಧಿಯವರ ಬಾಲ್ಯದಿಂದ ಯೌವ್ವನಕ್ಕೆ ಹೊರಳುವ ಎಂಟು ವರ್ಷಗಳ ಅವಧಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವ ಭಾರತೀಯ ಸಿನಿಮಾ ರಂಗದ ಮೊಟ್ಟ ಮೊದಲ ಪ್ರಯತ್ನ. 
ಗಾಂಧಿಯ ಆತ್ಮ ಚರಿತೆ ‘ಸತ್ಯದೊಂದಿಗಿನ ಪ್ರಯೋಗಗಳು ಅಥವಾ ಸತ್ಯಶೋಧನೆಯ ಕತೆ’ ಗ್ರಂಥದಿAದ ಆಯ್ದ ಕೆಲವು ಅಧ್ಯಾಯಗಳು ಹಾಗೂ ಕತೆಗಾರ ಬೊಳುವಾರು ಮಹಮದ್ ಕುಂಞ ಅವರ ‘ಮೊನು ಟು ಮಹಾತ್ಮ’ ಕೃತಿಯನ್ನು ಆಧರಿಸಿ ಗಾಂಧಿಯವರ ಮೊದಲ ಹೆಸರು ಮೋಹನದಾಸ ಸಿನಿಮಾ ಸೃಷ್ಟಿಸಿದ್ದಾರೆ ಪಿ.ಶೇಷಾದ್ರಿ.
20 ವರ್ಷಗಳ ಹಿಂದೆ ‘ಮುನ್ನುಡಿ’ ಸಿನಿಮಾ ಮುಖಾಂತರ ಕನ್ನಡ ಸಿನಿಮಾ ರಂಗಕ್ಕೆ ಹೆಜ್ಜೆ ಇರಿಸಿದ ಶೇಷಾದ್ರಿಯವರ ಹನ್ನೆರಡನೇ ಸಿನಿಮಾ ಇದು, ಹನ್ನೆರಡು ಸಿನಿಮಾಗಳಲ್ಲಿ ಒಂಬತ್ತು ಸಿನಿಮಾಗಳಿಗೆ ರಾಷ್ಟç ಪ್ರಶಸ್ತಿ ಪಡೆದ ಶೇಷಾದ್ರಿ ಕನ್ನಡದ ಹೆಮ್ಮೆ.ಅದಕ್ಕೂ ಮೊದಲು ‘ ಕತೆಗಾರ’, ‘ಮಾಯಾಮೃಗ’ ಮೊದಲಾದ ಟಿವಿ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು ಇವರು.
ಕನ್ನಡದ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲೂ ತಯಾರಾಗಿರುವುದು ‘ಮೋಹನ ದಾಸ’ ಸಿನಿಮಾದ ಮತ್ತೊಂದು ಹೆಗ್ಗಳಿಕೆ.
ಮೋಹನದಾಸ ಮಹಾತ್ಮ ಗಾಂಧಿ ಆದದ್ದು ಹೇಗೆ ಎಂಬ ಕುರಿತು ಸಿನಿಮಾಗಳು ಬಂದಿವೆ. ಆದರೆ ಅವರ ಬಾಲ್ಯದ ಕುರಿತ ಯಾವ ಸಿನಿಮಾಗಳೂ ಇರಲಿಲ್ಲ. ಈ ಕೊರತೆಯನ್ನು ಶೇಷಾದ್ರಿ ತುಂಬಿಕೊಟ್ಟಿದ್ದಾರೆ. ಮತ್ತು ಈ ಸಿನಿಮಾ ಅನ್ನು ನಿರ್ದೇಶಕ ಶೇಷಾದ್ರಿ ಮಕ್ಕಳ ಸಿನಿಮಾ ವಿಭಾಗದಡಿ ಸೇರಿಸಿಕೊಂಡಿದ್ದಾರೆ.
ಸತ್ಯ ಮತ್ತು ಅಹಿಂಸೆಯ ಶಕ್ತಿಯನ್ನು ಅರಿಯುವ ನಿಟ್ಟಿನಲ್ಲಿ ಬಾಲ್ಯದ ಏಳು ವರ್ಷಗಳಲ್ಲಿ ಮೋಹನದಾಸ ಎದುರಾಗುವ ಸನ್ನಿವೇಶಗಳು ಮತ್ತು ಅನುಭವಗಳನ್ನು ದಾಖಲಿಸುವ ವಿನೂತನ ಪ್ರಯತ್ನವಿದು.
ಸಿನಿಮಾ ನೋಡುವ ಮೊದಲೇ ಹೆಚ್ಚು ಹೇಳುವ ಬದಲು ಪರಿಚಯ ಮಾಡಿಕೊಟ್ಟರೆ ಸಾಕು ಅಲ್ವಾ.