ಸಿದ್ಧಗಂಗಾ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಮಹಿಳೆ ಸ್ವಚ್ಛ, ಸ್ವಸ್ಥ ಸಮಾಜಕ್ಕೆ ರಾಯಭಾರಿ-ಆಯುಕ್ತೆ ರೇಣುಕಾ
ಸಿದ್ಧಗಂಗಾ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಮಹಿಳೆ ಸ್ವಚ್ಛ, ಸ್ವಸ್ಥ ಸಮಾಜಕ್ಕೆ ರಾಯಭಾರಿ-ಆಯುಕ್ತೆ ರೇಣುಕಾ
ಸಿದ್ಧಗಂಗಾ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಮಹಿಳೆ ಸ್ವಚ್ಛ, ಸ್ವಸ್ಥ ಸಮಾಜಕ್ಕೆ ರಾಯಭಾರಿ-ಆಯುಕ್ತೆ ರೇಣುಕಾ
ತುಮಕೂರು: ಸ್ವಚ್ಛ ಪರಿಸರ ಹಾಗೂ ಸಮಾಜ ನಿರ್ಮಾಣದಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿದ್ದು ಎಲ್ಲಾ ರಂಗದಲ್ಲಿಯೂ ತನ್ನ ಛಾಪು ಮೂಡಿಸಿರುವ ಮಹಿಳೆ ಸ್ವಚ್ಛ ಹಾಗೂ ಸ್ವಸ್ಥ ಸಮಾಜಕ್ಕೆ ರಾಯಭಾರಿ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅಭಿಪ್ರಾಯಪಟ್ಟರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಮಹಾನಗರ ಪಾಲಿಕೆ ಇಂದು ಸ್ವಚ್ಛ ಸರ್ವೇಷಣ್‌ನಲ್ಲಿ ಪ್ರಶಸ್ತಿ ಗೆದ್ದಿದೆ, ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಯಲ್ಲಿ ದಾಖಲಾರ್ಹ ಪ್ರಗತಿ ಸಾಧಿಸಿದ್ದು ನನಗೆ ಹೆಮ್ಮೆ ತಂದಿದೆ. ತುಮಕೂರಿನ ಎಲ್ಲಾ ಮಹಿಳೆಯರು ಸ್ವಚ್ಛ ತುಮಕೂರು ಕಟ್ಟುವಲ್ಲಿ ಭಾಗಿಯಾಗಬೇಕು ಎಂದರು.
ಎಸ್‌ಎಂಸಿಆರ್‌ಐ ಪ್ರಾಂಶುಪಾಲರಾದ ಡಾ. ಶಾಲಿನಿ ಎಂ. ಮಾತನಾಡಿ, ಮಹಿಳೆಯ ಬಗ್ಗೆ ಧ್ವನಿ ಎತ್ತಲಿಕ್ಕೆ ಮಹಿಳೆಯರೇ ಸೇರಿಕೊಂಡು ಮಹಿಳಾ ದಿನಾಚರಣೆ ಪ್ರಾರಂಭಿಸಲಾಯಿತು. ನಂತರ ಮಹಿಳೆಯರ ಸಂಘಟನಾ ಶಕ್ತಿ ನೋಡಿ ನಂತರ ಮಹಿಳಾ ದಿನಾಚರಣೆಗೆ ವಿಶ್ವಮಾನ್ಯತೆ ದೊರೆಯಿತು. ನಾವು ಕೂಡ ಇಂದು ಮಹಿಳಾ ದಿನಾಚರಣೆಯನ್ನು ಕೇವಲ ಆಚರಣೆಯನ್ನಾಗಿಸದೆ ಸಮುದಾಯದ ಆರೋಗ್ಯಕ್ಕೆ ದುಡಿಯುವ ಆರೋಗ್ಯ ಕಾರ್ಯಕರ್ತೆಯರಿಗೆ ಈ ಕಾರ್ಯಕ್ರಮದಲ್ಲಿ ಆರೋಗ್ಯ ಅರಿವು ಮೂಡಿಸಿ ಅವರ ಕಾಳಜಿ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಸಿದ್ಧಗಂಗಾ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಟಿ.ಕೆ. ನಂಜುAಡಪ್ಪ ಮಾತನಾಡಿ, ಮಹಿಳೆ ತನ್ನ ಕುಟುಂಬದಲ್ಲಿ ಒಬ್ಬಳು ವಿದ್ಯಾವಂತ ಶಿಕ್ಷಕಿ, ಆರೋಗ್ಯ ಅಧೀಕ್ಷಕಿ, ಗೃಹ ನಿರ್ಮಾಣದಲ್ಲಿ ಅಭಿಯಂತರೆ, ಸೋತಾಗ ಆತ್ಮವಿಶ್ವಾಸ ತುಂಬುವ ಸ್ನೇಹಿತೆ, ತಾಯಿ ಹೀಗೆ ಪ್ರತಿಯೊಂದು ಪಾತ್ರವನ್ನು ನಿಭಾಯಿಸುತ್ತಾಳೆ ಇದಲ್ಲದೆ ಪುರುಷನಷ್ಟೇ ಸಮಾನವಾಗಿ ದುಡಿದು ಸಮಾಜ ನಿರ್ಮಾಣದಲ್ಲಿ ತನ್ನ ಅಮೂಲ್ಯ ಕೊಡುಗೆ ನೀಡುತ್ತಿದ್ದಾಳೆ ಎಂದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಸ್. ಪರಮೇಶ್ ಮಾತನಾಡಿ, ಮಹಿಳೆಯರ ಪರವಾದ ಧ್ವನಿ ಇಂದು ಹೆಚ್ಚುತ್ತಿದೆ. ಇದಕ್ಕೆ ಆಕೆ ಸಮಾಜಕ್ಕೆ ತೋರಿಸಿಕೊಟ್ಟಿರುವ ಸಾಧನೆಗಳೇ ಕಾರಣ. ಸಿದ್ಧಗಂಗಾ ಆಸ್ಪತ್ರೆ ಮಹಿಳೆಯರ ಆರೋಗ್ಯಕ್ಕೆ ವಿಶೇಷ ಹೆಲ್ತ್ ಪ್ಯಾಕೇಜ್ ಪ್ರತಿ ವರ್ಷ ನೀಡುತ್ತಿದ್ದು ತಮ್ಮ ಆರೋಗ್ಯದ ಬಗ್ಗೆ ಆದ್ಯತೆ ಕೊಡದೆ ಕುಟುಂಬದ ಕಾಳಜಿ ಮಾಡುವ ಹೆಣ್ಣು ಇಂತಹ ಸೌಲಭ್ಯ ಪಡೆದುಕೊಳ್ಳುವ ಮೂಲಕ ತನ್ನ ಕಾಳಜಿಯೂ ಮಾಡಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಅರಿವು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಹಾಗೂ ಆರೋಗ್ಯ ಕಾರ್ಯಕರ್ತೆಯರಿಗಾಗಿ ವಿಶೇಷ ಚಟುವಟಿಕೆಗಳು ನಡೆದವು.
ಮಹಾನಗರ ಪಾಲಿಕೆ ಸದಸ್ಯೆ ಮಂಜುಳಾ ಆದರ್ಶ್ ಮಾತನಾಡಿದರು, ಮೆಡಿಕಲ್ ಸೂಪರಿಂಡೆAಟ್ ಡಾ. ನಿರಂಜನ ಮೂರ್ತಿ, ಸಿಇಓ ಡಾ. ಸಂಜೀವ್ ಕುಮಾರ್ ಇದ್ದರು.